Monday, February 10, 2020

ಒಟ್ಟು ಮತ ಚಲಾಯಿಸಿದವರೆಷ್ಟು? ಕೇಜ್ರಿವಾಲ್ ಗರಂ

ಒಟ್ಟು ಮತ ಚಲಾಯಿಸಿದವರೆಷ್ಟು? ಕೇಜ್ರಿವಾಲ್ ಗರಂ
ನವದೆಹಲಿ: ಮತದಾನ ಮುಗಿದು ಹಲವಾರು ತಾಸುಗಳೇ ಕಳೆದುಹೋಗಿದ್ದರೂ ಮತ ಚಲಾಯಿಸಿದವರ ಅಂತಿಮ ಅಂಕಿಸಂಖ್ಯೆಗಳನ್ನು ಚುನಾವಣಾ ಆಯೋಗವೂ ಬಿಡುಗಡೆ ಮಾಡಿಲ್ಲ ಏಕೆ ಎಂಬುದಾಗಿ  2020 ಫೆಬ್ರುವರಿ 02ರ ಭಾನುವಾರ  ಅಚ್ಚರಿ ವ್ಯಕ್ತ ಪಡಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರುಇದು ಸಂಪೂರ್ಣ ಆಘಾತಕಾರಿಎಂದು ಹೇಳಿದರು.

ಸಂಪೂರ್ಣ ಆಘಾತಕಾರಿ. ಚುನಾವಣಾ ಆಯೋಗ ಏನು ಮಾಡುತ್ತಿದೆ? ಮತದಾನ ಮುಗಿದು ಇಷ್ಟೊಂದು ಗಂಟೆಗಳು ಕಳೆದರೂ ಒಟ್ಟು ಮತ ಚಲಾಯಿಸಿದವರ ಅಂತಿಮ ಅಂಕಿಸಂಖ್ಯೆಯನ್ನು ಅವರು ಏಕೆ ಬಿಡುಗಡೆ ಮಾಡುತ್ತಿಲ್ಲ?’ ಎಂದು ಕೇಜ್ರಿವಾಲ್ ಅವರು ಟ್ವೀಟ್ ಮೂಲಕ ಪ್ರಶ್ನಿಸಿದರು.

ಚುನಾವಣಾ ಆಯೋಗವು  2020 ಫೆಬ್ರುವರಿ 08ರ ಶನಿವಾರ ರಾತ್ರಿ ಒದಗಿಸಿದ ಮಾಹಿತಿ ಪ್ರಕಾರ ಮತದಾನದ ಪ್ರಮಾಣ ಶೇಕಡಾ ೬೧.೪೬. ರಾಷ್ಟ್ರ ರಾಜಧಾನಿಯಲ್ಲಿ ನೂತನ ಸರ್ಕಾರದ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಶನಿವಾರ ಸಂಜೆ ಗಂಟೆಗೆ ಮತದಾನ ಮುಕ್ತಾಯವಾಗಿತ್ತು. ಬೆಳಗ್ಗೆ ಮಂದಗತಿಯಲ್ಲಿದ್ದ ಮತದಾರರ ಸಂಖ್ಯೆ, ಹೊತ್ತೇರಿದಂತೆ ಕ್ರಮೇಣ ಚುರುಕಾಗಿದ್ದು, ದೆಹಲಿಯಲ್ಲಿ ಹೆಚ್ಚು ಮಂದಿ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದ್ದರು.

ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರುಚುನಾವಣಾ ಆಯೋಗವು ಚುನಾವಣೆಗಳು ಪೂರ್ಣಗೊಂಡ ಬಳಿಕ ಮತಚಲಾವಣೆಯ ಅಂಕಿಸಂಖ್ಯೆಯನ್ನು ಬಿಡುಗಡೆ ಮಾಡಲು ಸಿದ್ಧವಾಗದೇ ಇರುವುದು ಬಹುಶಃ ರಾಷ್ಟ್ರದಲ್ಲೇ ಇದು ಪ್ರಥಮಎಂದು ಹೇಳಿದರು.

ದೆಹಲಿ ಚುನಾವಣೆಯಲ್ಲಿ ಮತದಾನದ ಪ್ರಮಾಣ ಎಷ್ಟು ಎಂಬುದನ್ನು ತಿಳಿಯಲು ದೆಹಲಿಯ ಜನರು ಬಯಸಿದ್ದಾರೆ. ಮತದಾನದ ಪ್ರಮಾಣ ಎಷ್ಟು ಎಂಬುದನ್ನು ಹೇಳಲು ಚುನಾವಣಾ ಆಯೋಗ ಇಷ್ಟೊಂದು ಸುದೀರ್ಘ ಸಮಯವನ್ನು ಏಕೆ ತೆಗೆದುಕೊಳ್ಳುತ್ತಿದೆ?  ಲೋಕಸಭಾ ಚುನಾವಣೆಯಲ್ಲಿ ಚುನಾವಣೆ ಮುಗಿದ ಒಂದು ಗಂಟೆಯ ಒಳಗಾಗಿ ಚುನಾವಣಾ ಆಯೋಗವು ಮತದಾನದ ಪ್ರಮಾಣವನ್ನು ಬಹಿರಂಗ ಪಡಿಸಿತ್ತು, ದೆಹಲಿಯಂತಹ ಸಣ್ಣ ರಾಜ್ಯದಲ್ಲಿ ಇಷ್ಟೊಂದು ವಿಳಂಬವೇಕೆ?’ ಎಂದು ಸಿಂಗ್ ಪ್ರಶ್ನಿಸಿದರು.

ದೆಹಲಿ ವಿಧಾನಸಭಾ ಚುನಾವಣೆಯು ಫೆಬ್ರುವರಿ ೮ರಂದು ಏಕಹಂತದಲ್ಲಿ ನಡೆದಿತ್ತು. ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು (ಎಎಪಿ-ಆಪ್) ಚುನಾವಣೆಯಲ್ಲಿ ೨೪ ಮಂದಿ ಹೊಸಬರನ್ನು ಕಣಕ್ಕೆ ಇಳಿಸಿತ್ತು.

ದೆಹಲಿ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ ಪ್ರಚಂಡ ಬಹುಮತದ ಮುನ್ಸೂಚನೆ ನೀಡಿವೆ. ೭೦ ಸದಸ್ಯ ಬಲದ ವಿಧಾನಸಭೆಯಲ್ಲಿ ೨೦೧೫ರ ಚುನಾವಣೆಯಲ್ಲಿ ೬೭ ಸ್ಥಾನಗಳನ್ನು ಗೆಲ್ಲುವ ಮೂಲಕ ಆಮ್ ಆದ್ಮಿ ಪಕ್ಷವು ಪ್ರಚಂಡ ಬಹುಮತ ಗಳಿಸಿತ್ತು ಮತ್ತು ಭಾರತೀಯ ಜನತಾ ಪಕ್ಷವು ಕೇವಲ ಸ್ಥಾನಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಕಾಂಗೆಸ್ ಶೂನ್ಯ ಸಂಪಾದನೆ ಮಾಡಿತ್ತು.

ದೆಹಲಿ ವಿಧಾನಸಭಾ ಚುನಾವಣೆಯ ಮತಗಳ ಎಣಿಕೆ ಫೆಬ್ರುವರಿ ೧೧ರಂದು ನಡೆಯಲಿದೆ.

No comments:

Advertisement