Wednesday, June 3, 2020

ರಾಯಗಢ ಜಿಲ್ಲೆಯಲ್ಲಿ ಅಪ್ಪಳಿಸಿದ ’ನಿಸರ್ಗ, ಮರ, ವಿದ್ಯುತ್ ಕಂಬ ಧರೆಗೆ

ರಾಯಗಢ ಜಿಲ್ಲೆಯಲ್ಲಿ ಅಪ್ಪಳಿಸಿದ  ನಿಸರ್ಗ, ಮರ, ವಿದ್ಯುತ್ ಕಂಬ  ಧರೆಗೆ

ನವದೆಹಲಿ/ ಮುಂಬೈ:  ನಿಸರ್ಗಚಂಡಮಾರುತವು ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ 2020 ಜೂನ್ 03ರ ಬುಧವಾರ ಮಧ್ಯಾಹ್ನ ನೆಲಕ್ಕೆ ಅಪ್ಪಳಿಸಿ, ಮಹಾರಾಷ್ಟ್ರದಲ್ಲಿ ಹಲವಾರು ಮರಗಳು, ವಿದ್ಯುತ್ ಕಂಬಗಳನ್ನು ಧರೆಗೆ ಉರುಳಿಸಿತು.  ಮುಂಬೈಯಿಂದ ಹುಬ್ಬಳ್ಳಿಯವರೆಗೆ ಭಾರೀ ಗಾಳಿ ಸಹಿತವಾಗಿ ಅಬ್ಬರದ ಮಳೆ ಸುರಿದಿದ್ದು, ಒಂದು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಮುಂಬೈ ಸಮೀಪದ ಅಲಿಬಾಗ್ ಉಮ್ಟೆ ಗ್ರಾಮದಲ್ಲಿ ವಿದ್ಯುತ್ ಕಂಬವೊಂದು ಬಿದ್ದು ೫೮ ವರ್ಷದ ವ್ಯಕ್ತಿಯೊಬ್ಬರು ಮೃತರಾದರು.

ಒಂದು ಸಾವನ್ನು ಹೊರತು ಪಡಿಸಿ ಮಹಾರಾಷ್ಟ್ರದಲ್ಲಿ ಈವರೆಗೆ ಬೇರೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ರಾಯಗಢ ಜಿಲ್ಲಾಧಿಕಾರಿ ನಿಧಿ ಚೌಧರಿ ತಿಳಿಸಿದರು.

ಅಲಿಬಾಗ್ನಿಂದ ಒಂದು ಸಾವು ವರದಿಯಾಗಿದೆ. ಅಲಿಬಾಗ್ ಉಮ್ಟೆ ಗ್ರಾಮದಲ್ಲಿ ವಿದ್ಯುತ್ ಕಂಬ ಬಿದ್ದು ೫೮ ವರ್ಷದ ವ್ಯಕ್ತಿಯೊಬ್ಬರು ಮೃvರಾಗಿದ್ದಾರೆ. ಜಿಲ್ಲೆಯಾದ್ಯಂತ ಇದುವರೆಗೆ ಯಾವುದೇ ಸಾವು ಸಂಭವಿಸಿಲ್ಲಎಂದು ಚೌಧರಿ ನುಡಿದರು.

ಅಲಿಬಾಗ್ಗೆ ಸಮೀಪದಲ್ಲಿರುವ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿ ಹಲವಾರು ಮರಗಳು ಬಿರುಗಾಳಿಗೆ ಉರುಳಿ ಬಿದ್ದಿವೆ. ಹಲವಾರು ವಿದ್ಯುತ್ ಕಂಬUಳೂ ನೆಲಕ್ಕೆ ಒರಗಿವೆ. ಅಲಿಬಾಗ್ ಸಮೀಪ ಚಂಡಮಾರುತವು  ಬುಧವಾರ ಮಧ್ಯಾಹ್ನ ನೆಲಕ್ಕೆ ಅಪ್ಪಳಿಸಿತು.

ಅಧಿಕಾರಿಗಳ ಪ್ರಕಾರ, ಚಂಡಮಾರುv ಅಬ್ಬರಕ್ಕೆ ಸುಮಾರು ೮೫ ದೊಡ್ಡ ಮರಗಳು ಉರುಳಿದ್ದು, ಅವುಗಳಲ್ಲಿ ಕೆಲವು ಮನೆಗಳ ಮೇಲೆ ಬಿದ್ದ. ಹನ್ನೊಂದು ವಿದ್ಯುತ್ ಕಂಬಗಳೂ ಧರೆಗುರುಳಿದವು.

ಮಹಾರಾಷ್ಟ್ರ ಕರಾವಳಿಗೆ ೧೨೦ ಕಿ.ಮೀ ವೇಗದೊಂದಿಗೆ ಅಪ್ಪಳಿಸಿದ ಬಳಿಕನಿರ್ಗಚಂಡಮಾರುತವು ದುರ್ಬಲಗೊಳ್ಳಲು ಪ್ರಾರಂಭಿಸಿದೆ ಮತ್ತು ಸಂಜೆಯಾಗುತ್ತಿದ್ದಂತೆಯೇ ಅದರ ತೀವ್ರತೆಯು ಮತ್ತಷ್ಟು ಕಡಿಮೆಯಾಗುತ್ತದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿತು.

ಅಲಿಬಾಗ್ನಲ್ಲಿ ಮಧ್ಯಾಹ್ನ ೧೨.೩೦ ಕ್ಕೆ ಚಂಡಮಾರುತ ನೆಲಕ್ಕೆ ಅಪ್ಪಳಿಸಲು ಆರಂಭವಾಗಿದ್ದು, ಮಧ್ಯಾಹ್ನ .೩೦ ವೇಳೆಗೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.

"ಇದು ದುರ್ಬಲಗೊಳ್ಳಲು ಪ್ರಾರಂಭಿಸಿದೆ. ಗಾಳಿಯ ವೇಗವು ಪ್ರಸ್ತುತ ಗಂಟೆಗೆ ೯೦-೧೦೦ ಕಿಲೋಮೀಟರಿಗೆ ಇಳಿದಿದೆ. ಸಂಜೆಯ ಹೊತ್ತಿಗೆ ತೀವ್ರತೆಯು ಮತ್ತಷ್ಟು ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಬುಧವಾರ ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ೪೩ ತಂಡಗಳನ್ನು ನಿಯೋಜಿಸಿ ಕರಾವಳಿಯ ಸಮೀಪ ವಾಸಿಸುತ್ತಿದ್ದ ಸುಮಾರು ಲಕ್ಷ ಜನರನ್ನು ಸ್ಥಳಾಂತರಿಸಿತು.

ಮಹಾರಾಷ್ಟ್ರ ಮತ್ತು ಗುಜರಾತ್ ಎರಡು ರಾಜ್ಯಗಳಲ್ಲಿ ಒಟ್ಟು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ೪೩  ತಂಡಗಳನ್ನು ನಿಯೋಜಿಸಲಾಗಿದೆ. ತಂಡಗಳಲ್ಲಿ ೨೧ ಮಹಾರಾಷ್ಟ್ರದಲ್ಲಿ ಮತ್ತು ಉಳಿದ ತಂಡಗಳು ನೆರೆಯ ರಾಜ್ಯದಲ್ಲಿ ನಿಂತಿವೆ. ಚಂಡಮಾರುತದ ಹಾದಿಯಲ್ಲಿರುವ ಪ್ರದೇಶಗಳಿಂದ ಸುಮಾರು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆಎಂದು ಎನ್ಡಿಆರ್ಎಫ್ ಮಹಾನಿರ್ದೇಶಕ ಎಸ್.ಎನ್. ಪ್ರಧಾನ್ ಹೇಳಿzರು.

ಮಹಾರಾಷ್ಟ್ರದ ಹೊರತಾಗಿ, ನೆರೆಯ ಗುಜರಾತ್ ರಾಜ್ಯ, ದಮನ್ ಮತ್ತು ದಿಯು, ದಾದ್ರಾ ಮತ್ತು ನಗರ ಹವೇಲಿ ಕೇಂದ್ರಾಡಳಿತ ಪ್ರದೇಶಗಳು ತೀವ್ರ ಚಂಡಮಾರುತದ ಹಾದಿಯಲ್ಲಿ  ಇದ್ದುದರಿಂದ ಕಟ್ಟೆಚ್ಚರ ಘೋಷಿಸಲಾಗಿತ್ತು.

ಕೇವಲ ಎರಡು ವಾರಗಳ ಹಿಂದೆ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ್ದ ಆಂಫಾನ್ ಚಂಡಮಾರುತವು ತೀವ್ರ ವಿನಾವನ್ನು ಉಂಟು ಮಾಡಿ, ಕನಿಷ್ಠ ೮೦ ಜನರನ್ನು ಬಲಿತೆಗೆದುಕೊಂಡಿತ್ತು. ಅದಾದ ಒಂದು ತಿಂಗಳೊಳಗೆ ಭಾರತವನ್ನು ಅಪ್ಪಳಿಸಿದ ಎರಡನೇ ಚಂಡಮಾರುತ ಇದಾಗಿದೆ.

ಮುಂಬೈನಿಂದ ಹುಬ್ಬಳ್ಳಿವರೆಗೆ ಮಳೆ

ನಿಸರ್ಗ ಚಂಡಮಾರುತವು ಮುಂಬೈಯಿಂದ ದಕ್ಷಿಣಕ್ಕೆ ೧೦೦ ಕಿಲೋಮೀಟರ್ ದೂರದಲ್ಲಿರುವ ಕರಾವಳಿ ಪಟ್ಟಣವಾದ ಅಲಿಬಾಗ್ ಬಳಿ ಬುಧವಾರ ಮಧ್ಯಾಹ್ನ ಅಪ್ಪಳಿಸಲು ಆರಂಭಿಸಿತು. ಪ್ರಕ್ರಿಯೆ ಮೂರು ತಾಸುಗಳ ಕಾಲ ಮುಂದುವರಿಯುವುದು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿತು. ಚಂಡಮಾರುತದ ಪ್ರಭಾವದಿಂದಾಗಿ ಮುಂಬೈಯಿಂದ ಹುಬ್ಳಳ್ಳಿಯವರೆಗೆ ಭಾರೀ ಗಾಳಿ ಮಳೆ ಸುರಿಯಿತು.

ಚಂಡಮಾರುತವು ಕರಾವಳಿ ಮಹಾರಾಷ್ಟ್ರದ ಮೂಲಕ ಮುಖ್ಯವಾಗಿ ರಾಯಗಢ ಜಿಲ್ಲೆಯ ಮೂಲಕ ಹಾದುಹೋಯಿತು.

 

ನಿಸರ್ಗ’ದ  ಆಟ

೧. ಚಂಡಮಾರುತವು ಅಪ್ಪಳಿಸುವ ಮುನ್ನ ೧೦೦-೧೧೦ ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಸುತ್ತುತ್ತಾ ಸಾಗಿತು. ಅದರ ವೇಗ ಮುಂಬೈನಿಂದ ೯೫ ಕಿ.ಮೀ ಮತ್ತು ಸೂರತ್ನಿಂದ ೩೨೫ ಕಿ.ಮಿ ದೂರದ ಅಲಿಬಾಗ್ನಿಂದ ೪೦ ಕಿ.ಮೀ ದೂರದಲ್ಲಿ ಗಂಟೆಗೆ ೧೨೦ ಕಿಲೋಮೀಟರ್ ಆಗಿತ್ತು.

. ಮಹಾರಾಷ್ಟ್ರದ ಕರಾವಳಿ ಪಟ್ಟಣಗಳು ಮತ್ತು ಹಲವಾರು ಹಳ್ಳಿಗಳಲ್ಲಿ ಸುರಿದ ಅಬ್ಬರದ ಮಳೆಯೊಂದಿಗೆ ಬೀಸಿದ ಬಿರುಗಾಳಿ ಮರUಳನ್ನು ಅಲ್ಲೋಲಕಲ್ಲೋಲಗೊಳಿಸಿತು. ಮುಂಬೈಯಲ್ಲಿ ಗಗನಚುಂಬಿ ಕಟ್ಟಡಗಳಿಗೆ ಅಪ್ಪಳಿಸಿದ ಬಿರುಗಾಳಿ ಕಡಲತೀರದ ಗುಡಿಸಲು, ಮನೆಗಳನ್ನು ಕಿತ್ತಾಡಿತು.

. ಹವಾಮಾನ ಬ್ಯೂರೋ ಮಹಾರಾಷ್ಟ್ರದ ಕನಿಷ್ಠ ಏಳು ಕರಾವಳಿ ಜಿಲ್ಲೆಗಳಿಗೆ ಕಟ್ಟೆಚ್ಚರ (ರೆಡ್ ಅಲರ್ಟ್) ನೀಡಿತ್ತು.  ಗುಜರಾತ್ ಕರಾವಳಿಯ ಹಲವಾರು ಜಿಲ್ಲೆಗಳು ಸಹ ಭಾರೀ ಮಳೆಯಾಗುವ ನಿರೀಕ್ಷೆಯಲ್ಲಿದೆ.

. ಮಹಾರಾಷ್ಟ್ರದ ದಕ್ಷಿಣದಲ್ಲಿರುವ ಗೋವಾದಲ್ಲಿ ೧೨೭ ಮಿಲಿಮೀಟರ್ ( ಇಂಚು) ಪ್ರಮಾಣದ ಧಾರಾಕಾರ ಮಳೆ ಸುರಿದಿದೆ. ಇದು ಒಂದು ವಾರದ ಸರಾಸರಿ ಮಳೆಗೆ ಸಮವಾಗಿದೆ ಎಂದು ಐಎಂಡಿ ಹೇಳಿದೆ.

. ಮಹಾರಾಷ್ಟ್ರ ಸರ್ಕಾರ ಬುಧವಾರ ರಾಜ್ಯದ ಕರಾವಳಿ ಪ್ರದೇಶವಾದ ಕೊಂಕಣದಿಂದ ಸುಮಾರು ೬೦,೦೦೦ ಜನರನ್ನು ಸ್ಥಳಾಂತರಿಸಿತು. ಮತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳ ಸಹಾಯದಿಂದ ,೦೦೩ ಮೀನುಗಾರಿಕೆ ದೋಣಿಗಳನ್ನು ಮತ್ತೆ ದಡಕ್ಕೆ ತಂದಿತು. ಎರಡು ರಾಜ್ಯಗಳಿಂದ ಸುಮಾರು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮುಖ್ಯಸ್ಥರು ತಿಳಿಸಿದರು.

. ಎಲ್ಲ ಆಸ್ಪತ್ರೆಗಳು, ಎಲ್ಲ ತುರ್ತು ಸೇವೆಗಳನ್ನು ಎಚ್ಚರಿಸಲಾಗಿದ್ದು, ತುರ್ತು ಆರೈಕೆ ರೋಗಿಗಳ ಒಳಹರಿವುಗೆ ಸಿದ್ಧರಾಗುವಂತೆ ತಿಳಿಸಲಾಗಿತ್ತು.

. ಗುಜರಾತ್ ದ್ವಾರಕಾ ಕರಾವಳಿಯಲ್ಲಿ ಹೆಚ್ಚಿನ ಉಬ್ಬರವಿಳಿತ. ೧೮ ಜಿಲ್ಲೆಗಳು ಚಂಡಮಾರುತದಿಂದ ಪ್ರಭಾವಿತವಾಗುತ್ತವೆ ಎಂದು ರಾಜ್ಯ ಅಧಿಕಾರಿಗಳು ಹಿಂದೆ ತಿಳಿಸಿದ್ದರು. ನಿಸರ್ಗ ಚಂಡಮಾರುತ ಅಪ್ಪಳಿಸುತ್ತಿದ್ದಂತೆಯೇ  ಭೂಕುಸಿತ ಮಾಡಿದಂತೆ ಛತ್ತೀಸ್ ಗಢದಲ್ಲೂ ಮಳೆಯಾಯಿತು. ಚಂಡಮಾರುತದ ನಾಸಾ ಚಿತ್ರವು ಬಹುತೇಕ ಇಡೀ ಮಧ್ಯ ಪರ್ಯಾಯ ದ್ವೀಪವನ್ನು ಮೋಡಗಳ ಕೆಳಗೆ ತೋರಿಸಿತು.

. ಮಹಾರಾಷ್ಟ್ರದ ರತ್ನ್ನಗಿರಿ ಮತ್ತು ಕರ್ನಾಟಕದ ಹುಬ್ಬಳ್ಳಿಯಲ್ಲೂ  ಮಳೆ ಸುರಿಯಿತು.

. ಎರಡು ರಾಜ್ಯಗಳಲ್ಲಿ ಸುಮಾರು ೪೩ ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ಅದರಲ್ಲಿ ೨೧ ತಂಡಗಳು ಮಹಾರಾಷ್ಟ್ರದಲ್ಲಿವೆ. ಭಾರತೀಯ ನೌಕಾಪಡೆಯ ಐದು ತಂಡಗಳು ಮುಂಬಯಿಯ ವಿವಿಧ ಸ್ಥಳಗಳಲ್ಲಿ ಬೀಡುಬಿಟ್ಟಿವೆ.

೧೦. ಕಳೆದ ತಿಂಗಳು ಪಶ್ಚಿಮ ಬಂಗಾಳ, ಒಡಿಶಾ ಮತ್ತು ಬಾಂಗ್ಲಾದೇಶವನ್ನು ಧ್ವಂಸಗೊಳಿಸಿದ್ದರಿಂದ ೧೦೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಆಂಫಾನ್ ಚಂಡಮಾರುತದ ನಂತರ ನಿಸರ್ಗ ಚಂಡಮಾರುತ ಬಂದಿದೆ. ನಿಸರ್ಗ ಚಂಡಮಾರುತವು ಉತ್ತರ ಹಿಂದೂ ಮಹಾಸಾಗರದಲ್ಲಿ ೬೫ ನೇ ಹೆಸರಿನ ಚಂಡಮಾರುತವಾಗಿದೆ. ’ನಿಸರ್ಗಹೆಸರನ್ನು ಚಂಡಮಾರುತಕ್ಕೆ ಬಾಂಗ್ಲಾದೇಶವು ಇರಿಸಿದ್ದು ಇದರ ಅರ್ಥಪ್ರಕೃತಿಎಂದಾಗುತ್ತದೆ.

No comments:

Advertisement