Friday, February 21, 2020

ಮಹದಾಯಿ: ಕರ್ನಾಟಕಕ್ಕೆ ಮಹತ್ವದ ಗೆಲುವು: ಅಧಿಸೂಚನೆಗೆ ಅಸ್ತು

ಮಹದಾಯಿ: ಕರ್ನಾಟಕಕ್ಕೆ ಮಹತ್ವದ ಗೆಲುವು: ಅಧಿಸೂಚನೆಗೆ ಅಸ್ತು
ರಾಜ್ಯಕ್ಕೆ ೧೩.೪೨ ಟಿಎಂಸಿ ಅಡಿ ನೀರು ಬಿಡಲು ಸುಪ್ರೀಂ ಒಪ್ಪಿಗೆ
ನವದೆಹಲಿ/ ಬೆಂಗಳೂರು: ದೀರ್ಘ ಕಾಲದಿಂದ ಬಗೆಹರಿಯದೇ ಉಳಿದಿದ್ದ ಮಹದಾಯಿ ನದಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ಮಹತ್ವದ ಗೆಲುವು ಪ್ರಾಪ್ತವಾಯಿತು.

 
ಮಹದಾಯಿ ಜಲ ವಿವಾದ ನ್ಯಾಯಮಂಡಳಿಯು (ಮಹದಾಯಿ ನ್ಯಾಯಾಧೀಕರಣ) ನೀರು ಹಂಚಿಕೆ ಮಾಡಿ ನೀಡಿದ್ದ ತೀರ್ಪು ಕುರಿತು ಅಧಿಸೂಚನೆ (ಗೆಜೆಟ್ ನೋಟಿಫಿಕೇಷನ್) ಹೊರಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ 2020 ಫೆಬ್ರುವರಿ 20ರ ಗುರುವಾರ ನಿರ್ದೇಶನ ನೀಡಿತು.

ಇದರೊಂದಿಗೆ ಕರ್ನಾಟಕಕ್ಕೆ ೧೩.೪೨ ಟಿಎಂಸಿ ಅಡಿ ನೀರು ಬಿಡಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದಂತಾಯಿತು.   ವಿಚಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯ ವಿಧಾನಸಭೆಯಲ್ಲೂ ಪ್ರಕಟಿಸಿದರು.

ತೀರ್ಪು ಪ್ರಶ್ನಿಸಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆಯನ್ನೂ ಕೈಗೆತ್ತಿಕೊಳ್ಳಲು ಕೋರ್ಟ್ ಸಮ್ಮತಿ ಸೂಚಿಸಿತು.

ಜುಲೈ ೧೫ರಿಂದ ಸತತವಾಗಿ ವಿಚಾರಣೆ ನಡೆಸಲು ನಿರ್ಧರಿಸಿದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ವಿಚಾರಣೆಯ ನಂತರ ಹೊರಬರುವ ತೀರ್ಪಿನಲ್ಲಿ ಬದಲಾವಣೆ ಆದಲ್ಲಿ ಅಧಿಸೂಚನೆಯನ್ನು ಬದಲಿಸಬೇಕು ಎಂದು ನಿರ್ದೇಶನ ನೀಡಿತು.

ನೀರು ಹಂಚಿಕೆ ಪ್ರಮಾಣ ಹೆಚ್ಚಳ ಹಾಗೂ ಕೇಂದ್ರ ಸರ್ಕಾರದ ಅಧಿಸೂಚನೆಗೆ ಕೋರಿ ಕರ್ನಾಟಕ ಅರ್ಜಿ ಸಲ್ಲಿಸಿತ್ತು. ಕರ್ನಾಟಕಕ್ಕೆ ಹಂಚಿಕೆ ಮಾಡಲಾದ ನೀರಿನ ಪ್ರಮಾಣ ಅಧಿಕವಾಗಿದೆ ಎಂದು ದೂರಿ ಗೋವಾ ಅರ್ಜಿ ಸಲ್ಲಿಸಿತ್ತು.

ರಾಜ್ಯಕ್ಕೆ ೧೩.೪೨ ಟಿಎಂಸಿ ಅಡಿ ನೀರನ್ನು ನ್ಯಾಯಮಂಡಳಿಯು ೨೦೧೮ರ ಆಗಸ್ಟ್ ೧೪ರಂದು ನೀಡಿದ ತೀರ್ಪಿನಲ್ಲಿ ಹಂಚಿಕೆ ಮಾಡಿತ್ತು. ಕಳಸಾ ನಾಲೆಯಿಂದ .೭೨ ಟಿಎಂಸಿ ಅಡಿ  ಹಾಗೂ ಬಂಡೂರಿ ನಾಲೆಯಿಂದ .೧೮ ಟಿಎಂಸಿ ಅಡಿ ನೀರನ್ನು ತಿರುವು ಯೋಜನೆ ಮೂಲಕ ಬಳಸಲು ನ್ಯಾಯಮಂಡಳಿ ಹೇಳಿತ್ತು. ಕಣಿವೆ ವ್ಯಾಪ್ತಿಯ ಬಳಕೆಗೆ .೫೦ ಟಿಎಂಸಿ ಅಡಿ ನೀರನ್ನು ನೀಡಿದ್ದು, .೦೨ ಟಿಎಂಸಿ ಅಡಿ ನೀರನ್ನು ಜಲ ವಿದ್ಯುತ್ ಉತ್ಪಾದನೆಗೆ ಬಳಸಲು ಹಂಚಿಕೆ ಮಾಡಲಾಗಿತ್ತು.

ಮಹದಾಯಿ ನದಿ ನೀರು ಹಂಚಿಕೆ ಸಂಬಂಧವಾಗಿ ಮಹದಾಯಿ ಜಲವಿವಾದ ನ್ಯಾಯಮಂಡಳಿಯು ಹಂಚಿಕೆ ಮಾಡಿದ ೧೩.೪೨ ಟಿಎಂಸಿ ಅಡಿ ನೀರನ್ನು ಕರ್ನಾಟಕಕ್ಕೆ ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ಸಮ್ಮತಿಸಿದ್ದು, ತೀರ್ಪಿನ ಬಗ್ಗೆ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯ ವಿಧಾನಸಭೆಯಲ್ಲ್ಲಿ ಪ್ರಕಟಿಸಿದರು.

ತೀರ್ಪು ಕುರಿತ ಅಧಿಸೂಚನೆಗೆ ಮೂರು ರಾಜ್ಯಗಳ ಒಪ್ಪಿಗೆ ಸಲ್ಲಿಸಿದ್ದರಿಂದ ಅಧಿಸೂಚನೆ ಹೊರಡಿಸಲು ನ್ಯಾಯಪೀಠ ನಿರ್ದೇಶನ ನೀಡಿತು.
ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ನ್ಯಾಯಮಂಡಳಿ ತೀರ್ಪಿನ ಬಗ್ಗೆ ಅಧಿಸೂಚನೆ ಹೊರಡಿಸಲು ಸುಪ್ರೀಂಕೋರ್ಟ್ ಆದೇಶ ನೀಡಿದ್ದರಿಂದ ಕರ್ನಾಟಕ ಸರ್ಕಾರದ ವಾದಕ್ಕೆ ಮತ್ತಷ್ಟು ಬಲಬಂದಂತಾಯಿತು.

ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಬೇಕೆಂದು ಕೋರಿ ಕರ್ನಾಟಕವು ಮೇಲ್ಮನವಿ ಸಲ್ಲಿಸಿತ್ತು. ಆದರೆ ವಿವಾದ ಸುಪ್ರೀಂಕೋರ್ಟ್ ನಲ್ಲಿ ಬಗೆಹರಿಯದ ಹಿನ್ನೆಲೆಯಲ್ಲಿ ಅಧಿಸೂಚನೆ  ಹೊರಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಪ್ರಮಾಣಪತ್ರ (ಅಫಿಡವಿತ್) ಸಲ್ಲಿಸಿತ್ತು.

ಜುಲೈ ೧೫ರಿಂದ ಸತತ ವಿಚಾರಣೆ ನಡೆಸುವುದಾಗಿ ಪ್ರಕಟಿಸಿರುವ ಸುಪ್ರೀಂಕೋರ್ಟ್ ಪೀಠವು, ತಮ್ಮ ವಾದಗಳಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಮಂಡಿಸುವಂತೆ ಗೋವಾ, ಮಹಾರಾಷ್ಟ್ರ, ಕರ್ನಾಟಕ   ಮೂರೂ ರಾಜ್ಯಗಳಿಗೆ ಸೂಚಿಸಿತು.

ಕಳೆದ ವರ್ಷವೇ ಮಹದಾಯಿ ನ್ಯಾಯಾಧೀಕರಣ ತೀರ್ಪು ನೀಡಿದ್ದರೂ ಕುರಿತು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರಲಿಲ್ಲ. ಇದರಿಂದಾಗಿ ಕರ್ನಾಟಕದ  ಪಾಲಿನ ನೀರಿನ ಬಳಕೆಗೆ ತೊಡಕು ಉಂಟಾಗಿತ್ತು

ವರ್ಷ ಕಳೆದರೂ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸದಿದ್ದುದು ಕರ್ನಾಟಕದ ಉತ್ತರ ಭಾಗದಲ್ಲಿ ತೀವ್ರ ಪ್ರತಿಭಟನೆಗಳಿಗೆ ಕಾರಣವಾಗಿದ್ದವು.

ಮಹದಾಯಿ ನ್ಯಾಯಾಧಿಕರಣದ ಆದೇಶ ಜಾರಿಗೆ ತರಬೇಕು. ಬಗ್ಗೆ ಕೇಂದ್ರ ಸರ್ಕಾರ ಕೂಡಲೇಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದ್ದ ರೈತಸೇನಾ ಅಧ್ಯಕ್ಷ ವೀರೇಶ್ ಸೊಬರದಮಠ ಕುರಿತು ಸುಪ್ರೀಂ ಕೋರ್ಟಿಗೆ  ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ ಎಂದು ಕೆಲ ಸಮಯದ ಹಿಂದೆ ಹೇಳಿದ್ದರು.

ಮಹದಾಯಿ ಮತ್ತು ಕಳಸಾ- ಬಂಡೂರಿ ವಿವಾದ ಇನ್ನೇನು ಬಗೆಹರಿಯಿತು ಎನ್ನುವಾಗಲೆ ಗೋವಾ ಖ್ಯಾತೆ ತೆಗೆಯುತ್ತಿತ್ತು. ಹೀಗಾಗಿ ಕೊನೆ ಕ್ಷಣದಲ್ಲಿ ರಾಜ್ಯದ ಜನರ ನಿರೀಕ್ಷೆಗಳ ಮೇಲೆ ತಣ್ಣೀರು ಬೀಳುತ್ತಿತ್ತು. ಇತ್ತೀಚೆಗೆ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಹಸಿರು ನಿಶಾನೆ ತೋರಿಸಿತ್ತು. ಆದರೆ ಗೋವಾ ಸರ್ಕಾರದ ಒತ್ತಡದಿಂದ ಪರಿಸರ ಇಲಾಖೆಯ ಅನುಮತಿಯನ್ನು ತಡೆ ಹಿಡಿಯಲಾಗಿತ್ತು. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ರಾಜ್ಯದ ಸಚಿವರಿಗೆ ಬರೆದಿದ್ದ ಪತ್ರಕ್ಕೂ ಗ್ರಹಣ ಹಿಡಿದಿತ್ತು. ಇದು ರಾಜ್ಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

ಮಹದಾಯಿ: ಮುಂದಿನ ನಡೆ
* ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವುದು.
* ಕಾವೇರಿ ನದಿ ನೀರು ನಿಯಂತ್ರಣ ಪ್ರಾಧಿಕಾರದ ಮಾದರಿಯಲ್ಲಿ ಮಹದಾಯಿ ನದಿ ನೀರು ನಿಯಂತ್ರಣ ಪ್ರಾಧಿಕಾರ ರಚನೆ.
* ಕೇಂದ್ರ ಜಲಶಕ್ತಿ ಸಚಿವಾಲಯದ ಅಡಿ ಪ್ರಾಧಿಕಾರದಿಂದ ಕಾರ್ ನಿರ್ವಹಣೆ.
* ಕೇಂದ್ರ ಮತ್ತು ಕಣಿವೆ ರಾಜ್ಯಗಳ ಅಧಿಕಾರಿಗಳು ಪ್ರಾಧಿಕಾರದಲ್ಲಿ ಸದಸ್ಯರಾಗಿರುತ್ತಾರೆ.
* ಕೇಂದ್ರದ ಪರಿಸರ ಇಲಾಖೆ ಅನುಮತಿ ಪಡೆದು, ತಿರುವು ಯೋಜನೆ ಕಾಮಗಾರಿ ಆರಂಭಿಸಬಹುದು.

No comments:

Advertisement