My Blog List

Tuesday, June 2, 2020

ಕೊರೋನಾ: ೨ ಲಕ್ಷದ ಸನಿಹಕ್ಕೆ ಭಾರತ, 10000 ಮೀರಿದ ಸಂಖ್ಯೆಗಳ ಪಟ್ಟಿ

ಕೊರೋನಾ: ಲಕ್ಷದ ಸನಿಹಕ್ಕೆ ಭಾರತ, 10000 ಮೀರಿದ ಸಂಖ್ಯೆಗಳ ಪಟ್ಟಿ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ಸೋಂಕಿನ ಸಂಖ್ಯೆ ಭಾರತದಲ್ಲಿ ,೦೦,೦೦೦ದ ಸಮೀಪಕ್ಕೆ ಬಂದಿದ್ದು,ಕೇಂದ್ರ ಆರೋಗ್ಯ ಸಚಿವಾಲಯವು ೧೦,೦೦೦ಕ್ಕಿಂತ ಹೆಚ್ಚು ಪ್ರಕರಣಗಳು ಇರುವ ಜಿಲ್ಲೆಗಳನ್ನು ಪಟ್ಟಿ ಮಾಡಿದೆ. ಸಚಿವಾಲಯದ ಅಂಕಿಸಂಖ್ಯೆ ಪ್ರಕಾರ ದೇಶದಲ್ಲಿ  2020 ಜೂನ್ 01ರ ಸೋಮವಾರ ಸೋಂಕಿನ ಪ್ರಕರಣಗಳ ಸಂಖ್ಯೆ ೧೯೨,೭೮೨ಕ್ಕೆ ಏರಿದ್ದು, ಸಾವಿನ ಸಂಖ್ಯೆ ,೪೧೫ಕ್ಕೆ ಏರಿದೆ. ೯೨,೪೭೪ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.

ಕೊರೋನಾದಿಂದ ಅತಿ ಹೆಚ್ಚು ಬಾಧಿತವಾಗಿರುವ ಮಹಾರಾಷ್ಟ್ರದಲ್ಲಿ ಕೋವಿಡ್ -೧೯ರ ಪ್ರಮಾಣವು ವೇಗವಾಗಿ ಹೆಚ್ಚುತ್ತಿದೆ. ಸಾಂಕ್ರಾಮಿಕ ರೋಗದಿಂದ ಹೆಚ್ಚು ಬಳಲಿದ ಜಿಲ್ಲೆಗಳಲ್ಲಿ  ಮಹಾರಾಷ್ಟ್ರದ ರಾಜಧಾನಿ ಮುಂಬೈ ಕೂಡ ಸೇರಿದೆ.

ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಭಾರತದ ಕೆಲವು ಜಿಲ್ಲೆಗಳ ಚಿತ್ರ ಕೆಳಗಿದೆ:

ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈಯಲ್ಲಿ ಈವರೆಗೆ ೪೧,೨೦೬ ಕೋವಿಡ್ -೧೯ ಪ್ರಕರಣಗಳು ದಾಖಲಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ನೀಡಿದ ಮಾಹಿತಿಯ ಪ್ರಕಾರ, ನಗರವು ಕಳೆದ ಎರಡು ದಿನಗಳಲ್ಲಿ (ಭಾನುವಾರದವರೆಗೆ) ,೨೮೪ ಕೋವಿಡ್ -೧೯ ಪಾಸಿಟಿವ್ ಪ್ರಕರಣಗಳನ್ನು ದಾಖಲಿಸಿದೆ. ಮುಂಬಯಿಯಲ್ಲಿ ಗುರುತಿಸಲಾಗಿರುವ ಕೆಲವು ಹಾಟ್ಸ್ಪಾಟ್ ಧಾರವಿ ಕೊಳೆಗೇರಿ. ಇಲ್ಲಿ ಕೋವಿಡ್-೧೯ ದೊಡ್ಡ ಸಮಸ್ಯೆಯಾಗಿ ಬದಲಾಗುತ್ತಿದೆ. ,೩೩೩ ಸಾವುಗಳೊಂದಿಗೆ, ಮುಂಬೈ ಎಲ್ಲಾ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸಾವುಗಳನ್ನು ದಾಖಲಿಸಿದೆ.

ಚೆನ್ನೈ: ತಮಿಳುನಾಡಿನ ರಾಜಧಾನಿ ಮತ್ತು ದಕ್ಷಿಣ ಭಾರತದ ದೊಡ್ಡ ನಗರ ಕೇಂದ್ರವಾದ ಚೆನ್ನೈ ಅತಿ ಹೆಚ್ಚು ಕೋವಿಡ್ -೧೯ ಪಾಸಿಟಿವ್ ಪ್ರಕರಣಗಳನ್ನು ಹೊಂದಿರುವ ಜಿಲ್ಲೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಸರ್ಕಾರದ ಮಾಹಿತಿಯ ಪ್ರಕಾರ, ಚೆನ್ನೈಯಲ್ಲಿ ೧೪,೮೦೦ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿ ೧೩೨ ಸಾವುಗಳು ದಾಖಲಾಗಿವೆ. ಕಳೆದ ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ,೪೨೦ ಪ್ರಕರಣಗಳು ದಾಖಲಾಗಿವೆ.

ಅಹಮದಾಬಾದ್: ಗುಜರಾತ್ ರಾಜಧಾನಿ ಅಹಮದಾಬಾದ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ೧೨,೧೮೦ ಪ್ರಕರಣUಳು ದಾಖಲಾಗಿವೆ. ಸಾವುನೋವುಗಳ ವಿಷಯಕ್ಕೆ ಬಂದರೆ, ಸಂಖ್ಯೆ ಚೆನ್ನೈಯನ್ನು ಮೀರಿಸಿದೆ. ಅಹಮದಾಬಾದಿನಲ್ಲಿ ಕೋವಿಡ್ -೧೯ ಸಂಬಂಧಿತ ಸಾವುಗಳ ಸಂಖ್ಯೆ ೮೪೨.

ಥಾಣೆ: ಕೋವಿಡ್ -೧೯ ವೇಗವಾಗಿ ಹರಡಿದ ಮಹಾರಾಷ್ಟ್ರದ ಎರಡನೇ ಜಿಲ್ಲೆ ಇದು. ಥಾಣೆಯಲ್ಲಿ ಕೊರೋನವೈರಸ್ ಕಾಯಿಲೆಯ ೧೦,೪೮೮ ಪ್ರಕರಣಗಳು ಮತ್ತು ೨೨೭ ಸಾವುನೋವುUಳು ದಾಖಲಾಗಿವೆ. ಹೆಚ್ಚು ಆತಂಕಕಾರಿ ಸಂಗತಿಯೆಂದರೆ, ಕೋವಿಡ್ -೧೯ ಪ್ರಕರಣಗಳಲ್ಲಿ ಥಾಣೆ ಅತಿ ಹೆಚ್ಚು ಏರಿಕೆ ಕಂಡಿದೆ - ಇದು ಎನ್ಡಿಎಂಎ ದತ್ತಾಂಶದ ಪ್ರಕಾರ ಕಳೆದ ಎರಡು ದಿನಗಳಲ್ಲಿ ,೪೦೫ ಪ್ರಕರಣಗಳನ್ನು ದಾಖಲಿಸಿದೆ.

ಪುಣೆ: ಇದು ಮಹಾರಾಷ್ಟ್ರದ ಮೂರನೇ ಜಿಲ್ಲೆಯಾಗಿದ್ದು, ಇದು ಕೋವಿಡ್ -೧೯ ಹಾಟ್ಸ್ಪಾಟ್ ಆಗಿ ಮಾರ್ಪಟ್ಟಿದೆ ಮತ್ತು ಕೊರೋನವೈರಸ್ ಕಾಯಿಲೆಯ ಶೀಘ್ರ ಹರಡುವಿಕೆಯನ್ನು ಕಾಣುತ್ತಿದೆ. ಪುಣೆಯಲ್ಲಿ ಕೋವಿಡ್ -೧೯ ಪ್ರಕರಣಗಳಲ್ಲಿ ,೫೬೦ ಮತ್ತು ೩೪೮ ಸಾವುಗಳು ದಾಖಲಾಗಿವೆ. ಕಳೆದ ಎರಡು ದಿನಗಳಲ್ಲಿ ಸಂಖ್ಯೆ ,೭೩೭ ರಿಂದ ,೫೬೦ ಕ್ಕೆ ಏರಿತು, ಇದು ,೮೨೩ ರಷ್ಟು ಹೆಚ್ಚಾಗಿದೆ.

ಐದು ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಲ್ಲಿ ಶೇಕಡಾ ೫೪ ರಷ್ಟು ಹೊಸ ಪ್ರಕರಣಗಳು ದಾಖಲಾಗಿವೆ. ಮಧ್ಯಪ್ರದೇಶದ ಇಂದೋರ್ (,೪೪೯ ಪ್ರಕರಣ), ಪಶ್ಚಿಮ ಬಂಗಾಳದ ಕೋಲ್ಕತ (,೧೬೭ ಪ್ರಕರಣ) ಮತ್ತು ರಾಜಸ್ಥಾನದ ಜೈಪುರ (,೦೨೯ ಪ್ರಕರಣ) ಇವು ಕೊರೋನಾವೈರಸ್ ತೀವ್ರವಾಗಿ ಬಾಧಿಸಿರುವ ದೇಶದ ಇತರ ಜಿಲ್ಲೆಗಳಾಗಿವೆ ಎಂದು ವರದಿ ತಿಳಿಸಿದೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೬೩,೦೦,೪೪೪, ಸಾವು ,೭೪,೫೨೭

ಚೇತರಿಸಿಕೊಂಡವರು- ೨೮,೬೬,೦೯೨

ಅಮೆರಿಕ ಸೋಂಕಿತರು ೧೮,೩೯,೬೭೯, ಸಾವು ,೦೬,೨೬೧

ಸ್ಪೇನ್ ಸೋಂಕಿತರು ,೮೬,೫೦೯, ಸಾವು ೨೭,೧೨೭

ಇಟಲಿ ಸೋಂಕಿತರು ,೩೨,೯೯೭, ಸಾವು ೩೩,೪೧೫

ಜರ್ಮನಿ ಸೋಂಕಿತರು ,೮೩,೫೬೪, ಸಾವು ,೬೦೫

ಚೀನಾ ಸೋಂಕಿತರು ೮೩,೦೧೭, ಸಾವು ,೬೩೪

ಇಂಗ್ಲೆಂಡ್ ಸೋಂಕಿತರು ,೭೪,೭೬೨, ಸಾವು ೩೮,೪೮೯

ಅಮೆರಿಕದಲ್ಲಿ ೬೬, ಇರಾನಿನಲ್ಲಿ ೮೧, ಬೆಲ್ಜಿಯಂನಲ್ಲಿ ೧೯, ಇಂಡೋನೇಷ್ಯ ೨೮, ನೆದರ್ ಲ್ಯಾಂಡ್ಸ್ನಲ್ಲಿ , ರಶ್ಯಾದಲ್ಲಿ ೧೬೨, ಸ್ವೀಡನ್ನಲ್ಲಿ s, ಮೆಕ್ಸಿಕೋದಲ್ಲಿ ೧೫೧ ಒಟ್ಟಾರೆ ವಿಶ್ವಾದ್ಯಂತ ೮೩೨ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement