My Blog List

Saturday, April 25, 2020

ದೆಹಲಿ ಪ್ರವೇಶಕ್ಕೆ ಇನ್ನು ಇರಬೇಕು ‘ಆರೋಗ್ಯ ಸೇತು’ಆಪ್.. !

ದೆಹಲಿ ಪ್ರವೇಶಕ್ಕೆ ಇನ್ನು ಇರಬೇಕು ಆರೋಗ್ಯ ಸೇತುಆಪ್.. !
ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಸಭೆಯಲ್ಲಿ ಶಿಫಾರಸು
ನವದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿ ಪ್ರವೇಶಿಸಬೇಕಿದ್ದರೆ ಕೇಂದ್ರ ಸರ್ಕಾರವು ಆರಂಭಿಸಿರುವ ಆರೋಗ್ಯ ಸೇತು ಆಪ್ನ್ನು  ನಾಗರಿಕರು ತಮ್ಮ ಮೊಬೈಲ್ಗಳಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂಬ ಪ್ರಬಲ ಶಿಫಾರಸನ್ನು ಜಾರಿಗೊಳಿಸುವ ಬಗ್ಗೆ ದೆಹಲಿ ಸರ್ಕಾರ ಪರಿಶೀಲಿಸುತ್ತಿದೆ.

ಕೋವಿಡ್-೧೯ ಸಾಂಕ್ರಾಮಿಕ ಹರಡುತ್ತಿರುವ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು 2020 ಏಪ್ರಿಲ್ 25ರ   ಶನಿವಾರ ನಡೆಸಿದ ಪರಿಶೀಲನಾ ಸಭೆಯಲ್ಲಿ ಶಿಫಾರಸು ಮಾಡಲಾಯಿತು.

ಆರೋಗ್ಯ ಸೇತು ಆಪ್ನ್ನು ಅಳವಡಿಸಿಕೊಂಡ ಬಳಿಕ ಮಾತ್ರವೇ ರಾಜಧಾನಿ ಪ್ರವೇಶಿಲು ಜನರಿಗೆ ಅವಕಾಶ ನೀಡಬೇಕು ಎಂದು ನಗರ ಸರ್ಕಾರಕ್ಕೆ ಬಲವಾದ ಶಿಫಾರಸನ್ನು ಮಾಡುವಂತೆ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಸುರ್ಜಿತ್ ಕುಮಾರ್ ಸಿಂಗ್ ಶಿಫಾರಸು ಮಾಡಿದರು.

ರಾಜಧಾನಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗುವ ಜನರ ಸಂಖ್ಯೆಯನ್ನು ಹೆಚ್ಚಿಸುವಂತೆ ಮತ್ತು ಪುನರಾವರ್ತಿತ ಕ್ಷಿಪ್ರ ಪರೀಕ್ಷೆಗಳನ್ನು ೩ನೇ, ೫ನೇ ಮತ್ತು ೧೪ನೇ ದಿನ ನಡೆಸುವ ಮೂಲಕ ತಪ್ಪು ವರದಿಯ ಕಾರಣದಿಂದ ಕೋವಿಡ್ -೧೯ ಪಾಸಿಟಿವ್ ವ್ಯಕ್ತಿ ಉಳಿಯದಂತೆ ನೋಡಿಕೊಳ್ಳಬೇಕು ಎಂದೂ ಡಾ. ಸಿಂಗ್ ನುಡಿದರು.

ಸಭೆಯಲ್ಲಿಯೇ ಲೆಫ್ಟಿನೆಂಟ್ ಗವರ್ನರ್ ಬೈಜಾಲ್ ಅವರು ಸೂಕ್ಷ್ಮ ಪ್ರಸರಣವನ್ನು ತಡೆಗಟ್ಟಲು ದೊಡ್ಡ ಧಾರಕ ವಲಯಗಳಲ್ಲಿ ಸುರಕ್ಷಿತ ವಲಯಗಳನ್ನು ತರ್ಕಬದ್ಧವಾಗಿ ರೂಪಿಸಲು ನಿರ್ಧರಿಸಿದರು.

ಆರೋಗ್ಯ ಸೇತು ಕುರಿತ ಶಿಫಾರಸಿನ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಸಲಹೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗಿಲ್ಲ.

ಮೊಬೈಲ್ ಅಪ್ಲಿಕೇಶನನ್ನು ಕಡ್ಡಾಯಗೊಳಿಸಲು ದೊಡ್ಡ ಅಡಚಣೆ ಏನೆಂದರೆ ಸ್ಮಾರ್ಟ್ ಫೋನ್ ಇಲ್ಲದ ಲಕ್ಷಾಂತರ ಜನರು ಇರಬಹುದು ಎಂಬ ವಿಚಾರ. ಶುಕ್ರವಾರ ಸಂಜೆಯವರೆಗೆ ಇದನ್ನು .೫೦ ಕೋಟಿ  ಫೋನ್ಗಳಲ್ಲಿ ಡೌನ್ಲೋಡ್ ಮಾಡಲಾಗಿದೆ.

ಭಾರತದಲ್ಲಿ ೧೨೦ ಕೋಟಿ (. ಬಿಲಿಯನ್) ಮೊಬೈಲ್ ಫೋನುಗಳಿವೆ. ಆದರೆ ಕೇವಲ ೩೫ ಕೋಟಿ (೩೫೦ ಮಿಲಿಯನ್) ಜನರು ಮಾತ್ರ ಸ್ಮಾರ್ಟ್ ಫೋನುಗಳನ್ನು ಹೊಂದಿದ್ದಾರೆ.

"ದೆಹಲಿಯಲ್ಲಿ, ಶೇಕಡಾ ೮೦ ಮೊಬೈಲುಗಳು ಸ್ಮಾರ್ಟ್ ಫೋನುಗಳಾಗಿವೆ ಎಂದು ನಮಗೆ ತಿಳಿಸಲಾಗಿದೆ" ಎಂದು ಅಧಿಕಾರಿಯೊಬ್ಬರು ಹೇಳಿದರು.

"ನಾವು ಸಾಧಕ-ಬಾಧಕಗಳನ್ನು ಅಳೆಯಬೇಕಾಗಿದೆ ಎಂದು ಅವರು ನುಡಿದರು.

ಡಾ. ಸಿಂಗ್ ಅವರು ಮೊಬೈಲ್ ಅಪ್ಲಿಕೇಶನನ್ನು ಡೌನ್ ಲೋಡ್ ಮಾಡುವಂತೆ ಹೇಳುತ್ತಿರುವ ಮೊದಲ ವ್ಯಕ್ತಿಯಲ್ಲ. ಏಪ್ರಿಲ್ ರಂದು ಚಾಲನೆ ನೀಡಲಾದ ಆರೋಗ್ಯ ಸೇತು ಮೊಬೈಲ್ ಆಪ್ನ್ನು ಡೌನ್ಲೋಡ್ ಮಾಡಲು ಪ್ರಧಾನಿ ನರೇಂದ್ರ ಮೋದಿ ಜನರನ್ನು ಈಗಾಗಲೇ ಆಗ್ರಹಿಸಿದ್ದಾರೆ. ಗ್ರಾಮಪಂಚಾಯತ್ ಮುಖ್ಯಸ್ಥರ ಗುಂಪಿನ ಜೊತೆಗೆ ಶುಕ್ರವಾರ ವಿಡಿಯೋ ಸಂವಹನ ನಡೆಸಿದಾಗ ಕೂಡಾ ಪ್ರಧಾನಿ ಇದೇ ವಿನಂತಿಯನ್ನು ಮಾಡಿದ್ದರು.

ಪ್ರಮುಖ ವಿಮಾನ ನಿಲ್ದಾಣಗಳು ಮತ್ತು ದೆಹಲಿ ಮೆಟ್ರೊಗಳಲ್ಲಿ ಸುರಕ್ಷತೆಯ ಜವಾಬ್ದಾರಿಯನ್ನು ಹೊಂದಿರುವ  ಈಗಾಗಲೇ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಕೂಡಾ ಇದೇ ಮಾದರಿಯು ಶಿಫಾರಸು ಮಾಡಿದೆ.

ಅಪ್ಲಿಕೇಶನ್ ಏಕೆ?
ಕೋವಿಡ್ -೧೯ ಸೋಂಕಿಗೆ ಕಾರಣವಾಗುವ ವೈರಸ್ ಸಾರ್ಸ್-ಕೋವ್ - ಕಪಟ ಸ್ವಭಾದ ಕಾರಣ ಇದು ರೋಗಲಕ್ಷಣಗಳನ್ನು ತೋರಿಸದ ವ್ಯಕ್ತಿಯಿಂದ ಹರಡಬಹುದು ಮತ್ತು ಅನಾರೋಗ್ಯದ ಬಗ್ಗೆ ಬಹುಶಃ ಆತನಿಗೇ ತಿಳಿಯದಿರಬಹುದು ಮತ್ತು ಕೇವಲ ಉಸಿರಾಟ, ಕೆಮ್ಮು ಮತ್ತು ಸೀನುವಿಕೆಯು ಅದನ್ನು ಆತನಿಂದ ಹತ್ತಿರವಿರುವ ಯಾರಿಗಾದರೂ ರವಾನಿಸಬಹುದು ಎಂಬುದೇ ಸಮಸ್ಯೆ.

ಅಧ್ಯಯನದ ಪ್ರಕಾರ, ಸಾರ್ಸ್-ಕೋವ್ - ವೈರಸ್ ಏರೋಸಾಲ್ (ವಾಯುದ್ರವ) ಆಗಿ ಹರಡಬಹುದು. ವಾಯುದ್ರವವಾಗುವುದರಿಂದ ಅದು ಗಾಳಿಯಲ್ಲಿ ಹೆಚ್ಚು ಕಾಲ ಉಳಿಯಲು ಮತ್ತು ಹೆಚ್ಚು ದೂರಕ್ಕೆ  ಚದುರಿಹೋಗಲು ಅವಕಾಶ ಲಭಿಸುತ್ತದೆ.

ಅಂತಹ ವ್ಯಕ್ತಿಯ ಸಂಪರ್ಕಗಳನ್ನು ನೀವು ಪತ್ತೆ ಹಚ್ಚುವುದು ಹೇಗೆ? ಮೆಟ್ರೋ, ಬಸ್ (ಲಾಕ್ ಡೌನ್ ಸಡಿಲಿಕೆಯ ಸಂದರ್ಭದಲ್ಲಿ) ಅಥವಾ ಕಿರಾಣಿ ಅಂಗಡಿಯಲ್ಲಿ ಪರಸ್ಪರ ಹತ್ತಿರ ಬರುವ ಇಬ್ಬರು ವ್ಯಕ್ತಿಗಲ್ಲಿ  ಯಾರಾದರೂ ಒಬ್ಬರಿಗೆ ಕೊರೋನಾವೈರಸ್ ಪಾಸಿಟಿವ್ ಇರಬಹುದು. ಆದರೆ ಸ್ವತಃ ಆತನಿಗೇ ಅದು ಗೊತ್ತಿಲ್ಲದಿರಬಹುದು.

ಇಂತಹ ಸಂದರ್ಭಗಳಲ್ಲಿ ಸಾಂಪ್ರದಾಯಿಕ ವಿಧಾನಗಳ ಮೂಲಕ ಪತ್ತೆ ಹಚ್ಚುವುದು ಸಾಧ್ಯವಿಲ್ಲ. ಹೀಗಾಗಿ ಈಗ ಆಪ್ ಅಭಿವೃದ್ಧಿ ಪರಿಸಲಾಗಿದೆ.

ಸಂಪರ್ಕ ಪತ್ತೆಹಚ್ಚುವಲ್ಲಿನ ನಿರ್ಣಾಯಕ ಲೋಪವನ್ನು ಆರೋಗ್ಯ ಸೇತು ಅಪ್ಲಿಕೇಶನ್ ಪರಿಹರಿಸಬಲ್ಲುದು.
ರೋಗಲಕ್ಷಣವಿಲ್ಲದ ಕೋವಿಡ್ ಪಾಸಿಟಿವ್ ವ್ಯಕ್ತಿಯು ನಿಮ್ಮಿಂದ ಸ್ವಲ್ಪ ದೂರದಲ್ಲಿ ಪ್ರಯಾಣಿಸುತ್ತಿರುವಾಗ ನಿಮಗೆ ಅದು ಗೊತ್ತಾಗಬೇಕು. ಎಷ್ಟು ವ್ಯಕ್ತಿಗಳು ಆತನಿಗೆ  ಹತ್ತಿರವಾಗಿದ್ದರು ಎಂಬುದನ್ನು ಕಂಡುಹಿಡಿಯಬೇಕು ಮತ್ತು ವ್ಯಕ್ತಿಯನ್ನು ಪಾಸಿಟಿವ್ ಎಂಬುದಾಗಿ ಗುರುತಿಸಿದ ನಂತರ ಇತರರಿಗೆ ಎಚ್ಚರಿಕೆ ನೀಡಸಲು ಸಾಧ್ಯವಾಗಬೇಕು. ಆರೋಗ್ಯಾ ಸೇತು ಆಪ್ ಇದನ್ನೇ ಮಾಡುತ್ತದೆ. - ಇದು ರೋಗಲಕ್ಷಣದ ವ್ಯಕ್ತಿಯನ್ನು ಕಂಡುಕೊಳ್ಳುತ್ತದೆ ಮತ್ತು ಕಳೆದ ಕೆಲವು ದಿನಗಳಲ್ಲಿ ಅವರ ಸುತ್ತಲಿನ ಎಲ್ಲಾ ಲಕ್ಷಣರಹಿತ ಜನರನ್ನು ಗುರುತಿಸುತ್ತದೆ ಮತ್ತು ಅವರಿಗೆ ಸಲಹೆ ನೀಡುತ್ತದೆ ಎಂದು ಎಂದು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಡಾ. ಕೆ. ವಿಜಯರಾಘವನ್ ಹೇಳಿದರು.

ಮೊಬೈಲ್ ಫೋನ್ ಆಧಾರಿತ ಸಾಧನವು ಸೋಂಕಿತ ವ್ಯಕ್ತಿಗೆ ತಾನು ಭೇಟಿಯಾದವರನ್ನು ನೆನಪಿಸಿಕೊಳ್ಳಲು ಕಷ್ಟವಾUದಂತೆ ಮಾಡುತ್ತದೆ. ನಿಮಗೆ ಮಾನವಶಕ್ತಿ ಅಗತ್ಯವಿಲ್ಲ ಮತ್ತು ಅದು ತ್ವರಿತವಾಗಿದೆ, ವೇಗವು ಅತ್ಯಂತ ನಿರ್ಣಾಯಕ ಅಂಶವಾಗಿದೆ" ಎಂದು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗ್ಲ್-ಡಿಂಗ್ ಹೇಳಿzರು.

ಆರೋಗ್ಯ ಸೇತು ಆಪ್ ಕಾರ್ಯನಿರ್ವಹಣೆ ಹೇಗೆ?
ಇತರ ಮೊಬೈಲ್ ಅಪ್ಲಿಕೇಶನ್ಗಳಂತೆಯೇ ಫೋನ್ ತನ್ನ ಬ್ಲೂಟೂತ್ ರೇಡಿಯೊಗಳ ವ್ಯಾಪ್ತಿಯಲ್ಲಿರುವ ಫೋನ್ಗಳೊಂದಿಗೆ ವಿವರಗಳನ್ನು ವಿನಿಮಯ ಮಾಡಿಕೊಳ್ಳುತ್ತದೆ. ಫೋನ್ ಚಂದಾದಾರ ವ್ಯಕ್ತಿಗೆ ವೈರಸ್ ಪಾಸಿಟಿವ್ ಆಗಿದೆ ಎಂಬುದು ಖಚಿತವಾದೊಡನೆಯೇ ಆರೋಗ್ಯ ಸೇತು ಆರೋಗ್ಯ ಅಧಿಕಾರಿಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುತ್ತದೆ, ಮತ್ತು ಸಮೀಪದಲ್ಲಿ ಇರುವ  ಇತರ ಎಲ್ಲ ಸಾಧನಗಳಿಗೆ ಎಚ್ಚರಿಕೆಯನ್ನು ನೀಡುತ್ತದೆ.

No comments:

Advertisement