Thursday, March 26, 2020

ಕೊರೋನಾ ‘ಲಾಕ್ ಡೌನ್’ ಯಶಸ್ಸು: ಬಾಲ ಸೇನೆಗೆ ಪ್ರಧಾನಿ ಕರೆ

ಕೊರೋನಾ ‘ಲಾಕ್ ಡೌನ್’ ಯಶಸ್ಸು: ಬಾಲ ಸೇನೆಗೆ ಪ್ರಧಾನಿ ಕರೆ
ನವದೆಹಲಿ: ಪ್ರಧಾನಿ ನರೇಂದ್ರಮೋದಿ ಅವರು 2020 ಮಾರ್ಚ್ 24ರ ಮಂಗಳವಾರ ರಾತ್ರಿ ಘೋಷಿಸಲಾದ ರಾಷ್ಟ್ರವ್ಯಾಪಿ ‘ಲಾಕ್ ಡೌನ್’ ಯಶಸ್ಸುಗೊಳಿಸುವಂತೆ ‘ಮಕ್ಕಳ ಸೇನೆ’ಗೆ (ಬಾಲ ಸೇನಾ) ಕರೆ ಕೊಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾರ್ಚ್ 24ರ ಮಂಗಳವಾರ ಮಾಡಿದ ಭಾಷಣದಲ್ಲಿ ಅದೇ ದಿನ ಮಧ್ಯರಾತ್ರಿಯಿಂದ 21 ದಿನಗಳ ಕಾಲದ ರಾಷ್ಟ್ರವ್ಯಾಪಿ ಲಾಕ್ ಡೌನ್ (ಸಂಪೂರ್ಣ ಬೀಗಮುದ್ರೆ) ಘೋಷಿಸಿದ್ದರು.
ಸಂಪೂರ್ಣ ದಿಗ್ಬಂಧನಕ್ಕೆ ಕರೆ ನೀಡಿದ ಪ್ರಧಾನಿ, 21 ದಿನಗಳ ಕಾಲ ಕಟ್ಟು ನಿಟ್ಟಾಗಿ ದಿಗ್ಬಂಧನ ಜಾರಿಗೆ ಸಹಕರಿಸುವಂತೆ ಮತ್ತು ಕೊರೋನಾ ವೈರಸ್ ಹೊಡೆದೋಡಿಸುವಂತೆ ಪ್ರತಿಯೊಬ್ಬರಿಗೂ ಸಲಹೆ ಮಾಡಿದ್ದರು. ರು. ೨೧ ದಿನಗಳವರೆಗೆ ಲಾಕ್‌ಡೌನ್ ಜಾರಿಯಲ್ಲಿರುತ್ತದೆ ಎಂದು ಅವರು ಹೇಳಿದರು.
ಇದೀಗ ಈ ‘ದಿಗ್ಬಂಧನ’ ಯಶಸ್ವಿಯಾಗುವಂತೆ ನೋಡಿಕೊಳ್ಳಿ ಎಂದು ಪ್ರಧಾನಿ ಮೋದಿ ಮಕ್ಕಳ ಸೇನೆಗೆ (ಬಾಲಸೇನಾ) ಕರೆಕೊಟ್ಟಿದ್ದಾರೆ. ಹಿಂದಿ ಭಾಷೆಯಲ್ಲಿರುವ  ಟ್ವಿಟ್ಟರ್ ಸಂದೇಶದಲ್ಲಿ ಮಕ್ಕಳಿಗೆ ಈ ಮನವಿ ಮಾಡಿರುವ ಪ್ರಧಾನಿ ಟ್ವೀಟಿಗೆ ವಿಡಿಯೋ ಒಂದನ್ನು ಲಗತ್ತಿಸಿದ್ದಾರೆ.
 ನನ್ನ ‘ಬಾಲಸೇನೆ’ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ.  ಜನರು ತಮ್ಮ ಮನೆಗಳಲ್ಲಿ ಉಳಿಯುವುದನ್ನು ಅವರು ಖಚಿತಪಡಿಸಿಕೊಳ್ಳುತ್ತಾರೆ, ಇದರಿಂದ ಭಾರತವು ಕೋವಿಡ್-೧೯ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಹುದು’ ಎಂದು ಪ್ರಧಾನಿ ಬರೆದಿದ್ದಾರೆ.
ಬಾಲಕಿಯೊಬ್ಬಳು ತನ್ನ ತಂದೆ ಫೋನ್ ಬಂದ ತತ್ ಕ್ಷಣವೇ ಮನೆಯಿಂದ ಹೊರಗೆ ಹೊರಟದ್ದನ್ನು ಗಮನಿಸಿ ತಡೆಯುವ ವಿಡಿಯೋವನ್ನು ಪ್ರಧಾನಿ ಈ ಟ್ವೀಟಿಗೆ ಜೋಡಿಸಿದ್ದಾರೆ.
ಈ ವಿಡಿಯೋ ಕೇವಲ 14 ಗಂಟೆಗಳ ಒಳಗಾಗಿ  ೭೪,೦೦೦ ಕ್ಕೂ ಹೆಚ್ಚು ಲೈಕ್‌ಗಳನ್ನು ಮತ್ತು ೧೫,೦೦೦ ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಮತ್ತು ಎಣಿಕೆಯನ್ನು ಪಡೆದಿದೆ.
ಮಾರ್ಚ್ ೨೪ ರಂದು ಪ್ರಧಾನಿ ಮೋದಿ ಭಾರತದಲ್ಲಿ ೨೧ ದಿನಗಳ ಲಾಕ್ ಡೌನ್ ಘೋಷಿಸಿದ ಪ್ರಧಾನಿ ಮೋದಿ ‘ಇಂದು, ಕೋವಿಡ್ -೧೯ ವಿರುದ್ಧದ ನಮ್ಮ ಹೋರಾಟದಲ್ಲಿ ನಾನು ಬಹಳ ಮುಖ್ಯವಾದ ಕ್ರಮವನ್ನು ಘೋಷಿಸಲಿದ್ದೇನೆ. ಇಂದಿನಿಂದ ಇಡೀ ದೇಶ ಲಾಕ್‌ಡೌನ್ ಆಗಲಿದೆ. ಇಂದು ರಾತ್ರಿ ಮಧ್ಯರಾತ್ರಿಯಿಂದ ಸಂಪೂರ್ಣ ಲಾಕ್‌ಡೌನ್ ಜಾರಿಗೆ ಬರಲಿದೆಎಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದ್ದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ನವ ನವೀನ ನವೀನ ಸಂದೇಶಗಳನ್ನು ಹಂಚಿಕೊಳ್ಳುತ್ತಿರುವ ಜನರನ್ನು ಪ್ರಧಾನಿ  ಶ್ಲಾಘಿಸಿದರು. ‘ಯಾರೂ ರಸ್ತೆಗೆ ಇಳಿಯಬೇಡಿ (ಕೊಯಿ ರೋಡ್ ಪಾರ್ ನಾ ನಿಕಲೇ)’ ಎಂದು ಹೇಳಲುಕರೋನಾಉಚ್ಚಾರಾಂಶಗಳನ್ನು ಒಡೆದಂತಹ ಸೃಜನಶೀಲ ಬ್ಯಾನರ್ ಒಂದನ್ನು ಕೂಡಾ ಪ್ರಧಾನಿ ತಮ್ಮ ಪ್ರಸಾರ ಭಾಷಣದಲ್ಲಿ ಪ್ರದರ್ಶಿಸಿದ್ದರು.

ವಿಡಿಯೋ ನೋಡಲು ಈ ಚಿತ್ರ ಕ್ಲಿಕ್ ಮಾಡಿರಿ:


 ಇನ್ನೊಂದು ವಿಡಿಯೋ ನೋಡಲು ಇಲ್ಲಿ ಕ್ಲಿಕ್   ಮಾಡಿರಿ:

No comments:

Advertisement