Sunday, March 8, 2020

ಜಮ್ಮು: ಸೇನೆಯ ಕ್ಷಿಪ್ರ ಕ್ರಮ; ಹಿಮದಲ್ಲಿ ಸಿಲುಕಿದ್ದ ೯ ಪ್ರವಾಸಿಗರ ರಕ್ಷಣೆ

ಜಮ್ಮು: ಸೇನೆಯ ಕ್ಷಿಪ್ರ ಕ್ರಮ;  ಹಿಮದಲ್ಲಿ ಸಿಲುಕಿದ್ದ  ಪ್ರವಾಸಿಗರ ರಕ್ಷಣೆ
ಜಮ್ಮು: ಭಾರಿ ಮಳೆ ಹಾಗೂ ಹಿಮ ಸುರಿದ ಪರಿಣಾಮವಾಗಿ ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಮಾರ್ಗ ಮಧ್ಯೆ ಹಿಮದಲ್ಲಿ ಸಿಲುಕಿದ್ದ ಐವರು ಮಹಿಳೆಯರು ಸೇರಿ ಒಂಬತ್ತು ಜನರನ್ನು ಸೇನೆ ಕ್ಷಿಪ್ರ ಕಾರ್ಯಾಚರಣೆ ಮೂಲಕ  2020 ಮಾರ್ಚ್  08ರ ಭಾನುವಾರ ರಕ್ಷಿಸಿತು.

ಪ್ರವಾಸಿಗರ ವಾಹನವೊಂದು ಭಾರಿ ಹಿಮಮಳೆಗೆ ಸಿಲುಕಿದ ಮಾಹಿತಿ ತಿಳಿದ ತಕ್ಷಣ ಕಾರ್ಯಾಚರಣೆ ನಡೆಸಿದ ಸೇನೆ ಅವರನ್ನು ರಕ್ಷಿಸಿತು..

ಜಮ್ಮು-ಕಾಶ್ಮೀರ ಪ್ರವಾಸಕ್ಕೆಂದು ಜನರ ತಂಡಗಳು ಆಗಮಿಸತೊಡಗಿವೆ. ಹೀಗೆ ಪ್ರವಾಸಕ್ಕೆ ಬಂದಿದ್ದ ಪ್ರಯಾಣಿಕರ ಕಾರೊಂದು ರಾಜೌರಿ ಜಿಲ್ಲೆಯ ಥಾನಮಂಡಿ ಹಾಗೂ ಬಫ್ಲಿಯಾಜ್ ಮಾರ್ಗದ ನಡುವಿನ ದೇರಾ ಕಿ ಗಲಿ ಎಂಬಲ್ಲಿ ದಿಢೀರ್ ಹಿಮಮಳೆಯಿಂದ ಸಿಲುಕಿಕೊಂಡಿತು. ಇದರ ಬೆನ್ನಲ್ಲೇ ಇನ್ನೂ ಕೆಲವರು ಸಂಕಷ್ಟಕ್ಕೆ ಗುರಿಯಾದರು.

ಮಾಹಿತಿ ತಿಳಿದ ಸೇನೆಯ ರೋಮಿಯೊ ಪಡೆಯ ಸಿಬ್ಬಂದಿ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿ ಜನರನ್ನು ರಕ್ಷಿಸಿದರು. ಸೇನೆಯ ಕಾರ್ಯಚರಣೆಗೆ ಸ್ಥಳೀಯ ಪೊಲೀಸರು ಸಾಥ್ ನೀಡಿ ಜನ ಪ್ರವಾಸಿಗರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

ಮಧ್ಯೆ ಮಾರ್ಚ್ ೧೨ ಮತ್ತು ೧೩ರಂದು ಕಣಿವೆಯಲ್ಲಿ ಇನ್ನಷ್ಟು ಸಾಧಾರಣದಿಂದ ಕೂಡಿದ ಮಳೆ ಹಾಗೂ ಹಿಮ ವರ್ಷಧಾರೆ ಸುರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮುಂದಿನ ವಾರ ಲಡಾಖಿನಲ್ಲೂ  ಹಿಮ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ.

No comments:

Advertisement