Monday, February 10, 2020

ಕೊರೋನಾವೈರಸ್: ಚೀನಾ ಅಧ್ಯಕ್ಷ ಕ್ಸಿಗೆ ಪ್ರಧಾನಿ ಮೋದಿ ಪತ್ರ

ಕೊರೋನಾವೈರಸ್: ಚೀನಾ ಅಧ್ಯಕ್ಷ ಕ್ಸಿಗೆ ಪ್ರಧಾನಿ ಮೋದಿ ಪತ್ರ
ನವದೆಹಲಿ: ಚೀನಾದಲ್ಲಿ ಈವರೆಗೆ ೮೦೦ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡಿರುವ ಮಾರಕ ಕೊರೋನಾವೈರಸ್ನಿಂದ ಸಂಭವಿಸುತ್ತಿರುವ ಸಾವು ನೋವಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನೀ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೆ  2020 ಫೆಬ್ರುವರಿ 02ರ ಭಾನುವಾರ ಪತ್ರ ಬರೆದು ಸಂತಾಪ ವ್ಯಕ್ತ ಪಡಿಸಿದರು ಮತ್ತು ಸಂಕಟ ಎದುರಿಸುವಲ್ಲಿ ಅಧ್ಯಕ್ಷರು ಮತ್ತು ಚೀನಾ ಜನರ ಜೊತೆಗಿರುವುದಾಗಿ  ಭರವಸೆ ನೀಡಿದರು.

ಸವಾಲನ್ನು ಎದುರಿಸುವಲ್ಲಿ ಭಾರತವು ನೆರವು ನೀಡಲು ಸಿದ್ಧ ಎಂದು ಪತ್ರದಲ್ಲಿ ತಿಳಿಸಿದ ಪ್ರಧಾನಿ, ಸಾವು ನೋವುಗಳಿಗಾಗಿ ಸಂತಾಪ ವ್ಯಕ್ತ ಪಡಿಸಿದರು.

ತಿಂಗಳ ಆದಿಯಲ್ಲಿ ಹುಬೇ ಪ್ರಾಂತದಿಂದ ಭಾರತೀಯರನ್ನು ತೆರವುಗೊಳಿಸಲು ಚೀನೀ ಸರ್ಕಾರವು ಮಾಡಿಕೊಟ್ಟ ಅವಕಾಶಕ್ಕಾಗಿ ಪ್ರಧಾನಿಯವರು ಮೆಚ್ಚುಗೆಯನ್ನೂ ವ್ಯಕ್ತ ಪಡಿಸಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿದವು.

ಕೊರೋನಾವೈರಸ್ ಕೇಂದ್ರವಾದ ವುಹಾನ್ ನಗರದಿಂದ ೬೦೦ಕ್ಕೂ ಹೆಚ್ಚು ಭಾರತೀಯರನ್ನು ಫೆಬ್ರುವರಿ ಮತ್ತು ೨ರಂದು ಭಾರತ ಸರ್ಕಾರವು ತೆರವುಗೊಳಿಸಿತ್ತು.

No comments:

Advertisement