Monday, April 13, 2020

ಚಿರತೆಗೇನು ಚಿಂತೆ..?

ಚಿರತೆಗೇನು ಚಿಂತೆ..?
(ಇದು ಸುವರ್ಣ ನೋಟ)
ಅಯ್ಯಯ್ಯೋ…. ಮೈ ಬಿಸಿಯಾಗುತ್ತಿದೆಯಲ್ಲ ಏಕೆ..? ಓಹ್  ಎಷ್ಟೊಂದು ಮಲಗಿಬಿಟ್ಟೆ , ಸೂರ್ಯ ನೆತ್ತಿಯ ಮೇಲೇ  ಬಂದು ಬಿಟ್ಟನಲ್ಲ..!
ಏಳಬೇಕು, ಆದರೆ ಇನ್ನೂ ನಿದ್ದೆಯ ಮಂಪರು ಬಿಟ್ಟಿಲ್ಲವಲ್ಲ..
ಹೊಟ್ಟೆಗಾಗಿ (ಗೇಣು ಬಟ್ಟೆಯ ಚಿಂತೆ ನಮಗಿಲ್ಲ ಬಿಡಿ) ಕೆಲಸಕ್ಕೆ ಹೊರಡಲೇಬೇಕು..!
ಮರಚಾಪೆಯಿಂದ  ಇಳಿಯಲೇ ಬೇಕು, ಏನು ಇಷ್ಟೊಂದು ಆವಳಿಗೆ..? ಯಾರೋ ಆಗಲೇ ಎದ್ದು ನನ್ನನ್ನು ನೆನಪಿಸಿಕೊಳ್ಳುತ್ತಿರಬೇಕು...
(ಬಂಡಿಪುರದಲ್ಲಿ ಕೆಲ ಸಮಯ ಹಿಂದೆ  ಲಭಿಸಿದ  ದೃಶ್ಯಗಳು ಹಿರಿಯ ಪತ್ರಿಕಾ ಛಾಯಾಗ್ರಾಹಕ   ವಿಶ್ವನಾಥ ಸುವರ್ಣ  ಕ್ಯಾಮರಾದಲ್ಲಿ ಅಚ್ಚೊತ್ತಿದ್ದು ಹೀಗೆ. ಸಮೀಪ ನೋಟಕ್ಕಾಗಿ  ಫೊಟೋಗಳನ್ನು ಕ್ಲಿಕ್  ಮಾಡಿರಿ)
-ಉದಯನೆ

1 comment:

GT Bhat said...

ತುಂಬಾ ಸೊಗಸಾದ ಚಿತ್ರಗಳು ಮತ್ತು ಸಾಂದರ್ಭಿಕ ಲೇಖನ.

Advertisement