My Blog List

Friday, April 3, 2020

ದುರ್ವರ್ತನೆ: ಜಮಾತ್ ಸದಸ್ಯರ ವಿರುದ್ಧ ಎನ್‌ಎಸ್‌ಎ ಪ್ರಯೋಗಕ್ಕೆ ಯೋಗಿ ಆದೇಶ

ದುರ್ವರ್ತನೆ: ಜಮಾತ್ ಸದಸ್ಯರ ವಿರುದ್ಧ ಎನ್ಎಸ್ಎ ಪ್ರಯೋಗಕ್ಕೆ  ಯೋಗಿ ಆದೇಶ
ಲಕ್ನೋ: ಗಾಜಿಯಾಬಾದ್ ಆಸ್ಪತ್ರೆಯಲ್ಲಿ ದಾದಿಯರ (ನರ್ಸ್ಗಳ) ಜೊತೆಗೆ ಕೆಲವು ತಬ್ಲಿಘಿ ಜಮಾತ್ ಸದಸ್ಯರು ದುರ್ವರ್ತನೆ ತೋರಿದ ವರದಿಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಉತ್ತರ ಪ್ರದೇಶ ಸರ್ಕಾರವು ಕಠಿಣವಾದ ರಾಷ್ಟೀಯ ಭದ್ರತಾ ಕಾಯ್ದೆಯ (ಎನ್ ಎಸ್ ) ಅಡಿಯಲ್ಲಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು  2020 ಏಪ್ರಿಲ್ 03ರ ಶುಕ್ರವಾರ  ಆಜ್ಞಾಪಿಸಿತು.

ಇಂದೋರ್ ಮಾದರಿಯ ಘಟನೆ ರಾಜ್ಯದಲ್ಲಿ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಧಿಕಾರಿಗಳಿಗೆ ಆದೇಶ ನೀಡಿದ್ದಾದರು.
ನಗರದ ಆಸ್ಪತ್ರೆಗಳಿಗೆ ತಪಾಸಣೆ ಸಲುವಾಗಿ ಕರೆದೊಯ್ದಾಗ ಕೆಲವು ಜಮಾತ್ ಸದಸ್ಯರು ಪೊಲೀಸ್ ಸಿಬ್ಬಂದಿ ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ದುರ್ವರ್ತನೆ ತೋರಿದರು ಎಂದು ವರದಿಯಾದರೆ, ಇತರ ಕೆಲವರು ಆಸ್ಪತ್ರೆಗೆ ದಾಖಲಿಸಿದ ಬಳಿಕ ನರ್ಸಿಂಗ್ ಸಿಬ್ಬಂದಿಯೊಂದಿಗೆ ಕೆಟ್ಟದಾಗಿ ವರ್ತಿಸಿದರು ಎಂದು ಆಪಾದಿಸಲಾಗಿದೆ.

ಗಾಜಿಯಾಬಾದ್ ಅಧಿಕಾರಿಗಳು ಈವರೆಗೆ ಜಮಾತ್ಗೆ ಸಂಬಂಧಿಸಿದ ೧೫೬ ಜನರನ್ನು ಕ್ವಾರಂಟೈನ್ ಗೆ ಒಳಪಡಿಸಿದ್ದು, ಮಾರ್ಚ್ ತಿಂಗಳಲ್ಲಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಅಂತಹ ಪ್ರತಿನಿಧಿಗಳ ಜೊತೆ ಸಂಪರ್ಕಕ್ಕೆ ಬಂದ ಇತರರನ್ನೂ ಪತ್ತೆ ಹಚ್ಚಲು ಯತ್ನಿಸುತ್ತಿದ್ದಾರೆ.

ಸುಂದರದೀಪ ಕಾಲೇಜಿನಲ್ಲಿ ೯೦ ಮಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದ್ದು, ಮುರದ್ ಸೂರ್ ಆಸ್ಪತ್ರೆಯಲ್ಲಿ ೫೬ ಜನ, ಎಂಎಂಜಿ ಸರ್ಕಾರಿ ಆಸ್ಪತ್ರೆ ಹಾಗೂ ಸಂಜಯ್ ನಗರದ ಸಂಯೋಜಿತ ಆಸ್ಪತ್ರೆಯಲ್ಲಿ ತಲಾ ಐವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ಮುಖ್ಯ ವೈದ್ಯಾದಿಕಾರಿ (ಸಿಎಂಒ) ಎನ್ ಕೆ ಗುಪ್ತ ಹೇಳಿದರು.

ದುರ್ವರ್ತನೆಯ ಘಟನೆ ಎಂಎಂಜಿ ಆಸ್ಪತ್ರೆಯಿಂದ ವರದಿಯಾಗಿದೆ.

ತಬ್ಲಿಘಿ ಸದಸ್ಯರನ್ನು ದಾಖಲಿಸಲಾಗಿರುವ ಗಾಜಿಯಾಬಾದ್ ಆಸ್ಪತ್ರೆಗಳ ಕೋವಿಡ್ -೧೯ ವಾರ್ಡುಗಳಿಂದ ಎಲ್ಲ ಮಹಿಳಾ ಆರೋಗ್ಯ ಸಿಬ್ಬಂದಿ ಮತ್ತು ಮಹಿಳಾ ಪೊಲೀಸರನ್ನು ಹಿಂತೆಗೆದುಕೊಳ್ಳಬೇಕು ಎಂದು ಆದಿತ್ಯನಾಥ್ ಸರ್ಕಾರ ಶುಕ್ರವಾರ ಆದೇಶ ನೀಡಿದೆ.

ಜಮಾತ್ ಸದಸ್ಯರು ಇರುವ ವಾರ್ಡುಗಳಲ್ಲಿ ಪುರುಷ ಆರೋಗ್ಯ ಸಿಬ್ಬಂದಿ ಮತ್ತು ಪುರುಷ ಪೊಲೀಸರನ್ನು ಮಾತ್ರವೇ ನಿಯೋಜಿಸಬೇಕು ಎಂದು ಆದೇಶ ತಿಳಿಸಿದೆ.

ಸರ್ಕಾರಿ ಅಧಿಕಾರಿಗಳೊಂದಿಗೆ ದುರ್ವರ್ತನೆ ತೋರಿದ ಹಲವಾರು ಘಟನೆಗಳು ಕಳೆದ ಕೆಲವು ದಿನಗಳಿಂದ ಇಂದೋರಿನಿಂದ ವರದಿಯಾಗಿದೆ. ಇಬ್ಬರು ಮಹಿಳಾ ವೈದ್ಯರು ಸೇರಿದಂತೆ  ಹಲವು ಅಧಿಕಾರಿಗಳು ಕಣ್ಗಾವಲು ವೇಳೆಯಲ್ಲಿ ಕಲ್ಲಿನ ದಾಳಿಯಿಂದ ಗಾಯಗೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ರೈಲ್ವೇ ಐಸೋಲೇಷನ್ ಘಟಕದಲ್ಲಿ ಜಮಾತ್ ಸದಸ್ಯರು ಅನುಚಿತ ಬೇಡಿಕೆ ಮುಂದಿಟ್ಟು ಆರೋಗ್ಯ ಅಧಿಕಾರಿಗಳ ಮೇಲೆ ಉಗುಳಿದರೆಂದು ಆಪಾದಿಸಲಾದ ಪ್ರಕರಣ ವರದಿಯಾಗಿದೆ.

ಇಂದೋರ್ ಘಟನೆಗೆ ಸಂಬಂಧಿಸಿದಂತೆ ಜನರನ್ನು ಎನ್ ಎಸ್ ಅಡಿಯಲ್ಲಿ ಬಂಧಿಸಲಾಗಿದೆ.
ಬಿಹಾರಿನ ಮುಂಗೇರ್ನಲ್ಲಿ ಪೊಲೀಸ್ ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ಅವರು ಗಂಟಲ ದ್ರವದ ಮಾದರಿ ಸಂಗ್ರಹಕ್ಕಾಗಿ ಹೋಗಿದ್ದಾಗ ದಾಳಿ ನಡೆದಿದೆ.

ಮಹಾರಾಷ್ಟ್ರದ ಸೋಲಾಪುರದಲ್ಲಿ ವ್ಯಕ್ತಿಯೊಬ್ಬ ತಮ್ಮ ಪ್ರದೇಶದಿಂದ ದೆಹಲಿ ಸಮಾವೇಶಕ್ಕೆ ಹೋಗಿದ್ದ ತಬ್ಲಿಘಿ ಜಮಾತ್ ಸದಸ್ಯರ ಚಲನವಲನಗಳ ಬಗ್ಗೆ ಗ್ರಾಮದ ಅಧಿಕಾರಿಗಳಿಗೆ ತಿಳಿಸಿದ್ದಕ್ಕಾಗಿ ಹಲ್ಲೆಗೀಡಾಗಿದ್ದಾನೆ.

No comments:

Advertisement