My Blog List

Wednesday, April 1, 2020

ಹೋಮ್ ಕ್ವಾರಂಟೈನ್ ನಿಗಾಕ್ಕೆ ಮೊಬೈಲ್ ಫೋನ್ ಟ್ರ್ಯಾಕ್

ಹೋಮ್ ಕ್ವಾರಂಟೈನ್ ನಿಗಾಕ್ಕೆ  ಮೊಬೈಲ್ ಫೋನ್ ಟ್ರ್ಯಾಕ್
ನವದೆಹಲಿ: ಕೊರೋನಾವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹೋಮ್ ಕ್ವಾರಂಟೈನ್ ಪಾಲಿಸುವಂತೆ ಸೂಚನೆ ನೀಡಲಾದ ವ್ಯಕ್ತಿಗಳು ನಿಯಮ ಪಾಲಿಸದೆ ಮನೆಯಿಂದ ಹೊರಗೆ ಬಂದಿದ್ದಾರೆಯೇ ಅಥವಾ ಇತರರ ಜೊತೆ ಬೆರೆತಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಅಂತಹ ವ್ಯಕ್ತಿಗಳ ಮೊಬೈಲ್ ಫೋನುಗಳನ್ನು ಟ್ರ್ಯಾಕ್ ಮಾಡುವಂತೆ ದೆಹಲಿ ಪೊಲೀಸರಿಗೆ ಆದೇಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್  2020 ಏಪ್ರಿಲ್ 01ರ ಬುಧವಾರ ತಿಳಿಸಿದರು.

ಸರ್ಕಾರವು ಈಗಾಗಲೇ ೨೫,೦೦೦ ಮೊಬೈಲ್ ಫೋನ್ ನಂಬರುಗಳನ್ನು  ಬೆನ್ನು ಹತ್ತುವ ಸಲುವಾಗಿ ಪೊಲೀಸರಿಗೆ ನೀಡಿದೆ ಎಂದು ಅವರು ಹೇಳಿದರು.

ಕೊರೋನಾವೈರಸ್ ರೋಗವು ಸಮುದಾಯ ವರ್ಗಾವಣೆಯ ಹಂತ ತಲುಪಿರುವುದನ್ನು ಸೂಚಿಸುವ ಯಾವುದೇ ನಿದರ್ಶನ ಇಲ್ಲ ಎಂದು ನುಡಿದ ಮುಖ್ಯಮಂತ್ರಿ ಮೊಬೈಲ್ ಫೋನ್ ಮೂಲಕ ಟ್ರ್ಯಾಕ್ ಮಾಡುವುದರಿಂದ ಹೋಮ್ ಕ್ವಾರಂಟೈನ್ ಸೂಚನೆ ಉಲ್ಲಂಘಿಸಿದರೆ ಗೊತ್ತಾಗುವುದರ ಜೊತೆಗೆ, ಅವರ ಸಂಭಾವ್ಯ ಸಂಪರ್ಕಗಳನ್ನು ಗುರುತಿಸಲೂ ಸಾಧ್ಯವಾಗುತ್ತದೆ ಎಂದರು.

ನಾವು ೧೧,೦೦೦ ಫೋನ್ ನಂಬರುಗಳನ್ನು ಮಂಗಳವಾರ ದೆಹಲಿ ಪೊಲೀಸರಿಗೆ ನೀಡಿದ್ದೆವು. ಬುಧವಾರ ೧೪,೦೦೦ ಫೋನ್ ನಂಬರುಗಳನ್ನು ನೀಡಲಾಗಿದೆಎಂದು ಮುಖ್ಯಮಂತ್ರಿ ಹೇಳಿದರು.
ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಜೊತೆಗಿನ ತಮ್ಮ ಭೇಟಿಯ ವೇಳೆಯಲ್ಲಿ ಸ್ಮಾರ್ಟ್ ಫೋನ್ ಗಳನ್ನು ಬಳಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತುಎಂದು ಕೇಜ್ರಿವಾಲ್ ಹೇಳಿದರು.

No comments:

Advertisement