Tuesday, April 14, 2020

ಆಪ್ತ ಸ್ನೇಹಿತನ ಸಾವು: ಕಣ್ಣೀರಿಟ್ಟ ಟ್ರಂಪ್

ಆಪ್ತ ಸ್ನೇಹಿತನ ಸಾವು: ಕಣ್ಣೀರಿಟ್ಟ ಟ್ರಂಪ್
ನ್ಯೂಯಾರ್ಕ್: ಮಾರಕ ಕೊರೊನಾ ವೈರಸ್ ಬಲಾಢ್ಯ ಅಮೆರಿಕವನ್ನು ಹಿಂಡಿ ಹಿಪ್ಪೆ ಮಾಡಿ, ಬಡವ-ಬಲ್ಲಿದ, ಖ್ಯಾತ- ಜನಸಾಮಾನ್ಯ ಎಂಬ ತಾರತಮ್ಯವಿಲ್ಲದೇ ಎಲ್ಲರನ್ನೂ ಬಲಿ ಪಡೆಯುತ್ತಿದ್ದು ಇದೀಗ ಅಮೆರಿಕದ ಅಧ್ಯಕ್ಷರ ಆಪ್ತ ಸ್ನೇಹಿತನನ್ನೇ ಬಲಿ ಪಡೆದಿದೆ. ಆಪ್ತ ಗೆಳೆಯನ ಅಗಲಿಕೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಂಬನಿ ಮಿಡಿದರು.

ನ್ಯೂಯಾರ್ಕ್ ನಗರದ ಪ್ರಸಿದ್ಧ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಡೊನಾಲ್ಡ್ ಟ್ರಂಪ್ ಅವರ ಆಪ್ತ ಸ್ನೇಹಿತ ಸ್ಯಾನ್ಲಿ ಚೇರಾ ಕೋವಿಡ್-೧೯ಕ್ಕೆ ಬಲಿಯಾದರು.

೭೮ ವರ್ಷದ ಸ್ಟ್ಯಾನ್ಲಿ ಚೇರಾ ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಕೊರೊನಾವೈರಸ್ ಸೋಂಕಿಗಾಗಿ ಚಿಕಿತ್ಸೆ ಪಡೆಯತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಚೇರಾ ಮೃತರಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದರು..

ತಮ್ಮ ಆಪ್ತ ಸ್ನೇಹಿತನ ಅಗಲಿಕೆ ಕಂಬನಿ ಮಿಡಿದಿರುವ ಡೊನಾಲ್ಡ್ ಟ್ರಂಪ್, ಸ್ಟ್ಯಾನ್ಲಿ ಚೇರಾ ಅವರೊಂದಿಗಿನ ಆಪ್ತ ಬಾಂಧವ್ಯ ಸದಾ ನೆನಪಿನಲ್ಲಿರುತ್ತದೆ ಎಂದು ಹೇಳಿದರು.
ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಖರ್ಚಿಗಾಗಿ ಸ್ಟ್ಯಾನ್ಲಿ ಚೇರಾ ಸುಮಾರು ಲಕ್ಷ ಅಮೆರಿಕನ್ ಡಾಲ್ ದೇಣಿಗೆಯನ್ನು ನೀಡಿದ್ದರು.

ಅಲ್ಲದೇ ಟ್ರಂಪ್ ಅಳಿಯ ಜೇರೆಡ್ ಕುಶ್ನರ್ ಅವರೊಂದಿಗೂ ಸ್ಟ್ಯಾನ್ಲಿ ಚೇರಾ ವ್ಯಾಪಾರ ಸಂಬಂಧವನ್ನು ಹೊಂದಿದ್ದರು. ಟ್ರಂಪ್ ಕುಟುಂಬದ ಪರಮಾಪ್ತ ಸ್ನೇಹಿತರ ಬಳಗದಲ್ಲಿ ಸ್ಟ್ಯಾನ್ಲಿ ಚೇರಾ ಪ್ರಮುಖರು.

No comments:

Advertisement