My Blog List

Monday, May 25, 2020

ಬೆಂಗಳೂರಿಗೆ ದೆಹಲಿಯಿಂದ ಒಬ್ಬನೇ ಬಂದ ೫ರ ಪೋರ!

ಬೆಂಗಳೂರಿಗೆ ದೆಹಲಿಯಿಂದ ಒಬ್ಬನೇ ಬಂದ ೫ರ ಪೋರ!
ನವದೆಹಲಿ: ಯಾರೂ ಜೊತೆಗಾರರೂ ಇಲ್ಲದೆ ಐದು ವರ್ಷದ ಪೋರನೊಬ್ಬ 2020 ಮೇ 25ರ ಸೋಮವಾರ  ದೆಹಲಿಯಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏಕಾಂಗಿಯಾಗಿ ಪ್ರಯಾಣ ಮಾಡಿದ ಘಟನೆ ಘಟಿಸಿತು.

ಇತರ ಹಲವು ಪ್ರಯಾಣಿಕರ ಜೊತೆಗೆ ದೆಹಲಿಯಲ್ಲಿ ವಿಮಾನವೇರಿ ಬೆಂಗಳೂರು ತಲುಪಿದ ವಿಹಾನ್ ಶರ್ಮನನ್ನು ಬೆಂಗಳೂರಿನಲ್ಲಿ ಆತನ ತಾಯಿ ಸ್ವಾಗತಿಸಿದರು. ಮೂರು ತಿಂಗಳ ಬಳಿಕ ಆಕೆಗೆ ತನ್ನ ಪುತ್ರನನ್ನು ಕಾಣಲು ಸಾಧ್ಯವಾಯಿತು.

ನನ್ನ ಐದು ವರ್ಷದ ಮಗ ವಿಹಾನ್ ಶರ್ಮ್ ದೆಹಲಿಯಿಂದ ಬೆಂಗಳೂರಿಗೆ ಏಕಾಂಗಿಯಾಗಿ ಪಯಣಿಸಿದ್ದಾನೆ. ಮೂರು ತಿಂಗಳ ಬಳಿಕ ಆತ ಬೆಂಗಳೂರಿಗೆ ವಾಪಸಾಗಿದ್ದಾನೆ ಎಂದು ತಾಯಿ ಹೇಳಿದ್ದನ್ನು ಸುದ್ದಿ ಸಂಸ್ಥೆಯೊಂದು ಉಲ್ಲೇಖಿಸಿ ವರದಿ ಮಾಡಿತು.

ಕೋವಿಡ್-೧೯ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಮಹಾರಾಷ್ಟ್ರ, ಗುಜರಾತ್, ದೆಹಲಿ, ತಮಿಳುನಾಡು, ರಾಜಸ್ಥಾನ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಿಂದ ಬರುವ ಪ್ರಯಾಣಿಕರು ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನಿಗೆ ಒಳಪಡುವುದು ಕಡ್ಡಾಯ. ಕ್ವಾರಂಟೈನ್ ವೆಚ್ಚವನ್ನು ಪ್ರಯಾಣಕರೇ ಭರಿಸಬೇಕು ಎಂದು ಕರ್ನಾಟಕ ಸರ್ಕಾರ ಹೇಳಿದೆ.

ಆದಾಗ್ಯೂ, ಗರ್ಭಿಣಿಯರು, ೧೦ ವರ್ಷಕ್ಕಿಂತ ಕೆಳಗಿನ ಮಕ್ಕಳು, ೮೦ ವರ್ಷ ಮೀರಿದ ಹಿರಿಯ ನಾಗರಿಕರು ಮತ್ತು ಕೊರೋನಾ ನೆಗೆಟಿವ್ ವರದಿ ಬಂದ ಅಸ್ವಸ್ಥರು ಹಾಗೂ ಅವರ ಒಬ್ಬ ಆರೈಕೆದಾರರಿಗೆ ಹೋಮ್ ಕ್ವಾರಂಟೈನಿಗೆ ಅವಕಾಶ ನೀಡಲಾಗಿದೆ.

ಎರಡು ತಿಂಗಳುಗಳ ಕೋವಿಡ್ -೧೯ ದಿಗ್ಬಂಧನದ ಬಳಿಕ ಸೋಮವಾರ ದೇಶೀ ವಿಮಾನಯಾನ ಆರಂಭವಾದ ಬಳಿಕ ನಗರ ವಿಮಾನ ನಿಲ್ದಾಣವು ಸುಮಾರು ೧೦೭ ವಿಮಾನಗಳ ನಿರ್ಗಮನ ಮತ್ತು ನೂರಾರು ವಿಮಾನU ಆಗಮನಕ್ಕೆ ಸಾಕ್ಷಿಯಾಯಿತು.

No comments:

Advertisement