My Blog List

Friday, February 21, 2020

ಟೆಲಿಕಾಂ ಎಜಿಆರ್ ಬಿಕ್ಕಟ್ಟು: ತೆರಿಗೆ, ಶುಲ್ಕ ಕಡಿತಕ್ಕೆ ಸುನಿಲ್ ಮಿತ್ತಲ್ ಮನವಿ

ಟೆಲಿಕಾಂ ಎಜಿಆರ್ ಬಿಕ್ಕಟ್ಟು: ತೆರಿಗೆ, ಶುಲ್ಕ ಕಡಿತಕ್ಕೆ  ಸುನಿಲ್ ಮಿತ್ತಲ್ ಮನವಿ
ನವದೆಹಲಿ: ಹೊಂದಾಣಿಕೆ ಮಾಡಲಾದ ಒಟ್ಟು ಆದಾಯ (ಎಜಿಆರ್) ಬಾಕಿಗೆ ಸಂಬಂಧಿಸಿದಂತೆಅಭೂತಪೂರ್ವ’  ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತೆರಿಗೆಗಳು ಮತ್ತು ಶುಲ್ಕಗಳಲ್ಲಿ ಕಡಿತ ಮಾಡುವ ಮೂಲಕ ಉದ್ಯಮದ ನೆರವಿಗೆ ಬರುವಂತೆ ಭಾರ್ತಿ ಏರ್ ಟೆಲ್ ಅಧ್ಯಕ್ಷ ಹಾಗೂ ಸಂಸ್ಥಾಪಕ ಸುನಿಲ್ ಮಿತ್ತಲ್ ಅವರು 2020 ಫೆಬ್ರುವರಿ 20ರ ಗುರುವಾರ ಕೇಂದ್ರ ದೂರಸಂಪರ್ಕ (ಟೆಲಿಕಾಂ) ಸಚಿವ ರವಿಶಂಕರ ಪ್ರಸಾದ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.

ಎಜಿಆರ್ ಬಾಕಿಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಪಾಲನೆಗೆ ಏರ್ಟೆಲ್ ಬದ್ಧವಾಗಿದೆ ಮತ್ತು ಕಂಪೆನಿಯು ಆದಷ್ಟೂ ಶೀಘ್ರ ಬಾಕಿ ಪಾವತಿ ಮಾಡಲಿದೆಎಂದು ಮಿತ್ರಲ್ ಅವರು ಸಚಿವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.
ಸರ್ಕಾರವು ನಿರ್ವಹಿಸುತ್ತಿರುವ ಎಜಿಆರ್ ಪ್ರಸ್ತುತ ಉದ್ಯಮದ ಪಾಲಿಗೆ ಹಿಂದೆಂದೂ ಸಂಭವಿಸದ ಬಿಕ್ಕಟ್ಟು ಆಗಿ ಪರಿಣಮಿಸಿದೆಎಂದು ಅವರು ನುಡಿದರು.

ಉದ್ಯಮದ ಮೇಲೆ ಅತಿಯಾದ ತೆರಿಗೆ ಹೊರೆ ಇದೆ. ಉದ್ಯಮರಂಗದ ಮೇಲಿನ ತೆರಿಗೆ ಮತ್ತು ಶುಲ್ಕಗಳನ್ನು ಕಡಿತಗೊಳಿಸುವ ಅಗತ್ಯವಿದೆಎಂದು ಅವರು ಸರ್ಕಾರಕ್ಕೆ ಸಲಹೆ ಮಾಡಿದರು.

ಬಾಕಿ ಪಾವತಿ ಮಾಡಲು ಏರ್ ಟೆಲ್ಗೆ ಮಾರ್ಚ್ ೧೭ರವರೆಗೆ ಕಾಲಾವಕಾಶ ಇದೆ. ಅದಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ಸಂಸ್ಥೆಯು ತನ್ನ ಬಾಕಿಗಳನ್ನು ಪಾವತಿ ಮಾಡಲಿದೆ ಎಂದು ಅವರು ನುಡಿದರು.

ಕಳೆದ ವಾರ ತನ್ನ ಹಿಂದಿನ ಆದೇಶ ಪಾಲನೆಗೆ ವಿಫಲವಾದುದಕ್ಕಾಗಿ ಕಂಪೆನಿಗಳು ಮತ್ತು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವುದಾಗಿ ಸುಪ್ರೀಂಕೋರ್ಟ್ ಎಚ್ಚರಿಸಿದ ಬಳಿಕ ಸರ್ಕಾರವು ವೊಡಾಫೋನ್ ಐಡಿಯಾ ಸೇರಿದಂತೆ ಎಲ್ಲ ಮೊಬೈಲ್ ಸೇವಾ ಸಂಸ್ಥೆಗಳಿಗೆ ಸಹಸ್ರಾರು ಕೋಟಿ ರೂಪಾಯಿಗಳ ಬಾಕಿಯನ್ನು ತತ್ ಕ್ಷಣ ಪಾವತಿ ಮಾಡುವಂತೆ ಆಜ್ಞಾಪಿಸಿತ್ತು.

ವಾರಾರಂಭದಲ್ಲಿ ಭಾರ್ತಿ ಏರ್ಟೆಲ್ ೧೦,೦೦೦ ಕೋಟಿ ರೂಪಾಯಿಗಳನ್ನು ದೂರಸಂಪರ್ಕ ಇಲಾಖೆಗೆ (ಡಿಒಟಿ) ಸ್ಥಾಯೀ ಬಾಕಿಗಳ ಸಲುವಾಗಿ ಪಾವತಿ ಮಾಡಿತ್ತು. ’ಭಾರ್ತಿ ಏರ್ಟೆಲ್, ಭಾರ್ತಿ ಹೆಕ್ಸಾಕಾಮ್ ಮತ್ತು ಟೆಲೆನೋರ್ ಪರವಾಗಿ ೧೦,೦೦೦ ಕೋಟಿ ರೂಪಾಯಿಗಳನ್ನು ಪಾವತಿ ಮಾಡಲಾಗಿದೆಎಂದು ಭಾರ್ತಿ ಏರ್ಟೆಲ್ ಸೋಮವಾರ ತಿಳಿಸಿತ್ತು.

ವೊಡಾಫೋನ್ ಐಡಿಯಾ ಈವರೆಗೆ ,೫೦೦ ಕೋಟಿ ರೂಪಾಯಿಗಳನ್ನು ಎಜಿಆರ್ ಬಾಕಿ ಸಲುವಾಗಿ ದೂರಸಂಪರ್ಕ ಇಲಾಖೆಗೆ ಪಾವತಿ ಮಾಡಿದೆ.

ವೈರ್ಲೆಸ್ ಕಂಪೆನಿಗಳು ೯೨,೦೦೦ ಕೋಟಿ ರೂಪಾಯಿಗಳನ್ನು ಬಾಕಿ ಶುಲ್ಕ ಮತ್ತು ಬಡ್ಡಿ ಸಲುವಾಗಿ ಪಾವತಿ ಮಾಡಬೇಕು ಎಂಬುದಾಗಿ ದೂರಸಂಪರ್ಕ ಇಲಾಖೆಯು ಮುಂದಿಟ್ಟಿದ್ದ ಬೇಡಿಕೆಯನ್ನು ಅಕ್ಟೋಬರ್ ತಿಂಗಳ ತನ್ನ ಆದೇಶದಲ್ಲಿ ಎತ್ತಿ ಹಿಡಿದಿದ್ದ ಸುಪ್ರೀಂಕೋರ್ಟ್ ಬಾಕಿ ಪಾವತಿಗೆ ಮೂರು ತಿಂಗಳುಗಳ ಗಡುವು ನೀಡಿತ್ತು.

ಇತ್ತೀಚಿನ ಲಭ್ಯ ಅಂದಾಜುಗಳ ಪ್ರಕಾರ, ಏರ್ಟೆಲ್ ಪರವಾನಗಿ ಶುಲ್ಕ ಮತ್ತು  ತರಂಗಾಂತರ ಬಳಕೆಗೆ ಸಂಬಂಧಿಸಿದ ಶುಲ್ಕ ಸೇರಿದಂತೆ  ಸುಮಾರು ೩೫,೫೮೬ ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ಪಾವತಿ ಮಾಡಬೇಕಾಗಿದೆ.

ವೊಡಾಫೋನ್ ಐಡಿಯಾ ೫೩,೦೦೦ ಕೋಟಿ ರೂಪಾಯಿ (೨೪,೭೨೯ ಕೋಟಿ ರೂಪಾಯಿ ತರಂಗಾಂತರ ಶುಲ್ಕ ಬಾಕಿ ಮತ್ತು ೨೮,೩೦೯ ಕೋಟಿ ರೂಪಾಯಿ ಪರವಾನಗಿ ಶುಲ್ಕ) ಬಾಕಿ ಪಾವತಿ ಮಾಡಬೇಕಾಗಿದೆ. ಟಾಟಾ ಟೆಲಿ ಸರ್ವೀಸಸ್ ೧೩,೮೦೦ ಕೋಟಿ ರೂಪಾಯಿ, ಬಿಎಸ್ಎನ್ಎಲ್  ,೯೮೯ ಕೋಟಿ ರೂಪಾಯಿ ಮತ್ತು ಎಂಟಿಎನ್ಎಲ್ ,೧೨೨ ಕೋಟಿ ರೂಪಾಯಿಗಳ ಬಾಕಿ ಪಾವತಿ ಮಾಡಬೇಕಾಗಿದೆ.

No comments:

Advertisement