ಮಧ್ಯಪ್ರದೇಶ:
೨೨ ಬಂಡಾಯ ಕಾಂಗ್ರೆಸ್ ಶಾಸಕರೂ ಬಿಜೆಪಿಗೆ
ನವದೆಹಲಿ:
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ರಾಜೀನಾಮೆ ನೀಡಿದ ಬಳಿಕ ರಾಜ್ಯ ವಿಧಾನಸಭೆಗೆ ರಾಜೀನಾಮೆ ಸಲ್ಲಿಸಿ ಕಮಲನಾಥ್ ಸರ್ಕಾರದ ಪತನಕ್ಕೆ ಕಾರಣರಾದ ೨೨ ಮಂದಿ ಮಾಜಿ
ಕಾಂಗ್ರೆಸ್ ಶಾಸಕರು 2020 ಮಾರ್ಚ್
21ರ ಶನಿವಾರ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಈ
ಶಾಸಕರ ರಾಜೀನಾಮೆಯು ಮಧ್ಯಪ್ರದೇಶದಲ್ಲಿ ಹಲವಾರು ವರ್ಷಗಳ ಬಳಿಕ ಅಧಿಕಾರಕ್ಕೆ ಬಂದಿದ್ದ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪತನದಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು.
‘ಮಧ್ಯಪ್ರದೇಶದ
ಅಭಿವೃದ್ಧಿ ಮತ್ತು ಪ್ರಗತಿಯ ಪ್ರತಿಜ್ಞೆಯೊಂದಿಗೆ, ೨೨ ಮಾಜಿ ಶಾಸಕರು
ಮತ್ತು ಕಾಂಗ್ರೆಸ್ ಪಕ್ಷದ ನನ್ನ ಮಾಜಿ ಸಹೋದ್ಯೋಗಿಗಳು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು 2020 ಮಾರ್ಚ್
21ರ ಶನಿವಾರ ಭೇಟಿ ಮಾಡಿದ್ದಾರೆ ಮತ್ತು ಪಕ್ಷವನ್ನು ಸೇರಿದ್ದಾರೆ’ ಎಂದು
ಜ್ಯೋತಿರಾದಿತ್ಯ ಸಿಂಧಿಯಾ ಹಿಂದಿಯಲ್ಲಿ ಟ್ವೀಟ್ ಮಾಡಿದರು.
ಮಧ್ಯಪ್ರದೇಶದ
ಮಾಜಿ ಕಾಂಗ್ರೆಸ್ ನಾಯಕ ಹಾಗೂ ರಾಜಕುಟುಂಬದ ಕುಡಿ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಿಷ್ಠರಾದ ೨೨ ಶಾಸಕರು ಮಾರ್ಚ್
೯ರಂದು ಪಕ್ಷಕ್ಕೆ ರಾಜೀನಾಮೆ ನೀಡಿ ಕಮಲನಾಥ್ ಸರ್ಕಾರವನ್ನು ಪತನದ ಅಂಚಿಗೆ ತಂದಿದ್ದರು.
ಆದಾಗ್ಯೂ,
ರಾಜೀನಾಮೆಗಳನ್ನು ವಿಧಾನಸಭಾಧ್ಯಕ್ಷ ಎನ್ ಪಿ ಪ್ರಜಾಪತಿ ಅವರು
ತತ್ ಕ್ಷಣವೇ ಅಂಗೀಕರಿಸಿರಲಿಲ್ಲ.
ಕುದುರೆವ್ಯಾಪಾರದ
ಸಾಧ್ಯತೆಯನ್ನು ನಿವಾರಿಸುವುದಕ್ಕಾಗಿ ರಾಜೀನಾಮೆ ನೀಡಿದ್ದ ಎಲ್ಲ ಶಾಸಕರನ್ನೂ ಬಳಿಕ ಬೆಂಗಳೂರಿಗೆ ರೆಸಾಟ್ವಾಸಕ್ಕೆ ಕರೆದೊಯ್ಯಲಾಗಿತ್ತು.
ಕೆಲವು
ವಾರಗಳ ರಾಜಕೀಯ ಪ್ರಹಸನದ ನಂತರ ಎಲ್ಲ ಶಾಸಕರ ರಾಜೀನಾಮೆಗಳನ್ನು, ಸುಪ್ರೀಂಕೋಟ್ ಬಲಾಬಲ ಪರೀಕ್ಷೆಗೆ ಗಡುವು ವಿಧಿಸಿದ ಬಳಿಕ ಗುರುವಾರ ವಿಧಾನಸಭಾಧ್ಯಕ್ಷರು ಅಂಗೀಕರಿಸಿದ್ದರು. ಮುಖ್ಯಮಂತ್ರಿ ಕಮಲನಾಥ್ ಅವರು ಶುಕ್ರವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಶಾಸಕರ
ರಾಜೀನಾಮೆಯಿಂದಾಗಿ ವಿಧಾನಸಭೆಯ ಒಟ್ಟು ಬಲ ೨೦೬ಕ್ಕೆ ಇಳಿಯಿತು.
ಸದನದಲ್ಲಿ ಕಾಂಗ್ರೆಸ್ಸಿನ ಸಂಖ್ಯಾಬಲ ಕೂಡಾ ೧೧೪ರಿಂದ ೯೨ಕ್ಕೆ
ಕುಸಿಯಿತು. ೧೦೫ ಶಾಸಕರನ್ನು ಹೊಂದಿರುವ ಬಿಜೆಪಿ ಬಹುಮತ ಗಳಿಸಿತು.
ಶಾಸಕರ
ರಾಜೀನಾಮೆ ಮತ್ತು ಬಳಿಕದ ಅವರ ಬೆಂಗಳೂರು ಪಯಣವನ್ನು ಆಡಳಿತಾರೂಢ ಕಾಂಗ್ರೆಸ್ ’ಅಪಹರಣ’ ಎಂಬುದಾಗಿ ಬಣ್ಣಿಸಿತು.
ಶಾಸಕರ
ಫೋನುಗಳನ್ನು ಕಿತ್ತುಕೊಳ್ಳಲಾಗಿದ್ದು ಯಾರೊಂದಿಗೂ ಮಾತನಾಡಲು ಬಿಡಲಾಗುತ್ತಿಲ್ಲ ಎಂದು ದಿಗ್ವಿಜಯ್ ಸಿಂಗ್ ಅವರಂತಹ ಪಕ್ಷದ ನಾಯಕರು ಆಪಾದಿಸಿದ್ದರು.
ಏನಿದ್ದರೂ,
ಬಂಡಾಯ ಶಾಸಕರು ಕಾಂಗ್ರೆಸ್ ಆಪಾದನೆಯನ್ನು ನಿರಾಕರಿಸಿ ನಿರಂತರವಾಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ತಾವು ಬೆಂಗಳೂರಿನಲ್ಲಿ ಸ್ವಂತ ಇಚ್ಛೆಯ ಮೇರೆಗೆ ವಾಸ್ತವ್ಯ ಹೂಡಿರುವುದಾಗಿಯೂ ಕಾಂಗ್ರೆಸ್ ಜೊತೆಗೆ ಯಾವುದೇ ಹೆಚ್ಚಿನ ಮಾತುಕತೆಯನ್ನು ಬಯಸುವುದಿಲ್ಲ ಎಂದೂ ಪ್ರತಿಪಾದಿಸಿದರು.
ಸಭಾಧ್ಯಕ್ಷರ
ಸೂಚನೆಯಂತೆ ಭೋಪಾಲ್ಗೆ ಹಿಂದಿರುಗಬೇಕಿದ್ದರೆ ತಮಗೆ ರಕ್ಷಣೆ
ಒದಗಿಸಬೇಕು ಎಂದೂ ಆಗ್ರಹಿಸಿದ ಶಾಸಕರು, ’ನಮ್ಮ ಜೀವಗಳಿಗೆ ಕಾಂಗ್ರೆಸ್ ನಾಯಕರಿಂದ ಅಪಾಯವಿದೆ’
ಎಂದು ಹೇಳಿದ್ದರು.
No comments:
Post a Comment