Thursday, March 5, 2020

ಕೃಷಿವಲಯಕ್ಕೆ ಭಾರೀ ಒತ್ತು, ಪೆಟ್ರೋಲ್, ಡೀಸೆಲ್, ಮದ್ಯ ದುಬಾರಿ

ಕೃಷಿವಲಯಕ್ಕೆ ಒತ್ತು, ಪೆಟ್ರೋಲ್, ಡೀಸೆಲ್, ಮದ್ಯ ದುಬಾರಿ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2020 ಮಾರ್ಚ್ 05ರ ಗುರುವಾರ ವಿಧಾನಸಭೆಯಲ್ಲಿ ೨೦೨೦-೨೧ ಸಾಲಿಗೆ ಒಟ್ಟು ,೩೭,೮೯೩ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದು, ಕೃಷಿ ವಲಯಕ್ಕೆ ಗರಿಷ್ಠ ಅನುದಾನ ಘೋಷಿಸಿ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿದರು. ಆದರೆ ಕೇಂದ್ರದಿಂದ ಬರಬೇಕಾದ ತೆರಿಗೆ ಪಾಲು ಕಡಿತದ ಹಿನ್ನೆಲೆಯಲ್ಲಿ ರಾಜಸ್ವ ಸಂಗ್ರಹಕ್ಕಾಗಿ ತೈಲ ಮತ್ತು ಮದ್ಯ ಮಾರಾಟದ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಮೂಲಕ ಶ್ರೀಸಾಮಾನ್ಯನ ಜೇಬಿಗೆ ಕತ್ತರಿ ಹಾಕಿದರು. ಜೊತೆಗೆ ಭಾರೀ ಪ್ರಮಾಣದ ಸಾಲ ಎತ್ತಲೂ ನಿರ್ಧರಿಸಿದರು.

ರೈತರ ಸಾಲಮನ್ನಾ, ಹಾಗೂ ಹೊಸ ಕಾರ್ಯಕ್ರಮಗಳ ಘೋಷಣೆ ಮಾಡದೆ ಆರ್ಥಿಕ ಸಮತೋಲನ ಕಾಯ್ದುಕೊಳ್ಳುವ ಯತ್ನ ಮಾಡಿರುವ ಮುಖ್ಯಮಂತ್ರಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಅಭಿವೃದ್ಧಿಗೆ ಹಲವು ಹೊಸ ಯೋಜನೆಗಳನ್ನು ಘೋಷಿಸಿ ಗ್ರಾಮೀಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಟ್ಟರು. ಆದರೆ ಸಹಕಾರ ರಾಷ್ಟ್ರೀಯ ಬ್ಯಾಂಕುಗಳಲ್ಲಿನ ರೈತರ ಸಾಲಮನ್ನಾ ಮಾಡಬಹುದೆಂಬ ನಿರೀಕ್ಷೆ ಸುಳ್ಳಾಯಿತು.

ವಿತ್ತ ಖಾತೆಯನ್ನು ತಮ್ಮ ಕೈಯಲ್ಲೇ ಇರಿಸಿಕೊಂಡಿರುವ ಯಡಿಯೂರಪ್ಪ ಅವರು ಮಂಡಿಸಿರುವ ೭ನೇ ಮುಂಗಡಪತ್ರ ಇದಾಗಿದ್ದು, ಅನುದಾನವನ್ನು ಆರು ವಲಯಗಳಾಗಿ ವಿಂಗಡಿಸಿ ಹಂಚಿಕೆ ಮಾಡಿದ್ದಾರೆ. ಪೈಕಿ ಕೃಷಿ ವಲಯಕ್ಕೆ ೩೨,೨೫೯ ಕೋಟಿ ರೂಪಾಯಿಗಳನ್ನು ಅವರು ನೀಡಿದರು.

ಪೆಟ್ರೋಲ್ ಮೇಲಿನ ಮೌಲ್ಯ ವರ್ಧಿತ ತೆರಿಗೆಯನ್ನು (ವ್ಯಾಟ್) ಶೇಕಡಾ ೩ರಷ್ಟು ಏರಿಸಲಾಗಿದ್ದು, ಇದು ಏಪ್ರಿಲ್ ೧ರಿಂದ ರಾಜ್ಯದಲ್ಲಿ ಜಾರಿಗೆ ಬರಲಿದೆ. ಪೆಟ್ರೋಲ್ ಮೇಲಿನ ಮೌಲ್ಯ ವರ್ಧಿತ ತೆರಿಗೆಯನ್ನು ಶೇಕಡಾ ೩೨ರಿಂದ ಶೇಕಡಾ ೩೫ಕ್ಕೆ ಮತ್ತು ಡೀಸೆಲ್ ಮೇಲಿನ ಮೌಲ್ಯ ವರ್ಧಿತ ತೆರಿಗೆಯನ್ನು ಶೇಕಡಾ ೨೧ರಿಂದ ೨೪ಕ್ಕೆ ಏರಿಸಲಾಗಿದೆ. ಮದ್ಯದ ಮೇಲಿನ ಸುಂಕವನ್ನು ಶೇಕಡಾ ೬ರಷ್ಟು ಹೆಚ್ಚಿಸಲಾಗಿದೆ.

ಕೃಷಿ ವಲಯಕ್ಕೆ ಗರಿಷ್ಠ ಒತ್ತು ನೀಡಿರುವ ಮುಖ್ಯಮಂತ್ರಿ ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಗೆ ೨೬೦೦ ಕೋಟಿ ರೂಪಾಯಿ, ಫಸಲ್ ಬಿಮಾ ಯೋಜನೆ ಅನುಷ್ಠಾನಕ್ಕೆ ೯೦೦ ಕೋಟಿ ರೂಪಾಯಿ, ಮಹದಾಯಿ ನೀರನ್ನು ಬಳಸಿಕೊಳ್ಳುವ ಕಳಸಾ ಬಂಡೂರಿ ಯೋಜನೆಗೆ ೫೦೦ ಕೋಟಿ ರೂಪಾಯಿ ಮತ್ತು ಮಹಿಳಾ ಮೀನುಗಾರಿಕೆ ಸಬಲೀಕರಣ ಯೋಜನೆಗೆ ಕೋಟಿ ರೂಪಾಯಿಗಳನ್ನು ಒದಗಿಸಿದರು.

ಮುಂಗಡಪತ್ರದ ಅನುದಾನವನ್ನು ಇಲಾಖಾವಾರು ಹಂಚಿಕೆ ಮಾಡುವ ಬದಲಿಗೆ ವಲಯವಾರು ಆಗಿ ಹಂಚಿಕೆ ಮಾಡಿರುವ ಮುಖ್ಯಮಂತ್ರಿ ಅನುದಾನ ಹಂಚಿಕೆಗೆ () ಕೃಷಿ ಮತ್ತು ಪೂರಕ ಚಟುವಟಿಕೆಗಳು, () ಸರ್ವೋದಯ ಮತ್ತು ಕ್ಷೇಮಾಭಿವೃದ್ದಿ, () ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ, () ಬೆಂಗಳೂರು ಸಮಗ್ರ ಅಭಿವೃದ್ಧಿ, () ಸಂಸ್ಕೃತಿ ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ, () ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳು- ಹೀಗೆ ಆರು ವಲಯಗಳನ್ನು ಗುರುತಿಸಿ ಅದಕ್ಕೆ ಅನುಗುಣವಾಗಿ ಹಂಚಿಕೆ ಮಾಡಿದರು.

೨೦೨೦-೨೧ರ ಸಾಲಿನಲ್ಲಿ ಕೃಷಿಗೆ ೩೨,೫೯೦ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿರುವ ಯಡಿಯೂರಪ್ಪ, ಪ್ರವಾಹದಿಂದ ಹಾನಿಗೊಂಡಿರುವ ಶಾಲೆಗಳ ಮರುನಿರ್ಮಾಣಕ್ಕೆ ನಬಾರ್ಡ್ನಿಂದ ೭೫೯ ಕೋಟಿ ರೂಪಾಯಿಗಳನ್ನು ಒದಗಿಸುವ ಹಾಗೂ ಅಂಗನವಾಡಿಗಳ ಅಭಿವೃದ್ಧಿಗೆ ೧೩೮ ಕೋಟಿ ರೂಪಾಯಿಗಳನ್ನು ಒದಗಿಸುವ ಪ್ರಸ್ತಾಪ ಮಾಡಿದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ೧೫೦೦ ಕೋಟಿ ರೂಪಾಯಿ, ಬೆಂಗಳೂರಿನಲ್ಲಿ ವಿದ್ಯುತ್ ವಾಹನಗಳ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ೧೦ ಕೋಟಿ ರೂಪಾಯಿ, ಲಂಬಾಣಿ ಭಾಷಾ ಅಕಾಡೆಮಿ ರಚನೆಗೆ ೫೦ ಲಕ್ಷ ರೂಪಾಯಿ, ಎಸ್ ಎಸ್ ಎಲ್ ಸಿಯಲ್ಲಿ ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗಾಗಿ ಲಕ್ಷ ರೂಪಾಯಿಗಳನ್ನು ಪ್ರಕಟಿಸಿದರು.

ಸುರಕ್ಷಾ ಆಪ್ನ್ನು ರಾಜ್ಯವ್ಯಾಪಿಯಾಗಿ ವಿಸ್ತರಿಸುವುದಾಗಿ ಪ್ರಕಟಿಸಿರುವ ಮುಖ್ಯಮಂತ್ರಿ ಮಹತ್ವಾಕಾಂಕ್ಷಿ ಯೋಜನೆಗಳಾದ ಭಾಗ್ಯಲಕ್ಷ್ಮಿ ಯೋಜನೆ, ಶಾಲಾ ಮಕ್ಕಳಿಗೆ ಬೈಸಿಕಲ್  ವಿತರಣೆಯಂತಹ ಯೋಜನೆಗಳನ್ನು ಮುಂದುವರೆಸುವುದಾಗಿ ಪ್ರಕಟಿಸಿದರು.

೧೦೬ ನಿಮಿಷಗಳಲ್ಲಿ  ( ಗಂಟೆ ೪೬ ನಿಮಿಷ) ತಮ್ಮ ಬಜೆಟ್ ಭಾಷಣವನ್ನು ಮುಗಿಸಿದ ಮುಖ್ಯಮಂತ್ರಿ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾಗಿದ್ದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಪಾಲು ಗಣನೀಯ ಪ್ರಮಾಣದಲ್ಲಿ ಕಡಿತವಾಗಿರುವುದನ್ನು ತಿಳಿಸಿ, ಬೊಕ್ಕಸಕ್ಕೆ ಆಗುವ ಹೊರೆಯನ್ನು ತಪ್ಪಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟದ ಮೇಲಿನ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್)ನ್ನು ಶೇಕಡಾ ೩ರಷ್ಟು  ಹೆಚ್ಚಿಸಲಾಗಿದೆ ಎಂದು ಪ್ರಕಟಿಸಿದರು.

ವ್ಯಾಟ್ ಹೆಚ್ಚಳದ ಪರಿಣಾಮವಾಗಿ ಪೆಟ್ರೋಲ್ ಬೆಲೆ ಲೀಟರಿಗೆ .೬೦ರೂಪಾಯಿ ಮತ್ತು ಡೀಸೆಲ್ ಬೆಲೆ .೫೫ ರೂಪಾಯಿಯಷ್ಟು ಹೆಚ್ಚಳವಾಗಲಿದೆ.

No comments:

Advertisement