Wednesday, March 25, 2020

ಜನರ ಸಂಕಷ್ಟ: ಕೇಂದ್ರದ ನೆರವು, ಹೊಸ ಪಡಿತರ ಯೋಜನೆ ಜಾರಿ

ಜನರ ಸಂಕಷ್ಟ:  ಕೇಂದ್ರದ ನೆರವು,  ಹೊಸ ಪಡಿತರ ಯೋಜನೆ ಜಾರಿ
ನವದೆಹಲಿ:  ಕೊರೋನಾವೈರಸ್ ಸೋಂಕಿನ ವಿರುದ್ಧ ಸಮರಕ್ಕಾಗಿ  21 ದಿನಗಳ ಸ್ತಬ್ಧ ಸ್ಥಿತಿ (ಲಾಕ್ ಡೌನ್) ಘೋಷಿಸಿರುವ ಕೇಂದ್ರ ಸರ್ಕಾರ,,  ಈ ಸಂಕಷ್ಟದ ಸಮಯದಲ್ಲಿ ದೇಶದ ಜನಸಾಮಾನ್ಯರ ನೆರವಿಗಾಗಿ ನೂತನ ಪಡಿತರ ಯೋಜನೆಯನ್ನು 2020 ಜನವರಿ 25ರ ಬುಧವಾರ ಜಾರಿಗೊಳಿಸಿತು.

ಯೋಜನೆಯ ಅಡಿಯಲ್ಲಿ  ೮೦ ಕೋಟಿ ಪಡಿತರದಾರರಿಗೆ ಪ್ರತೀ ಕೆ.ಜಿ.ಗೆ ರೂ. ದರದಲ್ಲಿ ಗೋಧಿ ಹಾಗೂ ಪ್ರತೀ ಕೆ.ಜಿ.ಗೆ ರೂ. ದರದಲ್ಲಿ ಅಕ್ಕಿಯನ್ನು ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿತು. ದೆಹಲಿಯಲ್ಲಿ ಸಚಿವ ಪ್ರಕಾಶ್ ಜಾವಡೇಕರ್ ಅವರು ಸುದ್ದಿಗೋಷ್ಠಿ ಯಲ್ಲಿ ಈ ವಿಚಾರವನ್ನು ಪ್ರಕಟಿಸಿದರು.
ಕಟ್ಟಡ ಕಾರ್ಮಿಕರಿಗೆ ಉಚಿತ ಊಟವನ್ನು ಪೂರೈಸುವ ನಿರ್ಧಾರಕ್ಕೂ ಕೇಂದ್ರ ಬಂದಿದೆ. ಜೊತೆಗೆ ಕೋವಿಡ್ ೧೯ ಕ್ಕೆ ಸಂಬಂಧಿಸಿದಂತೆ ಜಿಲ್ಲಾವಾರು  ಸಹಾಯ ವಾಣಿ (ಹೆಲ್ಪ್ ಲೈನ್) ತೆರೆಯಲೂ ನಿರ್ಧರಿಸಲಾಗಿದೆ.

ಆದರೆ ಜನರಿಗೆ ಪಡಿತರವನ್ನು ಸಿಗುವಂತೆ ಮಾಡುವ ಮತ್ತು ಇನ್ನಿತರ ಸವಲತ್ತುಗಳನ್ನು ಜನರಿಗೆ ತಲುಪಿಸುವುದಕ್ಕೆ ಸಂಬಂಧಿಸಿ ಮಾರ್ಗದರ್ಶಿ ಸೂತ್ರಗಳನ್ನು ದಿನದ ಅಂತ್ಯದೊಳಗೆ ಸರ್ಕಾರ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ.

ಸಚಿವ ಜಾವಡೇಕರ್ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು:
·         *  ಮೂರು ತಿಂಗಳ ಪಡಿತರವನ್ನು ಮುಂಗಡವಾಗಿಯೇ ನೀಡಲಾಗುವುದು.
·          *  ಗುತ್ತಿಗೆ ಕಾರ್ಮಿಕರಿಗೆ ಕಡ್ಡಾಯ ವೇತನ.
·         * ಕಾಳಸಂತೆಯಲ್ಲಿ ದಿನಸಿ ವಸ್ತುಗಳನ್ನು ಮಾರಾಟ ಮಾಡಿದರೆ ಕಠಿಣ ಕ್ರಮ.
·         * ಪ್ರದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ೧೩೪೦ ಕೋಟಿ ರೂಪಾಯಿಗಳ ನಿಧಿ ಬಿಡುಗಡೆ.

·        .೧೪ರವರೆಗೂ  ರೈಲು ಸಂಚಾರ ಸ್ತಬ್ಧ:
ಕೊರೋನಾ ಸಾಂಕ್ರಾಮಿಕ ಪಿಡುಗು ವ್ಯಾಪಕವಾಗಿ ಹಬ್ಬುತ್ತಿದ್ದು, ದಿನದಿಂದ ದಿನಕ್ಕೆ  ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಿದ್ದಂತೆಯೇ,  ಕೊರೋನಾ ಸೋಂಕಿಗೆ ಯಾವುದೇ ಔಷಧ ಇಲ್ಲದ ಕಾರಣ ಜನರು ಮನೆಯಲ್ಲಿಯೇ ಇರುವ ಮೂಲಕ ಸೋಂಕು ಹರಡುವಿಕೆ ನಿಯಂತ್ರಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮರುಮನವಿ ಮಾಡಿತು.

ಪ್ರಧಾನಿ ನರೇಂದ್ರ ಮೋದಿಯವರು ೨೧ ದಿನ ಇಡೀ ದೇಶ  ಸ್ತಗಿತ ಸ್ಸ್ಥಿತಿ (ಲಾಕ್ ಡೌನ್) ಘೋಷಿಸಿ ಆದೇಶ ಹೊರಡಿಸಿದ್ದಾರೆ. ಅದರ ಬೆನ್ನಲ್ಲೇ  ದೇಶಾದ್ಯಂತ ಏಪ್ರಿಲ್ ೧೪ರವರೆಗೆ ರೈಲು ಸಂಚಾರ ಸ್ತಬ್ದ ಮಾಡಲಾಯಿತು. ಮಾ. ೩೧ರವರೆಗೆ ಮಾತ್ರ ರೈಲು ಸಂಚಾರ ಬಂದ್ ಮಾಡಿದ್ದ ರೈಲ್ವೆ ಇಲಾಖೆ ಈಗ ಇಡೀ ದೇಶ ಸ್ತಗಿತ ಸ್ಥಿತಿ ಘೋಷಿಸಿದ ಹಿನ್ನೆಲೆಯಲ್ಲಿ ರೈಲು ಸಂಚಾರ  ಆದೇಶವನ್ನು .೧೪ರವರೆಗೂ ವಿಸ್ತರಿಸಿ ಅಧಿಕೃತವಾಗಿ ಆದೇಶ ವನ್ನು ಈದಿನ ಹೊರಡಿಸಿತು.

No comments:

Advertisement