Saturday, April 18, 2020

ಕೇರಳ: ೪ ಹಾಟ್‌ಸ್ಪಾಟ್ ಜಿಲ್ಲೆಗಳಲ್ಲಷ್ಟೇ ಬಿಗಿ, ಉಳಿದೆಡೆ ಸಡಿಲಿಕೆ


ಕೇರಳ: ಹಾಟ್ಸ್ಪಾಟ್ ಜಿಲ್ಲೆಗಳಲ್ಲಷ್ಟೇ ಬಿಗಿ, ಉಳಿದೆಡೆ  ಸಡಿಲಿಕೆ
ಹೋಟೆಲ್, ವಿರಳ ವಾಹನ ಸಂಚಾರಕ್ಕೆ ಅನುಮತಿ
ತಿರುವನಂತಪುರಂ: ಕೊರೋನಾವೈರಸ್ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಹಂತ ಹಂತವಾಗಿ ದಿಗ್ಬಂಧನ (ಲಾಕ್ಡೌನ್) ನಿಯಮಗಳನ್ನು ಸಡಿಲಿಸಲು ಅನುಮತಿ ನೀಡಿರುವ ಪಿಣರಾಯಿ ವಿಜಯನ್ ಸರ್ಕಾರ  2020 ಏಪ್ರಿಲ್ 18ರ ಶನಿವಾರ  ವಿಸ್ತೃತ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿತು.

ಮಾರ್ಗದರ್ಶಿ ಸೂತ್ರಗಳ ಪ್ರಕಾರ ರಾಜ್ಯವನ್ನು ಕೆಂಪು, ಕಿತ್ತಳೆ , ಕಿತ್ತಳೆ ಬಿ ಮತ್ತು ಹಸಿರು ವಲಯಗಳಾಗಿ ವಿಂಗಡಿಸಲಾಗಿದೆ.

ಕಾಸರಗೋಡು, ಕಣ್ಣೂರು, ಕೋಳಿಕ್ಕೋಡ್, ಮಲಪ್ಪುರಂ ಜಿಲ್ಲೆಗಳು ಕೆಂಪು ವಲಯ (ರೆಡ್ ಜೋನ್) ವ್ಯಾಪ್ತಿಯಲ್ಲಿದ್ದು ಇಲ್ಲಿ ಲಾಕ್ಡೌನ್ ನಿಯಮಗಳಲ್ಲಿ ಯಾವುದೇ ಸಡಿಲಿಕೆಯೂ ಇಲ್ಲ. ಹಾಟ್ ಸ್ಪಾಟ್ಗಳು ಎಂಬುದಾಗಿ ಪರಿಗಣಿಸಲಾಗಿರುವ ಜಿಲ್ಲೆಗಳಲ್ಲಿ ಅಗತ್ಯ ವಸ್ತುಗಳ ಸರಬರಾಜಿಗಾಗಿ ಒಳ ಬರುವ ಮತ್ತು ಹೊರಹೋಗುವ ಎರಡು ಮಾರ್ಗಗಳು ಮಾತ್ರ ತೆರೆದಿರುತ್ತವೆ. ಉಳಿದೆಲ್ಲ ರಸ್ತೆಗಳೂ ಕಟ್ಟು ನಿಟ್ಟಿನ ಬೀಗಮುದ್ರೆಗೆ ಒಳಪಟ್ಟಿವೆ ಎಂದು ಮಾರ್ಗದರ್ಶಿ ಸೂತ್ರಗಳು ಹೇಳಿವೆ.

ಇತರ ವಲಯಗಳಲ್ಲಿ ಖಾಸಗಿ ವಾಹನಗಳಿಗೆ ಜಿಲ್ಲೆಗಳ ಒಳಗೆ ಸರಿ ಮತ್ತು ಬೆಸ ಪದ್ಧತಿಯಂತೆ ಸಂಚರಿಸಲು ಅವಕಾಶವಿದೆ. ರಾತ್ರಿ ಗಂಟೆಯವರೆಗೆ ತಪ್ಪಿದರೆ ಗಂಟೆಯವರೆಗೆ ತೆರೆದಿರಲು ರೆಸ್ಟೋರೆಂಟ್ಗಳಿಗೂ ಅವಕಾಶ ನೀಡಲಾಗಿದೆ.

ಜಿಲ್ಲೆಗಳ ಒಳಗೆ ಬಸ್ಸುಗಳಿಗೆ ಅಲ್ಪದೂರದ ಪಯಣಕ್ಕೆ ಅವಕಾಶ ನೀಡಲಾಗಿದೆ. ಸೇವೆಗಳು ಸಾಮಾಜಿಕ ಅಂತರ ಪಾಲನೆಯ ನಿಯಮಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಟ್ಟಣಂತಿಟ್ಟ, ಎರ್ನಾಕುಲಂ ಮತ್ತ ಕೊಲ್ಲಂ ಜಿಲ್ಲೆಗಳು ಕಿತ್ತಳೆ ವಲಯದಲ್ಲಿ ಇದ್ದು, ಏಪ್ರಿಲ್ ೨೪ರಿಂದ ಲಾಕ್ ಡೌನ್ ನಿಯಮಗಳು ಭಾಗಶಃ ಸಡಿಲಿಕೆ ಆಗಲಿವೆ. ಕಿತ್ತಳೆ ಬಿ ವಲಯದಲ್ಲಿ ಇರುವ ಅಳಪುಳ, ತಿರುವನಂತಪುರಂ, ಪಾಲಕ್ಕಾಡ್, ವೇನಾಡ್ ಮತ್ತು ತ್ರಿಶ್ಯೂರ್ನಲ್ಲಿ  ಲಾಕ್ಡೌನ್ ನಿಯಮಗಳು ಸೋಮವಾರದಿಂದ ಭಾಗಶಃ ಸಡಿಲಿಕೆ ಆಗಲಿದೆ.

ರಾಜ್ಯವು ಕೊರೋನಾವೈರಸ್ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಬಹುತೇಕ ಯಶಸ್ಸು ಸಾಧಿಸಿದ್ದು, ಹರಡುವಿಕೆಯ ದೈನಂದಿನ ಪ್ರಕರಣಗಳು ಎರಡಂಕಿಯಿಂದ ಒಂದಂಕಿಗೆ ಇಳಿದಿವೆ ಮತು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಳ್ಳುತ್ತಿರುವವರ ಸಂಖ್ಯೆಗಳು ಹೊಸದಾಗಿ ದಾಖಲಾಗುವವರ ಸಂಖ್ಯೆಗಿಂತ ಹೆಚ್ಚಿದೆ. ಕಳೆದ ಏಳು ದಿನಗಳಲ್ಲಿ ಕೇವಲ ೩೨ ಹೊಸ ಪ್ರಕರಣಗಳು ದಾಖಲಾಗಿದ್ದು, ೧೨೯ ಮಂದಿ ಕೋವಿಡ್-೧೯ ರೋಗಿಗಳು ಇದೇ ಅವಧಿಯಲ್ಲಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಸರ್ಕಾರವು ಕೊಟ್ಟಾಯಂ ಮತು ಇಡುಕ್ಕಿ ಎರಡು ಜಿಲ್ಲೆಗಳನ್ನು ಹಸಿರು ವಲಯವಾಗಿ ವರ್ಗೀಕರಿಸಿದೆ.ಇಲ್ಲಿ ಸೋಮವಾರದಿಂದ ನಿರ್ಬಂಧಗಳು ಬಹುತೇಕ ರದ್ದಾಗಲಿವೆ.

No comments:

Advertisement