My Blog List

Sunday, March 22, 2020

ಕೊರೋನಾ ವಿರುದ್ಧ ಅಭೂತಪೂರ್ವ ‘ಭಾರತ ಬಂದ್’

ಕೊರೋನಾ ವಿರುದ್ಧ ಅಭೂತಪೂರ್ವ ‘ಭಾರತ ಬಂದ್’  
ರಾಜ್ಯದ 9 ಜಿಲ್ಲೆ ಸೇರಿ, ದೇಶಾದ್ಯಂತ 80 ಜಿಲ್ಲೆಗಳಲ್ಲಿ
ಮಾರ್ಚ್ 31ರವರೆಗೆ ಲಾಕ್ ಡೌನ್
ನವದೆಹಲಿ: ಮಾರಕ ಕೊರೋನಾವೈರಸ್ಸನ್ನು ಮಣಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಕರೆಯ ಮೇರೆಗೆ ಭಾರತದಾದ್ಯಂತ 2020 ಮಾರ್ಚ್ 22 ಭಾನುವಾರ ಜನತೆ ಮನೆಗಳ ಒಳಗೇ ಉಳಿದು ಸಮಸ್ತ ಸಾರ್ವಜನಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸುವ ಮೂಲಕ ಅಭೂತಪೂರ್ವ ಜನತಾಕರ್ಫ್ಯೂ ಆಚರಿಸಿದರು. ಪರಿಣಾಮವಾಗಿ ಇಡೀ ದೇಶ ಜನಸಂಚಾರ, ವಾಹನ ಸಂಚಾರವಿಲ್ಲದೆ ಭಣಗುಟ್ಟಿತು.

ಸಂಜೆ 5 ಗಂಟೆಯಾಗುತ್ತಿದ್ದಂತೆಯೇ ಜನರು ತಮ್ಮ ತಮ್ಮ ಮನೆ, ಅಪಾರ್ಟ್ ಮೆಂಟುಗಳಲ್ಲೇ ರಸ್ತೆಗೆ ಅಭಿಮುಖರಾಗಿ ನಿಂತುಕೊಂಡು ಚಪ್ಪಾಳೆ, ಶಂಖ , ಜಯಗಂಟೆಗಳನ್ನು ಭಾರಿಸುವ ಮೂಲಕ ಕೊರೋನಾ ವಿರುದ್ಧ ಸಮರ ಸಾರುತ್ತಿರುವ ವೈದ್ಯಕೀಯ ಮತ್ತಿತರ ಸಿಬ್ಬಂದಿಗೆ ತಮ್ಮ ಕೃತಜ್ಞತೆ ಅರ್ಪಿಸಿದರು.

ಬೆಂಗಳೂರು ನಗರ ಹಿಂದೆಂದೂ ಕಾಣದ ರೀತಿಯಲ್ಲಿ ಭಣಗುಟ್ಟಿದ್ದನ್ನು ತೋರುವ ಚಿತ್ರಗಳನ್ನು ಇಲ್ಲಿ ಸೆರೆ ಹಿಡಿದು ಒದಗಿಸಿದ್ದಾರೆ ಹಿರಿಯ ಛಾಯಾಚಿತ್ರಗಾರ ವಿಶ್ವನಾಥ ಸುವರ್ಣ. (ಇಲ್ಲಿರುವ  ಎಲ್ಲ ಚಿತ್ರಗಳೂಕರ್ನಾಟಕದಕೋಟೆಗಳುಬಗ್ಗೆ ವಿಶಿಷ್ಠವಾದ ಫೋಟೋಗ್ರಫಿ ಪುಸ್ತಕ ಒದಗಿಸಿರುವ ಸುವರ್ಣ  ಅವರದ್ದೇ.

ಇದೇ ವೇಳೆಗೆ ಭಾರತದಲ್ಲಿ ಕೊರೋನಾವೈರಸ್ ಕಳೆದ 24 ಗಂಟೆಗಳಲ್ಲಿ ಮತ್ತೆ ಮೂವರನ್ನು ಬಲಿತೆಗೆದುಕೊಂಡಿದ್ದು,  ಮೃತರ ಸಂಖ್ಯೆ 7ಕ್ಕೆ ಏರಿತು. ಕೋವಿಡ್ ಸೋಂಕಿತರ ಸಂಖ್ಯೆ 370 ದಾಟಿತು.

ಈ ಮಧ್ಯೆ ವಿಶ್ವಾದ್ಯಂತ ಕೊರೋನಾವೈರಸ್ಸಿಗೆ ಬಲಿಯಾದವರ ಸಂಖ್ಯೆ 13,000 ದಾಟಿದ್ದು, ವಿಶ್ವಾದ್ಯಂತ ಸುಮಾರು ಒಂದು ಶತಕೋಟಿ ಮಂದಿ ತಮ್ಮ ಮನೆಗಳಿಗೇ ಸೀಮಿತರಾದರು.  ಇಟಲಿಯಲ್ಲಿ ಒಂದೇ ದಿನ 600ಕ್ಕೂ ಹೆಚ್ಚಿನ ದಾಖಲೆ ಸಾವುಗಳು ಸಂಭವಿಸಿದ ಬಳಿಕ
ಅಲ್ಲಿನ ಕಾರ್ಖಾನೆಗಳನ್ನೂ ಮುಚ್ಚಲಾಯಿತು.

80 ಜಿಲ್ಲೆಗಳಲ್ಲಿ ಮಾರ್ಚ್ 31ರವರೆಗೆ ಲಾಕ್ ಡೌನ್: ಕೊರೋನಾವೈರಸ್ ಹರಡುವ ವೇಗ ಹೆಚ್ಚುತ್ತಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರ ಮತ್ತು ಆಯಾ ರಾಜ್ಯ ಸರ್ಕಾರಗಳು  ವೈರಸ್ ಪೀಡಿತ 23 ರಾಜ್ಯಗಳ 75 ಜಿಲ್ಲೆಗಳಲ್ಲಿ ಮಾರ್ಚ್ 31ರವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ. ಇದರಿಂದಾಗಿ ಬಹುತೇಕ ಸಂಪೂರ್ಣ ನಗರ ಭಾರತ ‘ಲಾಕ್ ಡೌನ್’ಗೆ ಒಳಗಾದಂತಾಗಿದೆ.  ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ಕೇರಳ, ಉತ್ತರ ಪ್ರದೇಶ ಸೇರಿದಂತೆ ೨೩ ರಾಜ್ಯಗಳ 80 ಜಿಲ್ಲೆಗಳಿಗೆ ಇದು ಅನ್ವಯವಾಗಲಿದೆ.
ದೆಹಲಿ, ಮುಂಬೈ, ಬೆಂಗಳೂರಿನಂತಹ ನಗರಗಳನ್ನು ಸಂಪೂರ್ಣವಾಗಿ ಮುಚ್ಚಲು ಸರ್ಕಾರ ತೀರ್ಮಾನಿಸಿದ್ದು, ಮೆಟ್ರೋ, ರೈಲು ಹಾಗೂ ಅಂತಾರಾಜ್ಯ ಸಾಮೂಹಿಕ ಸಾರಿಗೆಯನ್ನೂ ರದ್ದು ಪಡಿಸಿತು.

ಕೇಂದ್ರ ಸರ್ಕಾರದ ನಿರ್ಧಾರದ ಪ್ರಕಾರ ಸಂಪೂರ್ಣಹರತಾಳ ಕ್ಕೆ ಒಳಗಾಗಿರುವ ಜಿಲ್ಲೆಗಳು ವಿವರ ಹೀಗಿದೆ:  
ರಾಜಸ್ಥಾನ: ಬಿಲ್ವಾರ, ಜುಂಜುನು, ಸಿಕಾರ್ ಮತ್ತು ಜೈಪುರ
ತಮಿಳುನಾಡು: ಚೆನ್ನೈ, ಈರೋಡ್ ಮತ್ತು ಕಾಂಚಿಪುರಂ
ತೆಲಂಗಾಣ: ಭದ್ರಾಡ್ರಿ ಕೊಥಗುಡಮ್, ಹೈದರಾಬಾದ್, ಮೆಡ್ಚೈ, ರಂಗ ರೆಡ್ಡಿ ಮತ್ತು ಸಂಗ ರೆಡ್ಡಿ
ಉತ್ತರ ಪ್ರದೇಶ: ಆಗ್ರಾ, ಜಿಬಿ ನಗರ, ಗಾಜಿಯಾಬಾದ್, ವಾರಣಾಸಿ, ಲಖಿಂಪುರ್ ಖೇರಿ ಮತ್ತು ಲಕ್ನೋ
ಉತ್ತರಾಖಂಡ: ಡೆಹ್ರಾಡೂನ್
ಪಶ್ಚಿಮ ಬಂಗಾಳ: ಕೋಲ್ಕತಾ ಮತ್ತು ಉತ್ತರ ೨೪ ಪರಗಣಗಳು
 ಕರ್ನಾಟಕ: ಬೆಂಗಳೂರು, ಚಿಕ್ಕಬಲ್ಲಾಪುರ, ಮೈಸೂರು, ಕೊಡಗು ಮತ್ತು ಕಲಬುರ್ಗಿ
ಕೇರಳ: ಆಲಪ್ಪುಳ, ಎರ್ನಾಕುಲಂ, ಇಡುಕಿ, ಕಣ್ಣೂರು, ಕಾಸರಗೋಡು, ಕೊಟ್ಟಾಯಂ, ಮಲಪ್ಪುರಂ,ಪಟ್ಟಣಂತಿಟ್ಟ, ತಿರುವನಂತಪುರಂ ಮತ್ತು ತ್ರಿಶ್ಯೂರ್
ಲಡಾಖ್: ಕಾರ್ಗಿಲ್ ಮತ್ತು ಲೇಹ್
ಮಧ್ಯಪ್ರದೇಶ: ಜಬಲ್ಪುರ
ಮಹಾರಾಷ್ಟ್ರ: ಅಹ್ಮದ್ನಗರ, ಔರಂಗಾಬಾದ್, ಮುಂಬೈ, ನಾಗಪುರ, ಮುಂಬೈ ಹೊರವಲಯ,, ಪುಣೆ, ರತ್ನಾಗಿರಿ, ರಾಯಘಡ, ಥಾಣೆ ಮತ್ತು ಯಾವತ್ಮಾಲ್
ಒಡಿಶಾ: ಖುರ್ದಾ
ಪುದುಚೇರಿ: ಮಹೇ
ಪಂಜಾಬ್: ಹೋಶಿಯಾರ್ಪುರ, ಎಸ್ಎಎಸ್ ನಗರ ಮತ್ತು ಎಸ್ಬಿಎಸ್ ನಗರ
ಆಂಧ್ರಪ್ರದೇಶ: ಪ್ರಕಾಶಂ, ವಿಜಯವಾಡ ಮತ್ತು ವೈಜಾಗ್.
ಚಂಡೀಘಡ: ಚಂಡೀಘಡ..
ಛತ್ತೀಸ್ ಗಢ:  ರಾಯ್ಪುರ
ದೆಹಲಿ: ಮಧ್ಯ, ಪೂರ್ವ ದೆಹಲಿ, ಉತ್ತರ ದೆಹಲಿ, ವಾಯುವ್ಯ ದೆಹಲಿ, ಈಶಾನ್ಯ ದೆಹಲಿ, ದಕ್ಷಿಣ ದೆಹಲಿ ಮತ್ತು ಪಶ್ಚಿಮ ದೆಹಲಿ
ಗುಜರಾತ್: ಕಚ್, ರಾಜ್ಕೋಟ್, ಗಾಂಧಿನಗರ, ಸೂರತ್, ವಡೋದರಾ, ಮತ್ತು ಅಹಮದಾಬಾದ್
ಹರಿಯಾಣ: ಫರಿದಾಬಾದ್, ಸೋನೆಪತ್, ಪಂಚಕುಲ, ಪಾಣಿಪತ್ ಮತ್ತು ಗುರುಗ್ರಾಮ್
ಹಿಮಾಚಲ ಪ್ರದೇಶ: ಕಾಂಗ್ರಾ
ಜಮ್ಮು ಮತ್ತು ಕಾಶ್ಮೀರ: ಶ್ರೀನಗರ ಮತ್ತು ಜಮ್ಮು.

ಕರ್ನಾಟಕದ 9 ಜಿಲ್ಲೆಗಳಲ್ಲಿ ಲಾಕ್ ಡೌನ್
ಏತನ್ಮಧ್ಯೆ, ಕರ್ನಾಟಕದ   ಜಿಲ್ಲೆಗಳಲ್ಲಿ ಮಾರ್ಚ್ ೩೧ರವರೆಗೆ ಲಾಕ್ ಡೌನ್ ಘೋಷಿಸಲು ಮತ್ತು ಸಾರಿಗೆ ಸೇವೆ ಸ್ಥಗಿತಗೊಳಿಸಲು ಪ್ರಧಾನಿಯವರ ಮುಖ್ಯ ಕಾರ್ಯದರ್ಶಿ ಮತ್ತು ಸಚಿವಸಂಪುಟ ಕಾರ್ಯದರ್ಶಿ ಜತೆಗೆ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ನಿರ್ಧಾರಕ್ಕೆ ಬರಲಾಯಿತು.
ಕೋವಿಡ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಮಾರ್ಚ್ ೩೧ರವರೆಗೆ ತೀರಾ ಅವಶ್ಯವಲ್ಲದ ಪ್ರಯಾಣ ನಿರ್ಬಂಧಿಸುವುದು ಮತ್ತು ಅಂತರರಾಜ್ಯ ಬಸ್ ಸೇವೆ ಸ್ಥಗಿತಗೊಳಿಸುವ ಬಗ್ಗೆ ಒಮ್ಮತಕ್ಕೆ ಬರಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿ ತಿಳಿಸಿದರು.

ಕೊರೊನಾ ವೈರಸ್ ಸೋಂಕು (ಕೋವಿಡ್-೧೯) ಹರಡುವುದನ್ನು ತಡೆಗಟ್ಟುವ ಸಲುವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆಗಳಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ತುರ್ತು ಸಭೆ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ನಾಳೆಯೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ರದ್ದುಗೊಳಿಸಲಾಗಿದೆ. ಎಸಿ ಬಸ್ ಸೇವೆ ಮಾರ್ಚ್ ೩೧ರವರೆಗೆ ಇರುವುದಿಲ್ಲಎಂದು ಹೇಳಿದರು.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಧಾರವಾಡ, ಮೈಸೂರು, ಕೊಡಗು, ಕಲಬುರ್ಗಿ,  ಬೆಳಗಾವಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾರ್ಚ್ ೩೧ರ ವರೆಗೆ ಲಾಕ್ಡೌನ್ ಮುಂದುವರಿಯಲಿದೆ. ಜಿಲ್ಲೆಗಳಲ್ಲಿ ವೈದ್ಯಕೀಯ, ಔಷದಿ, ದಿನಸಿ, ಕೃಷಿ ಮೊದಲಾದ ಅಗತ್ಯ ಸೇವೆ ಹೊರತುಪಡಿಸಿ ಸಾರಿಗೆ ಸೇರಿದಂತೆ ಯಾವುದೇ ವ್ಯವಸ್ಥೆ ಇರುವುದಿಲ್ಲ ಎಂದು ಸಚಿವರು ತಿಳಿಸಿದರು.
ಜಿಲ್ಲೆಗಳಲ್ಲಿ ಕಾರ್ಮಿಕರು ಹೆಚ್ಚಿರುವ ಕೈಗಾರಿಕೆಗಳಲ್ಲಿ, ದಿನ ಬಿಟ್ಟು ದಿನ ಅರ್ಧ ಸಂಖ್ಯೆಯಲ್ಲಿ ಕಾರ್ಮಿಕರನ್ನು ನಿಯೋಜಿಸಬೇಕು. ಜಿಲ್ಲೆಗಳಲ್ಲಿ ಅಂತರ ಜಿಲ್ಲೆಯ ಸಾರಿಗೆ ವ್ಯವಸ್ಥೆಯನ್ನು ಮಾರ್ಚ್ ೩೧ರರವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಸಚಿವರು ಹೇಳಿದರು.
ಇಂದು ರಾತ್ರಿ ಗಂಟೆಗೆ ಜನತಾ ಕರ್ಫ್ಯೂ ಮುಗಿಯಲಿದೆ. ಆದರೆ ರಾತ್ರಿ ಗಂಟೆಯಿಂದ ೧೨ ಗಂಟೆಯವರೆಗೂ ಸೆಕ್ಷನ್ ೧೪೪ ಜಾರಿಗೊಳಿಸಲಾಗಿದೆ ಎಂದೂ ಸಚಿವರು ಹೇಳಿದರು.
ಬೆಂಗಳೂರು: ಪ್ರಯಾಣಿಕ ರೈಲು ಸೇವೆ ಸ್ಥಗಿತ ಆದೇಶ ಹೊರಬಿದ್ದ ಬೆನ್ನಲ್ಲೇ ಎಲ್ಲ ಅಂತರರಾಜ್ಯ ಬಸ್ ಸೇವೆಯನ್ನು ರಾಜ್ಯ ಸರ್ಕಾರ ಮಾರ್ಚ್ ೩೧ರ ವರೆಗೆ ಸ್ಥಗಿತಗೊಳಿಸಿತು.
ಕೊರೊನಾ ವೈರಸ್ ಸೋಂಕು (ಕೋವಿಡ್-೧೯) ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ನಿರ್ಧಾರ ಕೈಗೊಂಡಿತು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ ರ್ಟಿಸಿ) ವೇಗದೂತ ಹಾಗೂ ರಾಜಹಂಸ ಬಸ್ಸುಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಇಲ್ಲದೆ ಪ್ರಯಾಣಿಸುವವರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಪಡೆಯುವ ವ್ಯವಸ್ಥೆಯನ್ನು (ಕೋವಿಡ್-19 ಸೋಂಕಿತ ಪ್ರಯಾಣಿಕರು ಬಸ್ಸಿನಲ್ಲಿ ಪ್ರಯಾಣಿಸಿದ ಸಮಯದಲ್ಲಿನ ಇತರೆ ಪ್ರಯಾಣಿಕರ ಮಾಹಿತಿ ದೊರೆಯದಂತಾಗುವ ಕಾರಣದಿಂದ) ಈಗಿನಿಂದಲೇ ಮುಂದಿನ ಆದೇಶದವರೆಗೆ ಪ್ರಾರಂಭಿಸಲಾಗಿದೆ ಎಂದು ನಿಗಮ ತಿಳಿಸಿತು.

No comments:

Advertisement