Tuesday, June 9, 2020

ಕೊಠಡಿಯಲ್ಲಿದೆ ‘ಡ್ರ್ಯಾಗನ್’: ಲಡಾಖ್ ಬಿಕ್ಕಟ್ಟಿನ ಬಗ್ಗೆ ವಿಪಕ್ಷ ವ್ಯಂಗ್ಯ

ಕೊಠಡಿಯಲ್ಲಿದೆ ‘ಡ್ರ್ಯಾಗನ್’: ಲಡಾಖ್ ಬಿಕ್ಕಟ್ಟಿನ ಬಗ್ಗೆ ವಿಪಕ್ಷ ವ್ಯಂಗ್ಯ

ನವದೆಹಲಿ: ಚೀನಾ ಜೊತೆಗಿನ ಗಡಿ ಬಿಕ್ಕಟ್ಟಿನ ಬಗ್ಗೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಹರಿಹಾಯಲಾರಂಭಿಸಿವೆ. ಸರ್ಕಾರವು ಸತ್ಯವನ್ನು ಅಡಗಿಸಿ ಇಡುತ್ತಿದೆ ಎಂದು ವಿಪಕ್ಷ ದಾಳಿಯ ಮುಂಚೂಣಿಯಲ್ಲಿ ನಿಂತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪಾದಿಸಿದ್ದಾರೆ.

ವಾಸ್ತವ ಏನೆಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ, ಆದರೆ ಯಾರೋ ಒಬ್ಬರನ್ನು ಖುಷಿಯಲ್ಲಿ ಇರಿಸುವ ಕೆಲಸ ನಡೆಯುತ್ತಿದೆಎಂದು ಹಿಂದಿಯಲ್ಲಿ ಗಾಲಿಬ್ ದ್ವಿಪದಿಯನ್ನು ಬಳಸಿಕೊಂಡು ರಾಹುಲ್ ಅವರು ಗೃಹ ಸಚಿವ ಅಮಿತ್ ಅವರ ಮೇಲೆ 2020 ಜೂನ್ 09ರ ಮಂಗಳವಾರ ದಾಳಿ ನಡೆಸಿದರು.

ಇದಕ್ಕೆ ಮುನ್ನ ಅವರು ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ದಾಳಿ ನಡೆಸಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪ್ರತಿಕ್ರಿಯಿಸಿದ್ದರು.

"ಚೀನಿಯರು ಲಡಾಖ್ನಲ್ಲಿ  ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆಯೇ?’ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾದರು.

ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲ ಅವರು ರಕ್ಷಣಾ ಸಚಿವರನ್ನು ರಾಹುಲ್ ಪ್ರಶ್ನೆಗೆ ಉತ್ತರಿಸುವಂತೆ ಆಗ್ರಹಿಸಿದರು.

ವಿರೋಧ ಪಕ್ಷದ ಚಿಹ್ನೆಗಳನ್ನು ಹಳಿಯುವುದರಿದ ಭಾರತದ ರಕ್ಷಣೆಯಾಗುವುದಿಲ್ಲಎಂದು ಸುರ್ಜೆವಾಲ  ಹೇಳಿದರು.

ವಿರೋಧ ಪಕ್ಷದ ಪಕ್ಷದ ಚಿಹ್ನೆಗಳನ್ನು ಹಳಿಯುವುದು ಭಾರತವನ್ನು ರಕ್ಷಿಸುವುದಕ್ಕೆ ಸಮವಾಗುವುದಿಲ್ಲ.  ರಾಹುಲ್ ಗಾಂಧಿ ಅವರು ಕೇಳಿದ ಸರಳ ಪ್ರಶ್ನೆಗೆ ರಾಜನಾಥ್ ಸಿಂಗ್ ಜಿ ಉತ್ತರಿಸುತ್ತಾರೆಯೇಎಂದು ಸುರ್ಜೇವಾಲ ಟ್ವಿಟ್ಟರಿನಲ್ಲಿ ಕೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೂಡ ವಿಷಯದ ಬಗ್ಗೆ ಕೇಂದ್ರದ ಮೇಲೆ ದಾಳಿ ನಡೆಸುವಲ್ಲಿ ಕಾಂಗ್ರೆಸ್ ಜೊತೆ ಸೇರಿಕೊಂಡಿದೆ.

"ಗೌರವಾನ್ವಿತ-ಅಮಿತ್ ಶಾ ಜಿ, ಬಿಕ್ಕಟ್ಟಿನ ಸಮಯದಲ್ಲಿ ನೀವು ಮಾತನಾಡುವುದನ್ನು ಬಂಗಾಳ ಕೇಳಿಲ್ಲ, ಆದರೆ ಇದಕ್ಕೆ ಉತ್ತರಿಸಲು ನೀವು ಒಂದು ನಿಮಿಷ ತೆಗೆದುಕೊಳ್ಳುತ್ತೀರಿ ಎಂದು ನಾವು ಭಾವಿಸುತ್ತೇವೆ, ಚೀನಿಯರು ನಮ್ಮ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೋ ಇಲ್ಲವೋ?" ಎಂದು ಟಿಎಂಸಿಯ ಯುವ ವಿಭಾಗದ ಅಧ್ಯಕ್ಷ ಅಭಿಷೇಕ್ ಬ್ಯಾನರ್ಜಿ ಅವರು ಅಮಿತ್ ಶಾ ಅವರನ್ನು ಪ್ರಶ್ನಿಸಿದರು.

ಪಶ್ಚಿಮ ಬಂಗಾಳದ ಜನರಿಗಾಗಿ ಗೃಹ ಸಚಿವ ಅಮಿತ್ ಷಾ ಅವರ ವರ್ಚುವಲ್ ರ್ಯಾಲಿ ನಡೆಸುವುದಕ್ಕೆ ಮುನ್ನ ಅಭಿಷೇಕ್ ಬ್ಯಾನರ್ಜಿ ಅವರು ಶಾ ಅವರಿಗೆ ಪ್ರಶ್ನೆ ಕೇಳಿದರು.

ಟಿಎಂಸಿ ಸರ್ಕಾರವು ಹಿಂಸಾಚಾರದಲ್ಲಿ ತೊಡಗಿದೆಎಂದು ವರ್ಚುವಲ್ ರ್ಯಾಲಿಯಲ್ಲಿ ಆಪಾದಿಸಿದ ಶಾರಾಜ್ಯದಲ್ಲಿ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆಎಂದು ಹೇಳಿದರು.

ಪಿಡಿಪಿ ಅಧ್ಯಕ್ಷ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ಟಿಜಾ ಮುಫ್ತಿ ಅವರು ವಿರೋಧ ಪಕ್ಷದ ಕೋರಸ್ಗೆ ಸೇರಿಕೊಂಡರು. ತನ್ನ ತಾಯಿಯ ಟ್ವಿಟ್ಟರ್ ಖಾತೆಯನ್ನು ನಿರ್ವಹಿಸುತ್ತಿರುವ ಇಲ್ಟಿಜಾ, ’ಪುಲ್ವಾಮಾ ದಾಳಿ ಸಂಭವಿಸಿದಾಗ, ಭಾರತ ಸರ್ಕಾರವು ಸರ್ಜಿಕಲ್ ದಾಳಿಗಳನ್ನು ನಡೆಸಿ ಪ್ರತೀಕಾರ ತೀರಿಸಿಕೊಂಡಿತು. ಇಲ್ಲಿ ಚೀನಾವು ಪ್ರಾದೇಶಿಕ ವಸ್ತುಸ್ಥಿತಿಯನ್ನು ಬದಲಾಯಿಸುವ ಹಾದಿಯಲ್ಲಿದೆ. ವಿಚಿತ್ರವೆಂದರೆ ಅದು ಕೋಣೆಯಲ್ಲಿರುವಆನೆ (ಡ್ರ್ಯಾಗನ್) ಆಗಿ ಮಾರ್ಪಟ್ಟಿದೆ. ಇದು ಶರಣಾಗತಿಯೇ?’ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದರು.

ಲಡಾಖ್ ಪ್ರದೇಶದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಬಿಕ್ಕಟ್ಟು ಮುಂದುವರೆದಿದೆ. ಭಾರತ ಮತ್ತು ಚೀನಾ ಎರಡೂ ಉನ್ನತ ಮಿಲಿಟರಿ ಅಧಿಕಾರಿಗಳ ನಡುವೆ ಶನಿವಾರ ಸಭೆ ನಡೆಯಿತು. ಸಭೆ ಯಾವುದೇ ಪ್ರಗತಿಯಿಲ್ಲದೆ ಕೊನೆಗೊಂಡರೂ, ಚೀನಾದ ವಿದೇಶಾಂಗ ಸಚಿವಾಲಯವು ನಂತರ ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಬದಲಾಗಬಾರದು ಎಂಬ ಒಮ್ಮತ ಮೂಡಿದೆ ಎಂದು ಹೇಳಿದರು.

ಭಾರತವು ಉತ್ತರ ಗಡಿಯಲ್ಲಿ ಚೀನೀ ಸೇನೆ ಮತ್ತು ಸಂಪನ್ಮೂಲಗಳನ್ನು ಸರಿಗಟ್ಟುವ ಸಲುವಾಗಿ ತನ್ನ ಸೇನಾ ಉಪಸ್ಥಿತಿಯನ್ನು ಹೆಚ್ಚಿಸಿದೆ, ಗೃಹ ಸಚಿವ ಅಮಿತ್ ಶಾ, ಬಿಹಾರದ ಜನರಿಗಾಗಿ ವರ್ಚುವಲ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿ, ’ಭಾರತದ ರಕ್ಷಣಾ ನೀತಿಯು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದೆ. ಅಮೆರಿಕ ಮತ್ತು ಇಸ್ರೇಲ್ ನಂತರ ತನ್ನ ಗಡಿಗಳನ್ನು ರಕ್ಷಿಸಲು ಸಮರ್ಥವಾಗಿರುವ ಬೇರೆ ದೇಶವಿದ್ದರೆ ಅದು ಭಾರತ ಎಂದು ಇಡೀ ಜಗತ್ತು ಒಪ್ಪುತ್ತದೆಎಂದು ಹೇಳಿದ್ದರು.

No comments:

Advertisement