My Blog List

Wednesday, June 10, 2020

ಗಡಿ ಬಿಕ್ಕಟ್ಟು: ಭಾರತದೊಂದಿಗೆ ಚೀನಾ ಧನಾತ್ಮಕ ಸಹಮತ

ಗಡಿ ಬಿಕ್ಕಟ್ಟು: ಭಾರತದೊಂದಿಗೆ ಚೀನಾ ಧನಾತ್ಮಕ ಸಹಮತ

ಬೀಜಿಂಗ್:  ರಾಜತಾಂತ್ರಿಕರು ಮತ್ತು ಸೇನಾ ಅಧಿಕಾರಿಗಳ ನಡುವಣ ಮಾತುಕತೆಯ ಬಳಿಕ ಉಭಯ ದೇಶಗಳೂ ಪರಿಸ್ಥಿತಿ ಶಮನಕ್ಕೆ ಯತ್ನಿಸುತ್ತಿವೆ ಎಂದು ಚೀನಾ ೨೦೨೦ ಜೂನ್ ೧೦ರ ಬುಧವಾರ ಹೇಳಿತು. ಆದರೆ ಲಡಾಖ್ ವಾಸ್ತವಿಕ ನಿಯಂತ್ರಣ ರೇಖೆಯಿಂದ ಹಿಂದಕ್ಕೆ ತೆರಳುತ್ತಿರುವ ಉಭಯ ದೇಶಗಳ ಪಡೆಗಳ ವಿವರ ನೀಡಲು ಅದು ನಿರಾಕರಿಸಿತು.

ಬುಧವಾರ ಇನ್ನೊಂದು ಸುತ್ತಿನ ಮಾತುಕತೆ ನಡೆಯುವುದಕ್ಕೆ ಮುಂಚಿತವಾಗಿ ಗಡಿಬಿಕ್ಕಟ್ಟನ್ನು ಕೊನೆಗೊಳಿಸುವ ಉದ್ದೇಶದಿಂದ ಉಭಯ ದೇಶಗಳ ಸೇನೆಗಳು ಪೂರ್ವ ಲಡಾಖ್ನಿಂದ ಸೀಮಿತ ಪ್ರಮಾಣದಲ್ಲಿ ಹಿಂದಕ್ಕೆ ಹೊರಟಿವೆ ಎಂಬುದಾಗಿ ಭಾರತೀಯ ಮಾಧ್ಯಮಗಳಲ್ಲಿ ಬಂದ ವರದಿಗಳಿಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನಿಯಿಂಗ್ ಅವರು ಪ್ರತಿಕ್ರಿಯಿಸಿದರು.

ಉಭಯ ದೇಶಗಳ ಸೇನೆಗಳು ಹಿಂದಿನ ಸ್ಥಳಗಳಿಂದ ಹಿಂದಕ್ಕೆ ಸಾಗುತ್ತಿವೆ ಎಂಬ ವರದಿಗಳ ಬಗ್ಗೆ ಪ್ರಶ್ನಿಸಿದಾಗಗಡಿಯುದ್ದಕ್ಕೂ ಉದ್ವಿಗ್ನತೆ ಶಮನಕ್ಕೆ ಉಭಯ ಕಡೆಗಳೂ ಕ್ರಮಗಳನ್ನು ಕೈಗೊಳ್ಳುತ್ತಿವೆಎಂದಷ್ಟೇ ಹುವಾ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಮಸ್ಯೆ ಇತ್ಯರ್ಥಕ್ಕಾಗಿ ಶನಿವಾರ ನಡೆದ ಭಾರತ ಮತ್ತು ಚೀನಾ ನಡುವಣ ಸೇನಾ ಮಾತುಕತೆಗಳನ್ನು ನಿರ್ದಿಷ್ಟವಾಗಿ ಆಕೆ ಉಲ್ಲೇಖಿಸಲಿಲ್ಲ.

ಇತೀಚೆಗೆ ಚೀನಾ ಮತ್ತು ಭಾರತದ ರಾಜತಾಂತ್ರಿಕ ಮತ್ತು ಸೇನಾ ಮಟ್ಟದಲ್ಲಿ ಗಡಿಯಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಪರಿಣಾಮಕಾರಿ ಸಂಪರ್ಕ ಸಾಧಿಸಲಾಗಿದೆ ಮತ್ತು ಧನಾತ್ಮಕ ಸಹಮತಕ್ಕೆ ಬರಲಾಗಿದೆಎಂದು ಆಕೆ ನುಡಿದರು.

ಉಭಯ ಕಡೆಗಳೂ ಸಹಮತವನ್ನು ಅನುಸರಿಸುತ್ತಿದ್ದು ಗಡಿಯುದ್ದಕ್ಕೂ ಉದ್ವಿಗ್ನತೆ ನಿವಾರಣೆಗೆ ಕ್ರಮಗಳನ್ನು ಕೈಗೊಳ್ಳುತ್ತಿವೆಎಂದು ಹುವಾ ಹೇಳಿದರು.

ಗಡಿಯಲ್ಲಿ ಪರಿಸ್ಥಿತಿ ಸ್ಥಿರವಾಗಿದೆ ಮತ್ತು ನಿಯಂತ್ರಣದಲ್ಲಿದೆಎಂದು ಚೀನಾದ ವಿದೇಶಾಂಗ ಸಚಿವಾಲಯವು ಕಳೆದ ವಾರ ಹೇಳಿತ್ತು.

ಉಭಯ ಸೇನೆಗಳೂ ಗಾಲ್ವಾನ್ ಕಣಿವೆಯ ೧೪ ಮತ್ತು ೧೫ನೇ ಪಹರೆ ಪ್ರದೇಶ ಮತ್ತು ಹಾಟ್ ಸ್ಪ್ರಿಂಗ್ ಪ್ರದೇಶದ ಇನ್ನೊಂದು ಸ್ಥಳದ ಸುತ್ತಮುತ್ತಣ ಪ್ರದೇಶದಿಂದ ಹಿಂದಕ್ಕೆ ಸರಿಯಲಾರಂಭಿಸಿವೆ ಎಂದು ನವದೆಹಲಿಯ ಅನಾಮಧೇಯ ಮೂಲಗಳು ಮಾಧ್ಯಮಗಳಿಗೆ ತಿಳಿಸಿದ್ದವು. ಎರಡೂ ಕಡೆಗಳಲ್ಲಿ ಚೀನೀ ಸೇನೆಯು . ಕಿಮೀಯಷ್ಟು ಹಿಂದಕ್ಕೆ ಚಲಿಸಿದೆ ಎಂದೂ ಮೂಲಗಳು ಹೇಳಿದ್ದವು.

ಪ್ಯಾಂಗೊಂಗ್ ತ್ಸೊ ಸರೋವರದ ಸಮೀಪಕ್ಕೆ  ಅತಿ ಮುಖ್ಯವಾದ ರಸ್ತೆ ನಿರ್ಮಾಣ ಮತ್ತು ಗಾಲ್ವಾನ್ ಕಣಿವೆಯಲ್ಲಿ ಡಾರ್ಬುಕ್ ಶಾಯೋಕ್-ದೌಲತ್ ಬೇಗ್ ಓಲ್ಡೀ ರಸ್ತೆಗೆ ಸಂಪರ್ಕ ಕಲ್ಪಿಸುವ ಇನ್ನೊಂದು ರಸ್ತೆ ನಿರ್ಮಾಣಕ್ಕೆ ಚೀನಾ ವಿರೋಧ ಪಡಿಸಿದ್ದು ಇತ್ತೀಚಿನ ಸುತ್ತಿನ ಬಿಕ್ಕಟ್ಟಿಗೆ ಕಾರಣವಾಗಿತ್ತು.

No comments:

Advertisement