My Blog List

Saturday, May 2, 2020

ಎರಡನೇ ಉತ್ತೇಜಕ ಕೊಡುಗೆ: ನಿರ್ಮಲಾ, ಅಮಿತ್ ಶಾ ಜೊತೆ ಪ್ರಧಾನಿ ಮೋದಿ ಚರ್ಚೆ

ಎರಡನೇ ಉತ್ತೇಜಕ ಕೊಡುಗೆ:  ನಿರ್ಮಲಾ, ಅಮಿತ್ ಶಾ ಜೊತೆ ಪ್ರಧಾನಿ ಮೋದಿ ಚರ್ಚೆ
ನವದೆಹಲಿ: ಕೊರೋನಾವೈರಸ್ ಹರಡದಂತೆ ತಡೆಯುವ ಸಲುವಾಗಿ ವಿಧಿಸಲಾಗಿರುವ ರಾಷ್ಟ್ರವ್ಯಾಪಿ ದಿಗ್ಬಂಧನದಿಂದ ಸಂಕಷ್ಟಕ್ಕೆ ಒಳಗಾದ ರಂಗಗಳಿಗೆ ಎರಡನೇ ಉತ್ತೇಜನ ಕೊಡುಗೆ ನೀಡುವ ಬಗ್ಗೆ ಕೇಂದ್ರ ಸರ್ಕಾರ ತೀವ್ರ ಪರಿಶೀಲನೆ ನಡೆಸುತ್ತಿದೆ ಎಂದು ನಂಬಲರ್ಹ ಮೂಲಗಳು 2020 ಮೇ 02ರ ಶನಿವಾರ ವರದಿ ಮಾಡಿದವು.

ಪ್ರಧಾನಿ ನರೇಂದ್ರ ಮೋದಿ ಅವರು ಹಿನ್ನೆಲೆಯಲ್ಲಿ ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್ಥಿಕ ಸಚಿವಾಲಯದ ಅಧಿಕಾರಿಗಳು ಸೇರಿದಂತೆ ಪ್ರಮುಖ ಸಚಿವಾಲಯಗಳ ಜೊತೆಗೆ ಸರಣಿ ಸಭೆಗಳನ್ನು  ನಡೆಸಿದರು.

ಪ್ರಧಾನಿಯವರು ಶಾ ಮತ್ತು ಸೀತಾರಾಮನ್ ಅವರ ಜೊತೆಗೆ ಮಾತುಕತೆ ನಡೆಸಿದ್ದು, ಪ್ರಮುಖ ಆರ್ಥಿಕ ಸಚಿವಾಲಯಗಳಾU ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್ ಎಂಇ) ಜೊತೆಗೂ ಸಮಾಲೋಚನೆಗಳನ್ನು ಮುಂದುವೆಸುವರು ಎಂದು ಮೂಲಗಳು ಹೇಳಿದವು.

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮಾಸಿಕ ಸಂಗ್ರಹದ ವಿವರಗಳ ಪ್ರಕಟಣೆಯನ್ನು ಶುಕ್ರವಾರ ಮುಂದೂಡಿರುವ ಹಣಕಾಸು ಸಚಿವಾಲಯ ಕೂಡಾ ಆರ್ಥಿಕ ಸ್ಥಿತಿಗತಿ ಮತ್ತು ಭಾರತೀಯ ಆರ್ಥಿಕತೆಗೆ ಉತ್ತೇಜನ ನೀಡಲು ತಾನು ಯೋಜಿಸಿರುವ ಉಪಕ್ರಮಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಲಿದೆ ಎಂದು ಮೂಲಗಳು ಹೇಳಿದವು.

ಪ್ರಧಾನಿಯವರು ನಾಗರಿಕ ವಿಮಾನಯಾನ, ಕಾರ್ಮಿಕ, ವಿದ್ಯುಚ್ಛಕ್ತಿ ಸಚಿವಾಲಯಗಳು ಸೇರಿದಂತೆ ವಿವಿಧ ಸಚಿವಾಲಯಗಳ ಜೊತೆಗೆ ಶುಕ್ರವಾರ ಸಭೆಗಳನ್ನು ನಡೆಸಿದ್ದಾರೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸೇರಿದಂತೆ ವಿವಿಧ ಸಚಿವಾಲಯಗಳ ಜೊತೆ ದೇಶೀಯ ಮತ್ತು ಸಾಗರದಾಚೆಯ ಹೂಡಿಕೆ ಆಕರ್ಷಣೆ ಮತ್ತು ದೇಶದಲ್ಲಿ ಸಣ್ಣ ಉದ್ಯಮಗಳ ಪುನಃಶ್ಚೇತನ ಮೂಲಕ ಚೇತರಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಬಗ್ಗೆ ಚರ್ಚಿಸಿದರು.

ಮಾತುಕತೆಗಳ ಸಂದರ್ಭದಲ್ಲಿ ಗೃಹ ಸಚಿವರು ಮತ್ತು ವಿತ್ತ ಸಚಿವರೂ ಉಪಸ್ಥಿತರಿದ್ದರು.
ತಳಹಂತದ ಸಂಕಷ್ಟಗಳನ್ನು ನಿವಾರಿಸುವ ಸಲುವಾಗಿ ಮಾರ್ಚ್ ಮಾಸಾಂತ್ಯದಲ್ಲಿ ಸರ್ಕಾರವು ಬಡವರಿಗೆ ಉಚಿತ ಆಹಾರಧಾನ್ಯ ಬಡಮಹಿಳೆಯರು ಮತ್ತು ಹಿರಿಯರಿಗೆ ಆರ್ಥಿಕ ರವು ಸೇರಿದಂತೆ  . ಲಕ್ಷ ರೂಪಾಯಿಗಳ ಉತ್ತೇಜಕ ಕೊಡುಗೆಯನ್ನು ಪ್ರಕಟಿಸಿತ್ತು.

ತಳಹಂತದ ಸಂಕಷ್ಟ ನಿವಾರಣೆಗಾಗಿ ಎರಡನೇ ಸುತ್ತಿನ ಪರಿಹಾರ ಕ್ರಮ ಹಾಗೂ ಭಾರತೀಯ ಕಾರ್ಪೋರೇಟ್ ವಲಯಕ್ಕೆ ಉತ್ತೇಜನ ಕೊಡುಗೆ ನೀಡುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಭಾರತವು ಮೊದಲಿಗೆ ಮಾರ್ಚ್ ೨೫ರಿಂದ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು (ಲಾಕ್ ಡೌನ್) ಘೋಷಿಸಿತ್ತು ಬಳಿಕ ಅದನ್ನು ಮೇ ೩ರವರೆಗೆ ವಿಸ್ತರಿಸಿತ್ತು.

ದಿಗ್ಬಂಧನ ಘೋಷಣೆಯ ಬಳಿಕ ವ್ಯವಹಾರ, ವಿಮಾನಯಾನ, ರೈಲ್ವೇ ಪ್ರಯಾಣ, ಬಸ್ಸು ಪಯಣಗಳನ್ನು ಸ್ಥಗಿತಗೊಳಿಸಿದ ಸರ್ಕಾರ ಜನರ ಸಂಚಾರ, ವಸ್ತುಗಳ ಸಾಗಣೆಯನ್ನು ನಿರ್ಬಂಧಿಸಿತ್ತು.

ಈಗ ಮೇ ೪ರಿಂದ ಕೊರೋನಾವೈರಸ್ ಪ್ರಕರಣಗಳು ಇಲ್ಲದ ಹಸಿರು (ಗ್ರೀನ್) ಮತ್ತು ಅತ್ಯಂತ ಕಡಿಮೆ ಪ್ರಕರಣಗಳು ಇರುವ ಕಿತ್ತಳೆ (ಆರೆಂಜ್) ಜಿಲ್ಲೆಗಳಲ್ಲಿ  ಕೆಲವು ನಿರ್ಬಂಧಗಳನ್ನು ಸಡಿಲಿಸಲು ಮತ್ತು ಕೈಗಾಕೆಗಳ ಆರಂಭಕ್ಕೆ ಅನುಮತಿ ನೀಡಲು ಸರ್ಕಾರ ನಿರ್ಧರಿಸಿದೆ.

ಸಡಿಲಿಕೆ ನಿರ್ದಿಷ್ಟ ಜಿಲ್ಲೆಗಳಲ್ಲಿ ಮೇ ೧೭ರವರೆಗೂ ಮುಂದುವರೆಯುವುದಾದರೂ ಸ್ಥಳೀಯ ಆಡಳಿತಗಳು ಸಾಮಾಜಿಕ ಅಂತರ ಪಾಲನೆಯಂತಹ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಬಗ್ಗೆ ನಿಗಾ ವಹಿಸಬೇಕು ಎಂದು ಸರ್ಕಾರ ಸೂಚಿಸಿದೆ.

No comments:

Advertisement