My Blog List

Thursday, March 5, 2020

ನಿರ್ಭಯಾ ಪ್ರಕರಣ: ನಾಲ್ಕನೇ ಡೆತ್ ವಾರಂಟ್ ಜಾರಿ

ನಿರ್ಭಯಾ ಪ್ರಕರಣ: ನಾಲ್ಕನೇ ಡೆತ್ ವಾರಂಟ್ ಜಾರಿ
ಮಾರ್ಚ್ ೨೦ರಂದು ಬೆಳಗ್ಗೆ .೩೦ಕ್ಕೆ ನಾಲ್ಕೂ ಹಂತಕರಿಗೆ ಗಲ್ಲು
ನವದೆಹಲಿ: ದೆಹಲಿಯ ೨೦೧೨ರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ಕೂ ಮಂದಿ ಶಿಕ್ಷಿತ ಅಪರಾಧಿಗಳನ್ನು ಮಾರ್ಚ್ ೨೦ರಂದು ಬೆಳಗ್ಗೆ .೩೦ ಗಂಟೆಗೆ ಗಲ್ಲಿಗೇರಿಸಲು ಆಜ್ಞಾಪಿಸಿದ ದೆಹಲಿಯ ನ್ಯಾಯಾಲಯ 2020 ಮಾರ್ಚ್ 05ರ ಗುರುವಾರ ನಾಲ್ಕನೇಡೆತ್ ವಾರಂಟ್ಜಾರಿಗೊಳಿಸಿತು.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಪರಾಧಿಗಳಲ್ಲಿ ಒಬ್ಬನಾದ ಪವನ್ ಗುಪ್ತ ಸಲ್ಲಿಸಿದ್ದ ಕ್ಷಮಾದಾನ ಕೋರಿಕೆ ಅರ್ಜಿಯನ್ನು ತಿರಸ್ಕರಿಸಿದ ಒಂದು ದಿನದ ಬಳಿಕ ವಿಚಾರಣಾ ನ್ಯಾಯಾಲಯವು ಆದೇಶವನ್ನು ನೀಡಿದೆ. ಪವನ್ ಗುಪ್ತ ಕ್ಷಮಾದಾನ ಕೋರಿಕೆ ಅರ್ಜಿಯೊಂದಿಗೆ ಎಲ್ಲ ನಾಲ್ಕೂ ಮಂದಿ ಅಪರಾಧಿಗಳು ತಮಗೆ ಲಭ್ಯವಿದ್ದ ಎಲ್ಲ ಕಾನೂನುಬದ್ಧ ಪರಿಹಾರಗಳನ್ನು ಚಲಾಯಿಸಿದಂತಾಗಿತ್ತು.

ತಿಹಾರ್ ಸೆರೆಮನೆ ಅಧಿಕಾರಿಗಳು ವಿನಯ್ ಶರ್ಮ, ಅಕ್ಷಯ್ ಠಾಕೂರ್, ಮುಕೇಶ್ ಸಿಂಗ್ ಮತ್ತು ಪವನ್ ಗುಪ್ತ ನಾಲ್ಕೂ ಮಂದಿ ಅಪರಾಧಿಗಳ ವಿರುದ್ದ ಹೊಸದಾಗಿ ಡೆತ್ ವಾರಂಟ್ ಜಾರಿಗೊಳಿಸುವಂತೆ ಕೋರಿ ಬುಧವಾರ ಅರ್ಜಿ ಸಲ್ಲಿಸಿದ್ದರು.

೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರದ ಸಂತ್ರಸ್ಥ ಯುವತಿಯ ತಂದೆ ಶಿಕ್ಷಿತ ಅಪರಾಧಿಗಳನ್ನು ತಿಂಗಳಲ್ಲಿ ಗಲ್ಲಿಗೇರಿಸಲಾಗುವುದು ಎಂಬ ಆಶಯವನ್ನು ಬುಧವಾರ ವ್ಯಕ್ತ ಪಡಿಸಿದ್ದರು. ’ಆತನಿಗೆ ಇನ್ನೂ ಒಂದು ಆಯ್ಕೆ ಬಾಕಿ ಇದೆ. ಕ್ಷಮಾದಾನ ಕೋರಿಕೆ ಅರ್ಜಿ ವಜಾಗೊಳಿಸಿದ್ದನ್ನು ಇತರ ಅಪರಾಧಿಗಳು ಪ್ರಶ್ನಿಸಿದ್ದಂತೆ ಈತನೂ ಪ್ರಶ್ನಿಸಬಹುದು. ಮುಂದೇನಾಗುತ್ತದೋ ನೋಡೋಣ. ಆದರೆ ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆಎಂದು ಅವರು ಹೇಳಿದ್ದರು.

ತಿಂಗಳಲ್ಲೇ ಅಪರಾಧಿಗಳನ್ನು ಗಲ್ಲಿಗೇರಿಸಲಾಗುವುದು ಮತ್ತು ನಮಗೆ ಸುದೀರ್ಘ ಕಾಯುವಿಕೆಯ ಬಳಿಕ ಕಡೆಗೂ ನ್ಯಾಯ ಲಭಿಸುವುದು ಎಂದು ನಾವು ಹಾರೈಸಿದ್ದೇವೆಎಂದುನಿರ್ಭಯಾತಂದೆ ಹೇಳಿದ್ದರು. ನಿರ್ಭಯಾ ತಾಯಿ ಆಶಾದೇವಿ ಅವರು ಅಪರಾಧಿಗಳ ಕ್ಷಮಾದಾನ ಕೋರಿಕೆ ಅರ್ಜಿಗಳನ್ನು ತಿರಸ್ಕರಿಸಿದ್ದಕ್ಕಾಗಿ ರಾಷ್ಟ್ರಪತಿಯವರಿಗೆ ಧನ್ಯವಾದ ಅರ್ಪಿಸಿದ್ದರು.

ನಿರ್ಭಯಾಎಂಬುದಾಗಿ ಮಾಧ್ಯಮಗಳು ಹೆಸರಿಸಿದ ದೆಹಲಿ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳನ್ನು ಗಲ್ಲಿಗೇರಿಸಲು ಮೊತ್ತ ಮೊದಲನೆಯದಾಗಿ ನಿಗದಿ ಪಡಿಸಲಾಗಿದ್ದ ಜನವರಿ ೨೨ರ ದಿನಾಂಕವನ್ನು ಫೆಬ್ರುವರಿ೧ಕ್ಕೆ ಮುಂದೂಡಲಾಗಿತ್ತು. ಬಳಿಕ ಅಪರಾಧಿಗಳು ತಮ್ಮ ಕಾನೂನುಬದ್ಧ ಪರಿಹಾರಗಳನ್ನು ಬಳಸಿಲ್ಲ ಎಂಬ ಕಾರಣಕ್ಕಾಗಿ ವಿಚಾರಣಾ ನ್ಯಾಯಾಲಯವು ಜನವರಿ ೩೧ರಂದು ಗಲ್ಲು ಜಾರಿಯನ್ನು ಮುಂದಿನ ಆದೇಶದವರೆಗೆ ಮಂದೂಡಿತ್ತು.

ನ್ಯಾಯಾಲಯವು ಫೆಬ್ರುವರಿ ೧೭ರಂದು ನಾಲ್ಕೂ ಮಂದಿ ಅಪರಾಧಿಗಳನ್ನು ಮಾರ್ಚ್ ೩ರಂದು ಬೆಳಗ್ಗೆ ಗಂಟೆಗೆ ಗಲ್ಲಿಗೇರಿಸಬೇಕು ಎಂದು ಆಜ್ಞಾಪಿಸಿತ್ತು. ಇದು ಅಪರಾಧಿಗಳ ಜಾರಿಗಾಗಿ ೩ನೇ ದಿನಾಂಕವನ್ನು ನಿಗದಿ ಪಡಿಸಿ ಹೊರಡಿಸಲಾಗಿದ್ದ ಡೆತ್ ವಾರಂಟ್ ಆಗಿತ್ತು.

ದೆಹಲಿಯ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ೨೦೧೨ರ ಡಿಸೆಂಬರ್ ೧೬ರಂದು ದಕ್ಷಿಣ ದೆಹಲಿಯ ಚಲಿಸುವ ಬಸ್ಸಿನಲ್ಲಿ ಒಟ್ಟು ಆರು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿ ಕ್ರೂರವಾಗಿ ಹಿಂಸಿಸಿ ಬಳಿಕ ಆಕೆಯನ್ನು ಬಸ್ಸಿನಿಂದ ಹೊರಕ್ಕೆ ಎಸೆದಿದ್ದರು. ಮಾರಣಾಂತಿಕವಾಗಿ ಗಾಯಗೊಂಡಿದ್ದ ಆಕೆ ಜೀವನ್ಮರಣ ಹೋರಾಟದ ಬಳಿಕ ಡಿಸೆಂಬರ್ ೨೯ರಂದು ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಆರೋಪಿಗಳ ಪೈಕಿ ಒಬ್ಬನಾದ ರಾಮ್ ಸಿಂಗ್ ತಿಹಾರ್ ಸೆರೆಮನೆಯಲ್ಲಿಯೇ ವಿಚಾರಣಾ ವೇಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೊಬ್ಬ ಆರೋಪಿಯಾಗಿದ್ದ ಬಾಲಾಪರಾಧಿಗೆ ಸುಧಾರಣಾವಾಸದ ಶಿಕ್ಷೆ ವಿಧಿಸಿ, ಅವಧಿ ಮುಗಿದ ಬಳಿಕ ಅಜ್ಞಾತ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿತ್ತು. ಪ್ರಕರಣದ ಉಳಿದ ನಾಲ್ವರಿಗೆ ವಿಚಾರಣೆ ಬಳಿಕ ನ್ಯಾಯಾಲಯವು ವಿಧಿಸಿದ ಮರಣದಂಡನೆಯನ್ನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಎತ್ತಿ ಹಿಡಿದ್ದಿದ್ದವು.

No comments:

Advertisement