ಕೊರೋನಾ: ಭಾರತದಲ್ಲಿ 21,700 ಸೋಂಕು, 686 ಸಾವು
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆದೇಶದ ಮೇರೆಗೆ ದೇಶದಲ್ಲಿ ಎರಡನೇ ಅವಧಿಗೆ ರಾಷ್ಟ್ರವ್ಯಾಪಿ ದಿಗ್ಬಂಧನ
(ಲಾಕ್‌ಡೌನ್)
ವಿಸ್ತರಣೆಯಾಗಿದ್ದರೂ, ಕೊರೋನಾಸೋಂಕಿಗೆ ಬಲಿಯಾಗುತ್ತಿರುವರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಲೇ ಇದ್ದು,
ಕಳೆದ ೨೪ ಗಂಟೆಗಳಲ್ಲಿ ೧೪೦೯ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾದವು. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೨೧,೭೦೦ಕ್ಕೇರಿತು.
ದೇಶಾದ್ಯಂತ ಇದುವರೆಗೂ ೨೧,೭೦೦ ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ಇವುಗಳ ಪೈಕಿ ೧೬,೬೮೯ ಪ್ರಕರಣಗಳು ಸಕ್ರಿಯವಾಗಿದ್ದು,
೪,೩೨೪ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.ಸಾವಿನ ಸಂಖ್ಯೆ ೬೮೬ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ 2020 ಏಪ್ರಿಲ್ 23ರ ಗುರುವಾರ ಹೇಳಿದರು.
೧೨ ಜಿಲ್ಲೆಗಳಲ್ಲಿ ಕಳೆದ ೨೮ ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ.
ಈವರೆಗಿನ ಮಾಹಿತಿಯಂತೆ ೧೨ ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ.
೭೮ ಜಿಲ್ಲೆUಳಲ್ಲಿ
(೨೩ ರಾಜ್ಯಗಳು
/ ಕೇಂದ್ರಾಡಳಿತ ಪ್ರದೇಶಗಳು)
ಕಳೆದ ೧೪ ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂದು ಅಗರವಾಲ್ ನುಡಿದರು.
ಜಗತ್ತಿನಾದ್ಯಂತ ಕೊರೊನಾ ವೈರಸ್ ದಾಂಗುಡಿ ಮುಂದುವರೆದಿದೆ.
ಇಲ್ಲಿಯವರೆಗೆ ೧,೮೪,೧೮೬ ಜನ ಕೊರೋನಾಗೆ ಬಲಿಯಾಗಿದ್ದಾರೆ.
ಅಲ್ಲದೇ,
೨೬,೩೬,೯೮೯ ಜನರಿಗೆ ಸೋಂಕು ಅಂಟಿಕೊಂಡಿದೆ.
ವಿಶ್ವದ ಬಹುತೇಕ ದೇಶಗಳಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ.
ಸೋಂಕಿತ ರಾಷ್ಟ್ರಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿ ಇದೆ.
ಅಲ್ಲಿ ೮.೫೨ ಲಕ್ಷ ಜನರಿಗೆ ಸೋಂಕು ಕಾಣಿಸಿಕೊಂಡಿದೆ.
ಇದುವರೆಗೂ ಅಮೆರಿಕದಲ್ಲಿ ೪೭,೭೫೦ ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೨೬,೬೯,೦೬೨,
ಸಾವು ೧,೮೬,೩೨೬
ಚೇತರಿಸಿಕೊಂಡವರು- ೭,೩೧,೦೧೨
ಅಮೆರಿಕ ಸೋಂಕಿತರು ೮,೫೧,೩೨೨,
ಸಾವು ೪೭,೮೦೦
ಸ್ಪೇನ್ ಸೋಂಕಿತರು ೨,೧೩,೦೨೪,
ಸಾವು ೨೨,೧೫೭
ಇಟಲಿ ಸೋಂಕಿತರು ೧,೮೭,೩೨೭, ಸಾವು ೨೫,೦೮೫
ಜರ್ಮನಿ ಸೋಂಕಿತರು ೧,೫೧,೧೭೫,
ಸಾವು ೫,೩೫೪
ಚೀನಾ ಸೋಂಕಿತರು ೮೨,೭೯೮,
ಸಾವು ೪,೬೩೨
ಇಂಗ್ಲೆಂಡ್ ಸೋಂಕಿತರು ೧,೩೮,೦೭೮,
ಸಾವು ೧೮,೭೩೮
ಇಂಗ್ಲೆಂಡಿನಲ್ಲಿ
೬೩೮,
ಬೆಲ್ಜಿಯಂನಲ್ಲಿ ೨೨೮,
ಸ್ಪೇನಿನಲ್ಲಿ ೪೪೦,
ಅಮೆರಿಕದಲ್ಲಿ ೧೪೧,
ನೆದರ್ ಲ್ಯಾಂಡ್ಸ್‌ನಲ್ಲಿ ೧೨೩,
ಒಟ್ಟಾರೆ ವಿಶ್ವಾದ್ಯಂತ ೨,೨೬೦ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.
No comments:
Post a Comment