My Blog List

Thursday, June 25, 2020

ಅಗಸ್ಟಾ ಹೆಲಿಕಾಪ್ಟರ್ ಹಗರಣ: ಶ್ರವಣ್ ಗುಪ್ತ ಮೇಲೆ ಇಡಿ ದಾಳಿ

ಅಗಸ್ಟಾ ಹೆಲಿಕಾಪ್ಟರ್ ಹಗರಣ: ಶ್ರವಣ್ ಗುಪ್ತ ಮೇಲೆ ಇಡಿ ದಾಳಿ

ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದಲ್ಲಿ ೭೦ ಮಿಲಿಯನ್ (೭೦ ದಶಲಕ್ಷ) ಯೂರೋ ಲಂಚದ ಹಣ ಪಡೆದ ನೈಜ ಫಲಾನುಭವಿಗಳ ಸುತ್ತ ತನ್ನ ಕುಣಿಕೆಯನ್ನು ಬಿಗಿಗೊಳಿಸಲು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ಯತ್ನ ನಡೆಸುತ್ತಿದ್ದು, ಇದೇ ಹಿನ್ನೆಲೆಯಲ್ಲಿ 2020 ಜೂನ್ 24ರ ಬುಧವಾರ  ಎಂಜಿಎಫ್ ಆಡಳಿತ ನಿರ್ದೇಶಕ ಶ್ರವಣ್ ಗುಪ್ತ ಆವರಣಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ  ನಡೆಸಿದೆ.

ರಿಯಾಲ್ಟಿ ಸಂಸ್ಥೆ ಎಂಜಿಫ್ ಆಡಳಿತ ನಿರ್ದೇಶಕ ಶ್ರವಣ್ ಗುಪ್ತ ಆವರಣಗಳ ಮೇಲಿನ ದಾಳಿಯು ನಿರ್ದಿಷ್ಟ ಕಾಲಘಟ್ಟದಲ್ಲಿ ಹಲವಾರು ಸಂಸ್ಥೆಗಳ ಮೂಲಕ ಹರಿದು ಹೋಗಿರುವ ಹಣದ ಮಾರ್ಗವನ್ನು ಪತ್ತೆ ಹಚ್ಚುವ ಬಗ್ಗೆ ಗಮನ ಹರಿಸಿದೆ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ತಿಳಿಸಿದ್ದಾರೆ.

ಬೆನ್ನಲ್ಲೇ, ಐವರು ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಬ್ರಿಟಿಷ್ ಮಧ್ಯವರ್ತಿ ಕ್ರಿಸ್ಟಿಯನ್ ಮೈಕೆಲ್ ವಿರುದ್ಧ ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಲೂ ಸಿಬಿಐ ಸಜ್ಜಾಗಿದ್ದು, ಮುನ್ನವೇ ಅದು ಕಾನೂನು ಕ್ರಮಕ್ಕಾಗಿ ಸರ್ಕಾರದ ಅನುಮತಿ ಕೋರಿತ್ತು.

ಮುಂದಿನ ಕೆಲವು ತಿಂಗಳುಗಳಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಗಳು ಆಗಲಿವೆ ಎಂದು ಉಭಯ ತನಿಖಾ ಸಂಸ್ಥೆಗಳ ಅಧಿಕಾರಿಗಳು ಹೇಳಿದ್ದಾರೆ.

ಹಿಂದಿನ ಎಂಆರ್ ಎಂಜಿಎಫ್ ಸಂಸ್ಥೆಯ ನಿರ್ದೇಶಕರಾಗಿದ್ದ ಗುಪ್ತ ಅವರನ್ನು ೨೦೦೯ರಲ್ಲಿ ಐರೋಪ್ಯ ಮಧ್ಯವರ್ತಿ ಗೈಡೊ ಹಶ್ಚಕೆ ಅವರಿಂದ ಇನ್ನೊಂದು ಕಂಪೆನಿಯ ಸ್ವತಂತ್ರ ನಿರ್ದೇಶಕರಾಗಿ ನೇಮಕ ಮಾಡಿದ ಬಗ್ಗೆ ತೀವ್ರ ತನಿಖೆ ನಡೆಸಲಾಗುತ್ತಿದೆ. ಇಟಲಿಯಲ್ಲಿ ವಾಸವಾಗಿದಾರೆ ಎನ್ನಲಾಗಿರುವ ಹಶ್ಚಕೆ ಅವರಿಗಾಗಿ ತನಿಖಾ ಸಂಸ್ಥೆಗಳು ಹುಡುಕಾಡುತ್ತಿವೆ. ಗುಪ್ತ ಅವರನ್ನು ಹಿಂದೆ ೨೦೧೬ರಲ್ಲಿ ಪ್ರಶ್ನಿಸಲಾಗಿತ್ತು.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಜನ್ ದೋಷಾರೋಪ ಪಟ್ಟಿಗಳನ್ನು ಜಾರಿ ನಿರ್ದೇಶನಾಲಯ ಸಲ್ಲಿಸಿದೆ. ಒಟ್ಟು ಶೇಕಡಾ ೧೨ರಷ್ಟು ಲಂಚದ ಹಣ ಅಂದರೆ ಸುಮಾರು ೭೦ ಮಿಲಿಯನ್ ಯೂರೋ ಆಂಗ್ಲೋ ಇಟಾಲಿಯನ್ ಸಂಸ್ಥೆ ಅಗಸ್ಟಾ ವೆಸ್ಟ್ ಲ್ಯಾಂಡ್ನಿಂದ ಮಧ್ಯವರ್ತಿಗಳಾದ ಕ್ರಿಶ್ಚಿಯನ್ ಮೈಕೆ ಜೇಮ್ಸ್ ಮತ್ತು ಗೈಡೋ ರಾಲ್ಫ್ ಹಶ್ಚಕೆ ಮೂಲಕ ,೭೨೭ ಕೋಟಿ ರೂಪಾಯಿ ಮೌಲ್ಯದ ೧೨ ಅತಿಗಣ್ಯರ ಹೆಲಿಕಾಪ್ಟರ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಪ್ರಭಾವ ಬೀರುವ ಸಲುವಾಗಿ ಹಂಚಲು ಪಾವತಿ ಮಾಡಲಾಗಿತ್ತು ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

೨೦೧೦ರಲ್ಲಿ  ಎಡಬ್ಲ್ಯೂ-೧೦೧ ಹೆಲಿಕಾಪ್ಟರ್ ಗುತ್ತಿಗೆಗೆ ಕಂಪೆನಿಯನ್ನು ಅರ್ಹಗೊಳಿಸುವ ಸಲುವಾಗಿ ಪಾವತಿ ಮಾಡಲಾಗಿತ್ತು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಸಿಬಿಐ ೨೦೧೭g ಸೆಪ್ಟೆಂಬರಿನಲ್ಲಿ ಸಲ್ಲಿಸಿದ ತನ್ನ ದೋಷಾರೋಪ ಪಟ್ಟಿಯಲ್ಲಿ ಮೈಕೆಲ್ ಅವರು ಅಗಸ್ಟಾ ವೆಸ್ಟ್ ಲ್ಯಾಂಡ್ ಜೊತೆಗೆ ಎರಡು ಒಪ್ಪಂದಗಳಿಗೆ ಸಹಿಮಾಡಿದ್ದರು- ಒಂದು೪೨ ದಶಲಕ್ಷ ಯೂರೋ (ಬಳಿಕ ಅದನ್ನು ೩೦ ಮಿಲಿಯನ್ಗೆ ಇಳಿಸಲಾಗಿತ್ತು) ಮತ್ತು ಎರಡನೇ ಒಪ್ಪಂದ ೨೮ ಮಿಲಿಯನ್ ಯೂರೋಗೆ ಸಂಬಂಧಿಸಿದ್ದು ಆಗಿದ್ದವು ಎಂದು ತಿಳಿಸಿತ್ತು. ಇದುಕುಟುಂಬವನ್ನುಸಂಪೂರ್ಣವಾಗಿ ಗೌರವಿಸುವುದಕ್ಕಾಗಿಪಾವತಿಯಾಗಿತ್ತು.

ಅಗಸ್ಟಾ ವೆಸ್ಟ್ ಲ್ಯಾಂಡ್ ಪ್ರತಿಸ್ಪರ್ಧಿ ಮೆಸರ್ಸ್ ಸಿರೋಸ್ಕಿ ೫೦.೬೪ ಕೋಟಿ ಅಮೆರಿಕನ್ ಡಾಲರುಗಳ (ಅಂದಾಜು ,೨೨೮ ಕೋಟಿ ರೂಪಾಯಿಗಳ ದರವನ್ನು ೧೨ ವಿವಿಐಪಿ / ವಿವಿಐಪಿಯೇತರ ಹೆಲಿಕಾಪ್ಟರುಗಳಿಗಾಗಿ ನಮೂದಿಸಿತ್ತು. ಅಗಸ್ಟಾ ವೆಸ್ಟ್ ಲ್ಯಾಂಡ್ ೫೮೨ ಮಿಲಿಯನ್ (ರೂ.,೯೬೬ ಕೋಟಿ) ದರವನ್ನು ನಮೂದಿಸಿತ್ತು. ಇದು ಮೆಸರ್ಸ್ ಸಿರೋಸ್ಕಿ ನಮೂದಿಸಿದ್ದ ದರಕ್ಕಿಂತ ಅಂದಾಜು ಶೇಕಡಾ ೮೦ರಷ್ಟು ಹೆಚ್ಚಿನ ದರವಾಗಿತ್ತು. ೨೦೧೦ರಲ್ಲಿ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿಯು ಇದಕ್ಕೆ ಅನುಮೋದನೆ ನೀಡಿತ್ತು. ಅಂತಿಮವಾಗಿ ಚರ್ಚೆ ಮೂಲಕ ದರವನ್ನು ,೭೨೭ ಕೋಟಿ ರೂಪಾಯಿಗಳಿಗೆ ಇಳಿಸಲಾಗಿತ್ತು.

ನಮಗೆ ಹೊಸ ಸುಳಿವುಗಳು ಲಭಿಸಿವೆ. ಬಳಿಕ ಬುಧವಾರ ಗುಪ್ತ ಮತ್ತು ಇತರ ಕೆಲವರಿಗೆ ಸಂಬಂಧಿಸಿ ಇತರ ಹಲವು ಕಡೆಗಳಲ್ಲಿ ದಾಳಿ ನಡೆಸಲು ನಿರ್ಧರಿಸಲಾಯಿತು. ಕೆಲವು ವ್ಯಾಪಾರಿಗಳು ಮತ್ತು ಖಾಸಗಿ ಕಂಪೆನಿಗಳಿಂದ  ಲಾಭ ಪಡೆದ ಕೆಲವು ನೈಜ ಫಲಾನುಭವಿ ರಾಜಕಾರಣಿಗಳು ಮತ್ತು ಆಡಳಿತಶಾಹಿಗಳನ್ನು ನಾವು ಇನ್ನಷ್ಟು ತನಿಖೆಗೆ ಒಳಪಡಿಲಿದ್ದೇವೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರು ಹೇಳಿದರು.

ಗುಪ್ತ ಅವರನ್ನು ಪ್ರಶ್ನಿಸುವ ಸಲುವಾಗಿ ಶೀಘ್ರದಲ್ಲೇ ಕರೆಸುವ ನಿರೀಕ್ಷೆಯಿದ ಎಂದು ಅವರು ನುಡಿದರು.

No comments:

Advertisement