Sunday, March 22, 2020

‘ಜನತಾ ಕರ್ಫ್ಯೂ’ ಮುನ್ನಾದಿನ ಪ್ರಧಾನಿ ಟ್ವೀಟ್

ಅನಗತ್ಯ ಪ್ರವಾಸ ಬೇಡ, ಮನೆಯಲ್ಲೇ ಇರಿ: ಪ್ರಧಾನಿ ಮೋದಿ ಮರುಮನವಿ
 ಜನತಾ ಕರ್ಫ್ಯೂಮುನ್ನಾದಿನ  ಪ್ರಧಾನಿ  ಟ್ವೀಟ್
ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ ಮೂರು ಶತಕದ ಸಮೀಪಕ್ಕೆ ಬರುತ್ತಿದ್ದಂತೆಯೇಸ್ವಯಂ ರಕ್ಷಣೆಯ ಜೊತೆಗೆ ಗೆಳೆಯರು ಮತ್ತು ಕುಟುಂಬದ ರಕ್ಷಣೆಗಾಗಿಸರ್ಕಾರದ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಎಂಬುದಾಗಿ 2020 ಮಾರ್ಚ್ 21ರ ಶನಿವಾರ ಮರುಮನವಿ ಮಾಡಿದ ಪ್ರಧಾನಿ ನರೇಂದ್ರ ಮೋದಿಅನಗತ್ಯ ಪ್ರವಾಸಗಳಿಂದ ಪ್ರಯೋಜನವಿಲ್ಲ. ಅವುಗಳನ್ನು ಸ್ಥಗಿತಗೊಳಿಸಿ ಮನೆಯಲ್ಲೇ ಉಳಿಯುವುದನ್ನು ಅಭ್ಯಾಸ ಮಾಡಿಕೊಳ್ಳಿಎಂದು ಆಗ್ರಹಿಸಿದರು.

ಪ್ರಧಾನಿಯವರು ಈಗಾಗಲೇ ಮಾರ್ಚ್ ೨೨ರ ಭಾನುವಾರ ಸ್ವತಃ ಸಂಯಮ ಪ್ರದರ್ಶಿಸಿ, ಜನತಾ ಕರ್ಫ್ಯೂ ಪಾಲಿಸುವಂತೆ ಮತ್ತು ಬೆಳಗ್ಗೆ ಗಂಟೆಯಿಂದ ರಾತ್ರಿ ಗಂಟೆಯವರೆಗೆ ಮನೆಗಳಿಂದ ಹೊರ ಬರದಂತೆ ದೇಶವ್ಯಾಪಿ ಪ್ರಸಾರ ಭಾಷಣದ ಮೂಲಕ ಜನತೆಗೆ ಕರೆ ನೀಡಿದ್ದಾರೆ.

ಇದು ಸಂಯಮದ ಲಾಂಛನವಾಗಲಿದೆ  ಎಂದು ನುಡಿದ ಪ್ರಧಾನಿ, ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಕನಿಷ್ಠ ೧೦ ಮಂದಿಗೆ ಬಾಯ್ಮಾತಿನ ಮೂಲಕ ಇಲ್ಲವೇ ದೂರವಾಣಿಯ ಮೂಲಕಜನತಾ ಕರ್ಫ್ಯೂ ಬಗ್ಗೆ ತಿಳಿಸಿ ಮನೆಯಲ್ಲೇ ಉಳಿಯುವಂತೆ ಆಗ್ರಹಿಸಬೇಕು ಎಂದು  ಪುನರುಚ್ಚರಿಸಿದರು.

ಎಂದಿಗೂ ಮರೆಯಬೇಡಿ- ಇವು ಮುಂಜಾಗರೂಕತೆಗಳು. ಭಯ-ಭೀತಿಗೆ ಒಳಗಾಗಬೇಡಿ. ಮನೆಗಳ ಒಳಗೇ ಉಳಿದುಕೊಳ್ಳುವುದಷ್ಟೇ ಮುಖ್ಯವಲ್ಲ, ನೀವು ಪಟ್ಟಣ, ನಗರದಲ್ಲಿ ಎಲ್ಲಿ ಇದ್ದೀರೋ ಅಲ್ಲಿಯೇ ಉಳಿದುಕೊಳ್ಳುವುದೂ ಮುಖ್ಯ. ಅನಗತ್ಯ ಪ್ರವಾಸ/ ಪ್ರಯಾಣಗಳು ನಿಮಗಾಗಲೀ, ಇತರರಿಗಾಗಲೀ ನೆರವಾಗುವುದಿಲ್ಲ. ಸಮಯದಲ್ಲಿ ಒಂದೊಂದು ಸಣ್ಣ ಪ್ರಯತ್ನ ಕೂಡಾ ದೊಡ್ಡ ಪರಿಣಾಮ ಬೀರುತ್ತದೆಎಂದು ಪ್ರಧಾನಿ ಟ್ವೀಟ್ ಮಾಡಿದರು.

ಮನೆಗಳಲ್ಲೇ ಕಡ್ಡಾಯವಾಗಿ ಏಕಾಂಗಿ ವಾಸ ಮಾಡುವಂತೆ ವೈದ್ಯರು/ ಅಧಿಕಾರಿಗಳಿಂದ ಸಲಹೆ ಪಡೆದ ವ್ಯಕ್ತಿಗಳು ರೈಲುಗಳು ಮತ್ತು ಇತರ ಸಾರಿಗೆ ವಾಹನಗಳಲ್ಲಿ ಸಂಚರಿಸುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆ ಬರುತ್ತಿರುವ ವರದಿಗಳ ಹಿನ್ನೆಲೆಯಲ್ಲಿ, ಮನೆಯಲ್ಲೇ ಸ್ವಯಂ ಏಕಾಂಗಿವಾಸ ಅನುಸರಿಸುವಂತೆ ಸರ್ಕಾರ ನೀಡಿರುವ ಸಲಹೆಗಳನ್ನು ಪಾಲಿಸುವಂತೆಯೂ ಮೋದಿ ಜನರಿಗೆ ಸೂಚಿಸಿದರು.

ವೈದ್ಯರು ಮತ್ತು ಅಧಿಕಾರಿಗಳು ಕೊಡುವ ಸೂಚನೆಗಳನ್ನು ನಾವು ಆಲಿಸಬೇಕಾದ ಮತ್ತು ಪಾಲಿಸಬೇಕಾದ ಸಮಯ ಇದು. ಮನೆಯಲ್ಲೇ ಪ್ರತ್ಯೇಕವಾಗಿ ವಾಸಿಸುವಂತೆ ಸೂಚನೆ ಪಡೆದ ಎಲ್ಲರಿಗೂ ದಯವಿಟ್ಟು ಸೂಚನೆಗಳನ್ನು ಅನುಸರಿಸಿ ಎಂದು ನಾನು ಒತ್ತಾಯಿಸುತ್ತೇನೆ. ಇದು ನಿಮ್ಮನ್ನು ಮತ್ತು ನಿಮ್ಮ ಗೆಳೆಯರು ಹಾಗೂ ಕುಟುಂಬವನ್ನು ರಕ್ಷಿಸುತ್ತದೆಎಂದು ಪ್ರಧಾನಿ ಟ್ವೀಟ್ ಮಾಡಿದರು.

ರೈಲ್ವೇ ಮನವಿ
ಇದೇ ವೇಳೆಗೆ ಭಾರತೀಯ ರೈಲ್ವೆ ಕೂಡಾ ಜನತೆಗೆ ರೈಲು ಪಯಣಗಳನ್ನು ಮುಂದೂಡುವಂತೆ  ಮನವಿ ಮಾಡಿತು. ಪ್ರತ್ಯೇಕವಾಸ ಮಾಡುವಂತೆ ಸೂಚನೆ ನೀಡಲಾಗಿದ್ದರೂ ಅಂತಹ ವ್ಯಕ್ತಿಗಳು ಪ್ರಯಾಣ ಮಾಡುತ್ತಿರುವುದು ಕಂಡು ಬಂದಿದೆ ಎಂದು ರೈಲ್ವೇ ಇಲಾಖೆ ತಿಳಿಸಿತು.

ಕೆಲವು ಕೊರೋನಾವೈರಸ್ ಸೋಂಕಿತ ಪ್ರಯಾಣಿಕರು ರೈಲುಗಳಲ್ಲಿ ಪ್ರಯಾಣ ಮಾಡುತ್ತಿದ್ದ ೧೨ ಪ್ರಕರಣಗಳು ಪತ್ತೆಯಾಗಿವೆ. ಇದು ರೈಲ್ವೇ ಪಯಣವನ್ನೇ ಅಪಾಯಕಾರಿಯನ್ನಾಗಿ ಮಾಡುತ್ತದೆ. ನಿಮ್ಮ ಸಹ ಪ್ರಯಾಣಿಕರಿಗೆ ಕೊರೋನಾವೈರಸ್ ಸೋಂಕು ತಗುಲಿದ್ದರೆ ಅದು ನಿಮಗೂ ಹರಡಬಹುದು, ಆದ್ದರಿಂದ ರೈಲ್ವೇ ಪಯಣವನ್ನು ನಿವಾರಿಸಿ. ಸ್ವತಃ ನಿಮ್ಮನ್ನು ಮತ್ತು ನಿಮ್ಮ ಪ್ರೀತಿಪಾತ್ರರನ್ನು ರಕ್ಷಿಸುವುದಕ್ಕಾಗಿ ದಯವಿಟ್ಟು ಎಲ್ಲ ಪ್ರಯಾಣಗಳನ್ನೂ ಮುಂದೂಡಿಎಂದು ರೈಲ್ವೇ ಇಲಾಖೆಯು ಮನವಿ ಮಾಡಿತು.

ಬೆಂಗಳೂರು-ದೆಹಲಿ ರೈಲಿನಲ್ಲಿ
ಬೆಂಗಳೂರು ಮತ್ತು ದೆಹಲಿ ನಡುವಣ ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿಏಕಾಂಗಿ ವಾಸಮಾಡಬೇಕಾಗಿದ್ದ ಇಬ್ಬರು ಪಯಣಿಸುತ್ತಿದ್ದುದು ಶನಿವಾರ ಬೆಳಕಿಗೆ ಬಂದಿದ್ದು ಅವರಿಗೆ ರೈಲಿನಿಂದ ಇಳಿಯುವಂತೆ ಸೂಚಿಸಲಾಗಿತ್ತು ಎಂದು ಇದಕ್ಕೆ ಮುನ್ನ ರೈಲ್ವೇ ಸಚಿವಾಲಯ ತಿಳಿಸಿತ್ತು.

ದೆಹಲಿಗೆ ಹೊರಟಿದ್ದ ಪ್ರಯಾಣಿಕರು ಕಳೆದ ವಾರ ದುಬೈಯಿಂದ ವಾಪಸಾಗಿದ್ದರು ಮತ್ತು ಅವರಿಗೆ ಕಡ್ಡಾಯವಾಗಿ ಏಕಾಂತವಾಸದ ಸೂಚನೆ ನೀಡಲಾಗಿತ್ತು.

ಮುಂಬೈ-ಜಬಲ್ಪುರ ನಡುವಣ ಗೋಡನ್ ಎಕ್ಸ್ಪ್ರೆಸ್ ರೈಲುಗಾಡಿಯಲ್ಲೂ ಮಾರ್ಚ್ ೧೬ರಂದು ಪರೀಕ್ಷಿಸಿದಾಗಸಾರ್-ಕೊವ್-ಸೋಂಕು ತಗುಲಿದ ನಾಲ್ವರು ಪ್ರಯಾಣಿಕರು ಪ್ರಯಾಣಿಸುತ್ತಿದ್ದುದು ಪತ್ತೆಯಾಗಿತ್ತು. ದೆಹಲಿಯಿಂದ ರಾಮಗುಂಡಂಗೆ ಪಯಣಿಸಿದ್ದ ಎಪಿ ಸಂಪರ್ಕ ಕ್ರಾಂತಿ ರೈಲುಗಾಡಿಯಲ್ಲಿ ಮಾರ್ಚ್ ೧೩ರಂದು ಪಯಣಿಸಿದ ಎಂಟು ಪ್ರಯಾಣಿಕರಲ್ಲೂ ಸೋಂಕು ಪತ್ತೆಯಾಗಿತ್ತು ಎಂದು ರೈಲ್ವೇ ಅಧಿಕಾರಿಗಳು ಇದಕ್ಕೆ ಮುನ್ನ ತಿಳಿಸಿದ್ದರು. 
ಮಾರಕ ಸೋಂಕು ಹರಡದಂತೆ ತಡೆಯುವ ಸಲುವಾಗಿ ಸರ್ಕಾರವು ಹಲವಾರು ಕಠಿಣ ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದು ಅವುಗಳಲ್ಲಿ ಶಾಲೆ, ಕಾಲೇಜು, ಸಾರ್ವಜನಿಕ ಸ್ಥಳಗಳ ಬಂದ್ ಸೇರಿವೆ.
ಹಲವಾರು ರಾಜ್ಯಗಳೂ ಸ್ವತಃಲಾಕ್ ಡೌನ್ಘೋಷಿಸಿ, ಮನೆಗಳಲ್ಲೇ ಉಳಿಯುವಂತೆ ಜನರಿಗೆ ಸೂಚಿಸಿವೆ.

No comments:

Advertisement