My Blog List

Tuesday, April 7, 2020

ಭಾರತದಿಂದ ಪಾರ್ಸೆಟಮೋಲ್, ಹೈಡ್ರಾಕ್ಸಿಕ್ಲೊರೋಕ್ವಿನ್ ರಫ್ತು ನಿಷೇಧ ಸಡಿಲಿಕೆ

ಭಾರತದಿಂದ ಪಾರ್ಸೆಟಮೋಲ್, ಹೈಡ್ರಾಕ್ಸಿಕ್ಲೊರೋಕ್ವಿನ್ ರಫ್ತು ನಿಷೇಧ ಸಡಿಲಿಕೆ
ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಅತಿಯಾಗಿ ಬಾಧಿತವಾಗಿರುವ ರಾಷ್ಟ್ರಗಳಿಗೆ ಭಾರತವು ಪಾರ್ಸೆಟಮೋಲ್ ಮತ್ತು ಹೈಡ್ರಾಕ್ಸಿಕ್ಲೊರೋಕ್ವಿನ್ ಔಷಧವನ್ನು ಸರಬರಾಜು ಮಾಡಲಿದೆ ಎಂದು ಭಾರತ  2020 ಏಪ್ರಿಲ್ 07ರ ಮಂಗಳವಾರ  ಪ್ರಕಟಿಸಿತು.

ಭಾರತ ಸರ್ಕಾರವು ಮಲೇರಿಯಾ ನಿರೋಧಿ ಔಷಧಗಳ ರಫ್ತಿಗೆ ಅವಕಾಶ ನೀಡದೇ ಇದ್ದಲ್ಲಿ ಪ್ರತೀಕಾರದ ಕ್ರಮ ಕೈಗೊಳ್ಳಬೇಕಾದೀತು ಎಂಬುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಕೆ ನೀಡಿದ ಬೆನ್ನಲ್ಲೇ ಮಲೇರಿಯಾ ನಿರೋಧಿ ಔಷಧಗಳ ರಫ್ತನ್ನು ಭಾರತ ಭಾಗಶಃ ಸಡಿಲಿಸಿತು.

ಕೋವಿಡ್ -೧೯ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆಯಲ್ಲಿ ಮಾನವೀಯ ಅಂಶಗಳನ್ನು ಪರಿಗಣಿಸಿ, ನಮ್ಮ ಸಾಮರ್ಥ್ಯವನ್ನು ಅವಲಂಬಿಸಿದ ನಮ್ಮ ಎಲ್ಲ ನೆರೆಯ ರಾಷ್ಟ್ರಗಳಿಗೆ ಸೂಕ್ರ ಪ್ರಮಾಣದ ಪಾರ್ಸೆಟಮೋಲ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ರಫ್ತಿಗೆ ಪರವಾನಗಿ ನೀಡಲು ಭಾರತ ನಿರ್ಧರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದರು.

ನಿರ್ದಿಷ್ಟವಾಗಿ ಸಾಂಕ್ರಾಮಿಕದಿಂದ ಅತ್ಯಂತ ಹೆಚ್ಚು ತೊಂದರೆಗೀಡಾದ ಕೆಲವು ರಾಷ್ಟ್ರಗಳಿಗೆ ಅಗತ್ಯ ಔಷಧಗಳನ್ನು ನಾವು  ಸರಬರಾಜು ಮಾಡುತ್ತೇವೆ. ಆದ್ದರಿಂದ ಬಗ್ಗೆ ಯಾವುದೇ ವದಂತಿಗಳು ಅಥವಾ ವಿಷಯವನ್ನು ರಾಜಕೀಯಗೊಳಿಸುವ ಯಾವುದೇ ಯತ್ನಗಳನ್ನು ನಾವು ನಿರುತ್ಸಾಹಿಸುತ್ತೇವೆ ಎಂದು ಶ್ರೀವಾಸ್ತವ ನುಡಿದರು.

ಭಾರತವು ನಿರ್ದಿಷ್ಟವಾಗಿ ಅತಿಬಾಧಿತ ರಾಷ್ಟ್ರಗಳಿಗೆ ಹೈಡ್ರಾಕ್ಸಿಕ್ಲೊರೋಕ್ವಿನ್  ರಪ್ತನ್ನು ಸಡಿಲಗೊಳಿಸಿದೆ. ದೇಶದ ಅಗತ್ಯಗಳನ್ನು ಪೂರೈಸಿದ ಬಳಿಕವೇ ಇತರ ರಾಷ್ಟ್ರಗಳಿಗೆ ಹೈಡ್ರಾಕ್ಸಿಕ್ಲೊರೋಕ್ವನ್ ಮತ್ತು ಪಾರ್ಸೆಟಮೋಲ್ ಗಾಗಿ ಮುಂದಿಟ್ಟ ಬೇಡಿಕೆಗಳನ್ನು ಪೂರೈಸಲಾಗುವುದು ಎಂದು ವಿಶ್ವಾಸಾರ್ಹ ಮೂಲಗಳು ಹೇಳಿವೆ.

ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಅಧ್ಯಕ್ಷ ಟ್ರಂಪ್ ಅವು ಭಾನುವಾರ ಟೆಲಿಫೋನ್ ಕರೆ ಮಾಡಿ ಮಾತನಾಡಿದ್ದ ವೇಳೆಂiಲ್ಲಿ ಔಷಧಗಳ ಮೇಲಿನ ರಫ್ತು ನಿಷೇಧ ತೆರವುಗೊಳಿಸಲು ಮನವಿ ಮಾಡಿದ್ದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ್ದ ಟ್ರಂಪ್ ಭಾರತವು ತನ್ನ ಮನವಿಯನ್ನು ಮನ್ನಿಸದಿದ್ದರೆ ಪ್ರತೀಕಾರದ ಕ್ರಮ ಕೈಗೊಳ್ಳಬೇಕಾಗಬಹುದು ಎಂದೂ ಎಚ್ಚರಿಸಿದ್ದರು.

ಅಗತ್ಯ ಔಷಧ ವಸ್ತುಗಳು ಹೊರಕ್ಕೆ ಹರಿದು ಬರಲು ನೀವು ಅನುಮತಿ ನೀಡುವುದನ್ನು ನಾವು ಮೆಚ್ಚುತ್ತೇವೆ. ಹೊರಕ್ಕೆ ಬರಲು ಅನುಮತಿ ನೀಡದೇ ಇದ್ದರೆ ಅದು ಒಕೆ, ಆದರೆ ಪ್ರತೀಕಾರದ ಕ್ರಮ ಕೈಗೊಳ್ಳಬಹುದು. ಅದನ್ನು ಏಕೆ ಮಾಡಬಾರದು? ಎಂದು ಟ್ರಂಪ್ ಹೇಳಿದ್ದರು.

ಔಷಧಕ್ಕಾಗಿ ಅಮೆರಿಕ ಮಾರ್ಚ್ ತಿಂಗಳಲ್ಲಿ ಬೇಡಿಕೆ ಸಲ್ಲಿಸಿತ್ತು.

ನಾನು ನಿರ್ಧಾರವನ್ನು ಇಷ್ಟ ಪಡುವುದಿಲ್ಲ. ಇದು ಅವರ (ಮೋದಿ) ನಿರ್ಧಾರ ಎಂಬುದಾಗಿ ನಾನು ಕೇಳಿಲ್ಲ. ಅವರು ಬೇರೆ ರಾಷ್ಟ್ರಗಳಿಗೆ (ಅದರ ಸರಬರಾಜು) ನಿಲ್ಲಿಸಿದ್ದಾರೆ ಎಂದು ನನಗೆ ಗೊತ್ತಿದೆ. ನಾನು ನಿನ್ನೆ (ಭಾನುವಾರ) ಅವರ ಜೊತೆ ಮಾತನಾಡಿದ್ದೇನೆ. ಅದು ಒಳ್ಳೆಯ ಮಾತುಕತೆಯಾಗಿತ್ತು. ಅದು ಅವರ ನಿರ್ಧಾರವೇ ಅಥವಾ ಅಲ್ಲವೇ ಎಂಬುದನ್ನು ನಾವು ನೋಡುತ್ತೇವೆ. ಅವರೇ ನಿರ್ಧಾರ ಕೈಗೊಂಡಿದ್ದಾರೆ ಎಂದಾದರೆ ನನಗೆ ಅಚ್ಚರಿಯಾಗುತ್ತದೆ, ಏಕೆಂದರೆ ಭಾರತವು ಅಮೆರಿಕದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದೆ ಎಂದು ಟ್ರಂಪ್ ಹೇಳಿದ್ದರು.

ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಔಷಧ ಲಭಿಸುವಂತೆ ನೋಡಿಕೊಳ್ಳುವ ಸಲುವಾಗಿ ಭಾರತವು ಹೈಡ್ರಾಕ್ಸಿಕ್ಲೊರೋಕ್ವಿನ್ ಮಲೇರಿಯಾ ನಿರೋಧಿ ಔಷಧದ ರಫ್ತನ್ನು ಮಾರ್ಚ್ ೨೫ರಂದು ತತ್ ಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿತ್ತು.

ಇದಕ್ಕೆ ಮುನ್ನ ಮಾನವೀಯ ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಶಿಫಾರಸಿನ ಮೇರೆಗೆ ಇತರ ರಾಷ್ಟ್ರಗಳಿಗೆ ಔಷಧ ರಫ್ತಿಗೆ ಭಾರತ ಅನುಮತಿ ನೀಡಿತ್ತ್ತು.

ರಾಹುಲ್ ಗಾಂಧಿ ಪ್ರತ್ರಿಕ್ರಿಯೆ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತೀಕಾರದ ಕ್ರಮ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಗೆಳೆತನದಲ್ಲಿ ಪ್ರತೀಕಾರ ಇರುವುದಿಲ್ಲ ಎಂದು ಹೇಳಿದ್ದಾರೆ.

ಗೆಳೆತನದಲ್ಲಿ ಪ್ರತೀಕಾರ ಕ್ರಮ ಇರುವುದಿಲ್ಲ ಎಂಬುದಾಗಿ ಹೇಳಿದ ರಾಹುಲ್, ಅಗತ್ಯದ ಹೊತ್ತಿನಲ್ಲಿ ಭಾರತವು ಎಲ್ಲ ರಾಷ್ಟ್ರಗಳಿಗೂ ನೆರವಾಗಬೇಕು. ಆದರೆ ಪ್ರಾಣರಕ್ಷಕ ಔಷಧಗಳು ಮೊದಲು ಭಾರತೀಯರಿಗೆ ಸಾಕಷ್ಟು ಪ್ರಮಾಣದಲ್ಲಿ ಲಭಿಸುವಂತೆ ಮಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

No comments:

Advertisement