My Blog List

Tuesday, April 7, 2020

ಮಿತವ್ಯಯ: ಪ್ರಧಾನಿ ಮೋದಿಗೆ ಸೋನಿಯಾ ಪಂಚಸೂತ್ರ

ಮಿತವ್ಯಯ: ಪ್ರಧಾನಿ ಮೋದಿಗೆ ಸೋನಿಯಾ ಪಂಚಸೂತ್ರ
ನವದೆಹಲಿ: ಕೊರೋನಾವೈರಸ್ (ಕೋವಿಡ್-೧೯) ಸಾಂಕ್ರಾಮಿಕ ಪಿಡುಗನ್ನು ನಿಭಾಯಿಸುವಲ್ಲಿ ಸೂತ್ರಗಳ ಪತ್ರವೊಂದನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 2020 ಏಪ್ರಿಲ್ 07ರ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದರು.
೨೦,೦೦೦ ಕೋಟಿ ರೂಪಾಯಿಗಳ ಕೇಂದ್ರ ಸರ್ಕಾರದ ಸೌಂದರ್‍ಯೀಕರಣ ಮತ್ತು ನಿರ್ಮಾಣಯೋಜನೆಯನ್ನು ತತ್ ಕ್ಷಣ ಅಮಾನತುಗೊಳಿಸುವಂತೆಯೂ ಸೋನಿಯಾ  ಗಾಂಧಿ ಅವರು ಪ್ರಧಾನಿಯವರನ್ನು ಕೋರಿದರು.


ಮಿತ ವ್ಯಯದ ಹಣವನ್ನು ಸಮಯದ ಅಗತ್ಯವಾಗಿರುವ ಕೋವಿಡ್ -೧೯ ಸೋಂಕು ವಿರೋಧಿ ಸಮರಕ್ಕೆ ಬೇಕಾದ ನಿಧಿಗೆ ವರ್ಗಾಯಿಸಬಹುದು ಎಂದು ಕಾಂಗ್ರೆಸ್ ಅಧ್ಯಕ್ಷೆ ತಮ್ಮ ಪತ್ರದಲ್ಲಿ ಸಲಹೆ ಮಾಡಿದರು.
ಪ್ರಧಾನಿಯವರು ತಮ್ಮ ನಡೆಸಿದ ತಮ್ಮ ದೂರವಾಣಿ ಸಂಭಾಷಣೆಗೆ ಸ್ಪಂದಿಸಿ ತಾವು ಸಲಹೆಗಳನ್ನು ಕಳುಹಿಸುತ್ತಿರುವುದಾಗಿ ಸೋನಿಯಾಗಾಂಧಿ ಅವರು ತಿಳಿಸಿದ್ದಾರೆ.
'ನಿನ್ನೆ (ಸೋಮವಾರ) ನಿಮ್ಮ ಕರೆಯ ವೇಳೆಯಲ್ಲಿ ನಮ್ಮ ಪಕ್ಷದ ವತಿಯಿಂದ ಏನಾದರೂ ಸಲಹೆಗಳಿದ್ದಲ್ಲಿ ಕಳುಹಿಸಿಕೊಡುವಂತೆ ನೀವು ನನ್ನಲ್ಲಿ ಸೌಜನ್ಯಪೂರ್ವಕವಾಗಿ ಸೂಚಿಸಿದ್ದಿರಿ. ಸ್ಫೂರ್ತಿಯ ಹಿನ್ನೆಲೆಯಲ್ಲಿ ನಾನು ಪತ್ರ ಬರೆದಿದ್ದೇನೆ ಎಂದು ಸೋನಿಯಾ ತಿಳಿಸಿದರು.
ತಮ್ಮ ಸಲಹೆಗಳಲ್ಲಿ ಸೋನಿಯಾಗಾಂಧಿಯವರು ಟಿವಿ, ಮುದ್ರಣ ಮತ್ತು ಆನ್ ಲೈನ್-   ಎಲ್ಲ ಮಾಧ್ಯಮಗಳಿಗೆ ಸರ್ಕಾರಿ ಜಾಹೀರಾತು ನೀಡುವುದನ್ನು ಎರಡು ವರ್ಷಗಳ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಲು ಕೋರಿದರು.
ಸಲಹೆಗಳಲ್ಲಿನ ಮೌಲ್ಯವನ್ನು ತಾವು ಗುರುತಿಸುವಿರಿ ಎಂಬ ನಂಬಕೆ ನನಗೆ ಇದೆ ಎಂದೂ ಸೋನಿಯಾ ಬರೆದರು.
ಸೋನಿಯಾ ಪಂಚಸೂತ್ರಗಳು
)     ಟೆಲಿವಿಷನ್, ಮುದ್ರಣ ಮತ್ತು ಆನ್ ಲೈನ್ ಮಾಧ್ಯಮಗಳಿಗೆ ಸರ್ಕಾರ ಮತ್ತು ಸರ್ಕಾರಿ ಉದ್ಯಮ ರಂಗದಿಂದ (ಪಿಎಸ್ ಯು) ನೀಡಲಾಗುವ ಜಾಹೀರಾತುಗಳಿಗೆ ಎರಡು ವರ್ಷ ಕಾಲ ಸಂಪೂರ್ಣ ನಿಷೇಧ. ಕೋವಿಡ್ -೧೯ ಅಥವಾ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ನೀಡುವ ಮಾರ್ಗದರ್ಶಿ ಸೂತ್ರಗಳ ಜಾಹೀರಾತುಗಳಿಗೆ ಮಾತ್ರ ವಿನಾಯ್ತಿ.
)     ಕೇಂದ್ರೀಯ ನೀಳನೋಟ ಸೌಂದರ್‍ಯೀಕರಣ ಮತ್ತು ನಿರ್ಮಾಣ ಯೋಜನೆಗಳಂತಹ ೨೦,೦೦೦ ಕೋಟಿ ರೂಪಾಯಿಗಳ ವ್ಯರ್ಥ ವೆಚ್ಚವನ್ನು ತತ್ ಕ್ಷಣದಿಂದಲೇ ಅಮಾನತುಗೊಳಿಸುವುದು.
)     ಮುಂಗಡಪತ್ರ (ಬಜೆಟ್) ವೆಚ್ಚದಲ್ಲಿಯೂ (ವೇತನ, ಪಿಂಚಣಿ ಮತ್ತು ಕೇಂದ್ರೀಯ ರಂಗದ ಯೋಜನೆಗಳನ್ನು ಹೊರತುಪಡಿಸಿ) ವೆಚ್ಚವನ್ನು ಶೇಕಡಾ ೩೦ರಷ್ಟು ಇಳಿಸಿ ಆದೇಶ ಹೊರಡಿಸುವುದು ಸೂಕ್ತ.
)     ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯ ಸಚಿವರು ಮತ್ತು ಅಧಿಕಾರಿಗಳ ಎಲ್ಲ ವಿದೇಶ ಪ್ರವಾಸಗಳನ್ನು ಇದೇ ರೀತಿಯಾಗಿ ಸ್ಥಗಿತಗೊಳಿಸುವುದು. ವಿಶೇಷವಾದ ತುರ್ತು ಸಂದರ್ಭ ಅಥವಾ ರಾಷ್ಟ್ರ ಹಿತದ ದೃಷ್ಟಿಯಿಂದ ಪ್ರಧಾನಿಯವರು ಅನುಮತಿ ನೀಡುವ ಪ್ರಯಾಣಗಳಿಗೆ ವಿನಾಯ್ತಿ ನೀಡಬಹುದು.
)     ಪಿಎಂ ಕೇರ್ ನಿಧಿಯ ಅಡಿಯಲ್ಲಿನ ಎಲ್ಲ ಹಣವನ್ನು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ (ಪಿಎಂ-ಎನ್ ಆರ್ ಎಫ್) ವರ್ಗಾಯಿಸುವುದು. ಇದು ದಕ್ಷತೆ, ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಹಂಚಿಕೆಯಾದ ಮತ್ತು ವೆಚ್ಚವಾದ ನಿಧಿಗಳ ಲೆಕ್ಕಪತ್ರಕ್ಕೆ (ಆಡಿಟ್) ಖಾತರಿ ನೀಡುತ್ತದೆ. ನಿಧಿಗಳ ವಿತರಣೆಗೆ  ಎರಡು ಸಂಗ್ರಹಗಾರಗಳ ವ್ಯವಸ್ಥೆಯ ಸೃಷ್ಟಿಯು ಪ್ರಯತ್ನ ಹಾಗೂ ಸಂಪನ್ಮೂಲಗಳ ಅಪವ್ಯಯದಂತೆ ಭಾಸವಾಗುತ್ತದೆ.

ಪಿಎಂ ಕೇರ್ ನಿದಿಗೆ ಸಂಬಂಧಿಸಿದ ಕೊನೆಯ ಸಲಹೆಯು ರಾಜಕೀಯ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇದೆ. ಪಿಎಂ ಕೇರ್’ ನಿಧಿ ರಚನೆಯ ಮೊದಲ ದಿನದಿಂದಲೇ ಇದರ ಸೃಷ್ಟಿಯ ಅಗತ್ಯವನ್ನು ಕಾಂಗ್ರೆಸ್ ಪ್ರಶ್ನಿಸುತ್ತಲೇ ಬಂದಿದೆ. ೧೯೪೮ರಲ್ಲಿ ಪ್ರಧಾನಿ ಜವಾಹಲರಲಾಲ್ ನೆಹರೂ ಅವರು ರಚಿಸಿದ ಪ್ರಧಾನಿ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂ ಎನ್ ಆರ್ ಎಫ್)  ಅಸ್ತಿತ್ವದಲ್ಲಿ ಇರುವಾಗ ಇನ್ನೊಂದು ನಿಧಿ ರಚನೆಯ ಅಗತ್ಯವೇನಿತ್ತು ಎಂದು ಶಶಿ ತರೂರ್ ಮತ್ತು ಇತರ ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದರು.

ಆದರೆ ಪಿಎಂ ಕೇರ್ ನಿಧಿಯು ಕೋವಿಡ್-೧೯ ಮತ್ತು ಭವಿಷ್ಯದಲ್ಲಿ ಉದ್ಭವಿಸಬಹುದಾದ ಇಂತಹ ಸಂದರ್ಭಕ್ಕೆ ಮೀಸಲಾದ ನಿರ್ದಿಷ್ಟ ನಿಧಿ ಎಂಬುದಾಗಿ ಸರ್ಕಾರ ಪ್ರತಿಪಾದಿಸಿದೆ.
ಪ್ರಧಾನಮಂತ್ರಿಗಳ
ರಾಷ್ಟ್ರೀಯ ಪರಿಹಾರ ನಿಧಿಯ ಮಂಡಳಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರು ಇದ್ದಾರೆ, ಹೀಗಾಗಿ ಕಾಂಗ್ರೆಸ್ ಹೊಸ ನಿಧಿಯನ್ನು ವಿರೋಧಿಸುತ್ತಿದೆ ಎಂದು ಬಿಜೆಪಿ ಬೊಟ್ಟು ಮಾಡಿದೆ.

ಬಿಕ್ಕಟ್ಟಿನ ಸಮಯಗಳಲ್ಲಿ ಹಣ ಹಂಚಿಕೆಗೆ ತುರ್ತು ಕ್ರಮ ಕೈಗೊಳ್ಳುವುದು ಅಗತ್ಯ, ಇದಕ್ಕೆ ಯಾವುದೇ ಅಡೆ ತಡೆ ಇರಬಾರದು ಎಂಬುದಾಗಿ ಸರ್ಕಾರ ಪ್ರತಿಪಾದಿಸಿದೆ. ಆದರೆ ವಾದವನ್ನು ತಿರಸ್ಕರಿಸಿದ ಕಾಂಗ್ರೆಸ್ ಇದು ವಿರೋಧವನ್ನು ಹೊರಗಿಡಲು ನಡೆದಿರುವ ಸಂಚು ಎಂದು ಆಪಾದಿಸಿತ್ತು. ಸಂಸತ್ ಸದಸ್ಯರ ಕ್ಷೇತ್ರಾಭಿವೃದ್ಧಿ ಯೋಜನೆಯನ್ನು ಅಮಾನತುಗೊಳಿಸುವ ಸಂಪುಟ ತೀರ್‍ಮಾನ ಕೂಡಾ ವಿರೋಧ ಪಕ್ಷವನ್ನು ಸಿಟ್ಟಿಗೆಬ್ಬಿಸಿದ್ದು, ಇದು ವಿರೋಧಿ ಸಂಸತ್ ಸದಸ್ಯರನ್ನು ಅನಗತ್ಯವಾಗುವಂತೆ ಮಾಡಿದೆ ಎಂದು ಅದು ಭಾವಿಸಿದೆ.

ಕೇಂದ್ರ ಸಚಿವ ಸಂಪುಟವು ಪ್ರಧಾನಿ ಮತ್ತು ಇತರ ಸಚಿವರು ಹಾಗೂ ಸಂಸತ್ ಸದಸ್ಯರ ವೇತನವನ್ನು ಒಂದು ವರ್ಷದ ಅವಧಿಗೆ ಶೇಕಡಾ ೩೦ರಷ್ಟು ಕಡಿತಗೊಳಿಸುವ ಹಾಗೂ ಸಂಸತ್ ಸದಸ್ಯರ ಸ್ಥಳೀಯ ಕ್ಷೇತ್ರಾಭಿವೃದ್ಧಿ ಕಾಮಗಾರಿಗೆ ಮಾಡಲಾಗುವ ವಾರ್ಷಿಕ ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ವರ್ಷಗಳ ಅವಧಿಗೆ ಸ್ಥಗಿತಗೊಳಿಸುವ ನಿರ್ಧಾರವನ್ನು ಕೈಗೊಂಡ ಒಂದು ದಿನದ ಬಳಿಕ ಸೋನಿಯಾ ಗಾಂಧಿ ಅವರು ಪ್ರಧಾನಿಗೆ ಪತ್ರ ಬರೆದಿದಾರೆ. ಮಿತವ್ಯಯ ಕ್ರಮಗಳಿಂದ ಉಳಿತಾಯವಾಗುವ ಹಣವನ್ನು ಕೋವಿಡ್ -೧೯ ಸಾಂಕ್ರಾಮಿಕ ರೋಗ ವಿರೋಧಿ ಸಮರದಲ್ಲಿ ಬಳಸಲು ಸಂಪುಟ ತೀರ್‍ಮಾನಿಸಿತ್ತು.

ಕ್ರಮಗಳಿಂದ ಸರ್ಕಾರಕ್ಕೆ ಅಂದಾಜು ೭೯೩೦ ಕೋಟಿ ರೂಪಾಯಿಗಳಷ್ಟು ಹಣ ಲಭಿಸಲಿದೆ. ಪೈಕಿ ಒಟ್ಟು ೨೯ ಕೋಟಿ ರೂಪಾಯಿಗಳು ಸಂಸತ್ ಸದಸ್ಯರ ವೇತನ ಕಡಿತದಿಂದ ಬರಲಿದೆ. ಇದರ ಜೊತೆಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರು ತಮ್ಮ ವೇತನದಿಂದಲೂ ಕಡಿತ ಮಾಡುವ ಕೊಡುಗೆ ಮುಂದಿಟ್ಟಿದ್ದಾರೆ.

ಸಂಸತ್ ಸದಸ್ಯರೊಬ್ಬರಿಗೆ ,೦೦,೦೦೦ ಲಕ್ಷ ರೂಪಾಯಿ ವೇತನ ಮತ್ತು ಭತ್ಯೆಗಳನ್ನ ನೀಡಲಾಗುತ್ತದೆ. ಸಂಸತ್ ಸದಸ್ಯರೊಬ್ಬರು ಸರ್ಕಾರಕ್ಕೆ ಮಾಸಿಕ ೩೦,೦೦೦ ರೂಪಾಯಿಗಳಂತೆ ಒಂದು ವರ್ಷದಲ್ಲಿ ,೬೦,೦೦೦ ರೂಪಾಯಿ ನೀಡಲಿದ್ದಾರೆ.

ಭಾರತದ ಪ್ರಧಾನ ಮಂತ್ರಿಯ ವೇತನವೂ ಇತರ ಸಂಸತ್ ಸದಸ್ಯರಷ್ಟೇ ಇದೆ. ಭಾರತದ ರಾಷ್ಟ್ರಪತಿಯವರು ತಿಂಗಳಿಗೆ ಲಕ್ಷ ರೂಪಾಯಿ ವೇತನ ಪಡೆದರೆ ಉಪರಾಷ್ಟ್ರಪತಿಯವರು ತಿಂಗಳಿಗೆ ಲಕ್ಷ ರೂಪಾಯಿ ವೇತನ ಪಡೆಯುತ್ತಾರೆ. ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರು ಶೇಕಡಾ ೩೦ರಷ್ಟು ವೇತನ ಕಡಿತದ ಕೊಡುಗೆ ನೀಡಲು ಮುಂದೆ ಬಂದಿದ್ದಾರೆ.
ರಾಜ್ಯಪಾಲರಿಗೆ
ಮಾಸಿಕ ತಲಾ .೫೦ ಲಕ್ಷ ರೂಪಾಯಿ ವೇತನ, ಭತ್ಯೆ ನೀಡಲಾಗುತ್ತದೆ.
ಎಲ್ಲ ತೆರಿಗೆ ಆದಾಯಗಳೂ ಭಾರತದ ಸಂಚಿತ ನಿಧಿಗೆ ಜಮೆಯಾಗುತ್ತವೆ. ಬಹುತೇಕ ಪಾವತಿಗಳಿಗೆ ಸಂಚಿತ ನಿಧಿಯನ್ನೇ ಬಳಸಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ಸಭೆ ಮತ್ತು ಬಳಿಕ ನಡೆದ ತಮ್ಮ ಸಚಿವ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಭಾನುವಾರ ಇಬ್ಬರು ಮಾಜಿ ರಾಷ್ಟಪತಿಗಳು ಮತ್ತು ಇಬ್ಬರು ಮಾಜಿ ಪ್ರಧಾನಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೊರೋನಾವೈರಸ್ ಸೋಂಕಿನಿಂದ ಉದ್ಭವಿಸಿದ ಅಸಾಧಾರಣ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದರು.

ಇದಲ್ಲದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಒಡಿಶಾ ಮುಖ್ಯಮಂತ್ರಿ ಹಾಗೂ ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್, ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಮತ್ತು ಶಿರೋಮಣಿ ಅಕಾಲಿ ದಳದ  ನೇತಾರ ಪ್ರಕಾಶ ಸಿಂಗ್ ಬಾದಲ್ ಅವರನ್ನು ದೂರವಾಣಿ ಮೂಲಕ ಪ್ರಧಾನಿ ಮೋದಿ ಸಂಪರ್ಕಿಸಿದ್ದರು.

No comments:

Advertisement