My Blog List

Wednesday, June 17, 2020

ಕೊರೋನಾ: ಭಾರತದ ಸೋಂಕು 3,54,065, ಚೇತರಿಕೆ ಶೇ.52.79

ಕೊರೋನಾ: ಭಾರತದ ಸೋಂಕು 3,54,065, ಚೇತರಿಕೆ ಶೇ.52.79

ನವದೆಹಲಿ: ದೆಹಲಿ ಮತ್ತು ಮಹಾರಾಷ್ಟ್ರಗಳು ಕೋವಿಡ್ ಸಾವುನೋವುಗಳ ಅಂಕಿಸಂಖ್ಯೆಗಳನ್ನು ನವೀಕರಿಸಿದ ಬಳಿಕ ಭಾರತದಲ್ಲಿ ಕೊರೋನಾವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ 2020 ಜೂನ್ 17ರ ಬುಧವಾರ  ೧೨,೦೦೦ಕ್ಕೆ ಏರಿತು. ಬುಧವಾರ ಒಂದೇದಿನ ೨೦೦೦ಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಸಂಖ್ಯೆಗಳು ತಿಳಿಸಿವೆ.

ದೇಶದಲ್ಲಿ ಕೊರೋನಾಸೋಂಕಿನ ಪ್ರಕರಣಗಳ ಸಂಖ್ಯೆ ,೫೪,೦೬೫ಕ್ಕೆ ಏರಿದೆ ಎಂದೂ ವರದಿ ತಿಳಿಸಿದೆ.

ಸಚಿವಾಲಯದ ಅಂಕಿಸಂಖ್ಯೆಗಳ ಪ್ರಕಾರ, ಕಳೆದ ೨೪ ಗಂಟೆಗಳಲ್ಲಿ ದೇಶಾದ್ಯಂತ ೧೦,೯೭೪ ಹೊಸ ಪ್ರಕರಣಗಳು ವರದಿಯಾಗಿವೆ ಮತ್ತು ,೦೦೩ ರೋಗಿಗಳು ಉಸಿರಾಟದ ಕಾಯಿಲೆಗೆ ಬಲಿಯಾಗಿದ್ದಾರೆ. ಭಾರತದ ಸಾವಿನ ಸಂಖ್ಯೆ ಇಲ್ಲಿಯವರೆಗೆ ೧೧,೯೦೩ ಆಗಿದೆ.

ದೆಹಲಿ ಮತ್ತು ಮಹಾರಾಷ್ಟ್ರವು ನೂರಾರು ಸಾವುಗಳನ್ನು ಗಣನೆಗೆ ತೆಗೆದುಕೊಂಡ ನಂತರ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಒಟ್ಟು ಪ್ರಕರಣಗಳ ಪೈಕಿ ೧೮೬,೯೩೪ ಮಂದಿ ಗುಣಮುಖರಾಗಿದ್ದು ಅವರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಉಳಿದಂತೆ ,೫೫,೨೨೭ ಸಕ್ರಿಯ ಪ್ರಕರಣಗಳಿವೆ.

ಚೇತರಿಕೆ ಪ್ರಮಾಣ ಮಂಗಳವಾರ ಶೇಕಡಾ ೫೨.೪೬ರಿಂದ ಶೇಕಡಾ ೫೨.೭೯ಕ್ಕೆ ಏರಿದೆ.

ಸಾಂಕ್ರಾಮಿಕ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕರ್ನಾಟಕ, ಗುಜರಾತ್, ಬಿಹಾರ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಜೊತೆ ಬುಧವಾರ ಮಾತುಕತೆ ನಡೆಸಿದರು.

ಪ್ರಧಾನಿಯವರು ಈಗಾಗಲೇ ಪಂಜಾಬ್, ಅಸ್ಸಾಂ, ಕೇರಳ, ಉತ್ತರಾಖಂಡ, ಜಾರ್ಖಂಡ್, ಛತ್ತೀಸ್ಗಢ, ತ್ರಿಪುರ ಮತ್ತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಮಂಗಳವಾರ ಸಮಾಲೋಚನೆ ನಡೆಸಿದ್ದರು.

ಕೇಂದ್ರ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವಿನ ಸಾಂಕ್ರಾಮಿಕ ರೋಗದ ಕುರಿತು ಮುಖ್ಯಮಂತ್ರಿಗಳ ಜೊತೆಗಿನ ತಮ್ಮ ಆರನೇ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ, ಜೀವ ಮತ್ತು ಜೀವನೋಪಾಯ ಎರಡನ್ನೂ ರಕ್ಷಿಸುವುದು ರಾಷ್ಟ್ರೀಯ ಆದ್ಯತೆಯಾಗಿದೆ ಎಂದು ಹೇಳಿದರು.

"ನಾವು ಜೀವನ ಮತ್ತು ಜೀವನೋಪಾಯ ಎರಡg ಕಡೆಗೂ ಗಮನಹರಿಸಬೇಕು, ಆರೋಗ್ಯ ಮೂಲಸೌಕರ್ಯ, ಪರೀಕ್ಷೆ ಮತ್ತು ಪತ್ತೆಹಚ್ಚುವಿಕೆ ಮತ್ತು ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸಬೇಕು" ಎಂದು ಅವರು ವಾಸ್ತವ ಸಭೆಯಲ್ಲಿ ಹೇಳಿದರು.

ಸಾವಿನ ಸಂಖ್ಯೆ ಹೇಗೆ ಏರಿತು?

ಮಂಗಳವಾರದ ವೇಳೆಗೆ, ದೇಶದಲ್ಲಿ ಶೇಕಡಾ ೮೩ರಷ್ಟು  ಕೋವಿಡ್ -೧೯ ಸಾವುಗಳು ಮಹಾರಾಷ್ಟ್ರ, ಗುಜರಾತ್, ದೆಹಲಿ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು   ಐದು ಅತಿ ಹೆಚ್ಚು ಹಾನಿಗೊಳಗಾದ ರಾಜ್ಯಗಳಿಂದ ವರದಿಯಾಗಿದೆ. ಭಾರತದಲ್ಲಿ ವರದಿಯಾದ ಎಲ್ಲಾ ಸಾವುಗಳಲ್ಲಿ ಶೇಕಡಾ ೯೬ಕ್ಕಿಂತ ಹೆಚ್ಚು ಸಾವುಗಳು ಸೋಂಕಿನಿಂದ ಅತಿಬಾಧಿತವಾದ ೧೦ ರಾಜ್ಯಗಳಿಂದ ವರದಿಯಾಗಿದೆ.

ಮಾರ್ಚ್ ತಿಂಗಳಲ್ಲಿ ದೇಶದಲ್ಲಿ ಕೇವಲ ೭೦  ಕೋವಿಡ್-೧೯ ಸೋಂಕಿನ ಪ್ರಕರಣಗಳು ಇದ್ದಾಗ ಮೊದಲ ಸಾವು ದಾಖಲಾಗಿತ್ತು.

ಮೊದಲ ,೦೦೦ ಸಾವುಗಳು ೮೦ ದಿನಗಳನ್ನು ತೆಗೆದುಕೊಂಡವು, ಇತ್ತೀಚಿನ ,೦೦೦ ಸಾವುಗಳು ಕೇವಲ ೧೭ ದಿನಗಳಲ್ಲಿ ಸಂಭವಿಸಿವೆ, ಕಳೆದ ವಾರದಲ್ಲಿ ,೫೦೦ ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ.

ಸೌದಿ ಅರೇಬಿಯಾದಿಂದ ಕರ್ನಾಟಕದ ಕಲ್ಬುರ್ಗಿಗೆ ಮರಳಿದ ೭೬ ವರ್ಷದ ವ್ಯಕ್ತಿಯೊಬ್ಬರು ಕೋವಿಡ್ -೧೯ ಪಾಸಿಟಿವ್ ಪರೀಕ್ಷೆಯ ಬಳಿಕ ಮಾರ್ಚ್ ೧೨ರಂದು ಸೋಂಕಿಗೆ ತುತಾಗಿದ್ದರು.

ಭಾರತದ ಪ್ರಕರಣಗಳ ಸಾವಿನ ಪ್ರಮಾಣ (ಸಿಎಫ್ಆರ್) ಅಥವಾ ಒಟ್ಟು ಪ್ರಕರಣಗಳ ಸಾವಿನ ಪ್ರಮಾಣವು ಶೇಕಡಾ .೯ರಿಂದ ಶೇಕಡಾ .೪ಕ್ಕೆ ಏರಿದೆ ಮತ್ತು ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದೆ.

ಒಟ್ಟು ಕೋವಿಡ್ -೧೯ ಪ್ರಕರಣಗಳ ವಿಷಯದಲ್ಲಿ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಹಾನಿಗೊಳಗಾದ ನಾಲ್ಕನೇ ದೇಶವಾಗಿದೆ ಆದರೆ ಎಂಟನೇ ಸ್ಥಾನಕ್ಕೆ ಬರುವ ಸಾವಿನ ವಿಷಯದಲ್ಲಿ ಭಾರತದ ಪರಿಸ್ಥಿತಿ ಹೆಚ್ಚು ಉತ್ತಮವಾಗಿದೆ.

ರೋಗದಿಂದ ಹಾನಿಗೊಳಗಾದ ಇತರ ಅನೇಕ ರಾಷ್ಟ್ರಗಳಿಗೆ ಹೋಲಿಸಿದರೆ  ಒಟ್ಟು ಸಾವಿನ ಸಂಖ್ಯೆ ಕಡಿಮೆಯಾಗಿದೆ. ಭಾರತದ ಸಾವಿನ ಪ್ರಮಾಣವು (ಸಿಎಫ್ಆರ್) ಶೇಕಡಾ ೧೪ರಷ್ಟಿದೆ ಮತ್ತು ಇದು ಜಾಗತಿಕ ಸರಾಸರಿ ಶೇಕಡಾ ೫೬ಕ್ಕಿಂತ ಕಡಿಮೆಯಾಗಿದೆ.

ವಿಶ್ವಾದ್ಯಂತ, ೮೬ ಲಕ್ಷ ಸೋಂಕುಗಳು ಮತ್ತು ,೪೧,೬೬೮ ಜನರು ಇಲ್ಲಿಯವರೆಗೆ ಸಾವನ್ನಪ್ಪಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ಕೊರೋನವೈರಸ್ ಟ್ರ್ಯಾಕರ್ ತಿಳಿಸಿದೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೮೩,೦೫,೦೫೩, ಸಾವು ,೪೭,೦೮೬ ಚೇತರಿಸಿಕೊಂಡವರು- ೪೩,೪೮,೪೨೪

ಅಮೆರಿಕ ಸೋಂಕಿತರು ೨೨,೦೯,೮೩೭, ಸಾವು ,೧೯,೧೭೫

ಸ್ಪೇನ್ ಸೋಂಕಿತರು ,೯೧,೪೦೮, ಸಾವು ೨೭,೧೩೬

ಇಟಲಿ ಸೋಂಕಿತರು ,೩೭,೫೦೦, ಸಾವು ೩೪,೪೦೫

ಜರ್ಮನಿ ಸೋಂಕಿತರು ,೮೯,೦೨೭, ಸಾವು ,೯೧೮

ಚೀನಾ ಸೋಂಕಿತರು ೮೩,೨೬೫, ಸಾವು ,೬೩೪

ಇಂಗ್ಲೆಂಡ್ ಸೋಂಕಿತರು ,೯೮,೧೩೬, ಸಾವು ೪೧,೯೬೯

ಭಾರತ ಸೋಂಕಿತರು ,೫೯,೩೯೮, ಸಾವು ೧೨,೦೨೮

ಅಮೆರಿಕದಲ್ಲಿ ೪೩, ಇರಾನಿನಲ್ಲಿ ೧೨೦, ಬೆಲ್ಜಿಯಂನಲ್ಲಿ ೧೨, ಇಂಡೋನೇಷ್ಯ ೪೫, ನೆದರ್ ಲ್ಯಾಂಡ್ಸ್ನಲ್ಲಿ , ರಶ್ಯಾದಲ್ಲಿ ೧೯೪, ಪಾಕಿಸ್ತಾನದಲ್ಲಿ ೧೩೬, ಮೆಕ್ಸಿಕೋದಲ್ಲಿ ೭೩೦, ಒಟ್ಟಾರೆ ವಿಶ್ವಾದ್ಯಂತ ,೮೯೮ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ,೮೭,೭೧೮ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.

No comments:

Advertisement