ಕೊರೋನಾ: ಸರ್ಕಾರಿ
ನೌಕರರ ಸಂಬಳ ಕಡಿತ ಆದೇಶಕ್ಕೆ ಕೇರಳ ಹೈಕೋರ್ಟ್ ತಡೆ
ತಿರುವನಂತಪುರಂ:
ಕೊರೋನಾವೈರಸ್ ವಿರುದ್ಧ ಹೋರಾಡುತ್ತಿರುವುದರ ನಡುವೆಯೇ
ರಾಜ್ಯ ಸರ್ಕಾರಿ ನೌಕರರ ಸಂಬಳವನ್ನು ಕಡಿತಗೊಳಿಸುವ ಕೇರಳ ಸರ್ಕಾರದ ಆದೇಶಕ್ಕೆ ಹೈಕೋರ್ಟ್ 2020 ಏಪ್ರಿಲ್ 28ರ ಮಂಗಳವಾರ ತಡೆಯಾಜ್ಞೆ ನೀಡಿತು ಎಂದು ವರದಿ ತಿಳಿಸಿತು.
‘ರಾಜ್ಯ ಸರ್ಕಾರಿ
ನೌಕರರ ಪ್ರತಿ ತಿಂಗಳ ಆರು ದಿನದ ಸಂಬಳವನ್ನು ಮುಂದಿನ ಐದು ತಿಂಗಳ ಕಾಲ ಕಡಿತಗೊಳಿಸಲಾಗುವುದು’ ಎಂದ
ಕೇರಳ ಸರ್ಕಾರ ಆದೇಶ ಹೊರಡಿಸಿತ್ತು. ಇದು ಎಲ್ಲ ಸರ್ಕಾಋಇ ಸ್ವಾಮ್ಯದ ಉದ್ಯಮಗಳು, ಸರ್ಕಾರಿ ರಂಗದ ಕಾರ್ಖಾನೆಗಳು, ಅರೆ ಸರ್ಕಾರಿ ಸಂಸ್ಥೆಗಳಿಗೆ ಅನ್ವಯವಾಗಲಿದೆ ಎಂದು ತಿಳಿಸಿತ್ತು.
ಸಂಬಳ ಕಡಿತಗೊಳಿಸುವ
ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಹಲವು ಸರ್ಕಾರಿ ನೌಕರರು ಹಾಗೂ ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು.
೨೦ಸಾವಿರಕ್ಕಿಂತ ಕಡಿಮೆ ವೇತನ ಪಡೆಯುವ ನೌಕರರ ಸಂಬಳವನ್ನು ಕಡಿತಗೊಳಿಸಬಾರದು ಎಂದು ಸ್ಪಷ್ಟಪಡಿಸಿರುವ
ಹೈಕೋರ್ಟ್ ರಾಜ್ಯ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂದು ವರದಿ ವಿವರಿಸಿತು.
ಸರ್ಕಾರದ ಆದೇಶದಲ್ಲಿ
ಸಚಿವರು, ಶಾಸಕರು, ವಿವಿಧ ನಿಗಮದ ಸದಸ್ಯರು, ಸ್ಥಳೀಯ ಪಂಚಾಯತ್ ಸದಸ್ಯರು, ವಿವಿಧ ಆಯೋಗಗಳ ಸಂಬಳವನ್ನು
ಮುಂದಿನ ಒಂದು ವರ್ಷದವರೆಗೆ ಶೇ,.೩೦ರಷ್ಟು ಸಂಬಳ ಕಡಿತ ಮಾಡಲಾಗುವುದು ಎಂದು ತಿಳಿಸಲಾಗಿತ್ತು.
No comments:
Post a Comment