Friday, November 6, 2020

ಉಗ್ರ ನಿಗ್ರಹ, ರಕ್ಷಣಾ ಸಹಕಾರ: ಭಾರತ- ಫಿಲಿಪೈನ್ಸ್ ಒಪ್ಪಂದ

 ಉಗ್ರ ನಿಗ್ರಹ, ರಕ್ಷಣಾ ಸಹಕಾರ: ಭಾರತ- ಫಿಲಿಪೈನ್ಸ್ ಒಪ್ಪಂದ

ನವದೆಹಲಿ: ವಿಶೇಷವಾಗಿ ಮಿಲಿಟರಿ ಉಪಕರಣಗಳ ತರಬೇತಿ ಮತ್ತು ಸಂಗ್ರಹಣೆಯಲ್ಲಿ ದ್ವಿಪಕ್ಷೀಯ ರಕ್ಷಣಾ ತೊಡಗಿಸಿಕೊಳ್ಳುವಿಕೆ ಮತ್ತು ಕಡಲ ಸಹಕಾರವನ್ನು ಹೆಚ್ಚಿಸಲು ಹಾಗೂ ಭಯೋತ್ಪಾದನೆಯನ್ನು ಎದುರಿಸುವ ಸಲುವಾಗಿ ಮಾಹಿತಿ ಹಂಚಿಕೆಯನ್ನು ಹೆಚ್ಚಿಸಲು ಭಾರತ ಮತ್ತು ಫಿಲಿಪೈನ್ಸ್ 2020 ನವೆಂಬರ್ 06ರ ಶುಕ್ರವಾರ ಒಪ್ಪಿಕೊಂಡವು.

ದ್ವಿಪಕ್ಷೀಯ ಸಹಕಾರ ಕುರಿತ ಜಂಟಿ ವರ್ಚುಯಲ್ ಸಭೆಯ ಸಂದರ್ಭದಲ್ಲಿ ಕುರಿತ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ಫಿಲಿಪ್ಪೈನ್ಸಿನ ವಿದೇಶಾಂಗ ವ್ಯವಹಾರಗಲ ಇಲಾಖೆಯ ಕಿರಿಯ ಕಾರ್ಯದರ್ಶಿ ತಿಯೊಡೊರೊ ಲೋಕ್ಸಿನ್ ಅವರು ಸಭೆಯ ನೇತೃತ್ವ ವಹಿಸಿದ್ದರು.

ಉಭಯ ರಾಷ್ಟ್ರಗಳ ಮಧ್ಯೆ ಗಣನೀಯ ಗಣನೀಯ ರಕ್ಷಣಾ ಸಹಕಾರ ಇದೆ. ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿ ಪಡಿಸಿರುವ  ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯನ್ನು ಪಡೆಯುವಲ್ಲಿ ಫಿಲಿಪ್ಪೈನ್ಸ ಕೂಡಾ ಮುಂಚೂಣಿಯಲ್ಲಿದೆ. ಕ್ಷಿಪಣಿ ವ್ಯವಸ್ಥೆಗೆ ಸಂಬಂಧಿಸಿದಂತೆ ವ್ಯವಹಾರವನ್ನು ವರ್ಷ ಅಂತಿಮಗೊಳಿಸಬೇಕಾಗಿತ್ತು. ಆದರೆ ಕೋವಿಡ್-೧೯ ಬಿಕ್ಕಟ್ಟು ಯತ್ನಕ್ಕೆ ಅಡ್ಡಿ ಉಂಟು ಮಾಡಿತು ಎಂದು ಸುದ್ದಿ ಮೂಲಗಳು ತಿಳಿಸಿವೆ.

ರಕ್ಷಣಾ ತೊಡಗಿಸಿಕೊಳ್ಳುವಿಕೆಯನ್ನು ಇನ್ನಷ್ಟು ಬಲ ಪಡಿಸಲು ಮತ್ತು ನೌಕಾ ಸಹಕಾರವನ್ನು ವಿಶೇಷವಾಗಿ ಸೇನಾ ತರಬೇತಿ ಮತ್ತು ಶಿಕ್ಷಣ, ನಿರ್ಮಾಣ ಸಾಮರ್ಥ್ಯ, ನಿಯಮಿತ ಸದ್ಭಾವನಾ ಭೇಟಿಗಳು ಮತ್ತು ರಕ್ಷಣಾ ಉಪಕರಣಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಪರಸ್ಪರ ಸಹಕಾರ ಹೆಚ್ಚಿಸಿಕೊಳ್ಳಲು ಉಭಯ ಕಡೆಗಳೂ ಒಪ್ಪಿದವು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸಂಬಂಧ ಪಟ್ಟ ಸಂಸ್ಥೆಗಳ ಮಾಹಿತಿ ವಿನಿಮಯ ಹಾಗೂ ವಿಶೇಷ ತರಬೇತಿ ಅಗತ್ಯವನ್ನು ಪೂರೈಸುವ ಮೂಲಕ ಭಯೋತ್ಪಾದನೆ ದಮನದಲ್ಲಿ ಸಹಕಾರ ಹೆಚ್ಚಿಸಲೂ ಉಭಯರೂ ಒಪ್ಪಿದರು ಎಂದು ಹೇಳಿಕೆ ತಿಳಿಸಿದೆ.

ಲೋಕ್ಸಿನ್ ಜೊತೆಗಿನತಮ್ಮ ಭೇಟಿಯು ವಾಣಿಜ್ಯ, ಹೂಡಿಕೆ, ರಕ್ಷಣೆ, ಶಿಕ್ಷಣ, ಐಸಿಟಿ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಸಹಕಾರ ವರ್ಧನೆ ಬಗ್ಗೆ ಬೆಳಕು ಚೆಲ್ಲಿತು ಎಂದು ಜೈಶಂಕರ್ ಟ್ವೀಟ್ ಮಾಡಿದರು.

"ಹಿಂದೂಸಾಗರ-ಶಾಂತ ಸಾಗರ (ಇಂಡೋ-ಪೆಸಿಫಿಕ್) ಉಪಕ್ರಮ ಮತ್ತು ಇಂಡೋ-ಪೆಸಿಫಿಕ್ ಮೇಲಿನ ಆಸಿಯಾನ್ ದೃಷ್ಟಿಕೋನಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಒಮ್ಮತ ಮೂಡಿತು ಎಂದು ಭಾರತೀಯ ತಂಡವು ಒತ್ತಿಹೇಳಿತು.

ಸಭೆಯಲ್ಲಿ, ಉಭಯ ಪಕ್ಷಗಳು ದ್ವಿಪಕ್ಷೀಯ ಸಂಬಂಧಗಳಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಪರಿಶೀಲಿಸಿದವು ಮತ್ತು ತಮ್ಮ ತೊಡಗಿಸಿಕೊಳ್ಳುವಿಕೆಯ ಭವಿಷ್ಯದ ಪಥವನ್ನು ಚರ್ಚಿಸಿದವು. ಕೋಯಿಡ್ -೧೯ ಸಾಂಕ್ರಾಮಿಕ ರೋಗವನ್ನು ಪರಿಹರಿಸಲು ಆರೋಗ್ಯ ಕ್ಷೇತ್ರದಲ್ಲಿ, ಹಂಚಿಕೆಯ ಸವಾಲುಗಳ ಬಗ್ಗೆ ಸಹಕಾರವನ್ನು ಬಲಪಡಿಸಲು ಜೈಶಂಕರ್ ಮತ್ತು ಲೋಕ್ಸಿನ್ ಒಪ್ಪಿಕೊಂಡರು.

ವ್ಯಾಪಾರ ಮತ್ತು ಹೂಡಿಕೆ ಸಂಪರ್ಕಗಳನ್ನು ವಿಸ್ತರಿಸಲು ಮತ್ತು ಕೃಷಿ, ಆರೋಗ್ಯ ಮತ್ತು ಔಷಧಗಳು, ಪ್ರವಾಸೋದ್ಯಮ, ಇಂಧನ, ಐಸಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಹಕಾರವನ್ನು ಬಲಪಡಿಸುವ ಕೆಲಸ ಮಾಡಲು ಅವರು ಒಪ್ಪಿದರು. ವ್ಯಾಪಾರ, ಪ್ರವಾಸೋದ್ಯಮ ಮತ್ತು ವಿದ್ಯಾರ್ಥಿ ವಿನಿಮಯ ಕೇಂದ್ರಗಳನ್ನು ವಿಸ್ತರಿಸಲು, ಎರಡೂ ಕಡೆಯವರು ಸರಳೀಕೃತ ವೀಸಾ ಆಡಳಿತದಲ್ಲಿ ಕೆಲಸ ಮಾಡಲು ಒಪ್ಪಿದರು.

ಜೈಶಂಕರ್ ಅವರು ಭಾರತೀಯ ವಿದ್ಯಾರ್ಥಿಗಳಿಗೆ ಫಿಲಿಪೈನ್ಸ್ ಒದಗಿಸಿದ ಶೈಕ್ಷಣಿಕ ಅವಕಾಶಗಳನ್ನು ಶ್ಲಾಘಿಸಿದರು ಮತ್ತು ಫಿಲಿಪೈನ್ಸ್‌ನಲ್ಲಿ ಅಭಿವೃದ್ಧಿ ಮತ್ತು ಸಾಮರ್ಥ್ಯ ವೃದ್ಧಿಗೆ ಭಾರತದ ಸಹಾಯವನ್ನು ಪುನರುಚ್ಚರಿಸಿದರು. ಐಟಿಇಸಿ ಮತ್ತು -ಐಟಿಇಸಿ ಉಪಕ್ರಮಗಳನ್ನು ಬಳಸಿಕೊಳ್ಳಲು ಫಿಲಿಪಿನೋ ವಿದ್ಯಾರ್ಥಿಗಳು, ವಿದ್ವಾಂಸರು ಮತ್ತು ಶಿಕ್ಷಣ ತಜ್ಞರನ್ನು ಅವರು ಆಹ್ವಾನಿಸಿದರು ಮತ್ತು ಐಐಟಿಗಳಲ್ಲಿ ಆಸಿಯಾನ್ ವಿದ್ಯಾರ್ಥಿಗಳಿಗೆ ನೀಡಲಾಗುವ ಪಿಎಚ್‌ಡಿ ಫೆಲೋಶಿಪ್‌ಗಳನ್ನು ಬಳಸಿಕೊಳ್ಳುವಂತೆಯೂ ಸೂಚಿಸಿದರು.

No comments:

Advertisement