Tuesday, March 24, 2020

ಭಾರತದಲ್ಲಿ ಕೋವಿಡ್-೧೯ ಪೀಡಿತರ ಸಂಖ್ಯೆ ೫೧೯ಕ್ಕೆ

ಭಾರತದಲ್ಲಿ ಕೋವಿಡ್-೧೯ ಪೀಡಿತರ ಸಂಖ್ಯೆ ೫೧೯ಕ್ಕೆ
ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ ೫೧೯ಕ್ಕೆ ಏರಿದ್ದು, ೧೦೭  ಸೋಂಕಿನ ಪ್ರಕರಣಗಳೊಂದಿಗೆ ಮಹಾರಾಷ್ಟ್ರವು ಮೊದಲ ಸ್ಥಾನದಲ್ಲಿದೆ. ೮೭ ಪ್ರಕರಣಗಳೊಂದಿಗೆ ಕೇರಳವು ಎರಡನೇ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ 2020 ಮಾರ್ಚ್ 24ರ  ಮಂಗಳವಾರ ಪ್ರಕಟಿಸಿತು.

ಮಧ್ಯೆ, ಹಿಮಾಚಲ ಪ್ರದೇಶವು ಮಂಗಳವಾರ ಸಂಜೆ ಗಂಟೆಯಿಂದ ರಾಜ್ಯವ್ಯಾಪಿ ಕರ್ಫ್ಯೂ ಘೋಷಿಸಿದ್ದು, ಕೋರೋನಾವೈರಸ್ ನಿಗ್ರಹಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಂಡಿರುವ ರಾಜ್ಯಗಳ ಸಾಲಿಗೆ ಸೇರ್ಪಡೆಯಾಯಿತು.  ಮಹಾರಾಷ್ಟ್ರ ಸರ್ಕಾರವು ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ೧೦೭ಕ್ಕೆ ಏರಿದೆ ಎಂಬುದಾಗಿ ತಿಳಿಸಿತು. ರಾಜ್ಯದಲ್ಲಿ ಈಗಾಗಲೇ ಕೊರೋನಾಕ್ಕೆ ಸಂಬಂಧಿಸಿದಂತೆ ಸಾವುಗಳು ಸಂಭವಿಸಿವೆ.

ಅಮಿತ್ ಶಾ ಸೂಚನೆ: ಮಧ್ಯೆ ದೆಹಲಿಯಲ್ಲಿ ಭೂಮಾಲೀಕರು ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ತಮ್ಮನ್ನು ಮನೆಗಳಿಂದ ಖಾಲಿ ಮಾಡಿಸುತ್ತಿದ್ದಾರೆ ಎಂಬುದಾಗಿ ಏಮ್ಸ್ ವೈದ್ಯರು ದೂರಿದ್ದನ್ನು ಅನುಸರಿಸಿ, ವೈದ್ಯರಿಗೆ ಸುರಕ್ಷತೆ ಖಾತರಿ ಪಡಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ಪೊಲೀಸರಿಗೆ ಸೂಚನೆ ನೀಡಿದರು.

೨೬ ಖಾಸಗಿ ಲ್ಯಾಬ್: ಮಧ್ಯೆ ಕೋವಿಡ್ -೧೯ ಪ್ರಕರಣಗಳ ಪರೀಕ್ಷೆಗಾಗಿ ೨೬ ಖಾಸಗಿ ಲ್ಯಾಬೋರೇಟರಿಗಳು ಭಾರತದಲ್ಲಿ ಕಾರ್ಯಾರಂಭ ಮಾಡಿವೆ. ಮುಖೇಶ್ ಅಂಬಾನಿ ಅವರು ಕೇವಲ ೧೫ ದಿನಗಳಲ್ಲಿ ಸುಸಜ್ಜಿತ ಕೋವಿಡ್ ಪರೀಕ್ಷಾ ಆಸ್ಪತ್ರೆಯನ್ನೇ ಸ್ಥಾಪಿಸಿದ್ದಾರೆ.

ಕರ್ನಾಟಕದಲ್ಲಿ ೪೧ ಪ್ರಕರಣ: ಕರ್ನಾಟಕದಲ್ಲಿ ಇನ್ನೂ ಪ್ರಕರಣಗಳಲ್ಲಿ ಕೊರೋನಾ ಸೋಂಕು ತಗುಲಿದ್ದು ಖಚಿತಗೊಳ್ಳುವುದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ೪೧ಕ್ಕೆ ಏರಿದೆ. ಇದರೊಂದಿಗೆ ಸರ್ಕಾರ ವಿಧಿಸಿದ ನಿಯಂತ್ರಣ ಕ್ರಮಗಳನ್ನು ಉಲ್ಲಂಘಿಸಿ ರಸ್ತೆಗೆ ಇಳಿಯುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಸಂಸದರ ಪುತ್ರಿಗೆ ಕೋವಿಡ್:  ಏತನ್ಮಧ್ಯೆ ಕರ್ನಾಟಕದ ದಾವಣಗೆರೆಯ ಸಂಸತ್ ಸದಸ್ಯ ಜಿಎಂ ಸಿದ್ದೇಶ್ವರ ಅವರ ಪುತ್ರಿ ಅಶ್ವಿನಿ ಅವರಿಗೆ ಕೊರೋನಾವೈರಸ್ ಸೋಂಕು ತಗುಲಿರುವುದು ಖಚಿತ ಪಟ್ಟಿದೆ. ಅವರು ತಮ್ಮ ಮತು ೧೪ ವರ್ಷ ವಯಸ್ಸಿನ ಮಕ್ಕಳ ಜೊತೆಗೆ ಗಯಾನಾಕ್ಕೆ  ಪ್ರವಾಸ ಮಾಡಿದ್ದರು. ಮೂವರನ್ನೂ ಪ್ರತ್ಯೇಕವಾಸ ಘಟಕ್ಕೆ ದಾಖಲಿಸಲಾಗಿದೆ ಎಂದು ವರದಿಗಳು ಹೇಳಿವೆ.

ಕಾಶ್ಮೀರದ ಮಹಿಳೆ ಚೇತರಿಕೆ: ಕಾಶ್ಮೀರದಲ್ಲಿ ಕೊರೋನಾವೈರಸ್ ಸೋಂಕು ಪತ್ತೆಯಾಗಿದ್ದ ಮೊದಲ ಪ್ರಕರಣದ ೬೭ರ ಹರೆಯದ ಮಹಿಳೆ ಯಶಸ್ವೀ ಚಿಕಿತ್ಸೆಯಿಂದ ಚೇತರಿಸಿಕೊಂಡು ಸೋಂಕುಮುಕ್ತಳಾಗಿದ್ದು, ಏಕಾಂಗಿವಾಸದ ಅವಧಿ ಮುಕ್ತಾಯದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದರು.

ಮಹಿಳೆ ಅತ್ಯಂತ ಕ್ಷಿಪ್ರವಾಗಿ ಚೇತರಿಸಿಕೊಂಡಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗುವಳು ಎಂದು ಎಸ್ ಸ್ಕಿಮ್ಸ್ ಆಸ್ಪತ್ರೆಯ ವೈದ್ಯರು ಹೇಳಿದರು.

ಉತ್ತರ ಪ್ರದೇಶದಲ್ಲಿ ವಿಪತ್ತು ಸ್ಥಿತಿ ಘೋಷಣೆ: ಕೊರೋನಾವೈರಸ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಪತ್ತು ಸ್ಥಿತಿ ಘೋಷಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಈಜಿಪ್ಟಿನಲ್ಲಿ ರಾತ್ರಿ ಕರ್ಫ್ಯೂ: ಅರಬ್ ಜಗತ್ತಿನ ಅತ್ಯಂತ ಜನ ನಿಬಿಡ ರಾಷ್ಟವಾದ ಈಜಿಪ್ಟಿನಲ್ಲಿ ಎರಡು ವಾರಗಳ ಕಾಲ ರಾತ್ರಿ ಕರ್ಫ್ಯೂ ವಿಧಿಸಲು ತೀರ್ಮಾನಿಸಿದೆ. ಸರಬರಾಜಿನ ಅಭಾವವು ಮಧ್ಯಪ್ರಾಚ್ಯದ ಅತ್ಯಂತ ಬಡರಾಷ್ಟ್ರಗಳಿಗೆ ತೊಂದgದಾಯಕವಾಗಬಹುದು ಎಂಬುದಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯು ಎಚ್ಚರಿಕೆ ನೀಡಿದ ಬೆನ್ನಲ್ಲೇ ಈಜಿಪ್ಟಿನ ಪ್ರಧಾನಿ ರಾತ್ರಿ ಕರ್ಫ್ಯೂ ವಿಧಿಸುವ ನಿರ್ಧಾರವನ್ನು ಪ್ರಕಟಿಸಿದರು.

No comments:

Advertisement