Thursday, April 23, 2020

ದ.ಕ. ಜಿಲ್ಲೆಯಲ್ಲಿ ಕೊರೊನಾಗೆ ಎರಡನೇ ಬಲಿ

.. ಜಿಲ್ಲೆಯಲ್ಲಿ ಕೊರೊನಾಗೆ ಎರಡನೇ ಬಲಿ
ಬಂಟ್ವಾಳ ಕುಟುಂಬದ ಎರಡನೇ ಮಹಿಳೆಯ ಸಾವು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾವೈರಸ್ ಎರಡನೇ ಬಲಿ ಪಡೆದುಕೊಂಡಿದ್ದು ಕೊರೋನಾಸೋಂಕು ತಗುಲಿದ್ದ ವೃದ್ಧೆ 2020 ಏಪ್ರಿಲ್ 23ರ ಗುರುವಾರ ಸಾವನ್ನಪ್ಪಿದರು.
ಕೊರೊನಾವೈರಸ್ಸಿನಿಂದ ಜಿಲ್ಲೆಯಲ್ಲಿ ಸಾವನ್ನಪ್ಪಿರುವವರಿಬ್ಬರೂ ಬಂಟ್ವಾಳದ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಸೋಮವಾರದಂದು ಸೊಸೆ ಮೃತರಾಗಿದ್ದು, ಗುರುವಾರದಂದು ಅತ್ತೆ ಸಾವನ್ನಪ್ಪಿದರು.
ಬಂಟ್ವಾಳದಲ್ಲಿ ಹಿಂದೆ ಮೃvರಾಗಿದ್ದ್ದ ಮಹಿಳೆಯ ಅತ್ತೆಯಲ್ಲಿ ಗುರುವಾರ ಬೆಳಗ್ಗೆ ಸೋಂಕು ದೃಢಪಟ್ಟಿತ್ತು. ವೆನ್ಲಾಕ್ ಅಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ೭೫ರ ಹರೆಯದ ಮಹಿಳೆಯನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆ ಆಕೆ ಕೊನೆಯುಸಿರು ಎಳೆದರು ಎಂದು ಮೂಲಗಳು ತಿಳಿಸಿವೆ.

ಏಪ್ರಿಲ್ ೨೦ರಂದು ಬಂಟ್ವಾಳ ಮೂಲದ ಮಹಿಳೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಮೃತರಾಗಿದ್ದರು. ಬಳಿಕ ಆಕೆಗೆ ಕೊರೋನಾವೈರಸ್ ಅಂಟಿದ್ದು ಖಾತರಿಯಾಗಿತ್ತು.

ಕ್ವಾರಂಟೈನ್‌ಗೆ ಒಳಪಟ್ಟಿದ್ದ ಮಹಿಳೆಯ ಅತ್ತೆಯಲ್ಲೂ ಉಸಿರಾಟದ ತೀವ್ರ ತೊಂದರೆ ಕಾಣಿಸಿದಾಗ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದಕ್ಕೆ ಮುನ್ನವೇ ಅವರ ಗಂಟಲ ದ್ರವವನ್ನು ಪರೀಕ್ಷೆಗೆ ರವಾನಿಸಲಾಗಿತ್ತು. ಗುರುವಾರ ಅವರಿಗೂ ಕೊರೊನಾ ಸೋಂಕು ಅಂಟಿದ್ದು ಖಚಿತವಾಗಿತ್ತು.

ಬಗ್ಗೆ ಮಧ್ಯಾಹ್ನ ಆರೋಗ್ಯ ಇಲಾಖೆಗೆ ವರದಿ ತಲುಪಿತ್ತು. ಸಂಜೆ ಅವರು ಮೃತರಾದ ವರದಿ ಲಭ್ಯವಾಯಿತು.

ಮೃತ ಮಹಿಳೆಯ ಅತ್ತೆಯೂ ಮಾ.೧೮ರಿಂದ ಪಾರ್ಶ್ವವಾಯು ಖಾಯಿಲೆಗೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನಲೆ ಹಾಗೂ ಇವರ ಸೊಸೆ ಕೊರೊನಾದಿಂದ ಸಾವನ್ನಪ್ಪಿದ ಬಳಿಕ ಬುಧವಾರ ಇವರನ್ನು ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

No comments:

Advertisement