ಕೊರೋನಾ
ಸಮರ: ಸಚಿವರು, ಅಧಿಕಾರಿಗಳ ಜೊತೆ ಪ್ರಧಾನಿ ಮೋದಿ ಚರ್ಚೆ
ನವದೆಹಲಿ: ಮುಂದಿನ ವಾರ ಎರಡುದಿನಗಳ ಕಾಲ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಸಮಯ ನಿಗದಿಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್-೧೯ ಸಾಂಕ್ರಾಮಿಕ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ರಾಷ್ಟ್ರದ ಪ್ರತಿಕ್ರಿಯೆಯ ಪರಿಶೀಲನೆಗಾಗಿ 2020 ಜೂನ್ 13ರ ಶನಿವಾರ ಹಿರಿಯ ಸಚಿವರು ಮತ್ತು ಅಧಿಕಾರಿಗಳ ಜೊತೆಗೆ ಸಮಾಲೋಚನಾ ಸಭೆ ನಡೆಸಿದರು.
ವಿವಿಧ
ರಾಜ್ಯಗಳಲ್ಲಿನ ಪರಿಸ್ಥಿತಿ ಬಗೆಗೂ ಸಭೆ ಚರ್ಚಿಸಿತು. ಭಾರತವು ಮೂರು ಲಕ್ಷ ಪ್ರಕರಣಗಳ ಮೈಲಿಗಲ್ಲನ್ನು ಶುಕ್ರವಾರ ದಾಟಿದ್ದು, ಶನಿವಾರ ದೇಶದಲ್ಲಿನ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ ೩,೧೦,೭೬೦ಕ್ಕೆ
ಏರಿದೆ. ಸಾವಿನ ಸಂಖ್ಯೆ ೮,೮೯೫ಕ್ಕೆ ಏರಿದ್ದು,
ಗುಣಮುಖರಾಗಿ ಚೇತರಿಸಿದವರ ಸಂಖ್ಯೆ ೧,೫೫,೨೯೦ಕ್ಕೆ
ಏರಿದೆ.
ಸಭೆಯು
ರಾಷ್ಟ್ರೀಯ ಮಟ್ಟದ ಸ್ಥಿತಿಗತಿ ಮತ್ತು ಸಾಂಕ್ರಾಮಿಕ ಎದುರಿಸುವ ಬಗೆಗಿನ ಸಿದ್ಧತೆಗಳ ಬಗ್ಗೆ ಪರಿಶೀಲಿಸಿತು ಎಂದು ಪ್ರಧಾನಮಂತ್ರಿಗಳ ಕಚೇರಿಯು ಟ್ವೀಟ್ ಮಾಡಿತು.
ದೆಹಲಿಯಲ್ಲಿ
ಶುಕ್ರವಾರ ಒಂದೇ ದಿನ ೨,೧೩೭ ಪ್ರಕರಣಗಳು
ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ರಾಜಧಾನಿಯ
ಹಾಲಿ ಹಾಗೂ ಭವಿಷ್ಯದ ಪರಿಸ್ಥಿತಿ ಬಗ್ಗೆ ಸಭೆ ಚರ್ಚಿಸಿತು ಮತ್ತು ಮುಂದಿನ ಎರಡು ತಿಂಗಳುಗಳ ಯೋಜನೆ ಬಗ್ಗೆ ಕೂಡಾ ಚಿಂತಿಸಿತು ಎಂದು ಪಿಎಂಒ ಹೇಳಿತು.
ಒಟ್ಟು
ಪ್ರಕರಣಗಳ ಪೈಕಿ ಮೂರನೇ ಎರಡರಷ್ಟು ಪ್ರಕರಣಗಳು ಐದು ರಾಜ್ಯಗಳಿಂದ ವರದಿಯಾಗಿದೆ, ಅದರಲ್ಲೂ ದೊಡ್ಡ ನಗರಗಳಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ ಎಂಬುದನ್ನು ಸಭೆ ಗಮನಿಸಿತು. ದೊಡ್ಡ ನಗರಗಳ ಸವಾಲು ಎದುರಿಸಲು ಪರೀಕ್ಷೆ ಮತ್ತು ಹಾಸಿಗೆಗಳ ಸಂಖ್ಯೆ ಮತ್ತು ದೈನಂದಿನ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಸೇವೆಗಳನ್ನು ಪರಿಣಾಮಕಾರಿಯಾಗಿ ಹೆಚ್ಚಿಸುವ ಬಗ್ಗೆ ಚರ್ಚಿಸಲಾಯಿತು.
ಸಬಲೀಕರಣ
ತಂಡವು ನೀಡಿದ ಶಿಫಾರಸುಗಳನ್ನು ಪರಿಗಣನೆಗೆ ತೆಗೆದುಕೊಂಡ ಪ್ರಧಾನಿಯವರು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೊತೆಗೆ ಸಮಾಲೋಚಿಸಿ ತುರ್ತು ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತೆ ತಮ್ಮ ಕಚೇರಿಯು ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಿದೆ ಎಂದು ತಿಳಿಸಿದರು. ಮುಂಗಾರು ಮಳೆಯ ಋತು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆಯೂ ಅವರು ಸಚಿವಾಲಯಕ್ಕೆ ಸಲಹೆ ಮಾಡಿದರು.
ಕೊರೋನಾವೈರಸ್
ವಿರುದ್ಧದ ಹೋರಾಟದಲ್ಲಿ ಅನುಸರಿಸಲಾಗಿರುವ ಅತ್ಯುತ್ತಮ ವಿಧಾನಗಳು ಮತ್ತು ಯಶೋಗಾಥೆಗಳನ್ನು ಗಮನಿಸಿ ವ್ಯಾಪಕ ಪ್ರಚಾರ ನೀಡುವ ಮೂಲಕ ಇತರರಿಗೆ ಪ್ರೇರಣೆ ಮತ್ತು ಹೊಸ ಕಲ್ಪನೆಗಳನ್ನು ಒದಗಿಸಬೇಕು ಎಂದೂ ಪ್ರಧಾನಿ ತಮ್ಮ ಕಚೇರಿಗೆ ಸೂಚಿಸಿದರು.
ವಿಶ್ವಾದ್ಯಂತ
ಕೊರೋನಾವೈರಸ್ ಸೋಂಕಿತರು ೭೭,೭೯,೪೨೯,
ಸಾವು ೪,೨೯,೦೬೭
ಚೇತರಿಸಿಕೊಂಡವರು- ೩೯,೮೮,೭೫೯
ಅಮೆರಿಕ
ಸೋಂಕಿತರು ೨೧,೨೧,೩೮೭,
ಸಾವು ೧,೧೬,೯೨೫
ಸ್ಪೇನ್
ಸೋಂಕಿತರು ೨,೯೦,೨೮೯,
ಸಾವು ೨೭,೧೩೬
ಇಟಲಿ
ಸೋಂಕಿತರು ೨,೩೬,೩೦೫,
ಸಾವು ೩೪,೨೨೩
ಜರ್ಮನಿ
ಸೋಂಕಿತರು ೧,೮೭,೨೫೬,
ಸಾವು ೮,೮೬೩
ಚೀನಾ
ಸೋಂಕಿತರು ೮೩,೦೭೫, ಸಾವು
೪,೬೩೪
ಇಂಗ್ಲೆಂಡ್
ಸೋಂಕಿತರು ೨,೯೨,೯೫೦,
ಸಾವು ೪೧,೪೮೧
ಭಾರತ
ಸೋಂಕಿತರು ೩,೧೦,೭೬೦,
ಸಾವು ೮,೮೯೫
ಅಮೆರಿಕದಲ್ಲಿ ೧೦೦, ಇರಾನಿನಲ್ಲಿ ೭೧, ಬೆಲ್ಜಿಯಂನಲ್ಲಿ ೪, ಇಂಡೋನೇಷ್ಯ ೪೩, ನೆದರ್ ಲ್ಯಾಂಡ್ಸ್ನಲ್ಲಿ ೪, ರಶ್ಯಾದಲ್ಲಿ ೧೧೪, ಪಾಕಿಸ್ತಾನದಲ್ಲಿ ೮೮, ಮೆಕ್ಸಿಕೋದಲ್ಲಿ ೫೦೪, ಒಟ್ಟಾರೆ ವಿಶ್ವಾದ್ಯಂತ ೧,೩೭೮ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ೧,೫೫,೨೯೦ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.
No comments:
Post a Comment