My Blog List

Thursday, April 9, 2020

ಮುಂಬೈ, ದೆಹಲಿ, ಉತ್ತರಪ್ರದೇಶದಲ್ಲಿ 144 ಹಾಟ್ ಸ್ಪಾಟ್

ಮುಂಬೈ,  ದೆಹಲಿ, ಉತ್ತರಪ್ರದೇಶದಲ್ಲಿ 144 ಹಾಟ್ ಸ್ಪಾಟ್
ಕರ್ಫ್ಯೂ ಮಾದರಿ ನಿರ್ಬಂಧ ಜಾರಿ
ನವದೆಹಲಿ/ ಮುಂಬೈ:  ಮುಂಬೈಯಲ್ಲಿ ೨೧ ಸ್ಥಳಗಳನ್ನು ಕೊರೋನಾವೈರಸ್ (ಕೋವಿಡ್-೧೯) ಹಾಟ್ ಸ್ಪಾಟ್ಗಳು ಎಂಬುದಾಗಿ ಗುರುತಿಸಲಾಗಿದ್ದು, ರೋಗ ಹರಡದಂತೆ ತಡೆಯುವ ಸಲುವಾಗಿ ತತ್ ಕ್ಷಣದಿಂದಲೇ ಕರ್ಫ್ಯೂ ಮಾದರಿ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ ಎಂದು ಮಹಾರಾಷ್ಟ್ರದ ಸಚಿವರೊಬ್ಬರು 2020 ಏಪ್ರಿಲ್ 09ರ ಗುರುವಾರ ತಿಳಿಸಿದರು.

ಉತ್ತರಪ್ರದೇಶ ಮತ್ತು ದೆಹಲಿ ಇಂತಹುದೇ ಕ್ರಮ ಕೈಗೊಂಡ ಬಳಿಕ ಮಹಾರಾಷ್ಟ್ರವೂ ಮುಂಬೈಯಲ್ಲಿ ಇದೇ ಮಾದರಿ ಕ್ರಮ ಕೈಗೊಂಡಿತು.

ಕಟ್ಟು ನಿಟ್ಟಿನ ನಿರ್ಬಂಧಗಳು ತತ್ ಕ್ಷಣದಿಂದಲೇ ಜಾರಿಯಾಗಲಿದ್ದು, ಮುಂದಿನ ಆದೇಶದವರೆಗೂ ಮುಂದುವರೆಯಲಿವೆ. ಹಾಟ್ ಸ್ಪಾಟ್ ಗಳಲ್ಲಿ ಯಾರಿಗೂ ಮನೆಯಿಂದ ಹೊರಕ್ಕೆ ಬರಲು ಅವಕಾಶವಿಲ್ಲ. ಅಗತ್ಯ ವಸ್ತುಗಳನ್ನು ಮನೆಗೇ ವಿತರಿಸಲಾಗುವುದು, ಔಷಧ ಅಂಗಡಿಗಳು ಮಾತ್ರವೇ ತೆರೆದಿರುತ್ತವೆ ಎಂದು ರಾಜ್ಯ ಸಚಿವ ಸಂಪುಟ ನಿರ್ಧರಿಸಿತು.
ದೆಹಲಿಯ ೨೩ ರೋಗ ಹತೋಟಿ ವಲಯಗಳಲ್ಲಿ ಮತ್ತು ಉತ್ತರ ಪ್ರದೇಶದ ೧೦೦ಕ್ಕೂ ಹೆಚ್ಚು ಹಾಟ್ ಸ್ಪಾಟ್ಗಳಲ್ಲಿ ಔಷಧದ ಅಂಗಡಿಗಳಿಗೂ ತೆರೆಯಲು ಅವಕಾಶವಿಲ್ಲ. ಆರೋಗ್ಯ ರಕ್ಷಣಾ ಸಿಬ್ಬಂದಿ ಮತ್ತು ವೈದ್ಯರಂತಹ ಮುಂಚೂಣಿ ಕಾರ್ಯಕರ್ತರಿಗೆ ಮಾತ್ರವೇ ಮನೆಗಳಿಂದ ಹೊರಕ್ಕೆ ಬರಲು ಅವಕಾಶ ನೀಡಲಾಯಿತು.

No comments:

Advertisement