My Blog List

Saturday, March 7, 2020

ರಾಮಮಂದಿರಕ್ಕೆ ೧ ಕೋಟಿ ರೂ ದೇಣಿಗೆ ಘೋಷಿಸಿದ ಉದ್ಧವ್ ಠಾಕ್ರೆ

ಪ್ರತ್ಯೇಕಗೊಂಡದ್ದು ಬಿಜೆಪಿಯಿಂದ, ಹಿಂದುತ್ವದಿಂದ ಅಲ್ಲ
ರಾಮಮಂದಿರಕ್ಕೆ ಕೋಟಿ ರೂ ದೇಣಿಗೆ: ಉದ್ಧವ್ ಠಾಕ್ರೆ
ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಏರಿದ ೧೦೦ ದಿನಗಳನ್ನು ಆಚರಿಸಲು 2020 ಮಾರ್ಚ್  07ರ ಶನಿವಾರ ಅಯೋಧ್ಯೆಗೆ ಭೇಟಿ ನೀಡಿದ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ರಾಮ ಮಂದಿರಕ್ಕೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ವಚನ ನೀಡಿದರು.
ತಮ್ಮ ಪಕ್ಷವು ಬಿಜೆಪಿಯಿಂದ ಪ್ರತ್ಯೇಕಗೊಂಡಿದೆ ಹೊರತು ಹಿಂದುತ್ವದಿಂದ ಅಲ್ಲ ಎಂಬುದಾಗಿ ಸಂದರ್ಭದಲ್ಲಿ ಅವರು ಹೇಳಿದರು.

ಅಯೋಧ್ಯಾ ಚಳವಳಿಗೆ ತಮ್ಮ ತಂದೆ ಬಾಳಾಸಾಹೇಬ್ ಠಾಕ್ರೆ ನೀಡಿದ್ದ ಕೊಡುಗೆಯನ್ನು ನೆನಪು ಮಾಡಿಕೊಂಡ ಉದ್ಧವ್, ’ಕೊರೋನಾವೈರಸ್ ಭೀತಿಯ ಕಾರಣ ನಾನು ಸರಯೂ ನದಿಯಲ್ಲಿಆರತಿಕಾರ್ಯಕ್ರಮವನ್ನು ಬಲವಂತವಾಗಿ ಕೈಬಿಡಬೇಕಾಗಿ ಬಂದಿದೆ, ಆದರೆ ಅಯೋಧ್ಯೆಗೆ ಭೇಟಿ ನೀಡುವುದನ್ನು ಮುಂದುವರೆಸುವೆಎಂದು ನುಡಿದರು.

ಇದಕ್ಕೆ ಮುನ್ನ, ಮಹಾರಾಷ್ಟ್ರದಲ್ಲಿ ತ್ರಿಪಕ್ಷ ಸರ್ಕಾರದ ನೇತೃತ್ವ ವಹಿಸಿದ ಶಿವಸೇನೆಯ ಸಿದ್ಧಾಂತದಲ್ಲಿ ಯಾವುದೇ ವ್ಯತ್ಯಾಸವೂ ಆಗಿಲ್ಲ ಎಂದು ಅವರು ಹೇಳಿದರು.

ಮಧ್ಯೆ, ಶಿವಸೇನಾ ಮುಖವಾಣಿಯಾಗಿರುವಸಾಮ್ನಾತನ್ನ ಸಂಪಾದಕೀಯದಲ್ಲಿ ಬಿಜೆಪಿಯನ್ನು ಕಟುವಾಗಿ ಟೀಕಿಸಿತು. ’ಭಗವಾನ್ ಶ್ರೀರಾಮ ಮತ್ತು ಹಿಂದುತ್ವ ಯಾವುದೇ ಒಂದು ರಾಜಕೀಯ ಪಕ್ಷದ ಆಸ್ತಿಯಲ್ಲಎಂದು ಅದು ಹೇಳಿತು.

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಮತ್ತು ಕಾಂಗ್ರೆಸ್ ಪಕ್ಷಗಳನ್ನೂ ಒಳಗೊಂಡಮಹಾ ವಿಕಾಸ ಅಘಾಡಿ (ಎಂವಿಎ) ಸರ್ಕಾರವು ನೂರು ದಿನಗಳನ್ನು ಪೂರೈಸಿದ್ದು, ಮೈತ್ರಿಕೂಟ ವ್ಯವಸ್ಥೆಯು ೧೦೦ ಗಂಟೆ ಕಾಲ ಕೂಡಾ ಬಾಳದು ಎಂಬುದಾಗಿ ಪ್ರತಿಪಾದಿಸುತ್ತಿದ್ದವರ ಮಾತುಗಳನ್ನು ಸುಳ್ಳು ಮಾಡಿದೆ ಎಂದು ಶಿವಸೇನಾ ಹೇಳಿತು.

೮೦ ಗಂಟೆ ಕೂಡಾ ತಮ್ಮ ಸರ್ಕಾರವನ್ನು ಬದುಕಿಕೊಳ್ಳಲು ಸಾಧ್ಯವಾಗದವರು ಠಾಕ್ರೆ ಆಡಳಿತ ೧೦೦ ಗಂಟೆ ಕೂಡಾ ನಡೆಯದು ಎಂದು ಪ್ರತಿಪಾದಿಸಿಕೊಂಡಿದ್ದರು. ಆದರೆ ಎಂವಿಎ ಸರ್ಕಾರವು ವೇಗವಾಗಿ ಬೆಳೆದದ್ದಷ್ಟೇ ಅಲ್ಲ ತನ್ನ ಉತ್ತಮ ಕಾರ್ಯ ನಿರ್ವಹಣೆ ಮೂಲಕ ಅವಧಿಯಲ್ಲಿ ಜನರ ವಿಶ್ವಾಸವನ್ನೂ ಗಳಿಸಿದೆಎಂದು ಸಾಮ್ನಾ ಸಂಪಾದಕೀಯ ಹೇಳಿತು.

ಪತ್ರಿಕೆಯು ಕಳೆದ ವರ್ಷ ನವೆಂಬರಿನಲ್ಲಿ ಕೇವಲ ೮೦ ಗಂಟೆಗಳ ಕಾಲ ಬಾಳಿದ್ದ ಹಿಂದಿನ ದೇವೇಂದ್ರ ಫಡ್ನವಿಸ್ ಸರ್ಕಾರದ ಎರಡನೇ ಅವಧಿಯನ್ನು ಪರೋಕ್ಷವಾಗಿ ಉಲ್ಲೇಖಿಸಿ ಮಾತು ಹೇಳಿತು.
ತಮ್ಮ ಸರ್ಕಾರದ ಕೆಲಸದ ಪುಷ್ಪಗಳನ್ನು ಶ್ರಿರಾಮನ ಪದತಲದಲ್ಲಿ ಅರ್ಪಿಸಲಿರುವುದರಿಂದ ಮುಖ್ಯಮಂತ್ರಿ ಠಾಕ್ರೆ ಅವರ ಅಯೋಧ್ಯಾ ಭೇಟಿ ಸ್ವಾಗತಾರ್ಹಎಂದು ಸಾಮ್ನಾ ಹೇಳಿತು.

ದೇಗುಲ ನಗರಿಗೆ ಠಾಕ್ರೆ ಅವರ ಭೇಟಿಯು ಭಗವಾನ್ ಶ್ರೀರಾಮನ ಮೇಲಿನ ಭಕ್ತಿಯ ಭೇಟಿ. ಸೈದ್ಧಾಂತಿಕವಾಗಿ ಪ್ರತ್ಯೇಕವಾಗಿರುವ ಮೂರು ಪಕ್ಷಗಳನ್ನು ಒಗ್ಗೂಡಿಸಿಕೊಂಡು ಸಂವಿಧಾನಕ್ಕೆ ಅನುಗುಣವಾಗಿ ಮಹಾರಾಷ್ಟ್ರ ಸರ್ಕಾರ ಮುನ್ನಡೆಯುತ್ತಿದೆ ಮತ್ತು ಠಾಕ್ರೆ ಅವರು ಇಂತಹ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆಎಂದು ಸಾಮ್ನಾ ಹೇಳಿತು.

ಠಾಕ್ರೆ ಅಯೋಧ್ಯಾ ಭೇಟಿ ಬಗ್ಗೆ ರಾಜಕೀಯ ವಿರೋಧಿಗಳು ಎತ್ತಿರುವ ವಿವಿಧ ಪ್ರಶ್ನೆಗಳ ಹಿನ್ನೆಲೆಯಲ್ಲಿ, ’ಸರ್ಕಾರವನ್ನು ಯಾರು ಬೇಕಾದರೂ ಬೆಂಬಲಿಸರಬಹದು, ಆದರೆ ಉದ್ಧವ್ ಠಾಕ್ರೆ ಮತ್ತು ಶಿವಸೇನೆ ಒಳಗೆ ಮತ್ತು ಹೊರಗಿನಿಂದ ಹಾಗೆಯೇ ಉಳಿದಿದೆ. ಅದರ ಸಿದ್ಧಾಂತದಲ್ಲಿ  ಯಾವುದೇ ಬದಲಾವಣೆ ಆಗಿಲ್ಲ. ಭಗವಾನ್ ಶ್ರೀರಾಮ ಮತ್ತು ಹಿಂದುತ್ವ ಯಾವುದೇ ಒಂದು ಪಕ್ಷದ ಆಸ್ತಿಯಲ್ಲಎಂದು ಸಾಮ್ನಾ ಸಂಪಾದಕೀಯ ಹೇಳಿತು.

No comments:

Advertisement