My Blog List

Monday, May 11, 2020

ಕರ್ನಾಟಕ ವಿದ್ಯಾರ್ಥಿಗಳಿಗೆ ‘ಶ್ರಮಿಕ’ ವಿಶೇಷ ರೈಲು

ಕರ್ನಾಟಕ ವಿದ್ಯಾರ್ಥಿಗಳಿಗೆ  ಶ್ರಮಿಕ’  ವಿಶೇಷ  ರೈಲು
ನವದೆಹಲಿ: ರಾಷ್ಟ್ರವ್ಯಾಪಿ ದಿಗ್ಬಂಧನದ ಸಂದರ್ಭದಲ್ಲಿ ದೆಹಲಿ, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಸಿಲುಕಿರುವ ಕರ್ನಾಟಕದ ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ವಲಸೆ ಕಾರ್ಮಿಕರನ್ನುಶ್ರಮಿಕ ವಿಶೇಷರೈಲಿನ ಮೂಲಕ ಕರ್ನಾಟಕಕ್ಕೆ ಕರೆದೊಯ್ಯಲು ರಾಜ್ಯ ಸರ್ಕಾರ ನಿರ್ಧರಿಸಿತು.
ಈಗಾಗಲೇಸೇವಾ ಸಿಂಧುಸಹಾಯವಾಣಿಯಲ್ಲಿ ನೋಂದಣಿ ಮಾಡಿಸಿರುವವರನ್ನು ರೈಲಿನ ಮೂಲಕ ಉಚಿತವಾಗಿ ಕರೆದೊಯ್ಯಲು ಕ್ರಮ ಕೈಗೊಳ್ಳಲಾಗಿದೆ. ರೈಲು ಹೊರಡುವ ಸಮಯ ಮತ್ತು ದಿನಾಂಕವನ್ನು ಮುಂದಕ್ಕೆ ತಿಳಿಸಲಾಗುವುದು ಎಂದು ಕರ್ನಾಟಕ ಭವನದ ಮೂಲಗಳು 2020 ಮೇ 11ರ ಸೋಮವಾರ ತಿಳಿಸಿದವು.
ಒಟ್ಟು ೯೫೬ ಜನ ನೋಂದಣಿ ಮಾಡಿಸಿದ್ದು, ಪೈಕಿ ಅಂದಾಜು ೮೦೦ ಜನರಿಗೆ ಅವರವರ ಮೂಲ ಜಿಲ್ಲೆಗಳಲ್ಲಿನ ಜಿಲ್ಲಾಧಿಕಾರಿಗಳಿಂದ ಕರೆಸಿಕೊಳ್ಳಲು ಒಪ್ಪಿಗೆ ದೊರೆತಿದೆ. ಇನ್ನಿತರರಿಗೆ ಅನ್ಯ ಕಾರಣಗಳಿಂದ ಪ್ರಯಾಣಕ್ಕೆ ಅವಕಾಶ ದೊರೆಯುವುದು ಬಾಕಿ ಇದೆ. ಎಲ್ಲರನ್ನೂ ಮೊದಲು ದೆಹಲಿ ಸರ್ಕಾರದ ವೈದ್ಯಕೀಯ ಸಿಬ್ಬಂದಿ ಮೂಲಕ ಅಗತ್ಯ ಆರೋಗ್ಯ ತಪಾಸಣೆಗೆ ಒಳಪಡಿಸಿ, ಕೊರೊನಾ ಸೋಂಕಿನಿಂದ ಮುಕ್ತರಾಗಿದ್ದಲ್ಲಿ ಮಾತ್ರ ಕರೆದೊಯ್ಯಲಾಗುತ್ತದೆ ಎಂದು ಮೂಲಗಳು ಹೇಳಿದವು.

ಇಲ್ಲಿಂದ ತೆರಳುವ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ಬೆಂಗಳೂರಿನಲ್ಲಿ ಮತ್ತೆ ತಪಾಸಣೆಗೆ ಒಳಪಡಿಸಿ ಅವರವರ ಜಿಲ್ಲಾ ಕೇಂದ್ರಕ್ಕೆ ಕರೆದೊಯ್ದು, ಸರ್ಕಾರ ಏರ್ಪಾಡು ಮಾಡಿದ ಸ್ಥಳಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ. ೧೪ ದಿನಗಳ ನಂತರ ಮತ್ತೊಮ್ಮೆ ತಪಾಸಣೆಗೆ ಒಳಪಡಿಸಿನೆಗೆಟಿವ್ವರದಿ ಬಂದವರನ್ನು ಮನೆಗೆ  ಕಳುಹಿಸಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಸರ್ಕಾರ ಈಗಾಗಲೇ ವಿಶೇಷ ರೈಲಿಗೆ ಅನುಮತಿ ನೀಡಿದ್ದು, ಪ್ರಯಾಣದ ಸಂಪೂರ್ಣ ವೆಚ್ಚವನ್ನು ಕರ್ನಾಟಕ ಸರ್ಕಾರ ಭರಿಸಲಿದೆ. ಇನ್ನಷ್ಟು ಮಾಹಿತಿಗಳನ್ನು ಮತ್ತೆ ಹಂಚಿಕೊಳ್ಳಲಾಗುತ್ತದೆ. ರೈಲು ಹೊರಡುವ ಸಮಯದ ಕುರಿತು ವಿವರಿಸಲಾಗುತ್ತದೆ. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅಧಿಕಾರಿಗಐu  ನೋಂದಾಯಿತರಿಗೆ ಕರೆ ಮಾಡಿ ಸ್ಪಷ್ಟಪಡಿಸಿದ್ದಾರೆ.

ನೋಂದಣಿ ಮಾಡಿಸದವರಿಗೆ ೧೪ರಂದು ರೈಲು
ಸೇವಾ ಸಿಂಧುಸಹಾಯವಾಣಿ ಅಡಿ ನೋಂದಣಿ ಮಾಡಿಕೊಳ್ಳದ ಸಾರ್ವಜನಿಕರಿಗೆ ಮತ್ತೊಂದು ಹವಾನಿಯಂತ್ರತ ಬೋಗಿಗಳ (.ಸಿ) ರೈಲು ಇಲ್ಲಿಂದ ಮೇ ೧೪ರಂದು ಬೆಂಗಳೂರಿಗೆ ತೆರಳಲಿದೆ.

ರೈಲಿನ ಮೂಲಕ ತೆರಳಲು ಬಯಸುವವರು ಆನ್ ಲೈನಿನಲ್ಲಿ ಐಆರ್sಸಿಟಿಸಿ ಆಪ್ ಮೂಲಕ ಟಿಕೆಟ್ ಕಾದಿರಿಸುವುದು ಕಡ್ಡಾಯ. ರೈಲಿನ ಮೂಲಕ ಪ್ರಯಾಣ ಮಾಡಲು ಬಯಸುವವರಿಗಾಗಿ  ಸೋಮವಾರ ಸಂಜೆ ೪ರಿಂದ ಅನ್ ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಯಾವುದೇ ಏಜೆನ್ಸಿಗಳಿಗೆ ಟಿಕೆಟ್ ಹಂಚಿಕೆಗೆ ಅನುಮತಿ ನೀಡಲಾಗಿಲ್ಲ ಎಂದು ಪ್ರಕಟಣೆ ತಿಳಿಸಿತು.

No comments:

Advertisement