Saturday, February 8, 2020

ಧಾರ್ಮಿಕ ಮೆರವಣಿಗೆಯಲ್ಲಿ ಪಟಾಕಿ ಸ್ಫೋಟ: ೩ ಸಾವು

ಧಾರ್ಮಿಕ ಮೆರವಣಿಗೆಯಲ್ಲಿ ಪಟಾಕಿ ಸ್ಫೋಟ: ಸಾವು
ಚಂಡೀಗಢ; ಪಂಜಾಬ್ ರಾಜ್ಯದ ತರಣ್ ಜಿಲ್ಲೆಯಲ್ಲಿ 2020 ಫೆಬ್ರುವರಿ 08ರ ಶನಿವಾರ ನಡೆಯುತ್ತಿದ್ದ ಧಾರ್ಮಿಕ ಉತ್ಸವದ ಮೆರವಣಿಗೆ ವೇಳೆ ಪಟಾಕಿ ಸ್ಫೋಟಗೊಂಡ ಪರಿಣಾಮವಾಗಿ ಮಂದಿ ಸಾವನ್ನಪ್ಪಿ, ಇತರ ೨೦ಕ್ಕೂ ಹೆಚ್ಚು ಮಂದಿ ಗಾಯಗೊಂಡರು.  ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದೂ ಭೀತಿ ಪಡಲಾಯಿತು.
ಪಟಾಕಿ ಸ್ಫೋಟದಿಂದಾಗಿ ೧೪ರಿಂದ ೧೫ ಮಂದಿ ಸಾವನ್ನಪ್ಪಿರಬಹುದು ಎಂದು ಘಟನಾ ಸ್ಥಳದಲ್ಲಿದ್ದ ಎಸ್‌ಎಸ್‌ಪಿ ಧ್ರುವ್ ದಾಹಿಯಾ ಅನುಮಾನ ವ್ಯಕ್ತ ಪಡಿಸಿದರು.

ಪಟಾಕಿಗೆ ಅತ್ಯುತ್ತಮ ಗುಣಮಟ್ಟ ಪೊಟಾಶಿಯಂ ಬಳಕೆ ಮಾಡಿರುವುದರಿಂದ ಸ್ಫೋಟದ ತೀವ್ರತೆ ಜಾಸ್ತಿಯಾಗಿತ್ತು, ಹೀಗಾಗಿ ಸ್ಫೋಟದಿಂದಾಗಿ ಹೆಚ್ಚಿ ಸಾವು ನೋವು ಆಗಿದೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದವು.
ಪಟಾಕಿ ಸ್ಫೋಟ ಆಕಸ್ಮಿಕ ಎಂದು ಭಾವಿಸಲಾಗಿದೆ ಎಂದು ಎಸ್ ಎಸ್ ಪಿ ಹೇಳಿದರು.

ದುರಂತದಲ್ಲಿ ಸಾವು ನೋವಿಗೆ ಈಡಾದ ಹೆಚ್ಚಿನವರು ೧೮-೧೯ ವಯೋಮಾನದವರು ಎಂದು ಅಧಿಕಾರಿ ತಿಳಿಸಿದರು.

ನಗರ ಕೀರ್ತನ್ (ಧಾರ್ಮಿಕ ಮೆರವಣಿಗೆ) ಸಮಯದಲ್ಲಿ ಟ್ರಾಕ್ಟರ್ ಟ್ರಾಲಿಯಲ್ಲಿ ಸಾಗಿಸಲಾಗುತ್ತಿದ್ದ ಪಟಾಕಿ, ತರಣ್ ತಾರಣ್‌ನಿಂದ ೧೦ ಕಿಮೀ ದೂರದ ದಾಲೆಕೆ ಗಾಮದ ಬಳಿಕಯ ಪಹು ಗ್ರಾಮದಲ್ಲಿ ಸ್ಫೋಟಗೊಂಡಿತು. ಟ್ರಾಕ್ಟರ್ ಟ್ರಾಲಿಯಲ್ಲಿದ್ದ ಪಟಾಕಿಗಳು ಘರ್ಷಿಸಿದ್ದು ಸ್ಫೋಟಕ್ಕೆ ಕಾರಣವಾಗಿರಬಹುದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಕನಿಷ್ಠ ಮೂವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿದವು.

ಪ್ರಧಾನ ಕಚೇರಿಯ ಪೊಲೀಸ್ ವರಿಷ್ಠಾಧಿಕಾರಿ ಜಗ್ಜಿತ್ ಸಿಂಗ್ ವಾಲಿಯಾ, "ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರು, ಮತ್ತು ಇತರರು ಗಾಯಗೊಂಡಿದ್ದಾರೆ" ಎಂದು ಹೇಳಿದರು.

ಸಂಜೆ .೩೦ ಕ್ಕೆ ಸ್ಫೋಟ ಸಂಭವಿಸಿದಾಗ ಭಿಕಿವಿಂಡ್  ಉಪವಿಭಾಗದ ಪಹುವಿಂದ್ ಗ್ರಾಮದ ಗುರುದ್ವಾರ ಬಾಬಾ ದೀಪ್ ಸಿಂಗ್ ನಿಂದ ತರಣ್ ತಾರಣ್ -ಅಮೃತಸರ ರಸ್ತೆಯ ಚಬ್ಬಾ ಗ್ರಾಮದಲ್ಲಿರುವ ಗುರುದ್ವಾರ ತಹ್ಲಾ ಸಾಹಿಬ್ ಕಡೆಗೆ ಮೆರವಣಿಗೆ ಸಾಗುತ್ತಿತ್ತು.

"ರಾಸಾಯನಿಕ ಇದ್ದ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಸ್ಫೋಟ ಸಂಭವಿಸಿದಾಗ ಮೆರವಣಿಗೆ ದಲೆಕೆ ತಲುಪಿತ್ತು ಎಂದು ಗ್ರಾಮಸ್ಥ ಮಂಜಿಂದರ್ ಸಿಂಗ್ ಹೇಳಿದರು.

ಮೆರವಣಿಗೆಯ ಭಾಗವಾಗಿದ್ದ ಟ್ರ್ಯಾಕರ್ ಟ್ರಾಲಿಯಲ್ಲಿ ಆರರಿಂದ ಏಳು ಮಂದಿ ಹದಿಹರೆಯದವರು ಇದ್ದರು. "ಹದಿಹರೆಯದವರು ಟ್ರೈಲರ್‌ನಲ್ಲಿ ಸಂಗ್ರಹವಾಗಿರುವ ರಾಸಾಯನಿಕವನ್ನು ಬಳಸಿಕೊಂಡು ಮೆರವಣಿಗೆಯಲ್ಲಿ ಗುಂಡೇಟನ್ನು ಹೋಲುವ ಸದ್ದು ಹೊರಡಿಸುತ್ತಿದ್ದರು ಎಂದು ಮಂಜಿಂದರ್ ಸಿಂಗ್ ಹೇಳಿದರು.

ಮೃತರಲ್ಲಿ  ಗುರ್‌ಪ್ರೀತ್ ಸಿಂಗ್ ಮತ್ತು ಮನ್‌ಪ್ರೀತ್ ಸಿಂಗ್ ಎಂಬವರನ್ನು ಗುರುತಿಸಲಾಗಿದೆ. ಗಾಯಗೊಂಡವರು ಅನ್ಮೋಲ್‌ಪ್ರೀತ್ ಸಿಂಗ್, ಸರ್ಗುನ್ ಸಿಂಗ್, ಅಜಯ್‌ಪಾಲ್ ಸಿಂಗ್, ಪರಮ್‌ಜೋತ್ ಸಿಂಗ್, ನಾರಂದೀಪ್ ಸಿಂಗ್, ಹರ್ನೂರ್ ಸಿಂಗ್, ಡೇವಿಂದರ್‌ಬೀರ್ ಸಿಂಗ್, ಸರಬ್‌ಜೋತ್ ಸಿಂಗ್, ಕಿರಾತ್ ಸಿಂಗ್ ಮತ್ತು ಗುರ್ಸಿಮ್ರಾನ್ ಸಿಂಗ್ ಎಂದು ಮೂಲಗಳು ತಿಳಿಸಿವೆ.

ಗಾಯಾಳುಗಳನ್ನು ತರಣ್ ತಾರಣ್‌ನ ಸಿವಿಲ್ ಆಸ್ಪತ್ರೆ ಮತ್ತು ಅಮೃತಸರದ ಗುರುನಾನಕ್ ದೇವ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಾಗಿಸಲಾಯಿತು.

No comments:

Advertisement