Tuesday, February 4, 2020

ದೆಹಲಿ ಪ್ರತಿಭಟನೆಗಳ ಹಿಂದೆ ದೇಶ ಒಡೆಯುವ ರಾಜಕೀಯ ಸಂಚು: ಮೋದಿ

ದೆಹಲಿ ಪ್ರತಿಭಟನೆಗಳ ಹಿಂದೆ ದೇಶ ಒಡೆಯುವ
ರಾಜಕೀಯ ಸಂಚು: ಮೋದಿ
ನವದೆಹಲಿ: ವಿಧಾನಸಭಾ ಚುನಾವಣೆಗಾಗಿ ಸಜ್ಜಾಗಿರುವ ದೆಹಲಿಯ ಪ್ರಚಾರಕಣಕ್ಕೆ ಇಳಿದು ಚೊಚ್ಚಲ ಪ್ರಚಾರ  ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ರಾಷ್ಟ್ರದ ಪ್ರತಿಷ್ಠಿತ ಚುನಾವಣಾ ಕಣಕ್ಕೆ ಸೋಮವಾರ ಇನ್ನಷ್ಟು ಕಾವೇರಿಸಿದ ಪ್ರಧಾನಿ ನರೇಂದ್ರ ಮೋದಿ, ’ದೆಹಲಿಯ ಶಾಹೀನಾಬಾಗ್, ಜಾಮಿಯಾ ಪ್ರತಿಭಟನೆಗಳ ಹಿಂದೆ ದೇಶವನ್ನು ಛಿದ್ರಗೊಳಿಸುವ ರಾಜಕೀಯ ಷಡ್ಯಂತ್ರವಿದೆಎಂದು ಆಪಾದಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ರಾಷ್ಟ್ರೀಯ ರಾಜಧಾನಿಯ ಹಲವು ಭಾಗಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಸಂಚಿನ ಭಾಗವಾಗಿವೆಯೇ ಹೊರತು, ಕಾಕತಾಳೀಯ ಅಲ್ಲ ಎಂದು ನುಡಿದ ಮೋದಿ, ಆಮ್ ಆದ್ಮಿ ಪಕ್ಷ (ಆಪ್) ಮತ್ತು ಕಾಂಗ್ರೆಸ್ ಪ್ರದರ್ಶನಗಳಿಗೆಇಂಧನತುಂಬುತ್ತಿವೆ ಎಂದು ಟೀಕಿಸಿದರು.

ಕಳೆದ ವರ್ಷ ಡಿಸೆಂಬರ್ ೧೫ರಿಂದ ಮಹಿಳೆಯರ ನೇತೃತ್ವದಲ್ಲಿ ಶಾಹೀನಾ ಬಾಗ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತು ಜಾಮಿಯಾ ಮಿಲ್ಲಿಯಾದಲ್ಲಿ ವಿದ್ಯಾಥಿಗಳ ನೇತೃತ್ವದಲ್ಲಿ ಪದೇ ಪದೇ ನಡೆಯುತ್ತಿರುವ ಪ್ರತಿಭಟನೆಗಳನ್ನು ಪ್ರಧಾನಿ ಉಲ್ಲೇಖಿಸಿದರು.

ಸೀಲಂಪುರ ಇರಬಹುದು, ಜಾಮಿಯಾ ಇರಬಹುದು ಅಥವಾ ಶಾಹೀನಾಬಾಗ್ ಇರಬಹುದು, ಕಳೆದ ಹಲವಾರು ದಿನಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಪ್ರತಿಭಟನೆ ಕೇವಲ ಕಾಕತಾಳೀಯವೇ? ಇಲ್ಲ. ಇದೊಂದು ಸಂಚುಎಂದು ಪ್ರಧಾನಿ ನುಡಿದರು.

ಪೂರ್ವದೆಹಲಿಯ ಕರ್ಕರಡೂಮದಲ್ಲಿ ರಾಷ್ಟ್ರದ ಸಾಮರಸ್ಯವನ್ನೇ ಹಾಳುಗಡೆಹುವ ರಾಜಕೀಯ ಹಿನ್ನೆಲೆಯ ಸಂಚು ರೂಪಿಸಲಾಗಿದೆ ಎಂದು ನುಡಿದ ಮೋದಿ, ’ಶಾಹೀನಾಬಾಗ್ ಪ್ರತಿಭಟನೆಗಳ ಪರಿಣಾಮವಾಗಿ ನೋಯ್ಡಾಕ್ಕೆ ಬಂದು ಹೋಗುವ ಜನರು ತೀವ್ರ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇಲ್ಲಿನ ರಸ್ತೆಯ ಬಹುಭಾಗವನ್ನು ಪ್ರತಿಭಟನಕಾರರು ಆವರಿಸಿದ್ದಾರೆಎಂದು ಹೇಳಿದರು.

ದೆಹಲಿಯ ಜನರು ಮೌನವಾಗಿದ್ದಾರೆ ಮತ್ತು ವೋಟ್ ಬ್ಯಾಂಕ್ ರಾಜಕೀಯವನ್ನು ಕೋಪೋದ್ರಿಕ್ತರಾಗಿ ವೀಕ್ಷಿಸುತ್ತಿದ್ದಾರೆ. ಶಾಹೀನಾಬಾಗ್ ಪ್ರತಿಭಟನೆಗಳಿಂದಾಗಿ ದೆಹಲಿಯ ಜನರು ಹಲವಾರು ಅಡಚಣೆಗಳನ್ನು ಎದುರಿಸುತ್ತಿದ್ದಾರೆಎಂದು ಪ್ರಧಾನಿ ಹೇಳಿದರು.

ದೆಹಲಿಯ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗಳು ಕಾಕತಾಳೀಯ ಅಲ್ಲ, ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಹುಟ್ಟುಹಾಕಿರುವ ವ್ಯವಸ್ಥಿತಅರಾಜಕತೆಎಂದು ಹೇಳಿದ ಮೋದಿ, ’ದೆಹಲಿಯ ಮತಕ್ಕೆ ಇದನ್ನು ತಡೆಯುವ ಶಕ್ತಿ ಇದೆಎಂದು ನುಡಿದರು.

ಏನು ವಚನ ನೀಡಿದೆಯೋ ಅದನ್ನು ಬಿಜೆಪಿ ಈಡೇರಿಸುತ್ತದೆ. ಪಕ್ಷವು ಧನಾತ್ಮಕತೆಯಲ್ಲಿ ವಿಶ್ವಾಸ ಇಟ್ಟಿದೆಎಂದು ಪ್ರಧಾನಿ ತಮ್ಮ ಚೊಚ್ಚಲ ದೆಹಲಿ ಪ್ರಚಾರ ಪ್ರಚಾರ ಭಾಷಣದಲ್ಲಿ ನುಡಿದರು.
ದೆಹಲಿ ನಿಜವಾಗಿ ಏನನ್ನು ಬಯಸುತ್ತಿದೆ ಎಂದು ನಾನು ನಿಮಗೆ ಹೇಳಬೇಕಾದ ಅಗತ್ಯ ಇಲ್ಲ. ಅದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಕಳೆದ ವರ್ಷದ ಮಹಾಚುನಾವಣೆಯಲ್ಲಿ, ದೆಹಲಿಯ ಜನರಿಂದ ಬಿಜೆಪಿ ಬಲಾಢ್ಯಗೊಂಡಿತು. ದೆಹಲಿಯ ಜನರು ಎಲ್ಲ ಏಳೂ ಸ್ಥಾನಗಳನ್ನು ಬಿಜೆಪಿಗೆ ಗೆಲ್ಲಿಸಿಕೊಟ್ಟರು. ಅವರ ಮತಗಳು ನಮಗೆ ರಾಷ್ಟ್ರದ ಅದೃಷ್ಟವನ್ನು ಬದಲಾಯಿಸಲು ನೆರವಾದವುಎಂದು ಮೋದಿ ಹೇಳಿದರು.

ಬಾರಿ ದೆಹಲಿಯ ಜನರ ಮತಗಳು ರಾಜಧಾನಿಯ ಅದೃಷ್ಟವನ್ನು ಬದಲಾಯಿಸಲಿವೆ ಮತ್ತು ನಗರವನ್ನು ಸುರಕ್ಷಿತ, ಆಧುನಿಕ ಮತ್ತು ಸ್ವಚ್ಛ ನಗರವನ್ನಾಗಿ ಮಾಡಲಿವೆಎಂದು ಅವರು ನುಡಿದರು.

ಆಮ್ ಆದ್ಮಿ ಪಕ್ಷವನ್ನು ಕೂಡಾ ತಮ್ಮ ಭಾಷಣದಲ್ಲಿ ತರಾಟೆಗೆ ತೆಗೆದುಕೊಂಡ ಪ್ರಧಾನಿ ಪಕ್ಷವು ರಾಜಕೀಯ ಮಾಡುವುದರಲ್ಲಿ ಮಾತ್ರವೇ ನಂಬಿಕೆ ಹೊಂದಿದೆಎಂದು ಟೀಕಿಸಿದರು.

ದೆಹಲಿಯಲ್ಲಿ ಪಿಎಂ ಆವಾಸ್ ಯೋಜನಾ ಜಾರಿಯಾಗದೇ ಇರುವುದನ್ನು ನೋಡುವಾಗ ನನಗೆ ಬೇಸರವಾಗುತ್ತದೆ.  ಕೇಂದ್ರ ಸರ್ಕಾರವು ದೇಶಾದ್ಯಂತ ಎರಡು ಕೋಟಿ ಮನೆಗಳನ್ನು ಯೋಜನೆಯಡಿಯಲ್ಲಿ ನಿರ್ಮಿಸಿದೆ, ಆದರೆ ಒಂದೇ ಒಂದು ಮನೆಯನ್ನು ಕೂಡಾ ದೆಹಲಿಯಲ್ಲಿ ನಿರ್ಮಿಸಲಾಗಿಲ್ಲಎಂದು ಪ್ರಧಾನಿ ಮೋದಿ ಹೇಳಿದರು.

ಪ್ರತಿಯೊಬ್ಬರೂ ಸ್ವಂತ ಮನೆ ಹೊಂದಲು ಬಯಸುತ್ತಾರೆ, ಜನರು (ಆಪ್) ಅಧಿಕಾರದಲ್ಲಿ ಇರುವವರೆಗೆ ಅವರು ಇಂತಹ ಯೋಜನೆಗಳಿಗೆ ತಡೆ ಹಾಕುತ್ತಲೇ ಇರುತ್ತಾರೆ. ಇದು ಏಕೆಂದರೆ ಅವರಿಗೆ ರಾಜಕೀಯ ಮಾಡುವುದು ಹೇಗೆ ಎಂದಷ್ಟೇ ಗೊತ್ತಿದೆಎಂದು ಮೋದಿ ನುಡಿದರು.

೩೭೦ನೇ ವಿಧಿ ರದ್ದು, ಚಾರಿತ್ರಿಕ ಅಯೋಧ್ಯಾ ತೀರ್ಪಿನೊಂದಿಗೆ ರಾಮಮಂದಿರ ನಿರ್ಮಾಣಕ್ಕೆ ಮಾರ್ಗ ಸುಗಮಗೊಳಿಸಿರುವುದು,  ತ್ರಿವಳಿ ತಲಾಖ್ನ್ನು ಕ್ರಿಮಿನಲ್ ಅಪರಾಧವನ್ನಾಗಿ ಮಾಡಿದ್ದು ಇತ್ಯಾದಿಯಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದ ಸಾಧನೆಗಳನ್ನು ಕೂಡಾ ಪ್ರಧಾನಿ ಪಟ್ಟಿ ಮಾಡಿದರು. ಆದರೆ, ದೆಹಲಿಯ ಜನರು ಇನ್ನೂ ಲೋಕಪಾಲ ಮಸೂದೆಗಾಗಿ ಕಾಯುತ್ತಿದ್ದಾರೆ. ಅಷ್ಟು ದೊಡ್ಡ ಚಳವಳಿ ಮತ್ತು ಮಹಾನ್ ಭರವಸೆಗಳ ಗತಿ ಏನಾಯಿತು? ಇಂತಹ ನಿರ್ಧಾರಗಳನ್ನು ಕೈಗೊಳ್ಳಲು ಉತ್ತಮ ಉದ್ದೇಶಗಳು ಇರಬೇಕಾಗುತ್ತವೆಎಂದು ಪ್ರಧಾನಿ ಹೇಳಿದರು.

ದೆಹಲಿಯ ವೈಭವಶಾಲೀ ಇತಿಹಾಸವನ್ನು ನೆನಪು ಮಾಡಿದ ಪ್ರಧಾನಿ, ’ದೆಹಲಿಯ ಜನರ ಕಠಿಣ ಶ್ರಮದಿಂದಾಗಿ ದೆಹಲಿಗೆ ತನ್ನದೇ ಆದ ಖ್ಯಾತಿ ಬಂತು. ಆದರೆ ಕಳೆದ ಎರಡು ದಶಕಗಳಲ್ಲಿ ನಗರವನ್ನು ಆಳುತ್ತಿರುವ ಜನರು ನಗರವು ೨೧ನೇ ಶತಮಾನದ ಅಲೆಯನ್ನು ಸ್ಪರ್ಶಿಸಲು ಕೂಡಾ ಅವಕಾಶ ನೀಡಲಿಲ್ಲಎಂದು ಹೇಳುವ ಮೂಲಕ ಆಪ್ ಜೊತೆಗೆ ಕಾಂಗ್ರೆಸ್ ಪಕ್ಷವನ್ನೂ ಸೇರಿಸಿ ಚಾಟಿ ಬೀಸಿದರು. ದೆಹಲಿಯಲ್ಲಿ ಬಿಜೆಪಿಯು ೧೯೯೮ರಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಅಧಿಕಾರದ ಗದ್ದುಗೆಯಿಂದ ದೂರವೇ ಉಳಿದಿದೆ.

ಬಿಜೆಪಿಯ ಪಾಲಿನ ತಾರಾ ಪ್ರಚಾರಕರಾಗಿರುವ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಎರಡು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಚುನಾವಣೆಗೆ ಮುನ್ನ ಕೊನೆಯ ವಾರದಲ್ಲಿ ಬಿಜೆಪಿಯು ತನ್ನ ಪ್ರಚಾರ ಕಣಕ್ಕೆ ಪ್ರಧಾನಿ ಮೋದಿ ಅವರನ್ನು ಇಳಿಸಿದೆ.

ಫೆಬ್ರುವರಿ ೮ಕ್ಕೆ ಮುನ್ನ ಕೊನೆಯ ಭಾನುವಾರವನ್ನು ಪಕ್ಷವು ಅತ್ಯುತ್ತಮ ರೀತಿಯಲ್ಲಿ ಬಳಕೆ ಮಾಡಿಕೊಂಡಿದೆ. ಬಿಜೆಪಿಯು ಭಾನುವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ತನ್ನ ಉನ್ನತ ನಾಯಕರನ್ನು ಬಳಸಿಕೊಂಡು ೭೦ ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾರರ ಮಹಾಸಂಪರ್ಕ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ರೋಹಿಣಿ, ಮೆಹ್ರೌಲಿ, ಆಕೆ ಪುರಂ, ಕಸ್ತೂರ್ಬಾ ನಗರಗಳಲ್ಲಿ ಪ್ರಚಾರ ಅಭಿಯಾನ ಕೈಗೊಂಡರು. ರಾಷ್ಟ್ರದಲ್ಲಿ ಬದಲಾವಣೆ ತರುವ ಸಲುವಾಗಿ ರಾಜಕೀಯಕ್ಕೆ ಬಂದಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರಾಷ್ಟ್ರ ವಿರೋಧಿ ಶಕ್ತಿಗಳನ್ನು ಬೆಂಬಲಿಸುತ್ತಿರುವುದು ದುರಂತ ಎಂದು ಇರಾನಿ ಬಣ್ಣಿಸಿದರು.

ಫೆಬ್ರುವರಿ ೭ರಂದು ಅಸ್ಸಾಂಗೆ ಪ್ರಧಾನಿ
ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ತಮ್ಮ ಭೇಟಿ ರದ್ದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಫೆಬ್ರುವರಿ ೭ರಂದು ಅಸ್ಸಾಮಿಗೆ ಭೇಟಿ ನೀಡಲಿದ್ದಾರೆ.

ಪ್ರಧಾನಿಯವರುಖೇಲೋ ಇಂಡಿಯಾ ಯೂತ್ ಗೇಮ್ಸ್ಉದ್ಘಾಟನೆಗಾಗಿ ಗುವಾಹಟಿಗೆ ತೆರಳಬೇಕಾಗಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳು ಅಸ್ಸಾಮಿನಲ್ಲಿ ಭುಗಿಲೆದ್ದ ಕಾರಣ ಪ್ರಧಾನಿಯವರ ಭೇಟಿ ರದ್ದಾಗಿತ್ತು. ಪ್ರತಿಭಟನಕಾರರು ಪ್ರಧಾನಿ ಮತ್ತು ಗೃಹ ಸಚಿವ ಅಮಿತ್ ಶಾ ಭೇಟಿ ವಿರುದ್ಧ ಎಚ್ಚರಿಕೆ ನೀಡಿದ್ದರು.

ಗೃಹಸಚಿವ ಅಮಿತ್ ಶಾ ಅವರಿಗೂಖೇಲೋ ಇಂಡಿಯಾಕ್ಕೆ ಆಹ್ವಾನ ನೀಡಲಾಗಿತ್ತು. ಶಾ ಅವರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ.

No comments:

Advertisement