ಗ್ರಾಹಕರ ಸುಖ-ದುಃಖ

My Blog List

Monday, February 24, 2020

ಜಾಫ್ರಾಬಾದ್ ಪ್ರತಿಭಟನಕಾರರ ತೆರವು: ಬಿಜೆಪಿ ನಾಯಕನಿಂದ ೩ ದಿನದ ಗಡುವು

ಜಾಫ್ರಾಬಾದ್ ಪ್ರತಿಭಟನಕಾರರ ತೆರವುಬಿಜೆಪಿ ನಾಯಕನಿಂದ   ದಿನದ ಗಡುವು
ನವದೆಹಲಿ: ರಾಜಧಾನಿಯ ಜಾಫ್ರಾಬಾದ್ ಮತ್ತು ಚಾಂದ್ ಬಾಗ್ ರಸ್ತೆಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಕಾರರನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಿಂದ ವಾಪಸಾಗುವುದರ ಒಳಗಾಗಿ ತೆರವುಗೊಳಿಸಬೇಕು ಎಂದು ದೆಹಲಿ ಬಿಜೆಪಿ ನಾಯಕ ಕಪಿಲ್ ಮಿಶ್ರ  2020 ಫೆಬ್ರುವರಿ 23ರ ಭಾನುವಾರ ದೆಹಲಿ ಪೊಲೀಸರಿಗೆ ಗಡುವು ನೀಡಿದರು.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಿಂದ ವಾಪಸಾಗುವುದರ ಒಳಗಾಗಿ ಪ್ರತಿಭಟನಕಾರರನ್ನು ಜಾಫ್ರಾಬಾದ್ ಮತ್ತು ಚಾಂದ್ ಬಾಗ್ ರಸ್ತೆಗಳಿಂದ ತೆರವುಗೊಳಿಸದೇ ಇದ್ದಲ್ಲಿ ಜನರೇ ರಸ್ತೆಗಳಿಗೆ ಇಳಿಯುತ್ತಾರೆ ಎಂದು ಮಿಶ್ರ ಎಚ್ಚರಿಸಿದರು.

ಕಪಿಲ್ ಮಿಶ್ರ ಅವರು ವಿಡಿಯೋ ಒಂದನ್ನು ಟ್ವಿಟ್ಟರಿನಲ್ಲಿ ಪ್ರಕಟಿಸಿದ್ದಾರೆ. ವಿಡಿಯೋದಲ್ಲಿ ಅವರುಭಾರತ್ ಮಾತಾ ಕೀ ಜೈಮತ್ತುವಂದೇ ಮಾತರಂಘೋಷಣೆ ಕೂಗುತ್ತಿರುವ ಬೆಂಬಲಿಗರ ಮಧ್ಯೆ ನಿಂತುಕೊಂಡು ಪೊಲೀಸರಿಗೆ ಮನವಿ ಮಾಡುತ್ತಿರುವುದು ದಾಖಲಾಗಿದೆ. ಅದೇ ಟ್ವಿಟ್ಟರ್ ಸಂದೇಶದಲ್ಲಿಮೇಲೆ ತಿಳಿಸಿದ ರಸ್ತೆಗಳನ್ನು ಮೂರು ದಿನಗಳ ಒಳಗಾಗಿ ತೆರವುಗೊಳಿಸುವಂತೆ ದೆಹಲಿ ಪೊಲೀಸರಿಗೆ ನಾನು ಗಡುವು ನೀಡುತ್ತಿದ್ದೇನೆಎಂದೂ ಅವರು ಬರೆದರು.

ದೆಹಲಿ ಪೊಲೀಸರಿಗೆ ಜಾಫ್ರಾಬಾದ್ ಮತ್ತು ಚಾಂದ್ ಬಾಗ್ ರಸ್ತೆಗಳನ್ನು ತೆರವುಗೊಳಿಸಲು ಮೂರು ದಿನಗಳ ಗಡುವು ನೀಡಲಾಗಿದೆ. (ವಿಫಲರಾದರೆ) ಅವರು ಬಳಿಕ ನಮ್ಮ ಬಳಿ ನೆಪ ಹೇಳುವುದು ಬೇಕಿಲ್ಲ, ನಾವು ನಿಮ್ಮ ಮಾತುಗಳನ್ನೂ ಕೇಳುವುದಿಲ್ಲ, ಕೇವಲ ಮೂರು ದಿನಗಳುಎಂದು ಟ್ವೀಟ್ ಹೇಳಿತು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಬೆಳಗ್ಗೆ ಭಾರತಕ್ಕೆ ಆಗಮಿಸಲಿದ್ದು, ಮಂಗಳವಾರ ರಾತ್ರಿ ಅಮೆರಿಕಕ್ಕೆ ವಾಪಸಾಗಲಿದ್ದಾರೆ.

ಶನಿವಾರ ದೆಹಲಿಯ ಜಾಫ್ರಾಬಾದ್ ಪ್ರದೇಶದಲ್ಲಿ ಹೊಸದಾಗಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಆರಂಭವಾಗಿರುವುದನ್ನು ಅನುಸರಿಸಿ ಕಪಿಲ್ ಮಿಶ್ರ ಅವರು ಗಡುವು ನೀಡಿದ್ದಾರೆ.

ಸುಮಾರು
೫೦೦ ಮಹಿಳೆಯರು ಜಾಫ್ರಾಬಾದ್ ಸಮೀಪ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಧರಣಿ ಆರಂಭಿಸಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.

ಮಹಿಳೆಯರು ಸೀಲಂಪುರವನ್ನು   ಮೌಜ್ ಪುರ ಮತ್ತು ಯುಮುನಾ ವಿಹಾರದ ಜೊತೆಗೆ ಸಂಪರ್ಕಿಸುವ ೬೬ನೇ ನಂಬರ್ ರಸ್ತೆಯನ್ನು ಅಡ್ಡಗಟ್ಟಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಕಾರರ ಇನ್ನೊಂದು ಗುಂಪು ಸೀಲಂಪುರ ಮುಖ್ಯರಸ್ತೆ ಮತ್ತು ಕರ್ದಂಪುರಿ ರಸ್ತೆಯನ್ನು ಅಡ್ಡಗಟ್ಟಿದೆ.

ಭಜನ್ಪುರ- ಚಾಂದ್ ಬಾಗ್ ರಸ್ತೆಯನ್ನು ಕೂಡಾ ಸಿಎಎ ವಿರೋಧಿ ಪ್ರತಿಭಟನಕಾರರು ಮುಚ್ಚಿದ್ದು ಯಮುನಾ ನದಿ ದಂಡೆಯ ೩೫ ಲಕ್ಷ ಮಂದಿ ನಿವಾಸಿಗಳು ವಸ್ತುಶಃ ದಿಗ್ಬಂಧನದಲಿಲ ಸಿಲುಕಿದ್ದಾರೆ ಎಂದು ಕಪಿಲ್ ಮಿಶ್ರ ಪ್ರತಿಪಾದಿಸಿದ್ದಾರೆ.

ಇದು ಭಜನಪುರ ಚಾಂದ್ ಬಾಗ್ ರಸ್ತೆ- ರಸ್ತೆಯನ್ನು ಕೂಡಾ ಕೆಲವು ನಿಮಿಷಗಳ ಹಿಂದೆ ಮುಸ್ಲಿಮ್ ಗುಂಪೊಂದು ಮುಚ್ಚಿದೆ. ಜಾಫ್ರಾಬಾದನ್ನು ಇನ್ನೊಂದೆಡೆಯಿಂದ ಮುಚ್ಚಲಾಗಿದೆ ಮತ್ತು ಚಾಂದ್ ಬಾಗ್ನ್ನು ಕಡೆಯಿಂದ ಮುಚ್ಚಲಾಗಿದೆ. ಇದರ ಅರ್ಥ ಯಮುನಾದಂಡೆಯಲ್ಲಿನ ದೆಹಲಿ ನಿವಾಸಿಗಳು ಈಗ ಸಿಕ್ಕಿಹಾಕಿಕೊಂಡಂತಾಗಿದೆ. ಇಲ್ಲಿನ ಜನರು ಹೊರಹೋಗಲೂ ಸಾಧ್ಯವಿಲ್ಲ ಅಥವಾ ಒಳಕ್ಕೆ ಬರಲೂ ಸಾಧ್ಯವಿಲ್ಲ. ಉಭಯ ಕಡೆಗಳಲ್ಲೂ ರಸ್ತೆಯನ್ನು ಮುಚ್ಚಲಾಗಿದೆಎಂದು ಕಪಿಲ್ ಮಿಶ್ರ ಟ್ವೀಟ್ ತಿಳಿಸಿದೆ.

No comments:

Advertisement