ಗ್ರಾಹಕರ ಸುಖ-ದುಃಖ

My Blog List

Wednesday, June 10, 2020

ಕೊರೋನಾ ವಿರುದ್ಧ ಸಮರ: ಧಾರಾವಿ ದಾರಿ ತೋರಿಸಿತು..!

ಕೊರೋನಾ ವಿರುದ್ಧ ಸಮರ: ಧಾರಾವಿ ದಾರಿ ತೋರಿಸಿತು..!

ಮುಂಬೈ: ಕೊರೋನಾವೈರಸ್ ಸಾಂಕ್ರಾಮಿಕದ ಪ್ರಾಥಮಿಕ ದಿನಗಳಲ್ಲಿ ಮುಂಬೈ ನಗರದಲ್ಲಿ ಕೋವಿಡ್ ಹಾಟ್ ಸ್ಪಾಟ್ ಆಗಿ ಪರಿವರ್ತನೆಗೊಂಡಿದ್ದ ಧಾರಾವಿ ಕೊಳಚೆಗೇರಿಯು ದಿನದಿಂದ ದಿನಕ್ಕೆ ಕಡಿಮೆ ಸೋಂಕಿನ ಪ್ರಕರಣಗಳನ್ನು ಕಾಣುತ್ತಿದೆ. ದೈನಂದಿನ ಸರಾಸರಿ ಸೋಂಕು ಪ್ರಕರಣಗಳು ಇಳಿಮುಖವಾಗುತ್ತಿವೆ. ಸೋಂಕು ನಿಯಂತ್ರಣಕ್ಕೆ ಧಾರಾವಿ ದಾರಿ ತೋರಿಸಿದೆ.

ಏಷ್ಯಾದ ಅತಿದೊಡ್ಡ ಕೊಳಚೆಗೇರಿ ಆಗಿರುವ ಧಾರಾವಿಯಲ್ಲಿ ಜೂನ್ ಮೊದಲ ವಾರ ಕೊರೋನಾವೈರಸ್ ಸೋಂಕಿಗೆ ಒಬ್ಬನೇ ಒಬ್ಬ ವ್ಯಕ್ತಿ ಕೂಡಾ ಬಲಿಯಾಗಿಲ್ಲ. ಮೇ ತಿಂಗಳಲ್ಲಿ ಸರಾಸರಿ ೪೭ ಪ್ರಕರಣಗಳು ವರದಿಯಾಗಿದ್ದ ಧಾರಾವಿಯಲ್ಲಿ ಜೂನ್ ಹೊತ್ತಿಗೆ ಸೋಂಕಿನ ಪ್ರಕರಣಗಳ ಸಂಖ್ಯೆ ೨೭ಕ್ಕೆ ಇಳಿದಿತ್ತು. ಸೋಂಕು ದುಪ್ಪಟ್ಟಾಗುವ ಪ್ರಮಾಣ ೪೪ ದಿನಗಳಿಗೆ ಏರಿತ್ತು. ಪ್ರದೇಶದಲ್ಲಿ ಒಟ್ಟು ಕೊರೋನಾವೈರಸ್ ಪ್ರಕರಣಗಳಲ್ಲಿ ಶೇಕಡಾ ೫೦ರಷ್ಟು ಪ್ರಕರಣಗಳಲ್ಲಿ ರೋಗಿಗಳು ಚೇತರಿಸಿದ್ದಾರೆ.

ಜೂನ್ ೮ರಂದು ಪ್ರದೇಶದಲ್ಲಿ ೧೨ ಹೊಸ ಪ್ರಕರಣಗಳು ದಾಖಲಾದವು ಮತ್ತು ಜೂನ್ ೭ರಂದು ೧೩ ಹೊಸ ಪ್ರಕರಣಗಳು ದೃಢಪಟ್ಟವು. ಆದಾಗ್ಯೂ, ಜೂನ್ ೯ರಂದು ಇಲ್ಲಿ ೨೬ ಹೊಸ ಪ್ರಕರಣಗಳು ಮತ್ತು ಸಾವುಗಳು ದಾಖಲಾದವು.

ಮಹಾರಾಷ್ಟ್ರ ಸರ್ಕಾರದವೈರಸ್ಸನ್ನು ಬೆನ್ನಟ್ಟುವ ನೀತಿಯುಕೊರೋನಾವೈರಸ್ ವಿರುದ್ಧದ ಸಮರದಲ್ಲಿ ವಿಜಯಸಾಧನೆಗೆ ಕಾರಣವಾಗಿದೆ ಎಂದು ಧಾರಾವಿಯನ್ನೂ ಒಳಗೊಳ್ಳುವ ಬಿಎಂಸಿ ಜಿ ಉತ್ತರ ವಾರ್ಡಿನ ಅಸಿಸ್ಟೆಂಟ್ ಮುನಿಸಿಪಲ್ ಕಮೀಷನರ್ ಕಿರಣ್ ದಿಘಾವ್ಕರ್ ೨೦೨೦ ಜೂನ್ ೧೦ರ ಬುಧವಾರ ಹೇಳಿದರು.

ತೀವ್ರ ಸ್ವರೂಪದ ಸಂಪರ್ಕ ಪತ್ತೆ, ಪ್ರತ್ಯೇಕವಾಸ ಮತ್ತು ಪರೀಕ್ಷೆಗಳು ಪಾಸಿಟಿವ್ ಪ್ರಕರಣಗಳ ಸಂಖ್ಯೆಯನ್ನು ಇಳಿಮುಖಗೊಳಿಸಲು ಮುಂಬೈಗೆ ನೆರವಾದವು.

ಬಿಎಂಸಿ ಆರೋಗ್ಯ ಕಾರ್ಯಕರ್ತರು ಸುಮಾರು ಲಕ್ಷ ಮಂದಿಯ ಸ್ಕ್ರೀನಿಂಗ್ ಮಾಡಿದ್ದಾರೆ. ಖಾಸಗಿ ಕ್ಲಿನಿಕ್ ವೈದ್ಯರು, ಮೊಬೈಲ್ ವ್ಯಾನ್, ಮುನಿಸಿಪಲ್ ಡಿಸ್ಪೆನ್ಸರಿ ಇವೆಲ್ಲವನ್ನೂ ಇದಕ್ಕಾಗಿ ಬಳಸಿಕೊಳ್ಳಲಾಗಿತ್ತು ಎಂದು ದಿಘಾವ್ಕರ್ ಹೇಳಿದರು.

ಜ್ವರ, ಆಮ್ಲಜನಕದ ಮಟ್ಟ ಮತ್ತು ಇತರ ಲಕ್ಷಣಗಳಿಗಾಗಿ ಗರಿಷ್ಠ ಸಂಖ್ಯೆಯ ಜನರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂಬ ಸೂತ್ರದ ಪ್ರಕಾರ ನಾವು ದುಡಿದೆವು ಮತ್ತು ಅಂತಹವರನ್ನು ಪ್ರತ್ಯೇಕಿಸಿ ಪರಿಣಾಮಕಾರಿ ಪರೀಕ್ಷೆಗೆ ಗುರಿಪಡಿಸಿದೆವುಎಂದು ಅವರು ನುಡಿದರು.

ಕೊರೋನಾವೈರಸ್ ಸೋಂಕಿನ ಲಕ್ಷಣಗಳನ್ನು ತೋರಿಸುವ ವ್ಯಕ್ತಿಗಳನ್ನು ಗುರುತಿಸಲು ಮಹಾರಾಷ್ಟ್ರ ಸರ್ಕಾರವು ಫೀವರ್ ಕ್ಲಿನಿಕ್ಗಳನ್ನು ಸ್ಥಾಪಿಸಿದೆ. ಯಾರಾದರೂ ಒಬ್ಬ ರೋಗಿಯಲ್ಲಿ ಏನಾದರೂ ಲಕ್ಷಣ ಕಂಡು ಬಂದರೆ ಆತ ಅಥವಾ ಆಕೆಯನ್ನು ತತ್ಕ್ಷಣವೇ ಪ್ರತ್ಯೇಕಿಸಿ ವೈರಸ್ ಹರಡದಂತೆ ಹತೋಟಿಯಲ್ಲಿ ಇಡಲಾಗುತ್ತದೆ ಎಂದು ದಿಘಾವ್ಕರ್ ವಿವರಿಸಿದರು.

ಕೇಂದ್ರ ಮುಂಬೈಯ ಧಾರಾವಿಯಲ್ಲಿ ರಾಷ್ಟ್ರವ್ಯಾಪಿ ದಿಗ್ಬಂಧನ ಜಾರಿಯಾದ ಒಂದು ವಾರದ ಬಳಿಕ, ಏಪ್ರಿಲ್ ರಂದು ಮೊದಲ ಕೊರೋನಾವೈರಸ್ ಪ್ರಕರಣ ವರದಿಯಾಗಿತ್ತು. ಅಂದಿನಿಂದ ಲಕ್ಷ ಮಂದಿ ವಾಸವಾಗಿರುವ   ಪ್ರದೇಶವು ಕೊರೋನಾವೈರಸ್ ಸಾಂಕ್ರಾಮಿಕದ ಕೇಂದ್ರ ಬಿಂದುವಾಯಿತು. ಜೂನ್ ೭ರ ಹೊತ್ತಿಗೆ ಧಾರಾವಿಯಲ್ಲಿನ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ,೯೧೨ಕ್ಕೆ ಏರಿತ್ತು.

ನಾವು ಸತತವಾಗಿ ಹೆಚ್ಚು ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ ಬಹುತೇಕ ಮಂದಿಯನ್ನು ಪ್ರತ್ಯೇಕವಾಸಕ್ಕೆ ಒಳಪಡಿಸುತ್ತಿರುವುದರಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಇನ್ನು ಹೆಚ್ಚಬಹುದು ಎಂದು ನಾನು ಭಾವಿಸುವುದಿಲ್ಲ. ಧಾರಾವಿಯಲ್ಲಿ ಪ್ರಕರಣಗಳ ಸಂಖ್ಯೆ ಶೂನ್ಯ ಆಗುವವರೆಗೂ ನಾವು ಇದನ್ನು ಮುಂದುವರೆಸುತ್ತೇವೆ ಎಂದು ದಿಘಾವ್ಕರ್ ಹೇಳಿದರು.

ಮುಂಬೈಯಲ್ಲಿ ಕೊರೋನಾವೈರಸ್ ಪ್ರಕರಣಗಳು ೯೦,೦೦೦ದ ಮೈಲಿಗಲ್ಲು ದಾಟಿವೆ. ಸಾವಿನ ಸಂಖ್ಯೆ ,೨೮೯ಕ್ಕೆ ಏರಿದೆ. ಭಾರತದಲ್ಲಿ ಬುಧವಾರದ ಕೊರೋನಾ ಪ್ರಕರಣಗಳ ಸಂಖ್ಯೆ .೭೬ ಲಕ್ಷಕ್ಕೆ ಏರಿದೆ.

ವಿಡಿಯೋ ಮೂಲಕ ಸುದ್ದಿ ಆಲಿಸಲು ಕೆಳಗೆ ಕ್ಲಿಕ್ ಮಾಡಿರಿ

No comments:

Advertisement