ಗ್ರಾಹಕರ ಸುಖ-ದುಃಖ

My Blog List

Monday, May 25, 2020

ನಾಗರಿಕರ ಆರೋಗ್ಯದ ಬಗ್ಗೆ ಚಿಂತಿಸಿ, ಏರ್ ಲೈನ್ಸ್ ಬಗ್ಗೆ ಅಲ್ಲ: ಸುಪ್ರೀಂ

ನಾಗರಿಕರ ಆರೋಗ್ಯದ ಬಗ್ಗೆ ಚಿಂತಿಸಿ,
ಏರ್
ಲೈನ್ಸ್ ಬಗ್ಗೆ ಅಲ್ಲ: ಸುಪ್ರೀಂ
ನವದೆಹಲಿ: ವಿಮಾನಗಳಲ್ಲಿ ಮಧ್ಯದ ಆಸನಗಳಿಗೆ ಬುಕಿಂಗ್ ಮಾಡುತ್ತಿರುವುದಕ್ಕಾಗಿ ಸುಪ್ರೀಂಕೋರ್ಟ್ 2020 ಮೇ 25ರ ಸೋಮವಾರ ಕೇಂದ್ರ ಸರ್ಕಾರ ಮತ್ತು ವಿಮಾನಯಾನ ನಿಯಂತ್ರಕ ನಾಗರಿಕ ವಿಮಾನಯಾನ ಮಹಾನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿತು.

ಸರ್ಕಾರವು ನಾಗರಿಕರ ಆರೋಗ್ಯದ ಬಗ್ಗೆ ಚಿಂತಿಸಬೇಕು, ವಾಣಜ್ಯ ವಿಮಾನಗಳ ಆರೋಗ್ಯದ ಬಗ್ಗೆ ಅಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು. ವಿದೇಶಗಳಲ್ಲಿರುವ ಭಾರತೀಯರನ್ನು ಕರೆತರಲು ಹಾರಿಸಲಾಗುವ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಮಧ್ಯದ ಆಸನಗಳಿಗೆ ಸದ್ಯಕ್ಕೆ ಮುಂಗಡ ಬುಕಿಂಗ್ ತೆಗೆದುಕೊಳ್ಳದಂತೆ ಪೀಠವು ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ಆದೇಶ ನೀಡಿತು.

ಇತರ ಎಲ್ಲ ಕಡೆಗಳಲ್ಲಿ ಅಡಿಗಳ ಅಂತರ ಪಾಲನೆ ಕಡ್ಡಾಯ ಎಂಬುದಾಗಿ ಮಾರ್ಗಸೂಚಿಯಲ್ಲಿ ತಿಳಿಸಿರುವಾಗ, ವಿಮಾನಗಳಲ್ಲಿ ಸಾಮಾಜಿಕ ಅಂತರದ ನಿಯಮಗಳು ಅಗತ್ಯವಿಲ್ಲ ಎಂಬುದಾಗಿ ಸರ್ಕಾರ ಭಾವಿಸಿರುವುದು ಏಕೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಬೋಬ್ಡೆ ಪ್ರಶ್ನಿಸಿದರು. ಭುಜಕ್ಕೆ ಭುಜ ತಾಗುವಂತೆ ಕುಳಿತುಕೊಳ್ಳುವುದು ಅಪಾಯಕಾರಿ ಮತ್ತು ಸರ್ಕಾರವು ಸ್ವತಃ ರೂಪಿಸಿದ ನಿಯಮಗಳಿಗೆ ವಿರುದ್ಧ ಎಂದು ಪೀಠವು ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರಿಗೆ ಹೇಳಿತು. ಮೆಹ್ತ ಅವರು ಡಿಜಿಸಿಎ ಪರವಾಗಿ ಹಾಜರಾಗಿದ್ದರು.

ಆದಾಗ್ಯೂ ವಿಮಾನಗಳು ಗಾಳಿಯ ಪ್ರಸರಣ ಹೊಂದಿರುವುದರಿಂದ ಮಧ್ಯದ ಆಸನಗಳನ್ನು ಖಾಲಿ ಇಡುವುದರಿಂದ ಯಾವುದೇ ಉದ್ದೇಶ ಈಡೇರುವುದಿಲ್ಲ ಎಂದು ತುಷಾರ ಮೆಹ್ತ ವಾದಿಸಿದರು.
ಪರೀಕ್ಷೆಗಳ
ಹೆಚ್ಚಳ ಮತ್ತು ಕ್ವಾರಂಟೈನ್ ಅಥವಾ ಸಂಪರ್ಕ ತಡೆ  ಅತ್ಯುತ್ತಮ ಅಭ್ಯಾಸ ಹೊರತು ಮಧ್ಯದ ಆಸನ ಖಾಲಿ ಬಿಡುವುzಲ್ಲ ಎಂಬುದಾಗಿ ವೈದ್ಯಕೀಯ ಮತ್ತು ವಾಯುಯಾನ ತಜ್ಞರು ಸಲಹೆ sನೀಡಿದ್ದಾರೆ ಎಂದು ಅವರು ನುಡಿದರು.

ಆದರೆ ನ್ಯಾಯಾಲಯ ಅವರ ವಾದ ಸರಣಿಯಿಂದ ಪ್ರಭಾವಿತಗೊಳ್ಳಲಿಲ್ಲ. ಹೊರಗೆ, ಕನಿಷ್ಠ ಅಡಿಗಳ ಸಾಮಾಜಿಕ ಅಂತರ ಇರಬೇಕು ಮತ್ತು ಒಳಗೆ ನೀವು ಮಧ್ಯದ ಆಸನವನ್ನೂ ನಿವಾರಿಸುತ್ತಿಲ್ಲ ಎಂದು ನ್ಯಾಯಮೂರ್ತಿ ನುಡಿದರು.

ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ನೀವು ಹೇಗೆ ಹೇಳುವಿರಿ? ಕೊರೋನಾವೈರಸ್ಸಿಗೆ ತಾನು ವಿಮಾನದ ಒಳಗೆ ಇದ್ದೇನೆ, ಸೋಂಕನ್ನು ಹರಡಬಾರದು ಎಂಬುದು ಗೊತ್ತಾಗುತ್ತದೆಯೇ? ಎಂದು ಸಿಜೆಐ ಪ್ರಶ್ನಿಸಿದರು.

ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಮಧ್ಯದ ಆಸನವನ್ನು ಖಾಲಿ ಬಿಡಬೇಕು ಎಂಬುದಾಗಿ ಏರ್ ಇಂಡಿಯಾಕ್ಕೆ ನಿರ್ದೇಶನ ನೀಡಿದ್ದ ಬಾಂಬೆ ಹೈಕೋರ್ಟಿನ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಡಿಜಿಸಿಎ ಮತ್ತು ಏರ್ ಇಂಡಿಯಾ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಪೀಠ ಕೈಗೆತ್ತಿಕೊಂಡಿತ್ತು.

ಎರಡು ತಿಂಗಳುಗಳ ಬಳಿಕ ಸೋಮವಾರ ಆರಂಭವಾಗುವ ಸೀಮಿತ ಪ್ರಮಾಣದ ದೇಶೀ ವಿಮಾನಗಳಲ್ಲೂ ಮಧ್ಯದ ಆಸನವನ್ನು ಖಾಲಿ ಬಿಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿತು.
ಯಾವುದೇ ವ್ಯತ್ಯಾಸ ಇರಬಾರದು. ಸಾಮಾಜಿಕ ಅಂತರ ಪಾಲನೆ ಮುಖ್ಯ ಎಂಬುದು ಸಾಮಾನ್ಯ ಜ್ಞಾನ ಎಂದು ಪೀಠ ಹೇಳಿತು.

ಕಾರ್ಯಸಾಧ್ಯವಲ್ಲದ ಕಾರಣ ದೇಶೀ ವಿಮಾನಗಳಲ್ಲಿ ಮಧ್ಯದ ಆಸನವನ್ನು ಖಾಲಿ ಬಿಡಲಾಗುವುದಿಲ್ಲ. ಆಸನಗಳು ಖಾಲಿ ಉಳಿದಿದ್ದರೂ ಸಾಮಾಜಿಕ ಅಂತರ ಪಾಲನೆಗೆ ನಿಗದಿ ಪಡಿಸಲಾದ ದೂರವನ್ನು ವಿಮಾನದ ಒಳಗೆ ಪಾಲಿಸಲಾಗುವುದಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಕಳೆದವಾರ ಹೇಳಿದ್ದರು.

ಸಾಲಿಸಿಟರ್ ಜನರಲ್ ಅವರು ಏರ್ ಇಂಡಿಯಾ ಮತ್ತು ಡಿಜಿಸಿಎ ಎರಡರ ಪರವಾಗಿಯೂ ಹಾಜರಾಗಿರುವುದು ಏಕೆ ಎಂದು ಸಿಜೆಐ ಬೋಬ್ಡೆ ಕೇಳಿದರು. ನೀವು ಏರ್ ಇಂಡಿಯಾ ಮತ್ತು ಕೇಂದ್ರ ಸರ್ಕಾರ ಎರಡನ್ನೂ ಪ್ರತಿನಿಧಿಸುತ್ತಿದ್ದೀರಾ? ಏರ್ ಇಂಡಿಯಾದ ಕಷ್ಟ ನಿಮ್ಮ ಕಷ್ಟವೂ ಆಗಿದೆಯೇ? ಎಂದೂ ಸಿಜೆಐ ಪ್ರಶ್ನಿಸಿದರು.

ಅವೆರಡೂ ಒಂದೇ ಎಂದು ಸಾಲಿಸಿಟರ್ ಜನರಲ್ ಉತ್ತರಿಸಿದರು. ಇಲ್ಲ, ಅವೆರಡೂ ಒಂದೇ ಅಲ್ಲ ಎಂದು ನುಡಿದ ಸಿಜೆಐ, ಕೇಂದ್ರ ಸರ್ಕಾರವು ನಾಗರಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಹೊರತು ಏರ್ ಲೈನ್ಸ್ ಬಗ್ಗೆ ಅಲ್ಲ ಎಂದು ಹೇಳಿದರು.

ಆಸನಗಳನ್ನು ಖಾಲಿ ಇರಿಸಿಕೊಂಡು, ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಎಲ್ಲ  ಭಾರತೀಯರನ್ನು ಕರೆತರಲು ಬೇಕಾಗುವಷ್ಟು ವಿಮಾನಗಳು ಏರ್ ಇಂಡಿಯಾ ಬಳಿ ಇಲ್ಲ ಎಂದು ನುಡಿದ ಮೆಹ್ತ, ಮುಂದಿನ ಕೆಲವು ದಿನಗಳಿಗೆ ನಿಗದಿಯಾಗಿರುವ ವಿಮಾನಗಳಿಗಾಗಿ ಮಧ್ಯದ ಆಸನUಳು ಈಗಾಗಲೇ ಬುಕ್ ಆಗಿವೆ ಎಂದು ತಿಳಿಸಿದರು.

‘ನಿಗದಿಯಾಗಿರುವ ಮುಂದಿನ ದಿನಾಂಕUಳಲ್ಲಿ ಎಲ್ಲಾ ಬುಕಿಂಗ್ಗಳನ್ನು ಖಾಲಿ ಮಾಡಿ ಮತ್ತು ಮಧ್ಯದ ಆಸನಗಳಲ್ಲಿ ಹಾರಾಟ ಮಾಡಿ. ಅದರ ನಂತರ, ಯಾರನ್ನೂ ಮಧ್ಯದ ಆಸನಗಳಲ್ಲಿ ಹಾರಿಸಬೇಡಿ ಎಂದು ನ್ಯಾಯಾಲಯ ಆದೇಶಿಸಿತು.

ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಮಧ್ಯದ ಆಸನಗಳಿಗಾಗಿ ಏರ್ ಲೈನ್ಸ್ ಯಾವುದೇ ಮುಂಗಡ ಬುಕಿಂಗ್ ಪಡೆಯಬಾರದು ಎಂದೂ ನಿರ್ದೇಶನ ನೀಡಿದ ಸುಪ್ರೀಂಕೋರ್ಟ್ ವಿಷಯವನ್ನು ವಿವರವಾಗಿ ಪರಿಶೀಲಿಸಿ ಶೀಘ್ರ ಆದೇಶ ನೀಡುವಂತೆ ಬಾಂಬೆ ಹೈಕೋರ್ಟಿಗೆ ಸೂಚನೆ ನೀಡಿತು.

ಜೂನ್ ೭ರವರೆಗೆ ಮಾತ್ರ ಮಧ್ಯದ ಆಸನ ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ವಾಪಸ್ ಕರೆತರುವ ಏರ್ ಇಂಡಿಯಾ ವಿಮಾನಗಳು ಜೂನ್ ೬ರವರೆಗೆ ಮಾತ್ರ ಮಧ್ಯದ ಆಸನಗಳಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ಪಯಣ ಮಾಡಬಹುದು ಎಂದು ಸುಪ್ರೀಂಕೋರ್ಟ್ ಆಜ್ಞಾಪಿಸಿತು.
ಜೂನ್ ೬ರ ಬಳಿಕ, ವಿಮಾನಯಾನ ಸಂಸ್ಥೆಯು ಬಾಂಬೆ ಹೈಕೋರ್ಟಿನ ಮಧ್ಯಂತರ ಆದೇಶದ ಪ್ರಕಾರ ವಿಮಾನಗಳನ್ನು ಹಾರಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿತು. ಮಧ್ಯದ ಆಸನದಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ವಿಮಾನ ಹಾರಾಟ ಮಾಡುವಂತಿಲ್ಲ, ಸಾಮಾಜಿಕ ಅಂತರ ನಿಯಮಪಾಲನೆ ಪ್ರಕಾರ ಮಧ್ಯದ ಆಸನವನ್ನು ಖಾಲಿ ಬಿಡಬೇಕು ಎಂದು ಬಾಂಬೆ ಹೈಕೋರ್ಟ್ ಆದೇಶ ನೀಡಿತ್ತು.

No comments:

Advertisement