Monday, March 16, 2020

೩೨ ಐರೋಪ್ಯ ದೇಶ, ಟರ್ಕಿ ಪ್ರವಾಸಿಗರಿಗೆ ಮಾರ್ಚ್ 18ರಿಂದ ಭಾರತ ಪ್ರವೇಶ ನಿಷೇಧ

೩೨ ಐರೋಪ್ಯ ದೇಶ, ಟರ್ಕಿ ಪ್ರವಾಸಿಗರಿಗೆ
ಮಾರ್ಚ್ 18ರಿಂದ  ಭಾರತ ಪ್ರವೇಶ ನಿಷೇಧ
ನವದೆಹಲಿ: ಮಾರಕ ಕೊರೋನಾವೈರಸ್ ಸೊಂಕಿತ ಪ್ರವಾಸಿಗರ ಮೂಲಕ ಭಾರತದಲ್ಲಿ ಹರಡದಂತೆ ತಡೆಯುವ ಸಲುವಾಗಿ ೩೨ ಐರೋಪ್ಯ ರಾಷ್ಟ್ರಗಳು ಮತ್ತು ಟರ್ಕಿಯ ಪ್ರವಾಸಿಗರಿಗೆ ಭಾರತ ಪ್ರವೇಶವನ್ನು ಕೇಂದ್ರ ಸರ್ಕಾರವು 2020 ಮಾರ್ಚ್  16ರ ಸೋಮವಾರ ನಿಷೇಧಿಸಿತು.

ಐರೋಪ್ಯ ಒಕ್ಕೂಟ, ಐರೋಪ್ಯ ಮುಕ್ತ ವ್ಯಾಪಾರ ಸಂಘದ ಸದಸ್ಯ ರಾಷ್ಟ್ರಗಳಾದ ಲೀಚೆನ್ಸ್ಟೀನ್, ಐಸ್ಲ್ಯಾಂಡ್ , ನಾರ್ವೆ, ಸ್ವಿಸ್ ಕನ್ಫೆಡರೇಷನ್, ಯುನೈಟೆಡ್ ಕಿಂಗ್ಡಮ್ ಮತ್ತು ಟರ್ಕಿ ಸೇರಿದಂತೆ ೩೨ ರಾಷ್ಟ್ರಗಳಿಂದ ಪ್ರಯಾಣಿಕರನ್ನು ಕರೆತರುವ ಏರ್ ಲೈನ್ಸ್ಗಳನ್ನು ಭಾರತ ಸರ್ಕಾರ ನಿಷೇಧಿಸಿತು.
ಮುಂಜಾಗರೂಕತಾ ಕ್ರಮವಾಗಿ ಪ್ರವಾಸೀ ನಿಯಮಾವಳಿಗಳನ್ನು ಬಿಗಿಗೊಳಿಸಲಾಗಿದೆಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದರು.

ರಾಷ್ಟ್ರಗಳ ಪ್ರವಾಸಿಗರ ಮೇಲಿನ ಸಾರಾಸಗಟು ನಿಷೇಧವು ಮಾರ್ಚ್ ೧೮ರ ಬುಧವಾರ ಸಂಜೆ .೩೦ ಗಂಟೆಯಿಂದ ಜಾರಿಗೆ ಬರಲಿದೆ.

ನಾಗರಿಕ ವಿಮಾನಯಾನದ ಮಹಾ ನಿರ್ದೇಶಕರು (ಡಿಜಿಸಿಎ) ಹೊರಡಿಸಿರುವ ಆದೇಶದ ಪ್ರಕಾರ ಸಮೂಹದ ರಾಷ್ಟ್ರಗಳ ಪ್ರಯಾಣಿಕರ ಪ್ರವಾಸವನ್ನು ೨೦೨೦ ಮಾರ್ಚ್ ೧೮ರಂದ ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ.

ದೇಶಗಳ ಯಾವುದೇ ವಿಮಾನ ಮಾರ್ಚ್ ೧೮ರ ಸಂಜೆ .೩೦ ಗಂಟೆಯಿಂದ (ಭಾರತೀಯ ಕಾಲಮಾನ) ಅಲ್ಲಿನ ಪ್ರವಾಸಿಗರನ್ನು ಭಾರತಕ್ಕೆ ಕರೆತರುವಂತಿಲ್ಲ. ವಿಮಾನಯಾನ ಸಂಸ್ಥೆಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆದೇಶ ತಿಳಿಸಿದೆ.

ಯುಎಇ, ಖತಾರ್, ಒಮನ್ ಮತ್ತು ಕುವೈತ್ ರಾಷ್ಟ್ರಗಳಿಂದ ಬರುವ ಪ್ರಯಾಣಿಕರನ್ನು ಅವರ ವೈದ್ಯಕೀಯ ಪರಿಸ್ಥಿತಿ ಏನೇ ಇದ್ದರೂ ೧೪ ದಿನಗಳ ಅವಧಿಗೆ ಪ್ರತ್ಯೇಕತಾ ವಾಸಕ್ಕೆ ಗುರಿಪಡಿಸಲಾಗುವುದು ಎಂದೂ ಆದೇಶ ತಿಳಿಸಿದೆ.

ಸರ್ಕಾರವು ಈಗಾಗಲೇ ಚೀನಾ, ಇಟಲಿ, ಇರಾನ್, ಕೊರಿಯಾ ಗಣರಾಜ್ಯ, ಫ್ರಾನ್ಸ್, ಸ್ಪೇನ್ ಮತ್ತು ಜರ್ಮನಿಯ ಪ್ರಯಾಣಿಕರನ್ನು ೧೪ ದಿನಗಳ ಪ್ರತ್ಯೇಕತಾ ವಾಸಕ್ಕೆ ಗುರಿಪಡಿಸುವುದನ್ನು ಕಡ್ಡಾಯಗೊಳಿಸಿದೆ.

ಭಾರತದ ಒಡಿಶಾ, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಕೇರಳದಲ್ಲಿ ಹೊಸದಾಗಿ ತಲಾ ಒಂದರಂತೆ ಒಟ್ಟು ಪ್ರಕರಣಗಳಲ್ಲಿ ಕೊರೋನಾವೈರಸ್ ಸೋಂಕು ದೃಢ ಪಟ್ಟದ್ದನ್ನು ಅನುಸರಿಸಿ ಭಾರತ ಸರ್ಕಾರವು ಹೊಸ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಹೊಸ ಪ್ರಕರಣಗಳೊಂದಿಗೆ ಭಾರತದಲ್ಲಿನ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ ೧೧೪ಕ್ಕೇ ಏರಿದೆ. ಇದರಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ೧೦ ಮಂದಿ ಮತ್ತು ಸಾವನ್ನಪಿದ ಇಬ್ಬರೂ ಸೇರಿದ್ದಾರೆ.

೫೦ಕ್ಕಿಂತ ಹೆಚ್ಚು ಜನರ ಸಭೆ, ಪ್ರತಿಭಟನೆಗೆ ನಿಷೇಧ: ಕೊರೋನಾವೈರಸ್ ಹಿನ್ನೆಲೆಯಲ್ಲಿ ರಾಜಧಾನಿ ದೆಹಲಿಯಲ್ಲಿ ೫೦ಕ್ಕಿಂತ ಹೆಚ್ಚು ಜನರು ಸೇರುವ ಯಾವುದೇ ಸಭೆ, ಸಮಾರಂಭ, ಪ್ರತಿಭಟನೆಗಳನ್ನು ನಡೆಸುವಂತಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಆದೇಶ ನೀಡಿದ್ದಾರೆ. ಆರೋಗ್ಯ ಕ್ರಮಗಳೊಂದಿಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿರುವ ಶಾಹೀನ್ ಬಾಗ್ ಪ್ರತಿಭಟನೆಕಾರರಿಗೂ ಇದು ಅನ್ವಯವಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

No comments:

Advertisement