My Blog List

Monday, May 25, 2020

ಕೊರೋನಾ ಅತಿಬಾಧಿತ ೧೦ ರಾಷ್ಟ್ರಗಳ ಸಾಲಿಗೆ ಭಾರತ

ಕೊರೋನಾ ಅತಿಬಾಧಿತ ೧೦ ರಾಷ್ಟ್ರಗಳ ಸಾಲಿಗೆ ಭಾರತ
ನವದೆಹಲಿ: ಭಾರತವು ೭೦೦೦ ಹೊಸ ಪ್ರಕರಣಗಳ ದಾಖಲಾತಿಯೊಂದಿಗೆ ಇರಾನ್ನ್ನು ಹಿಂದೆ ಹಾಕುವ ಮೂಲಕ ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿನ ಹಾಟ್ಸ್ಪಾಟ್ಗಳು ಎಂಬುದಾಗಿ ಗುರುತಿಸಲಾದ ೧೦ ರಾಷ್ಟ್ರಗಳ ಸಾಲಿಗೆ 2020 ಮೇ 25ರ ಸೋಮವಾರ ಕಾಲಿಟ್ಟಿತು.

ಭಾನುವಾರ ,೯೭೭ ಹೊಸ ಪ್ರಕರಣಗಳ ಮೂಲಕ ಇತ್ತೀಚಿನ ದಿನಗಳಲ್ಲೇ ಅತ್ಯಂತ ಹೆಚ್ಚು ಸೋಂಕು ಪ್ರಕರಣಗಳನ್ನು ಭಾರತ ದಾಖಲಿಸಿತ್ತು. ಭಾನುವಾರ ಮತ್ತು ಸೋಮವಾರದ ಹೊಸ ಪ್ರಕರಣಗಳೊಂದಿಗೆ ದೇಶದಲ್ಲಿ ಕೊರೋನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ,೩೮,೫೨೬ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವಾಲಯದ ತಿಳಿಸಿತು. ದೇಶದಲ್ಲಿ ಕೋವಿಡ್ -೧೯ಕ್ಕೆ ಬಲಿಯಾದವರ ಸಂಖ್ಯೆ ,೦೦೦ವನ್ನು ದಾಟಿತು.

ಮಹಾರಾಷ್ಟ್ರದಲ್ಲಿ ಭಾನುವಾರ ಅತ್ಯಂತ ಹೆಚ್ಚು ಪ್ರಕರಣಗಳು ವರದಿಯಾದವು. ರಾಜ್ಯದಲ್ಲಿ ಕೊರೋನಾಸೋಂಕಿತರ ಸಂಖ್ಯೆ ೫೦,೦೦೦ವನ್ನು ದಾಟಿತು. ಕೋವಿಡ್ ಸಾವಿನ ಸಂಖ್ಯೆಯೂ ,೬೩೫ಕ್ಕೆ ತಲುಪಿತು. ಮಹಾರಾಷ್ಟ್ರವು ಭಾರತದಲ್ಲಿ ಕೊರೋನಾವೈರಸ್ ಸಾಂಕ್ರಾಮಿಕಕ್ಕೆ ಅತ್ಯಂತ ಹೆಚ್ಚು ನಲುಗಿರುವ ರಾಜ್ಯವಾಗಿದೆ.

ಗುಜರಾತಿನಲ್ಲಿ ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ ೧೪,೦೦೦ಕ್ಕೆ ತಲುಪಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ೩೯೪ ಹೊಸ ಪ್ರಕರಣಗಳು ದಾಖಲಾದವು, ಜೊತೆಗೆ ೨೯ ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ ೮೫೮ಕ್ಕೆ ಏರಿತು.

ತಮಿಳುನಾಡಿನಲ್ಲಿ ಭಾನುವಾರ ಕೊರೋನಾವೈರಸ್ ಪ್ರಕರಣಗಳಿಗೆ ೭೦೦ ಪ್ರಕರಣಗಳು ಸೇರ್ಪಡೆಯಾದವು. ರಾಜ್ಯದಲ್ಲಿ ಒಟ್ಟು ೧೬,೨೭೭ ಮಂದಿಗೆ ವೈರಾಣು ತಗುಲಿದೆ. ಒಟ್ಟು ಕೊರೋನಾವೈರಸ್ ಪ್ರಕರಣಗಳ ಪೈಕಿ ಶೇಕಡಾ ೫೦ರಷ್ಟು ಅಂದರೆ ,೩೨೪ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಭಾರತದ ರಾಜಧಾನಿಯಾಗಿರುವ ದೆಹಲಿಯಲ್ಲಿ ಕಳೆದ ೨೪ ಗಂಟೆಗಲಲ್ಲಿ ೫೦೮ ಹೊಸ ಪ್ರಕರಣಗಳು ದಾಖಲಾದವು. ಇದರೊಂದಿಗೆ ಸೋಂಕಿತರ ಸಂಖ್ಯೆ ೧೩,೪೧೮ಕ್ಕೆ ಏರಿತು. ಸಾವಿನ ಸಂಖ್ಯೆ ೨೬೧ಕ್ಕೆ ಏರಿತು.

ಮಧ್ಯೆ, ಒಟ್ಟು ಸೋಂಕಿತರ ಪೈಕಿ ಈವರೆಗೆ ಶೇಕಡಾ ೪೧ಕ್ಕೂ ಹೆಚ್ಚು ಅಂದರೆ ೫೭,೭೨೧ ಮಂದಿ ಗುಣಮುಖರಾಗುವುದರೊಂದಿಗೆ ಭಾರತವು ತನ್ನ ಚೇತರಿಕೆ ಪ್ರಮಾಣವನ್ನು ಸುಧಾರಿಸಿಕೊಂಡಿತು. ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಾಗಿದ್ದು ಪ್ರತಿದಿನ ,೫೦,೦೦೦ ಮಂದಿಯನ್ನು ಪರೀಕ್ಷಿಸಲಾಗುತ್ತಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಏಳು ರಾಜ್ಯಗಳ ೧೧ ಮುನಿಸಿಪಲ್ ಪ್ರದೇಶಗಳು ಭಾರತದ ಒಟ್ಟು ಕೊರೋನಾವೈರಸ್ ಪ್ರಕರಣಗಳ ಸಿಂಹಪಾಲನ್ನು ಅಂದರೆ ಶೇಕಡಾ ೭೦ರಷ್ಟನ್ನು ಹೊಂದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.  ಮುನಿಸಿಪಲ್ ಪ್ರದೇಶಗಳು ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ದೆಹಲಿ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ ರಾಜ್ಯಗಳಲ್ಲಿವೆ.

ಮುಂದಿನ ಎರಡು ತಿಂಗಳ ಕಾಲ ಕೋವಿಡ್-೧೯ ಸಾಂಕ್ರಾಮಿಕ ವಿರೋಧಿ ಹೋರಾಟಕ್ಕಾಗಿ ಆರೋಗ್ಯ ಮೂಲ ಸವಲತ್ತನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಚಿವಾಲಯವು ಮುನಿಸಿಪಲ್ ಪ್ರದೇಶಗಳಿಗೆ ತಿಳಿಸಿದೆ.

ಹಳೆ ನಗರಗಳು, ನಗರ ಕೊಳಚೆಗೇರಿಗಳು ಮತ್ತು ಹೆಚ್ಚು ವಲಸೆ ಕಾರ್ಮಿಕರ ಕ್ಲಸ್ಟರುಗಳಂತಹ ಜನಸಾಂದ್ರತೆಯ ಪ್ರದೇಶಗಳಲ್ಲಿ ಕೋವಿಡ್ ೧೯ ಪ್ರಕರಣಗಳ ನಿರ್ವಹಣೆ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಮತ್ತು ಪರೀಕ್ಷಾ ಸವಲತ್ತುಗಳನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರವು ಏಳು ರಾಜ್ಯಗಳನ್ನು ಒತ್ತಾಯಿಸಿದೆ.

ಪ್ರಾರಂsಭದಲ್ಲೇ ರೋಗ ಪತ್ತೆ ಮಾಡಲು ಸಾಧ್ಯವಾಗುವಂತೆ ಮುನಿಸಿಪಲ್ ಪ್ರದೇಶಗಳಲ್ಲಿ ಪರೀಕ್ಷಾ ಸವಲತ್ತುಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಪರಿಸ್ಥಿತಿ ಸುಧಾರಿಬಹುದು ಎಂದು ಕೇಂದ್ರ ಸರ್ಕಾರ ಬೊಟ್ಟು ಮಾಡಿದೆ. ಪ್ರಾರಂಭದಲ್ಲೇ ರೋಗ ಪತ್ತೆ ಮಾಡುವ ಮೂಲಕ ಸಕಾಲಿಕವಾಗಿ ಚಿಕಿತ್ಸಾ ನಿರ್ವಹಣೆ ಮಾಡಬಹುದು ಮತ್ತು ಸಾವಿನ ಪ್ರಮಾಣವನ್ನು ತಗ್ಗಿಸಬಹುದು ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಸರ್ಕಾರ ಮತ್ತು ಖಾಸಗಿ ಪ್ರಯೋಗಾಲಯಗಳ ಜೊತೆಗೆ ಸಕ್ರಿಯ ಸಮನ್ವಯ ಮೂಲಕ ಮಾದರಿ ಸಂಗ್ರಹದಲ್ಲಿನ ವಿಳಂಬ ನಿವಾರಣೆ, ಖಾಸಗಿ ಆಸ್ಪತ್ರೆಗಳ ಜೊತೆಗೆ ಪಾಲುದಾರಿಕೆ ಮೂಲಕ ಆರೋಗ್ಯ/ ಹಾಸಿಗೆ ಸಾಮರ್ಥ್ಯ ಹೆಚ್ಚಳ, ತ್ಯಾಜ್ಯ ನಿರ್ವಹಣೆ ಮತ್ತು ಕೋವಿಡ್ ಪಾಸಿಟಿವ್ ಪ್ರದೇಶಗಳಲ್ಲಿ ಸೋಂಕು ನಿವಾರಣೆ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಸಚಿವಾಲಯ ಹೇಳಿದೆ.

ದೇಶೀ ವಿಮಾನ ಹಾರಾಟ ಆರಂಭ
ಭಾರತವು ಎರಡು ತಿಂಗಳುಗಳ ಹಿಂದೆ ಅಮಾನತುಗೊಳಿಸಲಾಗಿದ್ದ ದೇಶೀ ವಿಮಾನಯಾನವನ್ನು ಸೋಮವಾರ ಆರಂಭಿಸಿತು.

ಮೊಬೈಲುಗಳಲ್ಲಿ ಆರೋಗ್ಯ ಸೇತು ಅಪ್ಲಿಕೇಷನ್ ಅಳವಡಿಕೆಯಿಂದ ಹಿಡಿದು, ತಪಾಸಣೆಗೆ ಒಳಪಡಲು ಎರಡು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣ ತಲುಪುವುದನ್ನು ಕಡ್ಡಾಯಗೊಳಿಸಲಾಗಿದ್ದು, ಕೇಂದ್ರವು ವಿಮಾನಯಾನಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ರಾಜ್ಯಗಳು ಕೂಡಾ ಕ್ವಾರಂಟೈನ್ ಮತ್ತು ಪ್ರತ್ಯೇಕವಾಸ ಸಲುವಾಗಿ ತನ್ನದೇ ಅಂದಾಜಿನ ಪ್ರಕಾರ ಶಿಷ್ಟಾಚಾರಗಳನ್ನು ಅಳವಡಿಸಿಕೊಳ್ಳಬಹುದು ಎಂದು ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದರು.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೫೫,೩೨,೦೧೦, ಸಾವು ,೪೭,೨೪೩
ಚೇತರಿಸಿಕೊಂಡವರು- ೨೩,೧೯,೨೧೬
ಅಮೆರಿಕ ಸೋಂಕಿತರು ೧೬,೮೯,೫೮೧, ಸಾವು ೯೯,೩೮೧
ಸ್ಪೇನ್ ಸೋಂಕಿತರು ,೮೨,೮೫೨, ಸಾವು ೨೮,೭೫೨
ಇಟಲಿ ಸೋಂಕಿತರು ,೨೯,೮೫೮, ಸಾವು ೩೨,೭೮೫
ಜರ್ಮನಿ ಸೋಂಕಿತರು ,೮೦,೫೦೫, ಸಾವು ,೩೮೨
ಚೀನಾ ಸೋಂಕಿತರು ೮೨,೯೮೫, ಸಾವು ,೬೩೪
ಇಂಗ್ಲೆಂಡ್ ಸೋಂಕಿತರು ,೫೯,೫೫೯, ಸಾವು ೩೬,೭೯೩
ಅಮೆರಿಕದಲ್ಲಿ ೮೧ ಇರಾನಿನಲ್ಲಿ ೩೪, ಬೆಲ್ಜಿಯಂನಲ್ಲಿ ೩೨, ಇಂಡೋನೇಷ್ಯ ೧೯, ನೆದರ್ ಲ್ಯಾಂಡ್ಸ್ನಲ್ಲಿ ೦೮, ರಶ್ಯಾದಲ್ಲಿ ೯೨, ಸ್ವೀಡನ್ನಲ್ಲಿ ೩೧, ಮೆಕ್ಸಿಕೋದಲ್ಲಿ ೨೧೫ ಒಟ್ಟಾರೆ ವಿಶ್ವಾದ್ಯಂತ ೮೦೯ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement