Thursday, June 11, 2020

ಹಾಂಕಾಂಗಿನಿಂದ ಭಾರತಕ್ಕೆ ಬಂತು ನೀರವ್ ಮೋದಿಯ ಚಿನ್ನಾಭರಣ

ಹಾಂಕಾಂಗಿನಿಂದ ಭಾರತಕ್ಕೆ ಬಂತು ನೀರವ್ ಮೋದಿಯ ಚಿನ್ನಾಭರಣ

ನವದೆಹಲಿ: ಪಾಲಿಶ್ ಮಾಡಿದ ವಜ್ರಗಳು, ಬೆಳ್ಳಿ ಚಿನ್ನಾಭರಣ ಮತ್ತು ಮುತ್ತು ಸೇರಿದಂತೆ ಸುಮಾರು ,೩೫೦ ಕೋಟಿ ರೂಪಾಯಿ ಮೌಲ್ಯದ ೧೦೮ ವಸ್ತುಗಳನ್ನು ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿಗೆ ಸೇರಿದ ಹಾಂಕಾಂಗ್ ಗೋದಾಮಿನಿಂದ ಭಾರತಕ್ಕೆ ತರಲಾಗಿದೆ ಎಂದು ಜಾರಿ ನಿರ್ದೇಶನಾಲಯವು 2020 ಜೂನ್ 10ರ ಬುಧವಾರ ಪ್ರಕಟಿಸಿತು.

ವಸ್ತುಗಳ ಮೌಲ್ಯ ಅಂದಾಜು ,೩೫೦ ಕೋಟಿ ರೂಪಾಯಿಗಳು ಎಂಬುದಾಗಿ ಘೋಷಿಸಲಾಗಿದೆ. ಪಾಲಿಶ್ ಮಾಡಿದ ವಜ್ರಗಳು, ಮುತ್ತುಗಳು, ಬೆಳ್ಳಿ ಚಿನ್ನಾಭರಣಗಳು ಇತ್ಯಾದಿ ಅಮೂಲ್ಯ ಸೊತ್ತುಗಳು ಇವುಗಳಲ್ಲಿ ಸೇರಿವೆ. ಇವುಗಳನ್ನು ಹಾಂಕಾಂಗಿನಲ್ಲಿ ಸಾಗಣೆ ಕಂಪೆನಿಯೊಂದರ ಗೋದಾಮಿನಲ್ಲಿ ಇಡಲಾಗಿತ್ತು ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.

ಸುಮಾರು ,೩೪೦ ಕಿ.ಗ್ರಾಂ ತೂಕದ ಸರಕನ್ನು ಬುಧವಾರ ಮುಂಬೈಗೆ ವಾಪಸ್ ತರಲಾಗಿದೆ ಎಂದು ಅಧಿಕಾರಿ ನುಡಿದರು.

ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಭಾರತೀಯ ವ್ಯಾಪಾರೋದ್ಯಮಿಗಳಾಗಿದ್ದು, ಭಾರತೀಯ ಬ್ಯಾಂಕುಗಳಿಗೆ ಸಹಸ್ರಾರು ಕೋಟಿ ರೂಪಾಯಿ ವಂಚನೆ ಎಸಗಿದ ಪ್ರಕರಣಗಳಲ್ಲಿ ಅಧಿಕಾರಿಗಳಿಗೆ ಬೇಕಾಗಿದ್ದಾರೆ. ನೀರವ್ ಮೋದಿ ೨೩,೭೮೦ ಕೋಟಿ ರೂಪಾಯಿ ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ವಂಚನೆ ಪ್ರಕರಣದ ಮುಖ್ಯ ಆರೋಪಿಯಾಗಿದ್ದು ಕಳೆದ ವರ್ಷ ಮಾರ್ಚ್ನಿಂದೀಚೆಗೆ ಇಂಗ್ಲೆಂಡಿನಲ್ಲಿ ಸೆರೆವಾಸದಲ್ಲಿರುವ  ನೀರವ್ ಮೋದಿಯನ್ನು ಇಂಗ್ಲೆಂಡಿನಿಂದ ಹಸ್ತಾಂತರ ಮಾಡಿಕೊಳ್ಳಲು ಭಾರತವು ತೀವ್ರ ಪ್ರಯತ್ನ ನಡೆಸುತ್ತಿದೆ.

ಪ್ರಸ್ತುತ ಆಂಟಿಗುವಾದಲ್ಲಿರುವ ನೀರವ್ ಮೋದಿಯ ಚಿಕ್ಕಪ್ಪ ಮೆಹುಲ್ ಚೊಕ್ಸಿ ಕೂಡಾ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದು ಭಾರತದ ಅಧಿಕಾರಿಗಳು ವಶಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆ.

ಮುಂಬೈಯ ವಿಶೇಷ ನ್ಯಾಯಾಲಯವು ನೀರವ್ ಮೋದಿಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ ಅನುಮಿತಿ ನೀಡಿದ ಕೆಲವು ದಿನಗಳ ಬಳಿಕ ಬೆಳವಣಿಗೆ ನಡೆದಿದೆ.

ಸರಕನ್ನು ೨೦೧೮ರ ಆದಿಯಲ್ಲಿ ದುಬೈಯಿಂದ ಹಾಂಕಾಂಗ್ಗೆ ಕಳುಹಿಸಲಾಗಿತ್ತು ಮತ್ತು ಅದೇ ವರ್ಷ ಜುಲೈ ತಿಂಗಳಲ್ಲಿ ಜಾರಿ ನಿರ್ದೇಶನಾಲಯಕ್ಕೆ ಬಗ್ಗೆ ಸುಳಿವು ಸಿಕ್ಕಿತ್ತು ಎಂದು ಜಾರಿ ನಿರ್ದೇಶನಾಲಯದ ಅಧಿಕೃತ ಹೇಳಿಕೆ ತಿಳಿಸಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಾಂಕಾಂಗಿನ ವಿವಿಧ ಅಧಿಕಾರಿಗಳ ಜೊತೆಗೆ ಸತತ ಮಾತುಕತೆ ನಡೆಸಿ ಸರಕನ್ನು ಭಾರತಕ್ಕೆ ವಾಪಸ್ ತರಲು ತೀವ್ರ ಯತ್ನ ನಡೆಸಿದ್ದರು. ವಿವಿಧ ವಿಧಿ ವಿಧಾನಗಳನ್ನು ಪೂರೈಸಿದ ಬಳಿಕ ಸರಕನ್ನು ಭಾರತಕ್ಕೆ ವಾಪಸ್ ತರಲು ಸಾಧ್ಯವಾಯಿತುಎಂದು ಹೇಳಿಕೆ ತಿಳಿಸಿತು.

ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿಗೆ ಸೇರಿದ ೧೩೭ ಕೋಟಿ ರೂಪಾಯಿ ಮೌಲ್ಯದ ಅಮೂಲ್ಯ ಆಭರಣಗಳ ಸರಕನ್ನು ದುಬೈ ಮತ್ತು ಹಾಂಕಾಂಗಿನಿಂದ ತರಲು ಸಂಸ್ಥೆಗೆ ಹಿಂದೆ ಸಾಧ್ಯವಾಗಿತ್ತು ಎಂದು ನಿರ್ದೇಶನಾಲಯ ಹೇಳಿತು.

No comments:

Advertisement