My Blog List

Monday, April 13, 2020

ಆರ್ಥಿಕತೆಯ ’ಅದೃಶ್ಯ ಹಂತಕ- ಕೊರೋನಾ’: ಆರ್‌ಬಿಐ

ಆರ್ಥಿಕತೆಯಅದೃಶ್ಯ ಹಂತಕ- ಕೊರೋನಾ: ಆರ್‌ಬಿಐ
ನವದೆಹಲಿ: ಕೊರೋನವೈರಸ್ ಸೋಂಕು ಭಾರತದ ಆರ್ಥಿಕತೆಯ ಮೇಲೆ ಉಂಟು ಮಾಡುವ ಪರಿಣಾಮವು ಅದರಿಂದ ಉದ್ಭವಿಸಿರುವ ಬಿಕ್ಕಟ್ಟಿನ ಆಳ, ಅವಧಿ ಮತ್ತು ವಿಸ್ತರಣೆಯನ್ನು ಅವಲಂಬಿಸಿರುತ್ತದೆ ಎಂದು ರಿಸರ್ವ್ ಬ್ಯಾಂಕ್ ತುರ್ತು ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯ ನಡಾವಳಿ ಟಿಪ್ಪಣಿಗಳಲ್ಲಿ (ಮಿನಿಟ್ಸ್) ತಿಳಿಸಿದೆ.

ಮಾರ್ಚ್ ಅಂತ್ಯದಲ್ಲಿ ನಡೆದಿದ್ದ ಸಭೆಯಲ್ಲಿ ಆರ್‌ಬಿಐ ತನ್ನ ಮುಖ್ಯ ಅಲ್ಪಾವಧಿಯ ಸಾಲ ದರವನ್ನು ನಿರೀಕ್ಷೆ ಮೀರಿ ೭೫ ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿತ್ತು ಮತ್ತು ಕೋವಿಡ್-೧೯  ಪರಿಣಾಮವಾಗಿ ಉಂಟಾದ ಆರ್ಥಿಕ ಕುಸಿತವನ್ನು ಎದುರಿಸಲು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಅಸ್ಥಿರತೆ ನಿವಾರಣೆಗಾಗಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿತ್ತು.

"ಕೋವಿಡ್-೧೯ರ ನಿಖರವಾದ ಪರಿಣಾಮದ ಬಗ್ಗೆ  ಹಿಂದೆಂದೂ ಕಾಣದಂತಹ ಅನಿಶ್ಚಿತತೆಯಿದೆ, ಇದು ಅಲ್ಪಾವಧಿಯ  ಬೆಳವಣಿಗೆಯ ದೃಷ್ಟಿಕೋನದ ಮೇಲೆ ಪರಿಣಾಮ ಬೀರುತ್ತದೆ. ಪ್ರಮಾಣೀಕರಿಸಲು ಕಷ್ಟವಾದರೂ, ಮುಂದಿನ ದಿನಗಳಲ್ಲಿ ಒಟ್ಟಾರೆ ಬೇಡಿಕೆಯು ಗಮನಾರ್ಹವಾಗಿ ದುರ್ಬಲಗೊಳ್ಳುತ್ತದೆ ಎಂಬುದು ಸ್ಪಷ್ಟ. ಇದು ಒಟ್ಟಾರೆ ವರ್ಷದ ಬೆಳವಣಿಗೆಯ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ರಿಸರ್ವ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಎಂಪಿಸಿ ಸದಸ್ಯ ಜನಕ್ ರಾಜ್ ಸಭೆಯ ನಡಾವಳಿ ಟಿಪ್ಪಣಿಗಳಲ್ಲಿ ಬರೆದಿದ್ದಾರೆ.

" ಹಂತದಲ್ಲಿ ದೇಶೀಯ ಬೇಡಿಕೆಯ ಮೇಲೆ ಕೋವಿಡ್-೧೯ರ ವ್ಯತಿರಿಕ್ತ ಪರಿಣಾಮ ಹೆಚ್ಚಾಗದಂತೆ ನೋಡಿಕೊಳ್ಳುವುದು ವಿತ್ತೀಯ ನೀತಿಯ ಮುಖ್ಯ ಸವಾಲು" ಎಂದು ಅವರು ನಮೂದಿಸಿದ್ದಾರೆ.
ಹಲವಾರು ವಿಶ್ಲೇಷಕರು ತಮ್ಮ ೨೦೨೦/೨೧ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ .೫ರಿಂದ ಶೇಕಡಾ ೨ಕ್ಕೆ ಇಳಿಸಿದ್ದಾರೆ, ದಶಕಗಲ್ಲೇ ಇದು ಅತ್ಯಂತ ಕಡಿಮೆ, ಆದರೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪರಿಸ್ಥಿತಿಯ ಕಾರಣದಿಂದ ಯಾವುದೇ ಜಿಡಿಪಿ ಕಲ್ಪನೆಯನ್ನು ಆರ್‌ಬಿಐ ಅಧಿಕೃತವಾಗಿ ಕೈಬಿಟ್ಟಿದೆ.

ಅರ್ಥಶಾಸ್ತ್ರಜ್ಞರ ಸಮೀಕ್ಷೆಯ ಪ್ರಕಾರ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯು ಮೊದಲ ತ್ರೈಮಾಸಿಕದಲ್ಲಿ ಎಂಟು ವರ್ಷಗಳಲ್ಲಿ ನಿಧಾನಗತಿಯಲ್ಲಿ ವಿಸ್ತರಿಸಲಿದೆ ಮತ್ತು ತ್ರೈಮಾಸಿಕದಲ್ಲಿ ಮತ್ತಷ್ಟು ನಿಧಾನವಾಗಲಿದೆ.

"ಕೋವಿಡ್-೧೯ ಸಾಂಕ್ರಾಮಿಕವು ಅದೃಶ್ಯ ಹಂತಕನಾಗಿದ್ದು, ಹರಡುವ ಮುನ್ನ ಅದನ್ನು ನಿಗ್ರಹಿಸಬೇಕು, ಇಲ್ಲದಿದ್ದಲ್ಲಿ ಅದು ಅಮೂಲ್ಯವಾದ ಮಾನವ ಜೀವನ ಮತ್ತು ಸ್ಥೂಲ ಆರ್ಥಿಕತೆಯ ಮೇಲೆ ತೀವ್ರ ಹಾನಿ ಉಂಟುಮಾಡುತ್ತದೆ" ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಮ್ಮ ಟಿಪ್ಪಣಿಯಲ್ಲಿ ಬರೆದಿದ್ದಾರೆ.

" ಸನ್ನಿವೇಶದಲ್ಲಿ, ಆರ್ಥಿಕತೆಯ ಜೀವನಾಡಿಯಾಗಿರುವ ಹಣಕಾಸು ವಿವಿಧ ಕ್ಷೇತ್ರಗಳಿಗೆ ಸುಲಲಿತವಾಗಿ ಹರಿಯುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ" ಎಂದು ಅವರು ಬರೆದಿದ್ದಾರೆ.

ಸಮಿತಿಯ ಪ್ರಮುಖ ಆದೇಶವಾದ ಹಣದುಬ್ಬರದ ಹೊರನೋಟವು ಫೆಬ್ರವರಿಯಲ್ಲಿ ಕೊನೆಯ ಬಾರಿಗೆ ಸಭೆ ನಡೆದ ಬಳಿಕ ತೀವ್ರವಾಗಿ ಬದಲಾಗಿದೆ ಮತ್ತು ದರಗಳನ್ನು ಇಳಿಸಲು ಸಾಕಷ್ಟು ಅವಕಾಶ ಒದಗಿಸಿದೆ ಎಂದು ಹೆಚ್ಚಿನ ಸದಸ್ಯರು ಹೇಳಿದ್ದಾರೆ.

ಸಾಂಕ್ರಾಮಿಕ ರೋಗದಿಂದ ಉಂಟಾಗುವ ಜಾಗತಿಕ ಕಚ್ಚಾ ತೈಲದರ ಕುಸಿತವು ಭಾರತಕ್ಕೆ ಅನುಕೂಲಕರವಾಗುವ ಸಾಧ್ಯತೆಯಿದೆ ಎಂದು ಹೆಚ್ಚಿನವರು ಒಪ್ಪಿದ್ದಾರೆ. ಭಾರತವು ತನ್ನ ತೈಲ ಅವಶ್ಯಕತೆಯ ಮೂರನೇ ಎರಡರಷ್ಟನ್ನು ಆಮದು ಮಾಡಿಕೊಳ್ಳುತ್ತದೆ ಎಂಬುದು ಗಮನಾರ್ಹ.
ಹಣದುಬ್ಬರವು ಫೆಬ್ರ್ರುವರಿಯಲ್ಲಿ ಇದ್ದ ಶೇಕಡಾ .೫೮% ಕ್ಕೆ ಹೋಲಿಸಿದರೆ, ಮಾರ್ಚ್ ತಿಂಗಳಲ್ಲಿ ಶೇಕಡಾ .೯೩ಕ್ಕೆ ಇಳಿದಿದ್ದು ಇದು ನಾಲ್ಕು ತಿಂಗಳುಗಳಲ್ಲೇ ಅತ್ಯಂತ ಕನಿಷ್ಠವಾಗಿದೆ.

ಹಣದುಬ್ಬರವನ್ನು ಶೇಕಡಾ ೨ರಿಂದ ೬ರ ನಡುವೆ ಇರಿಸಲು ಹಣಕಾಸು ನೀತಿ ಸಮಿತಿ ಆದೇಶ ನೀಡಿದೆ. ಶೇಕಡಾ ೪ರ ಮಧ್ಯಮ ಅವಧಿಯ ಹಣದುಬ್ಬರ ಗುರಿಯನ್ನು ಅದು ನಿಗದಿ ಪಡಿಸಿದೆ.
"ತಾತ್ಕಾಲಿಕ ಸರಬರಾಜು ಸರಪಣಿಗೆ ಅಡ್ಡಿಯಾದರೂ ಒಟ್ಟಾರೆ ದುರ್ಬಲ ಬೇಡಿಕೆ ಮತ್ತು ಇಳಿದಿರುವ ಕಚ್ಚಾ ತೈಲ ಬೆಲೆಗಳು ಹಣದುಬ್ಬರ ಅಪಾಯವನ್ನು ದೃಢವಾಗಿ ಹತೋಟಿಯಲ್ಲಿ ಇಟ್ಟಿವೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.

"ಬೆಳವಣಿಗೆಯ ದೃಷ್ಟಿಕೋನಕ್ಕೆ ಇರುವ ಅಪಾಯಗಳನ್ನು ತಡೆ ಹಿಡಿಯುವುದು ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡುವುದು, ಹೆಚ್ಚಿನ ಆದ್ಯತೆಯನ್ನು ಪಡೆಯಬೇಕು ಎಂದು ಅವರು ಟಿಪ್ಪಣಿಯಲ್ಲಿ ಸೂಚಿಸಿದ್ದಾರೆ.

No comments:

Advertisement