Friday, June 12, 2020

೪ ಲಕ್ಷ ಕೋಟಿ ರೂ ಎಜಿಆರ್: ಕೇಂದ್ರಕ್ಕೆ ಸುಪ್ರೀಂ ತರಾಟೆ

ಲಕ್ಷ ಕೋಟಿ ರೂ ಎಜಿಆರ್: ಕೇಂದ್ರಕ್ಕೆ ಸುಪ್ರೀಂ ತರಾಟೆ

ನವದೆಹಲಿ:  ಖಾಸಗಿ ರಂಗದ ಘಟಕಗಳಿಂದ (ಪಿಎಸ್ಯು) ಹೊಂದಾಣಿಕೆ ಮಾಡಲಾದ ಒಟ್ಟು ಕಂದಾಯಕ್ಕಾಗಿ (ಎಜಿಆರ್) ಲಕ್ಷ ಕೋಟಿ  ರೂಪಾಯಿ ಪಾವತಿ ಮಾಡುವಂತೆ ದೂರಸಂಪರ್ಕ ಇಲಾಖೆಯು (ಟೆಲಿಕಾಂ ಇಲಾಖೆ) ಮುಂದಿಟ್ಟಿರುವ ಬೇಡಿಕೆಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಸುಪ್ರೀಂಕೋರ್ಟ್ 2020 ಜೂನ್ 11ರ ಗುರುವಾರ ಹೇಳಿತು. ಇದನ್ನು ಹಿಂತೆಗೆದುಕೊಳ್ಳುವ ಬಗ್ಗೆ ಟೆಲಿಕಾಂ ಇಲಾಖೆ ಪರಿಗಣಿಸಬೇಕು ಎಂದು ಪೀಠ ಹೇಳಿತು.

ನ್ಯಾಯಮೂರ್ತಿಗಳಾದ ಅರುಣ್ ಮಿಶ್ರ, ಎಸ್. ಅಬ್ದುಲ್ ನಜೀರ್ ಮತ್ತು ಎಂಆರ್ ಶಾ ಅವನ್ನು ಒಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸುತ್ತಾ, ಖಾಸಗಿ ರಂಗದ ಘಟಕಗಳಿಂದ ಬರಬೇಕಾದ ಎಜಿಆರ್ನ್ನು ಏರಿಸಿದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿತು.

ತನ್ನ ತೀರ್ಪನ್ನು ತಪ್ಪಾಗಿ ಅರ್ಥೈಸಲಾಗಿದೆ. ಎಜಿಆರ್ ಆಧರಿಸಿದ ಬಾಕಿ ವಿಷಯದ ಬಗ್ಗೆ ಸುಪ್ರೀಂಕೋರ್ಟ್  ವ್ಯವಹರಿಸಿಯೇ ಇಲ್ಲ ಎಂದು ಪೀಠ ಹೇಳಿತು.

ಇದು ಸಂಪೂರ್ಣವಾಗಿ ಅಸ್ವೀಕಾರಾರ್ಹ ಎಂದು ಖಾಸಗಿ ರಂಗದ ಘಟಕಗಳ ವಿರುದ್ಧ ಬೇಡಿಕೆ ಹೆಚ್ಚಿಸಿದ್ದನ್ನು ಉಲ್ಲೇಖಿಸುತ್ತಾ ಕೋರ್ಟ್ ಹೇಳಿತು.

ದೂರ ಸಂಪರ್ಕ ಇಲಾಖೆಯ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು ಎಜಿಆರ್ನ್ನು ಏರಿಸಿದ್ದು ಏಕೆ ಎಂಬುದಾಗಿ ವಿವರಿಸಿ ಪ್ರಮಾಣಪತ್ರ ಸಲ್ಲಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.

ಎಜಿಆರ್ ಬಾಕಿಯನ್ನು ಹೇಗೆ ಪಾವತಿ ಮಾಡಲಾಗುವುದು ಎಂದು ತಿಳಿಸಿ ಪ್ರಮಾಣಪತ್ರ ಸಲ್ಲಿಸುವಂತೆ ಖಾಸಗಿ ಟೆಲಿಕಾಂ ಆಪರೇಟರುಗಳಿಗೂ ಪೀಠ ಸೂಚಿಸಿತು.

ಟೆಲಿಕಾಂ ಬಾಕಿಗಳ ಬಗ್ಗೆ ಸ್ವಯಂ ಅಂದಾಜು ಮಾಡಿದ್ದಕ್ಕಾಗಿ ಭಾರ್ತಿ ಏರ್ಟೆಲ್, ವಡಾಫೋನ್ ಐಡಿಯಾ ಮತ್ತು ಇತರ ಮೊಬೈಲ್ ಫೋನ್ ಆಪರೇಟರುಗಳನ್ನು ಮೇ ೧೮ರಂದು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಅಂದಾಜು . ಲಕ್ಷ ಕೋಟಿ ರೂಪಾಯಿಗಳ ಬಾಕಿಯನ್ನು ಬಡ್ಡಿ ಸಹಿತವಾಗಿ ಅವುಗಳು ಪಾವತಿ ಮಾಡಬೇಕು ಎಂದು ಪೀಠ ಹೇಳಿತ್ತು.

ತಾವು ಸರ್ಕಾರಕ್ಕೆ ಪಾವತಿ ಮಾಡಬೇಕಾದ ಶುಲ್ಕವನ್ನು ಮರುಅಂದಾಜು ಮಾಡಲು ಕಂಪೆನಿಗಳಿಗೆ ಅನುಮತಿ ನೀಡಿದ್ದಕ್ಕಾಗಿ ಟೆಲಿಕಾಂ ಇಲಾಖೆಯನ್ನು ಕೂಡಾ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದ ಪೀಠ, ಕಂದಾಯ ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ ೨೦೧೯ರ ಅಕ್ಟೋಬರ್ ೨೪ರಂದು ತಾನು ನೀಡಿದ್ದ ತೀರ್ಪು ಅಂತಿಮ ಎಂದು ಹೇಳಿತ್ತು.

No comments:

Advertisement