ಗ್ರಾಹಕರ ಸುಖ-ದುಃಖ

My Blog List

Wednesday, June 10, 2020

ಭರವಸೆಯ ಬೆಳ್ಳಿರೇಖೆ, ಭಾರತದಲ್ಲಿ ಕೋವಿಡ್ ಚೇತರಿಕೆಯ ಮೇಲುಗೈ

ಭರವಸೆಯ ಬೆಳ್ಳಿರೇಖೆ, ಭಾರತದಲ್ಲಿ ಕೋವಿಡ್ ಚೇತರಿಕೆಯ ಮೇಲುಗೈ

ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಪ್ರಕರಣಗಳ ಏರಿಕೆ ಪ್ರಮಾಣ ಪ್ರತಿದಿನ ಅಂದಾಜು ೧೦,೦೦೦ಕ್ಕೆ ಏರಿದ್ದರ ನಡುವೆಯೂ ಇದೇ ಮೊದಲ ಬಾರಿಗೆ ಗುಣಮುಖರಾದ ಕೋವಿಡ್-೧೯ ರೋಗಿಗಳ ಸಂಖ್ಯೆಯು ಸಕ್ರಿಯ ಪ್ರಕರಣಗಳನ್ನು ಮೀರಿಸಿದೆ. ಆರೋಗ್ಯ ಸಚಿವಾಲಯವು  ೨೦೨೦ ಜೂನ್ ೧೦ರ ಬುಧವಾರ ಬಿಡುಗಡೆ ಮಾಡಿದ ಅಂಕಿಸಂಖ್ಯೆಗಳಿಂದ ವಿಚಾರವು ಬೆಳಕಿಗೆ ಬಂದಿತು.

ರೋಗ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಕೊರೋನಾವೈರಸ್ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ,೩೫,೨೦೫ಕ್ಕೆ ಏರಿದೆ. ಇದೇ ವೇಳೆಗೆ ಬುಧವಾರದ ಅಂಕಿಸಂಖ್ಯೆಯಂತೆ ಭಾರತದಲ್ಲಿರುವ ಸಕ್ರಿಯ ಕೋವಿಡ್-೧೯ ಪ್ರಕರಣಗಳ ಸಂಖ್ಯೆ  ,೩೩,೬೩೨. ಒಟ್ಟಾರೆ ಚೇತರಿಕೆ ಪ್ರಮಾಣ ಶೇಕಡಾ ೪೯.

ಭಾರತದ ಒಟ್ಟು ಕೊರೋನಾವೈರಸ್ ಸೋಂಕಿತರ ಸಂಖ್ಯೆ ಬುಧವಾರ .೭೬ ಲಕ್ಷವನ್ನು ಮೀರಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆ ,೫೦೦ನ್ನು  ದಾಟಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಾರ, ಈವರೆಗೆ ಕೊರೋನಾವೈರಸ್ ಪತ್ತೆ ಸಲುವಾಗಿ ೫೦ ಲಕ್ಷಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ. ಕಳೆದ ೨೪ ಗಂಟೆಗಳಲ್ಲಿ .೪೫ ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಒಟ್ಟು ೯೦,೦೦೦ ಪ್ರಕರಣಗಳೊಂದಿಗೆ ಮಹಾರಾಷ್ಟ್ರವು ಈಗಲೂ ದೇಶದ ಅತಿಬಾಧಿತ ರಾಜ್ಯವಾಗಿದೆ. ಕಳೆದ ೨೪ ಗಂಟೆಗಳಲ್ಲಿ ರಾಜ್ಯದಲ್ಲಿ ,೨೫೯ ಹೊಸ ಪ್ರಕರಣಗಳು ದಾಖಲಾದವು. ಆಶಾದಾಯಕ ವಿಚಾರವೇನೆಂದರೆ ಸುಮಾರು ಶೇಕಡಾ ೪೭ರಷ್ಟು ಕೋವಿಡ್ ರೋಗಿಗಳು ರಾಜ್ಯದಲ್ಲಿ ಚೇತರಿಸಿಕೊಂಡಿದ್ದಾರೆ.

ಭಾರತದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾಸೋಂಕಿನಿಂದ ಗುಣಮುಖರಾದವರು ಪಂಜಾಬಿನಲ್ಲಿದ್ದಾರೆ. ರಾಜ್ಯದಲ್ಲಿ ಶೇಕಡಾ ೮೦ರಷ್ಟು ಕೊರೋನಾವೈರಸ್ ರೋಗಿಗಳು ಗುಣಮುಖರಾಗಿದ್ದಾರೆ. ಪಂಜಾಬಿನಲ್ಲಿ ಪ್ರಸ್ತುತ ೪೯೭ ಸಕ್ರಿಯ ಪ್ರಕರಣಗಳಿದ್ದರೆ, ,೧೬೭ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಕೊರೋನಾವೈರಸ್ ಪ್ರಕರಣಗಳ ಸಕಾಲಿಕ ಪತ್ತೆ ಮತ್ತು ಕಠಿಣ ಲಾಕ್ ಡೌನ್ ಕ್ರಮಗಳ ಕಾರಣದಿಂದ ಗರಿಷ್ಠ ಸಂಖ್ಯೆಯ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹಿಂದೆಯೇ ಹೇಳಿತ್ತು. ದೇಶದಲ್ಲಿ ಕೊರೋನಾವೈರಸ್ ಪ್ರಸರಣವನ್ನು ಹತೋಟಿಯಲ್ಲಿ ಇಡುವ ಸಲುವಾಗಿ ಭಾರತ ಸರ್ಕಾರವು ಮಾರ್ಚ್ ತಿಂಗಳ ಕೊನೆಯವಾರದಲ್ಲಿ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಜಾರಿಗೊಳಿಸಿತ್ತು.

ಭಾರತದಲ್ಲಿ ಕೋವಿಡ್ -೧೯ ಪ್ರಕರಣಗಳ ಸಂಖ್ಯೆ ಪ್ರತಿ ಮೂರು ವಾರಗಳಿಗೊಮ್ಮೆ ದುಪ್ಪಟ್ಟಾಗುತ್ತಿತ್ತು. ಆದರೆ ದೇಶ ಮತ್ತು ದಕ್ಷಿಣ ಏಷ್ಯಾ ವಲಯದಲ್ಲಿ ಸಾಂಕ್ರಾಮಿಕವು ಘಾತಕ ಸ್ವರೂಪದಲ್ಲಿ ಬೆಳೆಯುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳೆದವಾರ ಹೇಳಿತ್ತು.

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಅವರು ಭಾರತದಲ್ಲಿ . ಬಿಲಿಯನ್ (೧೩೦ ಕೋಟಿ) ಜನಸಂಖ್ಯೆಯಿದ್ದು ,೦೦,೦೦೦ ಪ್ರಕರಣಗಳು ವರದಿಯಾಗಿವೆ ಎಂದು ಬೊಟ್ಟು ಮಾಡಿದ್ದರು. ’ ಸಂಖ್ಯೆ ದೊಡ್ಡದಾಗಿ ಕಾಣುತ್ತದೆ, ಆದರೆ ದೇಶದ ಜನಸಂಖ್ಯೆಗೆ ಹೋಲಿಸಿದರೆ ಇದು ಸಾಮಾನ್ಯ ಅಷ್ಟೇಎಂದು ಅವರು ಹೇಳಿದ್ದರು.

ಜಾಗತಿಕವಾಗಿ ಕೋವಿಡ್-೧೯ ಪ್ರಕರಣಗಳ ಸಂಖ್ಯೆ ೭೨ ಲಕ್ಷವನ್ನು ಮೀರಿದ್ದು, ಸಾವಿನ ಸಂಖ್ಯೆ ಲಕ್ಷವನ್ನು ದಾಟಿದೆ. ಭಾರತವು ಅತಿಬಾಧಿತ ರಾಷ್ಟ್ರಗಳ ಸಾಲಿನಲ್ಲಿ ೫ನೇ ಗರಿಷ್ಠ ಸಂಖ್ಯೆಯ ಕೊರೋನಾವೈರಸ್ ಪ್ರಕರಣಗಳನ್ನು ಹೊಂದಿರುವ ದೇಶವಾಗಿದೆ. ಅಮೆರಿಕ, ಬ್ರೆಜಿಲ್, ರಶ್ಯಾ, ಮತ್ತು ಇಂಗ್ಲೆಂಡ್ ವಿಶ್ವದಲ್ಲಿ ಕೊರೋನಾಸೋಂಕಿನಿಂದ ಅತಿಯಾಗಿ ಬಾಧಿತವಾಗಿರುವ ಮೊದಲ ನಾಲ್ಕು ರಾಷ್ಟ್ರಗಳಾಗಿವೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೭೩,೫೭,೨೯೪, ಸಾವು ,೧೪,೪೭೬ ಚೇತರಿಸಿಕೊಂಡವರು- ೩೬,೩೦,೮೯೮

ಅಮೆರಿಕ ಸೋಂಕಿತರು ೨೦,೪೭,೧೪೭, ಸಾವು ,೧೪,೨೨೩

ಸ್ಪೇನ್ ಸೋಂಕಿತರು ,೮೯,೦೪೬, ಸಾವು ೨೭,೧೩೬

ಇಟಲಿ ಸೋಂಕಿತರು ,೩೫,೫೬೧, ಸಾವು ೩೪,೦೪೩

ಜರ್ಮನಿ ಸೋಂಕಿತರು ,೮೬,೫೨೫, ಸಾವು ,೮೩೧

ಚೀನಾ ಸೋಂಕಿತರು ೮೩,೦೪೬, ಸಾವು ,೬೩೪

ಇಂಗ್ಲೆಂಡ್ ಸೋಂಕಿತರು ,೮೯,೧೪೦, ಸಾವು ೪೦,೮೮೩

ಭಾರತ ಸೋಂಕಿತರು ,೮೦,೦೬೭, ಸಾವು ,೭೯೭

ಅಮೆರಿಕದಲ್ಲಿ ೭೫, ಇರಾನಿನಲ್ಲಿ ೮೧, ಬೆಲ್ಜಿಯಂನಲ್ಲಿ ೧೦, ಇಂಡೋನೇಷ್ಯ ೩೬, ನೆದರ್ ಲ್ಯಾಂಡ್ಸ್ನಲ್ಲಿ ೧೧, ರಶ್ಯಾದಲ್ಲಿ ೨೧೬, ಪಾಕಿಸ್ತಾನದಲ್ಲಿ ೮೩, ಮೆಕ್ಸಿಕೋದಲ್ಲಿ ೫೯೬, ಒಟ್ಟಾರೆ ವಿಶ್ವಾದ್ಯಂತ ,೫೦೪ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ,೩೭,೦೨೨ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.

ವಿಡಿಯೋ ಮೂಲಕ ಸುದ್ದಿ ಆಲಿಸಲು ಕೆಳಗೆ ಕ್ಲಿಕ್ ಮಾಡಿರಿ

No comments:

Advertisement