My Blog List

Friday, April 24, 2020

ಕೊರೋನಾವೈರಸ್ ಸೋಂಕು ದುಪ್ಪಟ್ಟು ಈಗ 3.5 ಅಲ್ಲ 10 ದಿನಕ್ಕೊಮ್ಮೆ

ಭಾರತ: ಕೊರೋನಾ ಸೋಂಕು ದುಪ್ಪಟ್ಟು ಈಗ 3.5 ಅಲ್ಲ 10 ದಿನಕ್ಕೊಮ್ಮೆ, ಪ್ರಕರಣ ೨೩,೪೫೨,  ಸಾವಿನ ಸಂಖ್ಯೆ ೭೨೩
ನವದೆಹಲಿ: ರಾಷ್ಟ್ರವ್ಯಾಪಿ ದಿಗ್ಬಂಧನದ (ಲಾಕ್ ಡೌನ್) ಮೂಲಕ ದೇಶದಲ್ಲಿ ಕೊರೋನಾವೈರಸ್ ಸೋಂಕು ಹರಡುವಿಕೆಯನ್ನು ಕಡಿಮೆಗೊಳಿಸುವಲ್ಲಿ ಮತ್ತು ದುಪ್ಪಟ್ಟು ಅವಧಿಯನ್ನು ಹೆಚ್ಚಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಈಗ ಸೋಂಕು . ದಿನಗಳಿಗೊಮ್ಮೆ ದುಪ್ಪಟ್ಟುಗೊಳ್ಳುವ ಬದಲಿಗೆ ೧೦ ದಿನಕ್ಕೊಮ್ಮೆ ದುಪ್ಪಟ್ಟಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ 2020 ಏಪ್ರಿಲ್ 24ರ ಶುಕ್ರವಾರ  ಪ್ರಕಟಿಸಿತು.

ದೇಶಾದ್ಯಂತ ಕಳೆದ  ,೭೫೨ ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ ೨೩,೪೫೨ಕ್ಕೆ ಏರಿದೆ. ೩೭ ಹೊಸ ಸಾವಿನ ಪ್ರಕರಣಗಳೊಂದಿಗೆ ಸಾವಿನ ಸಂಖ್ಯೆ ೭೨೩ಕ್ಕೆ ಏರಿದೆ. ಸೋಂಕಿನಿಂದ ಚೇತರಿಕೆಯ ಪ್ರಮಾಣವು ಶೇಕಡಾ ೨೦.೫೭ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ನುಡಿದರು.

ಕಳೆದ ೨೮ ದಿನಗಳಲ್ಲಿ ೧೫ ಜಿಲ್ಲೆಗಳು ಯಾವುದೇ ಹೊಸ ಪ್ರಕರಣವನ್ನು ಕಂಡಿಲ್ಲ. ಈವರೆಗೆ ದೇಶದ ೮೦ ಜಿಲ್ಲೆಗಳಲ್ಲಿ ಕಳೆದ ೧೪ ದಿನಗಳಿಂದ ಒಂದೇ ಒಂದು ಹೊಸ ಪ್ರಕರಣ ವರದಿಯಾಗಿಲ್ಲ ಎಂದು ಅವರು ಹೇಳಿದರು.

ರಾಷ್ಟವನ್ನು ಅಮೆರಿಕ ಅಥವಾ ಯುರೋಪಿನಂತಹ ಸ್ಥಿತಿಯಿಂದ ಪಾರುಮಾಡಲು ಸಾಮಾಜಿಕ, ಆರ್ಥಿಕ ಚಟುವಟಿಕೆಗಳನ್ನು ಕನಿಷ್ಠಗೊಳಿಸಿದ ರಾಷ್ಟ್ರವ್ಯಾಪಿ ಲಾಕ್ ಡೌನ್ ಅತ್ಯಗತ್ಯವಾಗಿತ್ತು ಎಂದು ತಜ್ಞರು ಶುಕ್ರವಾರ ಅಭಿಪ್ರಾಯಪಟ್ಟರು.

ಭಾರತವು ಸಕಾಲದಲ್ಲಿ ರಾಷ್ಟ್ರವ್ಯಾಪಿ ದಿಗ್ಬಂಧನದ ನಿರ್ಧಾರವನ್ನು ಕೈಗೊಳ್ಳದೇ ಇರುತ್ತಿದ್ದರೆ ಪ್ರಸ್ತುತ ೨೩,೦೦೦ದ ಸನಿಹದಲ್ಲಿ ಇರುವ ಕೋವಿಡ್-೧೯ ಪ್ರಕರಣಗಳು ೭೩,೦೦೦ಕ್ಕೆ ಏರಿರುತ್ತಿದ್ದವು. ಲಾಕ್ ಡೌನ್ ಕಾರಣದಿಂದ ಕೋವಿಡ್-೧೯ ಪ್ರಕರಣಗಳ ದುಪ್ಪಟ್ಟು ವೇಗ ತಗ್ಗಿತು ಎಂದು ನಮ್ಮ ವಿಶ್ಲೇಷಣೆ ತೋರಿಸಿದೆ ಎಮದು ನೀತಿ ಆಯೋಗದ ಸದಸ್ಯ ಹಾಗೂ ಎಂಪವರ್ಡ್ ಗ್ರೂಪ್ ೧ರ ಅಧ್ಯಕ್ಷ ಡಾ. ವಿ.ಕೆ.ಪೌಲ್ ಹೇಳಿದರು.

ಮಧ್ಯೆ, ಕೋವಿಡ್-೧೯ನ್ನು ಕ್ಲಿನಿಕ್ನಲ್ಲಿ ನಿಭಾಯಿಸಲು ಮತ್ತು ಪೂರ್ವಭಾವಿಯಾಗಿ ತಡೆಯುವ ಸಲುವಾಗಿ ದೇಶೀಯ ಪರ್ಯಾಯ ಔಷಧ ವ್ಯವಸ್ಥೆಯ ಪಾತ್ರದ ಬಗ್ಗೆ ಮೌಲ್ಯ ಮಾಪನ ಮಾಡುವ ಸಲುವಾಗಿ ಅಲ್ಪಾವಧಿಯ ಸಂಶೋಧನಾ ಪ್ರಸ್ತಾವಗಳನ್ನು ನೀಡುವಂತೆ ಆಯುಷ್ ಸಚಿವಾಲಯವು ಆಹ್ವಾನ ನೀಡಿದೆ. ತನ್ನ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಆಸ್ಪತ್ರೆಗಳು ಮತ್ತು ಸಂಸ್ಥೆಗಳಿಗೆ ಅದು ಕರೆ ನೀಡಿದೆ.

ಕೋವಿಡ್-೧೯ರ ವಿರುದ್ಧ ಕಣ್ಗಾವಲು ನಮ್ಮ ಪ್ರಾಥಮಿಕ ಆಯುಧ. .೪೫ ಲಕ್ಷ ಮಂದಿ ನಮ್ಮ ಕಣ್ಗಾವಲು ವ್ಯವಸ್ಥೆಯಲ್ಲಿ ಇದ್ದಾರೆ ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಡಾ. ಸುರ್ಜೀತ್ ಸಿಂಗ್ ಹೇಳಿದರು.

ದೆಹಲಿಯ ಜಹಾಂಗೀರಪುರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕನಿಷ್ಠ ೧೪ ಮಂದಿ ವೈದ್ಯರು ಮತ್ತು ದಾದಿಯರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ರಾಜಧಾನಿಯಲ್ಲಿ ಸಮೂಹ ಸೋಂಕಿನ ಅತಿದೊಡ್ಡ ಪ್ರಕರಣ ಇದಾಗಿದೆ. ಇದರಿಂದಾಗಿ ರಾಜಧಾನಿಯಲ್ಲಿ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ ,೩೭೬ಕ್ಕೆ ಏರಿದ್ದರೆ, ಸಾವಿನ ಸಂಖ್ಯೆ ೫೦ಕ್ಕೆ ಏರಿದೆ.

ಮಧ್ಯೆ, ತಮಿಳುನಾಡು ಸರ್ಕಾರವು ಕೊರೋನಾವೈರಸ್ ಪ್ರಸಾರವನ್ನು ನಿಯಂತ್ರಿಸುವ ಸಲುವಾಗಿ ಪ್ರಮುಖ ಜಿಲ್ಲೆಗಳಲ್ಲಿ ದಿಗ್ಬಂಧನವನ್ನು ತೀವ್ರಗೊಳಿಸುವುದಾಗಿ ಶುಕ್ರವಾರ ಪ್ರಕಟಿಸಿತು.ಚೆನ್ನೈ, ಕೊಯಮತ್ತೂರು ಮತ್ತು ಮದುರೈಯಲ್ಲಿ ಮುಂದಿನ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಮುಂದುವರೆಯಲಿದೆ, ಸೇಲಂ ಮತ್ತು ತಿರುಪ್ಪೂರ್ ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧಗಳು ಮುಂದುವರೆಯಲಿವೆ.

ಕೇರಳದಲ್ಲಿ ತಿಂಗಳ ಮಗು ಸಾವು
ಕೇರಳದ ಕೋಯಿಕ್ಕೋಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಲಪ್ಪರಂನ ತಿಂಗಳ ಮಗು ಶುಕ್ರವಾರ ಸಾವನ್ನಪ್ಪಿತು. ಮಗುವಿಗೆ ಹೃದಯ ಸಮಸ್ಯೆಯಿತ್ತು. ಮಧ್ಯೆ ಕೇರಳದ ಕಾಸರಗೋಡಿನಲ್ಲಿ ಮೂವರಿಗೆ ಕೊರೋನಾ ಸೋಂಕು ತಗುಲಿದ ವರದಿ ಬಂದಿದೆ. ಇದೇ ವೇಳೆಗೆ ಸೋಂಕಿತ ಪೈಕಿ ೧೫ ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ೪೪೦ ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳು ೧೧೫ ಇದ್ದರೆ, ೩೨೨ ಪ್ರಕರಣಗಳಲ್ಲಿ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ

ಪ್ಲಾಸ್ಮಾ ಥೆರೆಪಿಗೆ ಕೇಂದ್ರ ಅಸ್ತು
ಮಹಾರಾಷ್ಟ್ರದಲ್ಲಿ ಕೋವಿಡ್ ರೋಗಿಗಳಿಗೆ ಪ್ಲಾಸ್ಮಾ ಥೆರೆಪಿ ಮೂಲಕ ಚಿಕಿತ್ಸೆ ನೀಡಲು ಮತ್ತು ಗುಂಪು ಪರೀಕ್ಷೆಗಳನ್ನು ನಡೆಸಲು ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದ್ದು ಮುಂಬೈ ಮತ್ತು ಕೊಲ್ಲಾಪುರದಲ್ಲಿ ಇದನ್ನು ಬಳಸಲಿರುವ ಮೊದಲ ಸ್ಥಳಗಳಾಗಲಿವೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಒಬ್ಬ ಹಿರಿಯ ನಾಗರಿಕ ಸೇರಿದಂತೆ ಇನ್ನಿಬ್ಬರು ಕೊರೋನಾವೈರಸ್ ಪಾಸಿಟಿವ್ ರೋಗಗಳು ಮೃತರಾಗಿದ್ದು ಸಾವಿನ ಸಂಖ್ಯೆ ೧೧ಕ್ಕೆ ಏರಿದೆ. ಕುಟುಂಬದ ಮಂದಿ ಸದಸ್ಯರಿಗೂ ಸೋಂಕು ತಗುಲಿವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ಹೇಳಿದರು.

ಮುಂಬೈಯಲ್ಲಿ ಕಠಿಣ ಕೋವಿಡ್-೧೯ ಲಾಕ್ ಡೌನ್ ಜಾರಿಗೊಳಿಸಿರುವ ಮುಂಬೈ ಪೊಲೀಸರು ಕಳೆದ ತಿಂಗಳು ಕರ್ಫ್ಯೂ ಜಾರಿಗೊಳಿಸಿದಂದಿನಿಂದ ಈವರೆಗೆ ,೯೫೩ ಉಲ್ಲಂಘನೆ ಅಪರಾಧಗಳಿಗೆ ಸಂಬಂಧಿಸಿದಂತೆ ,೫೮೩ ಮಂದಿಯ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮಹಾರಾಷ್ಟ್ರದ ಮುಂಬೈಯಲ್ಲಿ ೪೭೮ ಹೊಸ ಪ್ರಕರಣಗಳೊಂದಿಗೆ ಒಟ್ಟು ಪ್ರಕಣಗಳ ಸಂಖ್ಯೆ ಗುರುವಾರ ೪೦೦೦ಕ್ಕೆ ಏರಿತ್ತು. ರಾಜ್ಯದಲ್ಲಿ ೭೭೮ ಹೊಸ ಪ್ರಕರಣಗೊಂದಿಗೆ ಒಟ್ಟುಪ್ರಕರಣಗಳ ಸಂಖ್ಯೆ ,೪೨೭ಕ್ಕೆ ಏರಿದೆ.

ಐಎಂಸಿಟಿ ವರದಿ
ಗೃಹ ಸಚಿವಾಲಯವು ರಾಜ್ಯಗಳಿಗೆ ಕಳುಹಿಸುವ ಸಲುವಾಗಿ ಅಂತರ ಸಚಿವಾಲಯ ಕೇಂದ್ರೀಯ ತಂಡಗಳನ್ನು (ಐಎಂಸಿಟಿ) ರಚಿಸಿದ್ದು ಅವುಗಳನ್ನು ಅಹ್ಮದಾಬಾದ್, ಸೂರತ್, ಹೈದರಾಬಾದ್ ಮತ್ತು ಚೆನ್ನೈಗಳಿಗೂ ಕಳುಹಿಸಲಾಗುವುದು ಎಂದು ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಶ್ರೀವಾಸ್ತವ ಹೇಳಿದರು.

ಇಂದೋರಿನ ೧೭೧ ಕಂಟೈನ್ ಮೆಂಟ್ ವಲಯಗಳ ಪೈಕಿ ೨೦ ವಲಯಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಂತರ್ ಸಚಿವಾಲಯ ಕೇಂದ್ರೀಯ ತಂಡ (ಐಎಂಸಿಟಿ) ವರದಿ ಕೊಟ್ಟಿದ್ದರೆ, ಮುಂಬೈಯ ಧಾರಾವಿಯಲ್ಲಿ ಸಂಚಾರಿ ಶೌಚಾಲಯಗಳ ಸಂಖ್ಯೆ ಹೆಚ್ಚಿಸುವಂತೆ ಐಎಂಸಿಟಿ ಸಲಹೆ ಮಾಡಿದೆ.
ಮುಂಬೈಯಲ್ಲಿ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸುವಂತೆಯೂ ತಂಡ ಸೂಚಿಸಿದೆ.

ಧಾರಾವಿಯಲ್ಲಿ ಸುಮಾರು ೨೦೦೦ ಮಂದಿಗೆ ಸಾಂಸ್ಥಿಕ ಕ್ವಾರಂಟೈನ್ ಅಗತ್ಯ ಇದೆ ಎಂದು ಪುಣ್ಯ ಶ್ರೀವಾಸ್ತವ ಹೇಳಿದರು.

ಗ್ರಾಮ ಪಂಚಾಯತುಗಳ ಜೊತೆ ಪ್ರಧಾನಿ ಕಾನ್ಫರೆನ್ಸ್
ಪ್ರಧಾನಿ ನರೇಂದ್ರ ಮೋದಿ ಅವರು ಪಂಚಾಯತ್ ರಾಜ್ ದಿನದ ಅಂಗವಾಘಿ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದ ಗ್ರಾಮ ಪಂಚಾಯತುಗಳನ್ನು ಉದ್ದೇಶಿಸಿ ಮಾತನಾಡಿದರು.

ಕೊರೋನಾವೈರಸ್ ಬಿಕ್ಕಟ್ಟಿನ ಅತಿದೊಡ್ಡ ಪಾಠ ಸ್ವಾವಲಂಬನೆ ಎಂದು ಅವರು ಹೇಳಿದರು.

ಕೋವಿಡ್ ನಮಗೆ ಹೊಸ ಸಮಸ್ಯೆಗಳನ್ನು ಸೃಷ್ಟಿಸಿದೆ. ನಾವು ಸಮಸ್ಯೆಗಳನ್ನು ಎಂದೂ ಕಲ್ಪಿಸಿರಲಿಲ್ಲ, ಆದರೆ ಬಿಕ್ಕಟ್ಟು ನಮಗೆ ಹೊಸ ಪಾಠಗಳನ್ನೂ ಕಲಿಸಿದೆ. ಬಿಕ್ಕಟ್ಟು ನಮಗೆ ಕಲಿಸಿದ ಅತಿದೊಡ್ಡ ಪಾಠ ನಾವು ಸ್ವಾವಲಂಬಿಗಳಾಗಬೇಕು ಎಂಬುದು. ಹೊಸ  ದಾರಿಯತ್ತ ಬಿಕ್ಕಟ್ಟು ನಮಗೆ ತೋರಿಸಿದೆ. ಎಲ್ಲ ಗ್ರಾಮಗಳೂ ಸ್ವಾವಲಂಬಿಗಳೂ, ಸ್ವಯಂ ಸುಸ್ಥಿರವೂ ಆಗಬೇಕುಎಂದು ಪ್ರಧಾನಿ ನುಡಿದರು.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೨೭,೫೯,೮೯೨, ಸಾವು ,೯೩,೧೪೫
ಚೇತರಿಸಿಕೊಂಡವರು- ,೬೨,೧೨೮
ಅಮೆರಿಕ ಸೋಂಕಿತರು ,೮೮,೮೮೧, ಸಾವು ೫೦,೩೬೯
ಸ್ಪೇನ್ ಸೋಂಕಿತರು ,೧೯,೭೬೪, ಸಾವು ೨೨,೫೨೪
ಇಟಲಿ ಸೋಂಕಿತರು ,೮೯,೯೭೩,  ಸಾವು ೨೫,೫೪೯
ಜರ್ಮನಿ ಸೋಂಕಿತರು ,೫೩,೫೮೪, ಸಾವು ,೫೭೭
ಚೀನಾ ಸೋಂಕಿತರು ೮೨,೮೦೪, ಸಾವು ,೬೩೨
ಇಂಗ್ಲೆಂಡ್ ಸೋಂಕಿತರು ,೪೩,೪೬೪, ಸಾವು ೧೯,೫೦೬
ಇಂಗ್ಲೆಂಡಿನಲಿ ೭೬೮, ಬೆಲ್ಜಿಯಂನಲ್ಲಿ ೧೮೯, ಸ್ಪೇನಿನಲ್ಲಿ ೩೬೭, ಅಮೆರಿಕದಲ್ಲಿ ೧೩೩, ನೆದರ್ ಲ್ಯಾಂಡ್ಸ್ನಲ್ಲಿ ೧೧೨, ಸ್ವೀಡನ್ನಲ್ಲಿ ೧೩೧, ಒಟ್ಟಾರೆ ವಿಶ್ವಾದ್ಯಂತ ,೨೨೬ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement