My Blog List

Sunday, March 15, 2020

ಕೊರೋನವೈರಸ್ ಸೋಂಕಿತ ದೆಹಲಿ ವ್ಯಕ್ತಿಗೆ ಗರಿಷ್ಠ- ೮೧೩ ಮಂದಿಯ ಜೊತೆ ಸಂಪರ್ಕ

ಕೊರೋನವೈರಸ್ ಸೋಂಕಿತ ದೆಹಲಿ ವ್ಯಕ್ತಿಗೆ ಗರಿಷ್ಠ- ೮೧೩ ಮಂದಿಯ ಜೊತೆ ಸಂಪರ್ಕ
ನವದೆಹಲಿ: ದೆಹಲಿ ವಿಮಾನ ನಿಲ್ದಾಣಕ್ಕೆ ಇಟಲಿಯಿಂದ ಫೆಬ್ರವರಿ ೨೦ ರಂದು ಹಿಂದಿರುಗಿದ ಬಳಿಕ, ಮಾರ್ಚ್ ೧೨ ರಂದು ಮಾರಕ ಕೊರೊನಾವೈರಸ್ (ಕೋವಿಡ್ -೧೯) ಸೋಂಕು ಪತ್ತೆಯಾಗುವವರೆಗಿನ ಅವಧಿಯಲಿ ಪಶ್ಚಿಮ ದೆಹಲಿಯ ಜನಕಪುರಿಯ ೪೬ ವರ್ಷದ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗಳ ಸಂಖ್ಯೆ ೮೧೩ ಎಂಬುದು ಬೆಳಕಿಗೆ ಬಂದಿದೆ.
ಇತರ
ವ್ಯಕ್ತಿಗಳ ಜೊತೆ ಕೋವಿಡ್ -೧೯ ಸೋಂಕಿತ ವ್ಯಕ್ತಿಯೊಬ್ಬರು ಇತರರ ಜೊತೆ ಗರಿಷ್ಠ ಸಂಪರ್ಕ ಪಡೆದ ಪ್ರಕರಣ ಇದಾಗಿದೆ ಎಂದು ಸುದ್ದಿ ಮೂಲಗಳು 2020 ಮಾರ್ಚ್ 15ರ ಭಾನುವಾರ ತಿಳಿಸಿದವು.

ಕೊರೋನಾವೈರಸ್ ಸೋಂಕಿಗೆ ಒಳಗಾದ ವ್ಯಕ್ತಿಯ ೬೮ ವರ್ಷದ ತಾಯಿ ಶುಕ್ರವಾರ ರಾತ್ರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಇದು ದೇಶದಲ್ಲಿ ವ್ಯಾಧಿಯಿಂದ ಸಂಭವಿಸಿದ ಎರಡನೇ ಸಾವು ಎಂದು ಶಂಕಿತ ವ್ಯಕ್ತಿಯ ಓಡಾಟಗಳ ಮಾಹಿತಿ ಸಂಗ್ರಹಿಸಿರುವ ಆರೋಗ್ಯ ಕಾಳಜಿ ವೃತ್ತಿನಿರತರು  ಹೇಳಿದರು.

೪೬ ವರ್ಷದ ವ್ಯಕ್ತಿ ಮತ್ತು ಕುಟುಂಬ ಕುಟುಂಬ ಸದಸ್ಯರು ಇತ್ತೀಚೆಗೆ ಯುರೋಪಿನ ನಾಲ್ಕು ದೇಶಗಳ ಕೆಲಸದ ಪ್ರವಾಸದಿಂದ ವಾಪಸಾಗಿದ್ದರು. ಅವರು ಪಯಣಿಸಿದ್ದ ದೇಶಗಳಲ್ಲಿ ಇಟಲಿ ಕೂಡಾ ಒಂದು ಎಂದು ವರದಿಗಳು ಹೇಳಿವೆ. ಇಟಲಿಯಲ್ಲಿ ಮಾರಕ ಸೋಂಕಿನ ಪರಿಣಾಮವಾಗಿ ಕನಿಷ್ಠ ,೪೦೦ ಸಾವುಗಳು ಸಂಭವಿಸಿವೆ.

ಸದರಿ ವ್ಯಕ್ತಿ ದೆಹಲಿಯಲ್ಲಿ ಸಾಂಕ್ರಾಮಿಕ ರೋಗದ ಸೋಂಕಿಗೆ ಒಳಗಾದ ಐದನೇ ವ್ಯಕ್ತಿಯಾಗಿದ್ದಾರೆ.

ವ್ಯಕ್ತಿ ವಿಮಾನ ನಿಲ್ದಾಣಕ್ಕೆ ಬಂದಿಳಿದು ಹಲವಾರು ಜನರೊಂದಿಗೆ ಸಂಪರ್ಕಕ್ಕೆ ಬಂದಾಗ, ಅವರನ್ನು ಥರ್ಮಲ್ ಸೆನ್ಸಾರ್ ಮೂಲಕ ಪರೀಕ್ಷಿಸಲಾಗಿತ್ತು. ಅವರ ತಾಪಮಾನವು ಸಾಮಾನ್ಯವೆಂದು ವರದಿಯಾದ ನಂತರ, ಅವರು ಸೌಲಭ್ಯದಿಂದ ನಿರ್ಗಮಿಸಿದ್ದರು.

"ಅವರು ಆರು ಸಹೋದ್ಯೋಗಿಗಳೊಂದಿಗೆ ಪ್ರಯಾಣಿಸುತ್ತಿದ್ದರು ಮತ್ತು ಅವರೆಲ್ಲರೂ ಪರೀಕ್ಷೆಯಲ್ಲಿ ರೋಗ ಸೋಂಕಿನಿಂದ ಮುಕ್ತರಾಗಿದ್ದಾರೆ ಎಂದು ಕಂಡು ಬಂದಿತ್ತು. ಸೋಂಕಿನ ಯಾವ ಲಕ್ಷಣಗಳೂ ಅವರಲ್ಲಿ ಕಂಡು ಬರಲಿಲ್ಲ. ಜ್ವರ ಬರುವವರೆಗೂ ಅವರು ತಮ್ಮ ಕರ್ತವ್ಯಗಳನ್ನು ಮಾಮೂಲಿಯಾಗಿಯೇ ನಿರ್ವಹಿಸಿದ್ದರು ಎಂದು ಎಂದು ಸಂಬಂಧಿಯೊಬ್ಬರು ಹೇಳಿದರು.

ಸೋಂಕಿತ ವ್ಯಕ್ತಿ ತನ್ನ ಜನಕಪುರಿ ಮನೆಯಲ್ಲಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಸಂಪರ್ಕದಲ್ಲಿದ್ದರು. ಅವರ ತಾಯಿ ತಮ್ಮ ಕಿರಿಯ ಸಹೋದರನೊಂದಿಗೆ ಪ್ರದೇಶದ ಬೇರೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರು ಆಗಾಗ್ಗೆ ೪೬ ವರ್ಷ ವಯಸ್ಸಿನ ವ್ಯಕ್ತಿಯನ್ನು ಭೇಟಿ ಮಾಡುತ್ತಿದ್ದರು.

ಕುಟುಂಬದ ಎಲ್ಲ ಸದಸ್ಯರೂ ಸೋಕು ರಹಿತರು ಎಂದು ಪರೀಕ್ಷೆಯಲ್ಲಿ ಕಂಡು ಬಂದಿದೆ. ಅವರು ವಾಸಮಾಡುತ್ತಿದ್ದ ಮನೆಗೆ ಬೀಗ ಹಾಕಲಾಗಿದೆ. ಎಲ್ಲರೂ ಭಯಭೀತರಾಗಿದ್ದಾರೆ. ನಾವು ಈಗಾಗಲೇ ಒಬ್ಬ ಸದಸ್ಯರನ್ನು ಕಳೆದುಕೊಂಡಿದ್ದೇವೆ ಎಂದು ಕುಟುಂಬದ ಇನ್ನೊಬ್ಬ ಸದಸ್ಯ ಹೇಳಿದರು.

ಆರೋಗ್ಯ ಸೇವೆಗಳ ನಿರ್ದೇಶನಾಲಯವು ಒದಗಿಸಿದ ಮಾಹಿತಿಗಳ ಪ್ರಕಾರ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗುವವರೆಗಿನ ಅವಧಿಯಲ್ಲಿ ವ್ಯಕ್ತಿ ೮೧೩ ಜನರೊಂದಿಗೆ ಸಂಪರ್ಕಕ್ಕೆ ಬಂದಿದ್ದುದು ಬೆಳಕಿಗೆ ಬಂದಿದೆ. ೮೧೩ ಜನರ ಪೈಕಿ ೪೦ ಜನರು ದೆಹಲಿಯವರು ಮತ್ತು ೭೭೩ ಜನರು ನಗರದ ಹೊರಗಿನವರು. ಸದರಿ ವ್ಯಕ್ತಿಯ ೬೮ ವರ್ಷದ ತಾಯಿಯೊಂದಿಗೆ ೧೪ ಜನರು ಸಂಪರ್ಕದಲ್ಲಿದ್ದರು ಎಂದು ದಾಖಲೆಗಳು ತೋರಿಸಿವೆ.

ಕುಟುಂಬದ ಇನ್ನೊಬ್ಬ ಸದಸ್ಯರ ಪ್ರಕಾರ, ವ್ಯಕ್ತಿಯು ದೆಹಲಿ ಮೆಟ್ರೊವನ್ನು ನೋಯ್ಡಾದಲ್ಲಿರುವ ತನ್ನ ಕಚೇರಿಯನ್ನು ತಲುಪಲು ಬಳಸಿದ್ದು, ಮಾರ್ಚ್ ಮೊದಲ ವಾರದವರೆಗೆ ಕೆಲಸಕ್ಕೆ ಹಾಜನಾಗಿದ್ದರು.  ಜನಕಪುರಿ ಪಶ್ಚಿಮ ಮತ್ತು ನೋಯ್ಡಾದ ಬಟಾನಿಕಲ್ ಗಾರ್ಡನ್ ಕೇಂದ್ರಗಳ ನಡುವಿನ ಅಂತರವು ೩೮. ಕಿ.ಮೀಯಾಗಿದ್ದು, ೨೫ ನಿಲ್ದಾಣಗಳನ್ನು ಹೊಂದಿದೆ. ವ್ಯಕ್ತಿಯ ಸ್ಥಳೀಯ ಪ್ರಯಾಣದ ನಿರ್ದಿಷ್ಟ ವಿವರಗಳನ್ನು ಕಂಡುಹಿಡಿಯಲಾಗಿಲ್ಲ.
ವ್ಯಕ್ತಿ ನೋಯ್ಡಾದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಇದರಲ್ಲಿ ೭೦೦ ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ.

No comments:

Advertisement